Latest Videos

ಹೆರಿಗೆಗೆ ಒಂದಿನ ಮೊದಲು ಪತಿ ಮೀಟಿಂಗ್, ಇಂಥ ಫ್ಯಾಮಿಲಿ ಸಿಕ್ಕಿದರೆ ಕಣ್ಮುಚ್ಚಿ ಮದ್ವೆಯಾಗಬಹುದು ನೋಡಿ!

By Suvarna NewsFirst Published Dec 6, 2023, 3:34 PM IST
Highlights

ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದು ಆಸಕ್ತಿಕರ ವಿಷ್ಯಗಳು ಪೋಸ್ಟ್ ಆಗ್ತಿರುತ್ತವೆ. ಈಗ ಕುಟುಂಬವೊಂದರ ಪ್ರೀತಿ ಎಲ್ಲರ ಮನಸ್ಸು ಕದ್ದಿದೆ. ಹೆರಿಗೆಗೆ ಮುನ್ನ ಪತಿ ಮಾಡಿದ ಕೆಲಸ ಬಳಕೆದಾರರ ಮನ ಮುಟ್ಟಿದೆ. 
 

ಗರ್ಭಧಾರಣೆ, ಹೆರಿಗೆ ಹಾಗೂ ಹೆರಿಗೆ ನಂತ್ರದ ಜೀವನ ಮಹಿಳೆಗೆ ಸಾಕಷ್ಟು ಸವಾಲುಗಳನ್ನು ಒಡ್ಡುತ್ತದೆ. ಒಂದೊಂದು ದಿನ ಒಂದೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಲ್ಲಿ ಖುಷಿ ಇಲ್ಲವೆಂದಲ್ಲ. ಸಂತೋಷ ಒಂದು ಭಾಗವಾದ್ರೆ ಸಮಸ್ಯೆಗಳು ಇನ್ನೊಂದು ಭಾಗದಲ್ಲಿರುತ್ತವೆ. ಹೆರಿಗೆ ನಂತ್ರ ಮಗುವಿನ ಆರೋಗ್ಯದ ಜೊತೆ ತಾಯಿ ಆರೋಗ್ಯದ ಬಗ್ಗೆಯೂ ಹೆಚ್ಚು ಕಾಳಜಿವಹಿಸಬೇಕು. ಆಹಾರ (Food), ನಿದ್ರೆ (Sleep) ಸೇರಿದಂತೆ ಎಲ್ಲ ವಿಷ್ಯದ ಬಗ್ಗೆ ಹೆಚ್ಚಿನ ಗಮನ ನೀಡಿದ್ರೆ ಮಾತ್ರ ತಾಯಿ ಆರೋಗ್ಯವಾಗಿರಲು ಸಾಧ್ಯ. ಮಗುವನ್ನು ಚೆನ್ನಾಗಿ ಆರೈಕೆ ಮಾಡಲು ಸಾಧ್ಯ. ಹೆರಿಗೆ ನಂತ್ರ ಮಹಿಳೆಯರು ಮಾನಸಿಕ ಸಮಸ್ಯೆಗಳನ್ನು (Mental Health) ಕೂಡ ಎದುರಿಸುತ್ತಾರೆ. ಆಕೆ ಸುತ್ತಮುತ್ತಲಿನ ವಾತಾವರಣ ಚೆನ್ನಾಗಿದ್ದಲ್ಲಿ, ಆಕೆಯನ್ನು ಪ್ರೀತಿಯಿಂದ ಕುಟುಂಬಸ್ಥರು ಆರೈಕೆ ಮಾಡಿದಲ್ಲಿ ಹೆರಿಗೆ ನಂತ್ರದ ದಿನಗಳು ಆರಾಮವಾಗಿ ಕಳೆಯುತ್ತವೆ. ಎಲ್ಲರಿಗೂ ಈ ಸೌಲಭ್ಯ ಸಿಗಲು ಸಾಧ್ಯವಿಲ್ಲ. ಪತಿ ಹಾಗೂ ಆತನ ಕುಟುಂಬ, ಮಹಿಳೆಯ ಕುಟುಂಬ ಒಂದಾದ್ರೆ, ಡಿಲೆವರಿ ನಂತ್ರ ತಾವು ಅನುಭವಿಸಿ ಕಷ್ಟವನ್ನು ಸೊಸೆ ಅನುಭವಿಸಬಾರದು ಎಂಬ ದೃಢ ಸಂಕಲ್ಪ ಮಾಡಿದ್ರೆ ಅದು ಸಾಧ್ಯವಾಗುತ್ತದೆ. ಮಹಿಳೆಯೊಬ್ಬಳು ತನ್ನ ಪತಿ ಹೆರಿಗೆ ಹಿಂದಿನ ಮಾಡಿದ ಪ್ಲಾನ್ ಏನು? ಅದು ವರ್ಕ್ ಔಟ್ ಆಗಿದ್ಯಾ ಎನ್ನುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

