ಸಿಕ್ಕಿರುವ ಪರ್ಫೆಕ್ಟ್ ಗಂಡ ಸಿಕ್ಕಾಪಟ್ಟೆ ಪ್ರೀತಿಸ್ತಾನೆ ಎಂಬ ಕಾರಣಕ್ಕೇ ಫುಟ್ಬಾಲ್ ಪ್ಲೇಯರ್‌ಗೆ ಡಿವೋರ್ಸ್ ಕೊಟ್ಲಂತೆ ಇವಳು!

By Suvarna News  |  First Published Apr 19, 2024, 4:21 PM IST

ಮಹಿಳೆ ಏನು ಬಯಸ್ತಾಳೆ ಊಹಿಸೋಕೆ ಸಾಧ್ಯವಿಲ್ಲ. ಪತಿಯ ಪ್ರೀತಿ ಹೆಚ್ಚಾದ್ರೂ ಆಕೆಗೆ ಉಸಿರುಗಟ್ಟುತ್ತೆ ಅನ್ನೋದನ್ನು ಅರಗಿಸಿಕೊಳ್ಳೋದು ಕಷ್ಟ. ಕೆಲ ಮಹಿಳೆಯರು ವಿಚ್ಛೇದನ ಪಡೆಯಲು ಐಷಾರಾಮಿ ಜೀವನ, ಸಂತೋಷ ಕಾರಣವಾಗ್ತಿದೆ ಅಂದ್ರೆ ನೀವು ನಂಬ್ಲೇಬೇಕು.  
 


ಸಂಗಾತಿ ಸದಾ ನಮ್ಮನ್ನು ಪ್ರೀತಿಸಬೇಕು, ಯಾವುದೇ ಕೊರತೆ ಇಲ್ಲದಂತೆ ನೋಡಿಕೊಳ್ಬೇಕು, ನನ್ನ ಹಿಂದೆ ಸದಾ ತಿರುಗ್ತಾ, ನಾನು ಹೇಳಿದ್ದೆಲ್ಲ ಕೇಳ್ಬೇಕು ಎನ್ನುವ ಆಸೆ ಮಹಿಳೆಯರಿಗಿರುತ್ತದೆ. ಅಂಥ ಪತಿ ಸಿಕ್ಕಿದ್ರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನುವ ರೀತಿ ಖುಷಿಯಾಗಿರ್ತಾರೆ. ಆದ್ರೆ ಕೆಲ ಹುಡುಗರಿಗೆ ಇಂಥ ಅತಿಯಾದ ಆರೈಕೆಯೇ ಮುಳುವಾಗುತ್ತದೆ. ಅತಿಯಾದ ಪ್ರೀತಿಯನ್ನು ಕೂಡ ಹುಡುಗಿಯರು ಇಷ್ಟ ಪಡೋದಿಲ್ವಾ ಎನ್ನುವ ಪ್ರಶ್ನೆ, ಬಾಲ್ಯದಲ್ಲಿ ಸ್ನೇಹಿತರಾಗಿ ನಂತ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಹತ್ತು ವರ್ಷ ಸುಖ ಸಂಸಾರ ಮಾಡಿದ ಈ ಪ್ರಸಿದ್ಧ ಜೋಡಿಯನ್ನು ನೋಡಿದ್ರೆ ಕಾಡುತ್ತದೆ. 

ವಿಶ್ವವಿಖ್ಯಾತ ಫುಟ್ಬಾಲ್ (Football) ಆಟಗಾರ ರಿಕಾರ್ಡೊ ಕಾಕಾ (Ricardo Kaka)  ಹತ್ತು ವರ್ಷಗಳ ವೈವಾಹಿಕ ಜೀವನ ನಡೆಸಿದ ನಂತ್ರ ವಿಚ್ಛೇದನ (Divorce) ಪಡೆದಿದ್ದಾರೆ. ಅವರ ಪತ್ನಿ ಕ್ಯಾರೊಲಿನ್ ಸೆಲಿಕೊ, ವಿಚ್ಛೇದನ ನೀಡುವಂತೆ ಕೇಳಿದ್ದರು. ವಿಚ್ಛೇದನಕ್ಕೆ ನೀಡಿದ್ದ ಕಾರಣ ಸುಳ್ಳು ಎಂದು ಕ್ಯಾರೊಲಿನ್ ಹೇಳಿದ್ದರು. ಆದ್ರೆ ಕಾಕಾ ಸಂದರ್ಶನವೊಂದರಲ್ಲಿ ಹೇಳಿದ್ದ ಮಾತುಗಳು ಅನುಮಾನಕ್ಕೆ ಕಾರಣವಾಗಿದ್ದವು. ಎಲ್ಲವೂ ಸರಿಯಾಗಿದ್ರೆ ಯಾರು ವಿಚ್ಛೇದನ ನೀಡ್ತಾರೆ ಎನ್ನುವ ಪ್ರಶ್ನೆಯನ್ನು ಇದು ಹುಟ್ಟು ಹಾಕಿತ್ತು. 

