ಅಬ್ಬಾ ಶುದ್ಧ ಸೋಮಾರಿ! ಜಪಾನ್‌ನ ಈ ಟಿಪ್ಸ್ ಫಾಲೋ ಮಾಡಿದ್ರೆ ಸರಿ ಹೋಗ್ಬಹುದು!

By Suvarna News  |  First Published Jun 7, 2023, 11:38 AM IST

ಏನು ಕೆಲಸ ಮಾಡಲೂ ಸೋಮಾರಿತನದ ಸಮಸ್ಯೆಯಾ? ಕುಳಿತಲ್ಲಿಂದ ಏಳೋಕೇ ಮನಸ್ಸಿಲ್ಲವಾ? ಹಾಗಿದ್ದರೆ ನಿಮಗೆ ಒಂದು ಚುರುಕಾದ ʼಕೈಝೆನ್‌ʼ ಬೇಕು. ಇದು ಮತ್ತೇನಲ್ಲ, ಸದಾ ಚುರುಕಾಗಿರುವ ಜಪಾನೀಯರ ಒಂದು ಜೀವನಕ್ರಮ.


ಜಪಾನಿಯರು 'ಕೈಝೆನ್' ಎಂದು ಕರೆಯಲಾಗುವ ಒಂದು ಕಲ್ಪನೆಯನ್ನು ಹೊಂದಿದ್ದಾರೆ. ಸೋಮಾರಿತನ ಜಯಿಸಲು ಇದು ಬೆಸ್ಟ್‌ ಮದ್ದು. ಕೈಝೆನ್‌ ಅಂದರೆ ಬೇರೇನಲ್ಲ, ನಿಧಾನವಾಗಿ ಎಲ್ಲದರಲ್ಲಿ ನಿರಂತರ ಸುಧಾರಣೆ ಮಾಡುತ್ತಾ ಹೋಗುವುದು. ಇದೇ ಕಾಲಾಂತರದಲ್ಲಿ ಗಮನಾರ್ಹ ರೂಪಾಂತರಗಳಿಗೆ ಕಾರಣವಾಗುತ್ತದೆ. ಈ ವಿಧಾನ ಅಳವಡಿಸಿಕೊಳ್ಳುವ ಮೂಲಕ ಸೋಮಾರಿತನದ ಚಕ್ರದಿಂದ ಮುಕ್ತರಾಗುವುದು ಗ್ಯಾರಂಟಿ. ಸರಿ, ಇದನ್ನು ಮಾಡುವುದು ಪ್ರಾಕ್ಟಿಕಲೀ ಹೇಗೆ? ಇದರ ಸೂತ್ರಗಳು ಕೆಳಗಿವೆ.

ಸೋಮಾರಿತನದ ಅಭ್ಯಾಸವನ್ನು ಗುರುತಿಸಿ
ಸೋಮಾರಿತನವನ್ನು ನಿವಾರಿಸುವ ಮೊದಲ ಹೆಜ್ಜೆ ಅಭ್ಯಾಸವನ್ನು ಗುರುತಿಸುವುದು. ನಿಮ್ಮ ಸೋಮಾರಿತನವನ್ನು ಅರ್ಥ ಮಾಡಿಕೊಳ್ಳಲು ನಿಮ್ಮ ನಡವಳಿಕೆ, ದಿನಚರಿ ಮತ್ತು ಆಲೋಚನಾ ಮಾದರಿಗಳನ್ನು ಪರಿಶೀಲಿಸಿ.

Latest Videos

undefined

ಸಣ್ಣ, ಸಾಧಿಸಬಹುದಾದ ಗುರಿಗಳನ್ನು ಇಟ್ಟುಕೊಳ್ಳಿ

ಕೈಝೆನ್ ವಾಸ್ತವಿಕ ಗುರಿಗಳನ್ನು ಇಟ್ಟುಕೊಳ್ಳುವುದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ. ದೊಡ್ಡ ಕೆಲಸಗಳನ್ನು ಸಣ್ಣ ಹಂತಗಳಾಗಿ ಒಡೆಯಿರಿ. ಸಣ್ಣ ಗುರಿಗಳ ಮೇಲೆ ಕೇಂದ್ರೀಕರಿಸಿ. ಆಗ ಸೋಮಾರಿತನದ ಅಗಾಧ ಭಾವನೆಯನ್ನು ಕಡಿಮೆ ಮಾಡಬಹುದು.

