
ಮಗಳು ಮದುವೆಗೆ ಬರ್ತಿದ್ದಂತೆ ಪಾಲಕರ ಟೆನ್ಷನ್ ಹೆಚ್ಚಾಗುತ್ತೆ. ಮಗಳಿಗೊಂದು ಸೂಕ್ತ ವರನನ್ನು ನೋಡಿ ಮದುವೆ ಮಾಡುವ ಜವಾಬ್ದಾರಿ ಪಾಲಕರಿಗಿರುತ್ತದೆ. ಈಗಿನ ಕಾಲದಲ್ಲಿ ಹುಡುಗಿಯರೇ ತಮ್ಮ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಹೊಂದಿದ್ದಾರೆ. ಬಹುತೇಕರು ಲವ್ ಮ್ಯಾರೇಜ್ ಇಷ್ಟಪಡ್ತಾರೆ. ಇನ್ನು ಅರೇಂಜ್ಡ್ ಮ್ಯಾರೇಜ್‌ಗೆ ಒಪ್ಪುವ ಮಗಳಿಗೆ ಸೂಕ್ತ ವರನನ್ನು ಹುಡುಕುವ ದೊಡ್ಡ ಹೊಣೆ ಪಾಲಕರದ್ದು. ಹಿಂದೆ ತುಂಬು ಕುಟುಂಬದಲ್ಲಿ ಮಗಳು ಸುಖವಾಗಿರ್ತಾಳೆ ಎಂದು ಭಾವಿಸುತ್ತಿದ್ದ ಪಾಲಕರು ತುಂಬು ಕುಟುಂಬದ ಹುಡುಕಾಟ ನಡೆಸುತ್ತಿದ್ದರು. ಈಗ ತುಂಬು ಕುಟುಂಬ ಸಿಗೋದೇ ಅಪರೂಪ. ಒಂದು ಮನೆಯಲ್ಲಿ ಅಪ್ಪ – ಅಮ್ಮನ ಜೊತೆ ಇಬ್ಬರು ಮಕ್ಕಳಿರೋದೇ ಹೆಚ್ಚು. ವಿಚಿತ್ರ ಅಂದ್ರೆ ಈಗಿನ ಯುವತಿಯರು ಮತ್ತು ಅವರ ಪಾಲಕರಿಗೆ ವರನ ತಂದೆ – ತಾಯಿ ಕೂಡ ದೊಡ್ಡ ಕಿರಿಕಿರಿ. ಇದೇ ಕಾರಣಕ್ಕೆ ಪಾಲಕರಿಲ್ಲದ, ಒಂಟಿಯಾಗಿರುವ ಹುಡುಗನನ್ನು ಮಗಳಿಗೆ ಮದುವೆ ಮಾಡಿಸಲು ಪಾಲಕರು ಮುಂದಾಗ್ತಿದ್ದಾರೆ. ಮದುವೆಗೆ ಮೊದಲು ಅಪ್ಪ – ಅಮ್ಮ ಬದುಕಿದ್ರೆ ವರ ಬೇಡ ಎಂದೇ ನೇರವಾಗಿ ಹೇಳಿಬಿಡ್ತಾರೆ. ಈ ಮಾತು ಗಂಡು ಹೆತ್ತವರಿಗೆ ವಿಚಿತ್ರ ಎನ್ನಿಸಬಹುದು. ಆದ್ರೆ ಅವರ ಮನೆಯಲ್ಲಿರುವ ಹೆಣ್ಣು ಮಗಳಿಗೂ ಅವರು ಇಂಥಹದ್ದೇ ವರನ ಹುಡುಕಾಟ ನಡೆಸೋದು ಮಾತ್ರ ವಿಪರ್ಯಾಸ. ನಾವಿಂದು ಜನರು ಯಾಕೆ ಅಪ್ಪ – ಅಮ್ಮನಿಲ್ಲದ ವರನ ಹುಡುಕಾಟ ನಡೆಸ್ತಾರೆ ಎಂಬುದನ್ನು ಹೇಳ್ತೇವೆ.
ಅತ್ತೆ – ಮಾವನ ಹಸ್ತಕ್ಷೇಪ : ಮನೆ (House) ಯಲ್ಲಿ ದೊಡ್ಡವರಿದ್ದಾಗ ಅವರು ಹೇಳಿದಂತೆ ನಡೆಯಬೇಕು. ಪ್ರತಿಯೊಂದು ಕೆಲಸಕ್ಕೂ ಅವರ ಒಪ್ಪಿಗೆ ಬೇಕು. ಈಗ ಸ್ವತಂತ್ರವಾಗಿ ಬೆಳೆದ ಹುಡುಗಿಯರಿಗೆ ಇದು ಸಾಧ್ಯವಾಗೋದಿಲ್ಲ. ಮಗಳಿಗೆ ಈ ಸಮಸ್ಯೆ ಬರದಿರಲಿ ಎನ್ನುವ ಕಾರಣಕ್ಕೆ ಪಾಲಕರು ವರನ ಹುಡುಕಾಟದ ವೇಳೆಯೇ ಎಚ್ಚೆತ್ತುಕೊಳ್ತಾರೆ.
ಪೋಷಕರು ಮಕ್ಕಳಿಗೆ ಯಾವತ್ತೂ ಹೇಳಲೇ ಬಾರದ ಮಾತುಗಳಿವು!
