ಅಂಬಾನಿ ಕುಟುಂಬ ಮನೆಯ ಎಲ್ಲಾ ಸಮಾರಂಭಗಳನ್ನು ತುಂಬಾ ಅದ್ಧೂರಿಯಾಗಿ ಆಯೋಜಿಸುತ್ತದೆ. ಹಾಗೆಯೇ ಸದ್ಯ ಅಂಬಾನಿ ಫ್ಯಾಮಿಲಿ ಕುಟುಂಬ, ಆಕಾಶ್, ಶ್ಲೋಕಾ ದಂಪತಿಯ ಪುಟ್ಟ ಹೆಣ್ಣುಮಗುವಿನ ಆಗಮನದ ಖುಷಿಯಲ್ಲಿದೆ. ಪುಟ್ಟ ಉತ್ತರಾಧಿಕಾರಿಣಿಯನ್ನು ಅಂಬಾನಿ ಕುಟುಂಬ ಸ್ವಾಗತಿಸಿದ್ದು ಹೇಗೆ ನೋಡಿ..
ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಅವರ ಮಗ ಆಕಾಶ್ ಅಂಬಾನಿ ಮತ್ತು ಅವರ ಪತ್ನಿ ಶ್ಲೋಕಾ ಮೆಹ್ತಾ ಅವರು ತಮ್ಮ ಎರಡನೇ ಮಗು ಮಗುವನ್ನು ಸ್ವಾಗತಿಸಿದ್ದಾರೆ. ಸರ್ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಿಂದ ಡಿಸ್ಚಾರ್ಜ್ ಆದ ನಂತರ ಶ್ಲೋಕಾ ಮೆಹ್ತಾ ಅವರು ಹೆಣ್ಣು ಮಗುವನ್ನು ತಮ್ಮ ತಾಯಿಯ ಮನೆಗೆ ಕರೆದೊಯ್ದರು. ಇದೀಗ ಶ್ಲೋಕಾ ಮೆಹ್ತಾ ಹೆಣ್ಣು ಮಗುವಿನೊಂದಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೊದಲ್ಲಿ, ಮುಖೇಶ್ ಅಂಬಾನಿ ಅವರ ಸೊಸೆ ಶ್ಲೋಕಾ ಮೆಹ್ತಾ ತಮ್ಮ ಮಗಳನ್ನು ಗುಲಾಬಿ ಹೊದಿಕೆಯಲ್ಲಿ ಸುತ್ತಿರುವುದನ್ನು ಕಾಣಬಹುದು.
ಹೆಣ್ಣು ಮಗುವನ್ನು ಸ್ವಾಗತಿಸಲು ಇಡೀ ಅಂಬಾನಿ ಕುಟುಂಬವು (Ambani family) ಶ್ಲೋಕಾ ಮೆಹ್ತಾ ಅವರ ಮನೆಯಲ್ಲಿ ಜಮಾಯಿಸಿತ್ತು. ಮುಕೇಶ್ ಅಂಬಾನಿ ಮತ್ತು ಇಶಾ ಅಂಬಾನಿ ಸೇರಿದಂತೆ ಇಡೀ ಅಂಬಾನಿ ಕುಟುಂಬವು ಹೆಣ್ಣು ಮಗುವನ್ನು (Girl baby) ಸ್ವಾಗತಿಸುವಾಗ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿತ್ತು. ಮುಕೇಶ್ ಅಂಬಾನಿ ಗುಲಾಬಿ ಮತ್ತು ಬಿಳಿ ಬಣ್ಣದ ಪಟ್ಟೆ ಶರ್ಟ್‌ನಲ್ಲಿ ಕಾಣಿಸಿಕೊಂಡರೆ, ಶ್ಲೋಕಾ ಮೆಹ್ತಾ ಅವರ ತಾಯಿ ಗುಲಾಬಿ ಬಣ್ಣದ ಕುರ್ತಾವನ್ನು ಧರಿಸಿದ್ದರು. ಇಶಾ ಅಂಬಾನಿ ಗುಲಾಬಿ ಬಣ್ಣದ ಸೂಟ್ ಅನ್ನು ಆರಿಸಿಕೊಂಡರು. ಅವರ ಪುಟ್ಟ ಮಗಳು ಆದಿಯಾ ಗುಲಾಬಿ ಬಣ್ಣದ ಹೂವಿನ ಉಡುಪಿನಲ್ಲಿ ಮುದ್ದಾಗಿ ಕಾಣುತ್ತಿದ್ದರು. ಆಕಾಶ್ ಅಂಬಾನಿ ಪಿಂಕ್ ಸ್ಟ್ರೈಪ್ ಟೀ ಶರ್ಟ್ ಧರಿಸಿದ್ದರು.
ಅಂಬಾನಿ ಸೊಸೆಯಲ್ಲಿದೆ ಜಗತ್ತಿನ ಅತೀ ದುಬಾರಿ ಡೈಮಂಡ್ ನೆಕ್ಲೇಸ್, ಬೆಲೆ ಕೇಳಿದ್ರೆ ಬೆಚ್ಚಿ ಬೀಳ್ತೀರಾ?
