ಮಗು ಬೇಕೆಂದ ಪತಿಗೆ ನೋ ಎಂದ ಮಡದಿ ಹೊಟ್ಟೆಯಲ್ಲಿ ಬೆಳೆಯುತ್ತಿದೆ ಸಲಿಂಗಿ ಸ್ನೇಹಿತನ ಕುಡಿ!

By Suvarna NewsFirst Published Apr 19, 2024, 4:09 PM IST
Highlights

ವಿಶ್ವದಲ್ಲಿ ಕೆಲವೊಂದು ಪ್ರಕರಣ ವಿಚಿತ್ರ ಎನ್ನಿಸುತ್ತೆ. ಹೀಗೂ ಇರ್ತಾರಾ ಜನ ಎಂಬ ಪ್ರಶ್ನೆ ಹುಟ್ಟುಹಾಕುತ್ತೆ. ಈ ಮಹಿಳೆ ಕೂಡ ಗಂಡನಿಗೆ ಮಕ್ಕಳು ಬೇಡ ಎಂದು ಈಗ ಸ್ನೇಹಿತನ ಮಗುವಿಗೆ ತಾಯಿ ಆಗ್ತಿದ್ದಾಳೆ.
 

ಗರ್ಭ ಧರಿಸುವುದು ಮಹಿಳೆಯ ಸೌಭಾಗ್ಯ ಎಂದೇ ಭಾವಿಸಲಾಗುತ್ತದೆ. ಮದುವೆ ಆದ್ಮೇಲೆ ಮನೆಗೊಂದು ಮಗು ಬೇಕು ಎನ್ನುವ ಕಾಲ ಈಗಿಲ್ಲ. ಮದುವೆ ಆಗದೆ ಮಕ್ಕಳನ್ನು ಪಡೆಯುವ ಅನೇಕರಿದ್ದಾರೆ. ಮನೆಯಲ್ಲಿರುವ ಮಕ್ಕಳು ಸಂತೋಷ ನೀಡ್ತಾರೆ. ದುಃಖ ಮರೆಸುವ ಶಕ್ತಿ ನೀಡ್ತಾರೆ. ಪತಿಗಿಂತ ಮಕ್ಕಳ ಮೇಲೆ ಪ್ರೀತಿ ಹೆಚ್ಚು. ಮಕ್ಕಳು ಬೇಕು ಎಂದಾಗ ಎಲ್ಲರಿಗೂ ಮಕ್ಕಳಾಗೋದಿಲ್ಲ. ಜೀವನಶೈಲಿ, ಆರೋಗ್ಯ ಸಮಸ್ಯೆಯಿಂದ ಕೆಲವರು ನೈಸರ್ಗಿಕವಾಗಿ ಮಕ್ಕಳನ್ನು ಪಡೆಯಲು ಸಾಧ್ಯವಾಗೋದಿಲ್ಲ. ಇಂಥ ಸಂದರ್ಭದಲ್ಲಿ ಅವರು ವೈದ್ಯರ ಬಳಿ ಹೋಗ್ತಾರೆ. ಈಗ ಐವಿಎಫ್ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ. ಮಕ್ಕಳು ಬೇಕೇಬೇಕು ಎನ್ನುವ ದಂಪತಿ ಮಕ್ಕಳಿಗಾಗಿ ಒಂದಿಷ್ಟು ನೋವು ತಿನ್ನುತ್ತಾರೆ. ಎಲ್ಲ ಪ್ರಯತ್ನ ವಿಫಲವಾದ್ಮೇಲೆ ಹತಾಷರಾಗ್ತಾರೆ. ಆದ್ರೆ ಈಗಿನ ಕೆಲ ಜನರ ಆಲೋಚನೆ ಮಕ್ಕಳ ವಿಷ್ಯದಲ್ಲಿ ಬದಲಾಗಿದೆ. ಮಕ್ಕಳಾದ್ಮೇಲೆ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತೆ ಅಥವಾ ವೃತ್ತಿ ಜೀವನ ಹಾಳಾಗುತ್ತೆ ಎಂಬ ನಾನಾ ಕಾರಣಕ್ಕೆ ಮಕ್ಕಳು ಬೇಡ ಎನ್ನುವವರಿದ್ದಾರೆ. ಕೆಲ ಮಹಿಳೆಯರು ತಮಗೆ ಮಕ್ಕಳೇ ಬೇಡ ಎಂದು ಘೋಷಣೆ ಮಾಡಿದ್ದಾರೆ. ಅಂಥವರಲ್ಲಿ ಈ ಮಹಿಳೆ ಕೂಡ ಒಬ್ಬಳು. ಆಕೆ ಹಾಗೂ ಆಕೆ ಪತಿ ಒಂದು ಒಪ್ಪಂದ ಮಾಡಿಕೊಂಡಿದ್ದು, ಮಗು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದರು. ಆದ್ರೆ ಈಗ ಆ ಮಹಿಳೆ ಮಾಡಿದ ಕೆಲಸ ಪತಿಯ ಕೋಪಕ್ಕೆ ಕಾರಣವಾಗಿದೆ.