ಹೆರಿಗೆ (Delivery) ಹಿಂದಿನ ದಿನ ಮೀಟಿಂಗ್ : ಜು ಹೆಸರಿನ ಚೀನಾ (China) ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾಳೆ. ಅದು ಫ್ಯಾಮಿಲಿ ಮೀಟಿಂಗ್ ಎಂದು ಆಕೆ ಹೇಳಿದ್ದಾಳೆ. ಈ ಮೀಟಿಂಗ್ (meeting) ಗೆ ಕಾರಣವಾಗಿದ್ದು ಜು. ಜು ಗರ್ಭಿಣಿ. ಆಕೆಯ ಹೆರಿಗೆಗೆ ಒಂದು ದಿನ ಮೊದಲು ಆಕೆ ಪತಿ ಈ ಮೀಟಿಂಗ್ ಫಿಕ್ಸ್ ಮಾಡಿದ್ದಾನೆ. ತನ್ನ ತಂದೆ  ತಾಯಿ ಹಾಗೂ ಅತ್ತೆಯನ್ನು ಲೈವ್ ಮೀಟಿಂಗ್ ಗೆ ಕರೆದು, ಪತ್ನಿಯ ಹೆರಿಗೆ ನಂತ್ರ ಮೂರು ತಿಂಗಳ ಕಾಲ ಏನೆಲ್ಲ ಮಾಡ್ಬೇಕು ಎಂಬ ಟಾಸ್ಕ್ ಹಂಚಿಕೊಂಡಿದ್ದಾನೆ.

ಸೀಮಾ ಹೈದರ್ ಬಳಿಕ, ಕೋಲ್ಕತ್ತಾದ ಹುಡುಗನನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದ ಯುವತಿ!

ಟಾಸ್ಕ್ ನಲ್ಲಿ ಏನಿದೆ? : ಜು ಪ್ರಕಾರ, ಆಕೆ ಪತಿ ತನ್ನ ಕುಟುಂಬ ಹಾಗೂ ಜು ಕುಟುಂಬಕ್ಕೆ ನೀಡಿದ ಟಾಸ್ಕ್ ನಲ್ಲಿ ಅನೇಕ ವಿಷ್ಯಗಳಿವೆ. ಮಗುವಿನ ಕೆಲಸ, ನ್ಯಾಪ್ಕಿನ್ ಬದಲಿಸೋದು, ಅಡುಗೆ ಮಾಡೋದು ಸೇರಿದಂತೆ ಅನೇಕ ಕೆಲಸವಿದ್ದು, ಜು ಪತಿ ಇದ್ರಲ್ಲಿ ನಗುವನ್ನೂ ಸೇರಿಸಿದ್ದಾನೆ. ಈ ಎಲ್ಲವನ್ನೂ ಎಲ್ಲರೂ ಸರಿಯಾಗಿ ಪಾಲಿಸಬೇಕೆಂದು ಹೇಳಿದ್ದ ಜು ಪತಿ, ಪತ್ನಿಯ ಮಾನಸಿಕ ಆರೋಗ್ಯದ ಬಗ್ಗೆ ಒತ್ತಿ ಹೇಳಿದ್ದ. ಜು ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚುವರಿ ಗಮನ ನೀಡುವಂತೆ ಸೂಚನೆ ನೀಡಿದ್ದ.

ಜು ಪತಿ ಬರೀ ಕುಟುಂಬಸ್ಥರಿಗೆ ಮಾತ್ರವಲ್ಲ ತನಗೂ ಕೆಲ ನಿಯಮ ಹಾಕಿಕೊಂಡಿದ್ದ. ಭಾರತದಲ್ಲಿ ಒಂದೂವರೆ ತಿಂಗಳವರೆಗೆ ಬಾಣಂತಿಯರು ಕೊಠಡಿಯಿಂದ ಹೊರಗೆ ಬರುವಂತಿಲ್ಲ. ಮೂರು ತಿಂಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಚೀನಾದಲ್ಲಿ ಈ ಅವಧಿ ಒಂದು ತಿಂಗಳಿಗೆ ಸೀಮಿತವಾಗಿದೆ. ಆದ್ರೆ ಜು ಪತಿ ಇದನ್ನು ಮೂರು ತಿಂಗಳಿಗೆ ವಿಸ್ತರಿಸಿದ್ದರು. 

ಮೀಟಿಂಗ್ ನಡೆದ ಮರುದಿನ ಜು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಪತಿಯ ನಿಯಮವನ್ನು ಈಗ ಮನೆಯವರೆಲ್ಲ ಪಾಲಿಸಿಕೊಂಡು ಬರ್ತಿದ್ದಾರಂತೆ. ಮಗು ಹಾಗೂ ನನ್ನ ಆರೋಗ್ಯ ಚೆನ್ನಾಗಿದ್ದು, ನಾವೆಲ್ಲ ಖುಷಿಯಾಗಿದ್ದೇವೆಂದು ಜು ಹೇಳಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಜು ವಿಡಿಯೋ ವೈರಲ್ ಆಗಿದೆ. ಜನರು ಜು ಕುಟುಂಬವನ್ನು ಕೊಂಡಾಡಿದ್ದಾರೆ. ಇಂಥ ಪತಿ ಹಾಗೂ ಗಂಡನ ಮನೆಯವರು ಸಿಕ್ಕಿದ್ರೆ ಮದುವೆಯಾಗೋಕೆ, ಮಕ್ಕಳನ್ನು ಹೆರೋಕೆ ತೊಂದ್ರೆಯಿಲ್ಲ ಎಂದು ಕೆಲವರು ತಮಾಷೆ ಮಾಡಿದ್ದಾರೆ.   

ಅಭಿಷೇಕ್​ ಜೊತೆ ವಿಚ್ಛೇದನ ಸುದ್ದಿ ಬೆನ್ನಲ್ಲೇ ಮಗಳ ಜೊತೆ ಐಶ್ವರ್ಯ ರೈ ಡ್ಯಾನ್ಸ್​ ವೈರಲ್​!

click me!