Tap to resize

Latest Videos

ಕೋಡಿಂಗ್‌ಗೆ ಹೆಲ್ಪ್ ಮಾಡಿದ್ರು ಡೇಟ್‌ಗೆ ಬರ್ತೇನೆಂದ ಟಿಂಡರ್ ಪೋಸ್ಟ್ ವೈರಲ್!

ಆಗ್ಲಿಂದಲೂ ಚರ್ಚೆಯಲ್ಲಿದ್ದ ಈ ವಿಷ್ಯದ ಬಗ್ಗೆ ಕ್ಯಾರೊಲಿನಾ ಸ್ಪಷ್ಟನೆ ನೀಡಿದ್ದಾರೆ. ವಿಚ್ಛೇದನವಾಗಿ 10 ವರ್ಷದ ನಂತ್ರ ಅದಕ್ಕೆ ಕಾರಣವೇನು ಎಂಬುದನ್ನು ಅವರು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಕ್ಯಾರೊಲಿನಾ, ಕಾಕಾ ನನಗೆ ಎಂದಿಗೂ ಮೋಸ ಮಾಡಿಲ್ಲ ಎಂದಿದ್ದಾರೆ. ಕಾಕಾ ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ರು. ಸುಂದರ ಕುಟುಂಬ ನೀಡಿದ್ದರು. ನನ್ನ ಸಂತೋಷಕ್ಕೆ ಪ್ರಯತ್ನಿಸುತ್ತಿದ್ದರು. ಆದ್ರೆ ನಾನೇ ಏನೋ ಕಡಿಮೆಯಾಗಿದೆ ಎನ್ನುವ ಭಾವನೆಯಲ್ಲಿ ಇರುತ್ತಿದ್ದೆ. ನಿಜ ಹೇಳ್ಬೇಕೆಂದ್ರೆ ಕಾಕಾ ನನಗೆ ಅತಿ ಹೆಚ್ಚು ಪರ್ಫೆಕ್ಟ್ ಆಗಿದ್ರು ಎಂದು ಕ್ಯಾರೊಲಿನಾ ಹೇಳಿದ್ದಾರೆ. ಆದ್ರೆ ಅವರ ಲೇಖನ ವೈರಲ್ ಆಗ್ತಿದ್ದಂತೆ ಅದನ್ನು ಸುಳ್ಳು ಎಂದ ಕ್ಯಾರೊಲಿನಾ, ನಾವಿಬ್ಬರೂ ಒಪ್ಪಿ ವಿಚ್ಛೇದನ ಪಡೆದಿದ್ದೇವೆ ಎಂದಿದ್ದಾರೆ. 

ಇದಾದ ಕೆಲ ದಿನಗಳ ನಂತ್ರ ಕಾಕಾ  ರೇಡಿಯೋ ಕಾರ್ಯಕ್ರಮದಲ್ಲಿ ವಿಚ್ಛೇದನದ ಬಗ್ಗೆ ಹೇಳಿದ್ದಾರೆ. ನಾನು ಸಂತೋಷವಾಗಿಲ್ಲ. ಅದಕ್ಕೆ ಕಾರಣ ಮದುವೆ ಎಂದಿದ್ದ ಪತ್ನಿ ವಿಚ್ಛೇದನ ಕೇಳಿದ್ದಳು. ಯುನೈಟೆಡ್ ಸ್ಟೇಟ್ಸ್ ನಲ್ಲಿ ವಾಸಿಸುತ್ತಿದ್ದ ನಾನು ಬ್ರೆಜಿಲ್ ಗೆ ಹಿಂತಿರುಗಬೇಕು ಎಂಬುದು ಆಕೆ ಬಯಕೆಯಾಗಿತ್ತು. ಆದರೆ ಇದು ಸಾಧ್ಯವಿರಲಿಲ್ಲ. ಮದುವೆ ಉಳಿಸಲು ನಾನು ಎಲ್ಲ ಪ್ರಯತ್ನ ನಡೆಸಿದ್ದೆ ಎಂದಿದ್ದರು.