ರೆಡ್ಡಿಟ್ (Reddit) ನಲ್ಲಿ ಮಹಿಳೆ ತನ್ನ ಕಥೆಯನ್ನು ಹೇಳಿಕೊಂಡಿದ್ದಾಳೆ. 26 ವರ್ಷದ ಮಹಿಳೆ ಈಗ ಗರ್ಭಿಣಿ (Pregnant) . ಆದ್ರೆ ಆಕೆ ಪತಿ ಮಗುವಿಗೆ ತಾಯಿ ಆಗ್ತಿಲ್ಲ. ಬದಲಾಗಿ ಆಕೆಯ ಆಪ್ತ ಸ್ನೇಹಿತನ ಮಗುವಿಗೆ ತಾಯಿ ಆಗ್ತಿದ್ದಾಳೆ. ನಾನು ಮತ್ತು ನನ್ನ ಪತಿ, ನಮಗಿಬ್ಬರಿಗೆ ಮಕ್ಕಳು ಬೇಡ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಇದೇ ಕಾರಣಕ್ಕೆ ನಾನು ನನ್ನ ಪತಿಯ ಮಗುವಿಗೆ ಅಮ್ಮನಾಗ್ತಿಲ್ಲ. ನನ್ನ ಸ್ನೇಹಿತನಿಗೆ ಮಗುವನ್ನು ಹೆತ್ತುಕೊಡುವ ಜವಾಬ್ದಾರಿ (responsibility) ತೆಗೆದುಕೊಂಡಿದ್ದೇನೆ ಎಂದು ಆಕೆ ಹೇಳಿದ್ದಾಳೆ. 

ಲವ್‌ ಆಂಡ್‌ ಲೆಟ್‌ ಲವ್‌- ಕ್ವೀರ್‌ ಸಮುದಾಯದ ಆಶಯ ಚಿತ್ರ

ಆಕೆ ಸ್ನೇಹಿತ ಸಲಿಂಗಕಾಮಿ. ಆತ ಹಾಗೂ ಆತನ ಪಾರ್ಟನರ್ ಗೆ ಮಗು ಪಡೆಯುವ ಆಸೆ. ಅವರು ಈ ಮಹಿಳೆ ಸಹಾಯ ಕೇಳಿದ್ದಾರೆ. ಅವರಿಗೆ ನೆರವಾಗಲು ಈ ಮಹಿಳೆ ಗರ್ಭ ಧರಿಸಿದ್ದಾಳೆ. ಈ ವಿಷ್ಯವನ್ನು ಪತಿಗೆ ಹೇಳ್ತಿದ್ದಂತೆ ಆತ ಕೋಪಗೊಂಡಿದ್ದಾನೆ. ನಮಗೆ ಮಕ್ಕಳು ಬೇಡ ಎಂದು ನಿರ್ಧರಿಸಿದ ಮೇಲೆ ಸ್ನೇಹಿತನ ಮಗುವಿಗೆ ಗರ್ಭ ಧರಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ್ದಾನೆ. ಪತಿಗೆ ಪರಿಸ್ಥಿತಿ ವಿವರಿಸುವ ಪ್ರಯತ್ನ ನಡೆಸಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.

ಸ್ನೇಹಿತನಿಗೆ ಮಗು ಹೆತ್ತುಕೊಡೋದು ನನ್ನ ಜವಾಬ್ದಾರಿ. ನಾನು ಆ ಮಗುವಿನ ತಾಯಿಯಲ್ಲ, ನೀನು ತಂದೆಯಲ್ಲ. ಮಗುವಿನ ಚಿಕ್ಕಮ್ಮ ಹಾಗೂ ಚಿಕ್ಕಪ್ಪನ ಸ್ಥಾನದಲ್ಲಿರ್ತೇವೆ ಎಂದು ಪತಿಗೆ ಹೇಳಿದ್ದಾಳಂತೆ. ಇಷ್ಟಾದ್ರೂ ಪತಿಗೆ ಸಮಾಧಾನವಾಗಿಲ್ಲ. ನನ್ನ ಮೇಲೆ ಕೋಪಗೊಂಡಿದ್ದಾನೆ ಎಂದು ಮಹಿಳೆ ಬರೆದಿದ್ದಾಳೆ. 

ಇವರು ಅಮ್ಮ – ಮಗಳಲ್ಲ… ದಂಪತಿ! ಈ ಜೋಡಿ ಮಧ್ಯೆ ಇದೆ 37 ವರ್ಷಗಳ ಅಂತರ

ರೆಡ್ಡಿಟ್ ಈ ಪೋಸ್ಟ್ ಗೆ ಅನೇಕರು ಕಮೆಂಟ್ ಮಾಡಿದ್ದಾರೆ. ನಿನ್ನ ಗಂಡನ ಮಗುವಿಗಾಗ್ಲಿ ಇಲ್ಲ ನಿನ್ನ ಸ್ನೇಹಿತನ ಮಗುವಿಗಾಗ್ಲಿ ಜನ್ಮ ನೀಡುವ ಹಕ್ಕು ನಿನಗಿದೆ. ಅದನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಒಬ್ಬರು ಬರೆದಿದ್ದಾರೆ. ಪತಿಗೆ ಹೇಳದೆ ಗರ್ಭಧರಿಸಿರೋದು ತಪ್ಪು. ಪತಿಯ ಕೋಪಕ್ಕೆ ಅರ್ಥವಿದೆ. ಪತಿಯ ಮಗುವಿಗೆ ತಾಯಿಯಾಗಲು ಇಷ್ಟವಿಲ್ಲದ ನೀವು ಸ್ನೇಹಿತನ ಮಗುವಿಗೆ ತಾಯಿ ಆಗುವ ಮೊದಲೇ ಪತಿಯ ಒಪ್ಪಿಗೆ ಪಡೆಯಬೇಕಿತ್ತು ಎಂದು ಅನೇಕ ಬಳಕೆದಾರರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.  

click me!