ಒಂದು ನಿಮಿಷದ ಐಡಿಯಾ
ಇದೊಂದು ಶಕ್ತಿಯುತ ಟೆಕ್ನಿಕ್.‌ ನೀವು ಯಾವ ಕೆಲಸ ತಪ್ಪಿಸಲು ಬಯಸುತ್ತೀರೋ ಅದರಲ್ಲಿ ಕೇವಲ ಒಂದು ನಿಮಿಷ ಕಳೆಯಲು ಮುಂದಾಗಿ. ಸಾಮಾನ್ಯವಾಗಿ, ನೀವು ಕೆಲಸ ಪ್ರಾರಂಭಿಸುವುದೇ ಕಷ್ಟಕರವಾದ ಭಾಗ. ಒಮ್ಮೆ ನೀವು ಪ್ರಾರಂಭಿಸಿದ ನಂತರ, ಕೆಲಸವನ್ನು ಮುಂದುವರಿಸುವುದು ಮತ್ತು ಪೂರ್ಣಗೊಳಿಸುವುದು ಸುಲಭವಾಗುತ್ತದೆ.

ದಿನಚರಿಯನ್ನು ರೂಪಿಸಿಕೊಳ್ಳಿ (Dairy)
ಸ್ಥಿರವಾದ ದಿನಚರಿಯೊಂದನ್ನು ರೂಪಿಸಿಕೊಳ್ಳಿ. ಇದು ಸೋಮಾರಿತನವನ್ನು ಜಯಿಸಲು ಸಹಾಯ ಮಾಡುತ್ತದೆ. ಕೆಲಸ, ವ್ಯಾಯಾಮ, ವಿಶ್ರಾಂತಿ ಮತ್ತು ಇತರ ಚಟುವಟಿಕೆಗಳಿಗೆ ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ. ರಚನಾತ್ಮಕ ವೇಳಾಪಟ್ಟಿಯನ್ನು ಹೊಂದಿರುವುದು ಶಿಸ್ತನ್ನು ಹುಟ್ಟುಹಾಕಲು ಸಹಾಯ ಮಾಡುತ್ತದೆ ಮತ್ತು ಮುಂದೂಡುವ ಪ್ರವೃತ್ತಿಯನ್ನು ಕಡಿಮೆ ಮಾಡುತ್ತದೆ.

ಗರ್ಭಾವಸ್ಥೆಯಲ್ಲಿ ಸೋಂಕು ಕಾಣಿಸಿಕೊಂಡ್ರೆ ತಾಯಿ - ಮಗುವಿಗೆ ಅಪಾಯ

ಪೊಮೊಡೊರೊ ತಂತ್ರ
ಪೊಮೊಡೊರೊ ತಂತ್ರವೆಂದರೆ ಸಮಯ ನಿರ್ವಹಣಾ ವಿಧಾನ. ನಿಮ್ಮ ಕೆಲಸಗಳನ್ನು 25 ನಿಮಿಷಗಳ ಹಂತಗಳನ್ನಾಗಿ ವಿಭಜಿಸಿ. ಇದಕ್ಕೆ "ಪೊಮೊಡೊರೊಸ್" ಎಂದು ಕರೆಯಿರಿ. ಇವುಗಳ ನಡುವೆ ಒಂದು ಸಣ್ಣ ವಿರಾಮವನ್ನು ಕೊಡಿ. ಈ ತಂತ್ರವು ಗಮನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಎನರ್ಜಿ ಭಸ್ಮವಾಗುವುದನ್ನು ತಡೆಯುತ್ತದೆ.

ದೃಶ್ಯ ಸೂಚನೆಗಳನ್ನು ಬಳಸಿ
ನಿಮ್ಮ ಗುರಿಗಳು, ಕೈಯಲ್ಲಿರುವ ಕೆಲಸಗಳನ್ನು ಜ್ಞಾಪಿಸುವ ದೃಶ್ಯ ಚಾರ್ಟ್‌ ಅಥವಾ ಚಿತ್ರಗಳನ್ನು ನಿಮ್ಮ ಸುತ್ತ ಇಟ್ಟುಕೊಳ್ಳಿ. ಇದು ಟಿಪ್ಪಣಿ ಇರಬಹುದು, ದೃಷ್ಟಿ ಫಲಕ, ಚಿತ್ರ, ಚಾರ್ಟ್‌, ಉಪಕರಣ, ಹೀಗೆ ಯಾವುದೂ ಇರಬಹುದು. ಇದು ನೀವು ಕಾರ್ಯಮಗ್ನರಾಗಿ ಉಳಿಯಲು ನಿರಂತರ ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತದೆ.