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ಮೇ 31, 2023 ರಂದು ತಮ್ಮ ಹೆಣ್ಣು ಮಗುವನ್ನು ಸ್ವಾಗತಿಸಿದರು. ಆಕಾಶ್ ಅಂಬಾನಿ (Akash Ambani) ಮತ್ತು ಶ್ಲೋಕಾ ಮೆಹ್ತಾ ಆಸ್ಪತ್ರೆಯಿಂದ ವಾಹನಗಳ ಬೆಂಗಾವಲುಗಳೊಂದಿಗೆ ಮನೆಗೆ ಹೋಗಿದ್ದರು. ಈ ಬೆಂಗಾವಲು ಪಡೆಯಲ್ಲಿ ಒಂದಕ್ಕಿಂತ ಹೆಚ್ಚು ಐಷಾರಾಮಿ ವಾಹನಗಳಿದ್ದವು. ಈ ಬೆಂಗಾವಲು ಪಡೆಯಲ್ಲಿ ಒಟ್ಟು 32 ವಾಹನಗಳಿದ್ದವು ಎಂದು ತಿಳಿದುಬಂದಿದೆ.
ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾಗೆ ಈಗಾಗಲೇ ಎರಡು ವರ್ಷದ ಮಗನಿದ್ದು, ಈತನಿಗೆ ಪೃಥ್ವಿಯೆಂದು ಹೆಸರಿಡಲಾಗಿದೆ. ಇದೀಗ ಎರಡನೇ ಬಾರಿಗೆ ತಂದೆ-ತಾಯಿಯಾಗಿರುವ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ, ಮಗುವಿನ ಹೆಸರನ್ನು ಇನ್ನಷ್ಟೇ ಬಹಿರಂಗಪಡಿಸಬೇಕಿದೆ. ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಭಾರತೀಯ ಸಂಸ್ಕೃತಿ ಹಾಗೂ ಸಂಪ್ರದಾಯದ ಬಗ್ಗೆ ಅಪಾರ ಒಲವು ಹೊಂದಿರುವ ಕಾರಣ ಭಾರತೀಯ ಸಂಸ್ಕೃತಿಯನ್ನು (Indian culture) ಬಿಂಬಿಸುವ ಹೆಸರನ್ನೇ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಮುಖೇಶ್ ಅಂಬಾನಿ ಅವರ ಏಕೈಕ ಪುತ್ರಿ ಇಶಾ ಅಂಬಾನಿ ಕೂಡ ತಮ್ಮ ಅವಳಿ ಮಕ್ಕಳಿಗೆ ಕೃಷ್ಣ ಹಾಗೂ ಆದ್ಯ ಎಂಬ ಭಾರತೀಯ ಹೆಸರನ್ನೇ ಇಟ್ಟಿದ್ದಾರೆ.
ಇನ್ನು ಬುಧವಾರ ಆಕಾಶ್ ಅಂಬಾನಿ ಅವರ ತಮ್ಮ ಅನಂತ್ ಅಂಬಾನಿ ತಾನು ವಿವಾಹವಾಗಲಿರುವ ಹುಡುಗಿ ರಾಧಿಕಾ ಮರ್ಚೆಂಟ್ ಜೊತೆಗೆ ಆಸ್ಪತ್ರೆಗೆ ಭೇಟಿ ನೀಡಿ ಆಕಾಶ್ ಹಾಗೂ ಶ್ಲೋಕಾ ಅವರಿಗೆ ಅಭಿನಂದನೆ ತಿಳಿಸಿದ್ದರು. ಅಂಬಾನಿ ಕುಟುಂಬಕ್ಕೆ ಹೊಸ ಸದಸ್ಯಳ ಆಗಮನದ ಸುದ್ದಿಯನ್ನು ರಿಲಯನ್ಸ್ ನ್ಯೂ ಎನರ್ಜಿ ಲಿಮಿಟೆಡ್ ನಿರ್ದೇಶಕ ಧನ್ ರಾಜ್ ನಥ್ವಾನಿ ಟ್ವೀಟ್ ಮೂಲಕ ಬಹಿರಂಗಪಡಿಸಿದ್ದರು. 'ಪುಟ್ಟ ರಾಜಕುಮಾರಿಯ ಸಂತಸದ ಆಗಮನಕ್ಕೆ ಆಕಾಶ್ ಹಾಗೂ ಶ್ಲೋಕಾ ಅಂಬಾನಿ ಅವರಿಗೆ ಹೃದಯಸ್ಪರ್ಶಿ ಅಭಿನಂದನೆಗಳು. ಈ ಅಮೂಲ್ಯದ ಆಶೀರ್ವಾದ ನಿಮ್ಮ ಬದುಕಿನಲ್ಲಿ ಅಪಾರ ಸಂತಸ ಹಾಗೂ ಪ್ರೀತಿ ತರಲಿ' ಎಂದು ಅವರು ಬರೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮುಕೇಶ್ ಅಂಬಾನಿ ಜೊತೆಗೆ ದಂಪತಿಗಳು ಮಗ ಪೃಥ್ವಿಯೊಂದಿಗೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.