Selfi with PM: ಪ್ರಧಾನಿ ಮೋದಿ ಜತೆ ಸೆಲ್ಫಿ ಕ್ಲಿಕ್ಕಿಸಿದ್ದ ಇಟಲಿ ಪ್ರಧಾನಿ ಫೋನ್ ಕೇಸಿಗೊಂದು ಕತೆ!

By Suvarna NewsFirst Published Dec 6, 2023, 5:54 PM IST
Highlights

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರು ತಮ್ಮ ಫೋನಿನಲ್ಲಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇತ್ತೀಚೆಗೆ ಸೆಲ್ಫಿ ಕ್ಲಿಕ್ಕಿಸಿದ್ದುದು ಭಾರೀ ಸುದ್ದಿಯಾಗಿತ್ತು. ಇದೀಗ ಅವರ ಫೋನ್ ಸುದ್ದಿಯಲ್ಲಿದೆ. ಆತಂಕದ ಸಮಸ್ಯೆ ನಿವಾರಣೆಗೆ ಸಹಕಾರಿಯಾಗುವ ವಾಕ್ಯಗಳನ್ನು ಹೊಂದಿರುವ ಈ ಫೋನ್ ಚಿತ್ರ ಇದೀಗ ವೈರಲ್ ಆಗಿದೆ.
 

ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ಸಿಒಪಿ28 ರಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಸಮಯದಲ್ಲಿ ಇಟಲಿ ಪ್ರಧಾನಮಂತ್ರಿ ಜಾರ್ಜಿಯಾ ಮೆಲೊನಿ ಅವರು ಕ್ಲಿಕ್ಕಿಸಿದ್ದ ಸೆಲ್ಫಿ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಕೆಲ ದಿನದ ಹಿಂದಿನ ಈ ಘಟನೆ ಹಲವು ಮಾಧ್ಯಮಗಳಲ್ಲಿ ಹೆಡ್ ಲೈನ್ ಸುದ್ದಿಯೂ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲೂ ಈ ಸೆಲ್ಫಿ ಫೋಟೊ ಸಿಕ್ಕಾಪಟ್ಟೆ ಹರಿದಾಡಿತ್ತು. ಇದೀಗ, ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ ಅವರ ಫೋನ್ ಕೇಸ್ ಸುದ್ದಿಯಲ್ಲಿದೆ. ಏಕೆಂದರೆ, ಈ ಫೋನ್ ಕೇಸ್ ಮಾನಸಿಕವಾಗಿ ಸಶಕ್ತಗೊಳಿಸಲು ನೆರವಾಗುವ ಹಲವು ಕೋಟ್ ಗಳನ್ನು ಒಳಗೊಂಡಿದೆ. ಆತಂಕದ ಸಮಸ್ಯೆ ನಿವಾರಣೆಗೆ ಬಳಕೆ ಮಾಡುವ ಖಚಿತ ವಾಕ್ಯಗಳನ್ನು ಹೊಂದಿದೆ. ಪಿಎಂ ಮೋದಿ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದ ಈ ಫೋನ್ ಕೇಸ್ ಈಗ ಅಂತರ್ಜಾಲದಲ್ಲಿ ಹವಾ ಸೃಷ್ಟಿಸಿದೆ. 

ಆಧುನಿಕ ಜಗತ್ತಿನಲ್ಲಿ ಕಂಡುಬರುವ ಹಲವು ಮಾನಸಿಕ (Mental) ಸಮಸ್ಯೆಗಳಲ್ಲಿ ಆತಂಕಕ್ಕೆ ಮುಂಚೂಣಿ ಸ್ಥಾನ. ವ್ಯಕ್ತಿಯಲ್ಲಿರುವ ಆತಂಕವನ್ನು (Anxiety) ದೂರ ಮಾಡಲು ಸ್ವ ಮೌಲ್ಯಕ್ಕೆ ಉತ್ತೇಜನ ನೀಡುವುದು ಹಾಗೂ ಆತ್ಮವಿಶ್ವಾಸ (Self Confidence) ಹೆಚ್ಚಿಸಿಕೊಳ್ಳುವುದು ಪ್ರಮುಖ ಮಾರ್ಗವಾಗಿದೆ. ಹೀಗಾಗಿ, ಆತಂಕದ ಸಮಸ್ಯೆ (Problem) ಉಳ್ಳವರಿಗೆ ಹಲವು ಮಾರ್ಗೋಪಾಯಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ವ್ಯಕ್ತಿ ಮಾನಸಿಕವಾಗಿ ಚೇತರಿಸಿಕೊಳ್ಳಲು ನೆರವಾಗುವಂತೆ ಹಲವು ದೃಢವಾದ ವಾಕ್ಯಗಳನ್ನು (Affirmations) ಪದೇ ಪದೆ ಮನನ ಮಾಡಿಕೊಳ್ಳಲು ಸೂಚಿಸಲಾಗುತ್ತದೆ. ಇಂತಹ ಹಲವು ವಾಕ್ಯಗಳು ಆತಂಕವನ್ನು ನಿವಾರಿಸುವಲ್ಲಿ ಕೊಡುಗೆ ನೀಡುತ್ತವೆ. ಆತಂಕ ನಿವಾರಣೆಗೆ ಸಹಕಾರಿಯಾಗಬಲ್ಲ ಇಂತಹ ವಾಕ್ಯಗಳನ್ನು ಈ ಫೋನ್ ಕೇಸ್ (Phone Case) ಹೊಂದಿದೆ ಎನ್ನುವುದೇ ಸದ್ಯದ ವಿಶೇಷ.