ಸ್ವಯಂ ಶಿಸ್ತು ಅಭ್ಯಾಸ ಮಾಡಿ (Self Descipline)
ಸೋಮಾರಿತನವು ಉಂಟಾಗುವುದು ಸ್ವಯಂ-ಶಿಸ್ತಿನ ಕೊರತೆಯಿಂದ. ಆಲಸ್ಯದ ಪ್ರಚೋದನೆಯನ್ನು ವಿರೋಧಿಸಲು ನಿಮ್ಮನ್ನು ತರಬೇತಿ ಮಾಡಿಕೊಳ್ಳಿ. ಗಡುವಿಗೆ ತಕ್ಕಂತೆ ಕೆಲಸಗಳಿಗೆ ಆದ್ಯತೆ ನೀಡಿ. ಶಿಸ್ತುಬದ್ಧವಾಗಿರಲು ಸಾವಧಾನತೆ ಅಭ್ಯಾಸ ಮಾಡಿ.

ಇದೆಂಥಾ ವಿಚಿತ್ರ ಕಾಯಿಲೆ..ಟಾಯ್ಲೆಟ್‌ನಲ್ಲಿ ಕುಳಿತಿದ್ದಷ್ಟೇ, ಕಾಲಿನ ಮೂಳೆನೇ ಮುರಿದೋಯ್ತು!

ಕೆಲಸದಲ್ಲಿ ಪಾಲುದಾರರನ್ನು ಹುಡುಕಿ (Find out Partners)
ಒಂದೇ ರೀತಿಯ ಗುರಿಗಳನ್ನು(Goal) ಇನ್ನೊಬ್ಬ ಪಾಲುದಾರರ ಜತೆ ಹಂಚಿಕೊಳ್ಳಿ. ಅಥವಾ ಬಲವಾದ ಕೆಲಸದ ರೀತಿ ಹೊಂದಿರುವವರಿಂದ ಬೆಂಬಲ ಪಡೆಯಿರಿ. ನಿಯಮಿತ ವಿಚಾರ ವಿನಿಮಯ ಇಟ್ಟುಕೊಳ್ಳಿ. ಪ್ರಗತಿಯನ್ನು ಹಂಚಿಕೊಳ್ಳಿ. ಪರಸ್ಪರ ಜವಾಬ್ದಾರರಾಗಿರಿ. ಅಂತಹ ವ್ಯಕ್ತಿಗಳೊಂದಿಗೆ ಕೆಲಸ ಮಾಡುವುದರಿಂದ ಸೋಮಾರಿತನವನ್ನು ಎದುರಿಸಬಹುದು.

ಪ್ರಗತಿಯನ್ನು ಆಚರಿಸಿ (Celebrate Progress)
ದಾರಿಯುದ್ದಕ್ಕೂ ನೀವು ಸಾಧಿಸುವ ಪ್ರಗತಿಯೊಂದಿಗೆ ಖುಷಿಪಡಿ. ನಿಮಗೇ ಬಹುಮಾನ (Prize)ನೀಡಿಕೊಳ್ಳಿ. ಸಣ್ಣ ಸಾಧನೆಗಳನ್ನು ಆಚರಿಸುವುದು ಸಕಾರಾತ್ಮಕ ನಡವಳಿಕೆಯನ್ನು ಬಲಪಡಿಸುತ್ತದೆ ಮತ್ತು ಸೋಮಾರಿತನವನ್ನು ಜಯಿಸಲು ನಿಮ್ಮನ್ನು ಪ್ರೇರೇಪಿಸುತ್ತದೆ.

ಬೆಳವಣಿಗೆಯ ಮನಸ್ಥಿತಿ ಇರಲಿ
ವೈಯಕ್ತಿಕ ಬೆಳವಣಿಗೆಯು ಜೀವನಪರ್ಯಂತ ಪ್ರಯಾಣ(Journey) ಎಂಬ ಕಲ್ಪನೆ ನಿಮ್ಮದಾಗಿರಲಿ. ಕಲಿಕೆ ಮತ್ತು ಸುಧಾರಣೆಯ ಮೇಲೆ ಕೇಂದ್ರೀಕರಿಸುವ ಬೆಳವಣಿಗೆಯ ಮನಸ್ಥಿತಿ(Mindset) ಅಳವಡಿಸಿಕೊಳ್ಳಿ. ಹಿನ್ನಡೆಗಳಿಂದ ನಿರುತ್ಸಾಹಗೊಳ್ಳುವ ಬದಲು, ಅವುಗಳನ್ನು ಕಲಿಯುವ(Learning) ಮತ್ತು ಬೆಳೆಯಲು ಅವಕಾಶಗಳಾಗಿಸಿಕೊಳ್ಳಿ.

click me!