ಅಡುಗೆ (Cooking) – ಕೆಲಸದ ಸಮಸ್ಯೆ : ಪತಿ – ಪತ್ನಿ ಇಬ್ಬರೂ ದುಡಿಯೋದು ಈಗಿನ ಕಾಲದಲ್ಲಿ ಅನಿವಾರ್ಯ. ಕೆಲಸದ ಒತ್ತಡ (Stress) ದಿಂದಾಗಿ ಅವರಿಗೆ ಮನೆಯಲ್ಲಿ ಅಡುಗೆ ಮಾಡಲು ಸಮಯ ಸಿಗೋದಿಲ್ಲ. ಹಾಗಾಗಿಯೇ ಅಡುಗೆಯವರನ್ನು ನೇಮಿಸಿಕೊಳ್ತಾರೆ. ಆದ್ರೆ ಮನೆಯಲ್ಲಿರುವ ವೃದ್ಧ ಅತ್ತೆ – ಮಾವನಿಗೆ ಅಡುಗೆಯವರು ಮಾಡಿದ ರುಚಿ ಸೇರೋದಿಲ್ಲ ಎನ್ನುವುದಕ್ಕಿಂತ ಹಿಂದಿನ ಕಾಲದಂತೆ ಮಹಿಳೆ ಮನೆಯಲ್ಲಿದ್ದು ಅತ್ತೆ – ಮಾವನಿಗೆ ಅಡುಗೆ ಮಾಡಬೇಕೆಂದು ಬಯಸ್ತಾರೆ. ಇದು ಹುಡುಗಿಗೆ ಸಾಧ್ಯವಾಗದ ಮಾತು.
ಉಡುಗೆ – ಹಬ್ಬ, ಸಂಪ್ರದಾಯ : ತಲೆಮಾರಿನಿಂದ ತಲೆಮಾರಿನ ಜನರ ಆಲೋಚನೆ ಭಿನ್ನವಾಗಿರುತ್ತದೆ. ಈಗಿನ ಹುಡುಗಿಯರು ಸದಾ ಸೀರೆ, ಚೂಡಿ ಧರಿಸಲು ಇಷ್ಟಪಡುವುದಿಲ್ಲ. ಆದ್ರೆ ಅತ್ತೆ – ಮಾವ ಇದನ್ನೇ ಧರಿಸಬೇಕೆಂದು ಪಟ್ಟು ಹಿಡಿದಾಗ ನೆಮ್ಮದಿ ಹಾಳಾಗುತ್ತದೆ. ಕೆಲವು ಕಡೆ ಇದೇ ವಿಚಾರಕ್ಕೆ ಜಗಳ ನಡೆಯೋದಿದೆ. ಇಷ್ಟೇ ಅಲ್ಲದೆ ಈಗಿನ ಯುವಕರು ಎಲ್ಲ ಹಬ್ಬವನ್ನು ಮನೆಯಲ್ಲಿ ಮಾಡಲು ಬಯಸುವುದಿಲ್ಲ. ಸಂಪ್ರದಾಯವನ್ನು ಪಾಲಿಸೋದಿಲ್ಲ. ಅದು ಹಿರಿಯರಾದ ಅತ್ತೆ – ಮಾವನಿಗೆ ಇಷ್ಟವಾಗೋದಿಲ್ಲ. ಸೊಸೆ ಹೀಗೆ ಇರಬೇಕೆಂದು ಕೆಲ ನಿಯಮ ರೂಪಿಸುತ್ತಾರೆ. ಅದು ಹುಡುಗಿಯರ ಕಾಲು ಕಟ್ಟಿದಂತಾಗುತ್ತದೆ.
ಆರೈಕೆ : ಮನೆಯಲ್ಲಿ ವೃದ್ಧ ಅತ್ತೆ – ಮಾವ ಇದ್ದಲ್ಲಿ ಅವರ ಆರೈಕೆಯನ್ನು ಸೊಸೆ ಮಾಡ್ಬೇಕಾಗುತ್ತದೆ. ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ತಮಗಿಷ್ಟ ಬಂದಾಗ ಸುತ್ತಾಡಲು, ಪ್ರವಾಸ, ಟ್ರಕ್ಕಿಂಗ್, ಸಿನಿಮಾ ಅಂತ ಹೊರಗೆ ಹೋಗಲು ಸಾಧ್ಯವಿಲ್ಲ.
ಪ್ರೀತಿ ಸಂಕೇತವಾಗಿ ಭೂಮಿಗೆ ಕಾಲ್ಗೆಜ್ಜೆ ತೊಡಿಸಿದ ಗೌತಮ್, ನಂಗೂ ಇಂಥಾ ಗಂಡ ಸಿಗಲಿ ಅಂತಿದ್ದಾರೆ ಗರ್ಲ್ಸ್!
ಇದರಿಂದಾಗುವ ಅನಾನುಕೂಲಗಳು : ಅತ್ತೆ – ಮಾವನಿಲ್ಲದ ಮನೆಯಿಂದ ಲಾಭ ಎಷ್ಟಿದೆಯೋ ಅಷ್ಟೆ ನಷ್ಟವಿದೆ. ತುಂಬು ಕುಟುಂಬದಲ್ಲಿ ಸಾಕಷ್ಟು ಕಲಿಯಲು ಅವಕಾಶವಿರುತ್ತದೆ. ಮಕ್ಕಳನ್ನು ಪಾಲಕರಿಗಿಂತ ಅಜ್ಜ – ಅಜ್ಜಿ ಕಾಳಜಿಯಿಂದ ನೋಡಿಕೊಳ್ತಾರೆ. ಮಕ್ಕಳಿಗೆ ಒಳ್ಳೆ ಸಂಸ್ಕಾರ, ಶಿಕ್ಷಣ ಸಿಗುತ್ತದೆ. ಎಲ್ಲರೂ ಒಟ್ಟಿಗೆ ಹಬ್ಬ ಆಚರಿಸಿದಾಗ ಸಿಗುವ ಸಂತೋಷ ಇಬ್ಬರೇ ಇದ್ದಾಗ ಸಿಗೋದಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.