ಸುಖವಾಗಿದ್ರೂ ವಿಚ್ಛೇದನ ನೀಡಲು ಕಾರಣ ಇದು : ಭಾರತೀಯರಿಗೆ ಈ ವಿಷ್ಯ ವಿಚಿತ್ರ ಎನ್ನಿಸುತ್ತದೆ. ಪತಿ – ಪತ್ನಿ ಮಧ್ಯೆ ಗಲಾಟೆ, ಜಗಳ, ದಾಂಪತ್ಯ ದ್ರೋಹ ಸೇರಿದಂತೆ ಯಾವುದಾದ್ರೂ ಸಮಸ್ಯೆ ಇದ್ದಾಗ ಮಾತ್ರ ವಿಚ್ಛೇದನಕ್ಕೆ ಮುಂದಾಗ್ತಾರೆ. ಆದ್ರೆ ಒಳ್ಳೆಯ ಗಂಡ, ಸುಖವಾದ ಜೀವನ ಬಿಟ್ಟು ವಿಚ್ಛೇದನ ಪಡೆಯುವ ಮಹಿಳೆಯರು ನಮ್ಮಲ್ಲಿ ಕಡಿಮೆ.  ಇಂಥ ಮಹಿಳೆಯರು ಏನು ಬಯಸ್ತಾರೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರವೆಂದ್ರೆ, ಎಲ್ಲ ಮಹಿಳೆ ಒಂದೇ ಆಗಿರೋದಿಲ್ಲ. ಆಕೆ ಬಯಕೆ, ಕನಸು ಭಿನ್ನವಾಗಿರುತ್ತದೆ. ವೈವಾಹಿಕ ಜೀವನದಿಂದ ಪ್ರತಿಯೊಬ್ಬರಿಗೂ ವಿಭಿನ್ನ ನಿರೀಕ್ಷೆಗಳಿರುತ್ತವೆ. 

Karl Erivan Haub: ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿದ್ದ 30 ಸಾವಿರ ಕೋಟಿ ಒಡೆಯ ರಷ್ಯಾದಲ್ಲಿ ಪತ್ತೆ!

ಐಷಾರಾಮಿ ಜೀವನ, ಸುತ್ತಮುತ್ತ ಕೆಲಸಗಾರರು, ಪೂರ್ಣ ಕುಟುಂಬ, ಎಲ್ಲ ಕಡೆ ಸಂತೋಷವಿದ್ರೂ ಕೆಲ ಮಹಿಳೆಯರು ಖಿನ್ನತೆಗೆ ಒಳಗಾಗ್ತಾರೆ. ಶ್ರೀಮಂತ ಪತಿ ಮದುವೆಯಾಗುವ ಮಹಿಳೆಯರು ತಮ್ಮ ವೃತ್ತಿ ಬಿಟ್ಟಿರುತ್ತಾರೆ. ಅದು ಅವರನ್ನು ಕಾಡ್ತಿರುತ್ತದೆ. ಇನ್ನೊಂದು ಗುರುತು. ಅವರನ್ನು ಸೆಲೆಬ್ರಿಟಿ ಪತ್ನಿ ಎಂದು ಗುರುತಿಸುತ್ತಾರೆಯೇ ವಿನಃ ಅವರಿಗೆ ಸ್ವಂತ ಗುರುತಿರೋದಿಲ್ಲ. ಪತಿ ಹಾಗೂ ಪತ್ನಿ ಬೇರೆ ಬೇರೆ ದೇಶದಲ್ಲಿ ಅಥವಾ ನಗರದಲ್ಲಿ ನೆಲೆಸಿದ್ದರೆ ಅದೂ ಕೂಡ ಆನಂದಕ್ಕೆ ಭಂಗ ತರುತ್ತದೆ.

click me!