19ರ ಯುವಕ ಜಗತ್ತಿನ ಸಿರಿವಂತ, ನೆಟ್‌ವರ್ಥ್ ಏನು ಇವನದ್ದು?

ಆತಂಕ ನಿರೋಧಕ ಫೋನ್ ಕೇಸ್!
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ (Giorgia Meloni) ಅವರ ಫೋನ್ ಕೇಸ್ ಆತಂಕದ ಸಮಸ್ಯೆ ದೂರ ಮಾಡಲು ನೆರವಾಗುವ ಅನೇಕ ವಾಕ್ಯಗಳನ್ನು ಹೊಂದಿದೆ. “ನಾನು ನನ್ನ ಇತಿಹಾಸವನ್ನು ಮರಳಿ ಪಡೆದಿರುವೆ, ನನ್ನ ಆತಂಕದ ಸಮಸ್ಯೆ ನಾನೇನು ಎನ್ನುವುದನ್ನು ಹೇಳುವುದಿಲ್ಲ, ಬ್ರೇಕ್ ತೆಗೆದುಕೊಳ್ಳಲು ನನಗೆ ನಾನು ಅನುಮತಿ ನೀಡಿಕೊಂಡಿದ್ದೇನೆ, ನಾನು ತೃಪ್ತನಾಗಿರುವೆ..’ ಇಂತಹ ಹಲವು ವಾಕ್ಯಗಳನ್ನು ಈ ಫೋನ್ ಕೇಸ್ ಹೊಂದಿದೆ. ಹಾಗಿದ್ದರೆ ಜಾರ್ಜಿಯಾ ಮೆಲೊನಿ ಅವರಿಗೆ ಆತಂಕದ ಸಮಸ್ಯೆ ಕಾಡಿತ್ತೇ ಎನ್ನುವ ಪ್ರಶ್ನೆ ಮೂಡಬಹುದು. ಹಾಗೇನೂ ಇಲ್ಲ ಎನ್ನಲಾಗಿದೆ. ಜಾರ್ಜಿಯಾ ಅವರಿಗೆ ಈ ಫೋನ್ ಕೇಸ್ ಅನ್ನು ಅವರ 7 ವರ್ಷದ ಮಗಳು ಜಿನೆರ್ವಾ ಗಿಫ್ಟ್ ಮಾಡಿದ್ದಾಳೆ. ಧನಾತ್ಮಕ (Positive) ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡುವಂತಹ, ಮಾನಸಿಕ ಕ್ಷೇಮಕ್ಕೆ ಪೂರಕವಾಗುವಂತಹ ವಾಕ್ಯಗಳನ್ನು ಒಳಗೊಂಡ ಫೋನ್ ಕೇಸನ್ನು ಆಕೆ ಆಯ್ಕೆ ಮಾಡಿದ್ದಾಳೆ. 

ಟ್ರೆಂಡ್ (Trend) ನಿರ್ಮಿಸಿದ್ದ ಸೆಲ್ಫಿ
ಇಟಲಿಯ ಜನಪ್ರಿಯ ಫ್ರಾಟೆಲಿ ಡಿ ಇಟಾಲಿಯಾ ಪಕ್ಷದ ನಾಯಕಿಯಾಗಿದ್ದಾರೆ  ಜಾರ್ಜಿಯಾ ಮೆಲೊನಿ. ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನಲ್ಲಿ ಇತ್ತೀಚೆಗೆ ನಡೆದ ಸಿಒಪಿ28 ಶೃಂಗದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಮೆಲೊನಿ ಅವರೂ ಸಹ ಪಾಲ್ಗೊಂಡಿದ್ದರು.

World Disability Day: ಮಕ್ಕಳನ್ನು ಡಾಕ್ಟರ್‌, ಎಂಜಿನಿಯರ್‌ ಮಾಡಿದ ವಿಕಲಚೇತನ..!

ಶೃಂಗದ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ಅವರೊಂದಿಗೆ ಮೆಲೊನಿ ಅತ್ಯಂತ ಉತ್ಸುಕರಾಗಿ ಸೆಲ್ಫಿ (Selfi) ಕ್ಲಿಕ್ಕಿಸಿಕೊಂಡಿರುವುದು ಸಾಕಷ್ಟು ಸುದ್ದಿಯಾಗಿತ್ತು. ಇದನ್ನು ಪೋಸ್ಟ್ ಮಾಡಿದ್ದ ಕೆಲವೇ ಕ್ಷಣಗಳಲ್ಲಿ “Melodi secured top spot’ ಎನ್ನುವ ಹ್ಯಾಶ್ ಟ್ಯಾಗ್ ಅಡಿ ಈ ಫೋಟೊ ಟ್ರೆಂಡ್ ನಿರ್ಮಾಣ ಮಾಡಿತ್ತು. ಸಾಮಾಜಿಕ ಜಾಲತಾಣ (Social Media) ಎಕ್ಸ್ ನಲ್ಲಿ ಸಿಕ್ಕಾಪಟ್ಟೆ ಕಾಮೆಂಟುಗಳ ಮಹಾಪೂರವೇ ಹರಿದು ಬಂದಿತ್ತು. ಇನ್ ಸ್ಟಾ ಗ್ರಾಮ್ ನಲ್ಲಿ 1.33 ಮಿಲಿಯನ್ ಲೈಕುಗಳನ್ನು ಪಡೆದುಕೊಂಡಿತ್ತು. 
 

click me!