ಶಿಮ್ಲಾದ ಗುಡ್ಡಗಾಡು ಪ್ರದೇಶದಲ್ಲಿ ವಾಸವಾಗಿರುವ ಹಿರಿಯ ದಂಪತಿಯ ವೀಡಿಯೋ ಹಾಗೂ ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿವೆ. ಮದುವೆಯಾಗಿ 52 ವಸಂತಗಳನ್ನು ಕಳೆದಿರುವ ಈ ಜೋಡಿ ಸಖತ್ ಕ್ಯೂಟ್ ಆಗಿದೆ.
ಪ್ರವಾಸಿಗರಿಗೆ ಬೇರೆ ಬೇರೆ ಸ್ಥಳಗಳಿಗೆ ಹೋದಾಗ ವಿಭಿನ್ನ ಜನರು, ಸಂಸ್ಕೃತಿ, ಪದ್ಧತಿಗಳ ಮುಖಾಮುಖಿಯಾಗುತ್ತದೆ. ಪ್ರವಾಸದ ಹುಚ್ಚಿರುವವರು ಈ ಬಗ್ಗೆ ತೆರೆದ ಕಿವಿ, ಕಣ್ಣಾಗಿರುತ್ತಾರೆ. ಪ್ರವಾಸದ ಅನುಭವವಿರುವ ಎಲ್ಲರಿಗೂ ಇದು ತಿಳಿದಿರುತ್ತದೆ. ಅಂತಹ ಸಮಯದಲ್ಲಿ ಸಿಗುವ ಜನರು ಅಪ್ಯಾಯವೆನ್ನಿಸಬಹುದು, ಅಲ್ಲಿನ ವಾತಾವರಣ ಬಹಳಷ್ಟು ಆತ್ಮೀಯವೆನ್ನುವ ಭಾವನೆ ಮೂಡಿಸಬಹುದು. ಪ್ರವಾಸದ ಸಮಯದಲ್ಲಿ ದೊರೆತ ಕ್ಷಣಗಳು ಅನೇಕ ಬಾರಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿಬಿಡುತ್ತವೆ. ಹಾಗೆಯೇ, ಅಂಶು ಎನ್ನುವವರಿಗೆ ಶಿಮ್ಲಾ ಪ್ರವಾಸದ ವೇಳೆ ದೊರೆತ ಹಿರಿಯ ಜೋಡಿಯ ವೀಡಿಯೋ ಹಾಗೂ ಫೋಟೊಗಳು ಇದೀಗ ವೈರಲ್ ಆಗಿವೆ. ಶಿಮ್ಲಾದ ಹಿರಿಯ ಜೋಡಿಯ ಫೋಟೊಗಳು ಮನಸ್ಸನ್ನು ಮುದಗೊಳಿಸುವಂತಿವೆ. ವೀಡಿಯೋ ಕ್ರಿಯೇಟರ್ ಅಂಶು ಎನ್ನುವವರಿಗೆ ಶಿಮ್ಲಾದ ಗುಡ್ಡಗಾಡಿನ ರಸ್ತೆಯೊಂದರಲ್ಲಿ ಈ ದಂಪತಿ ಸಿಕ್ಕಿದ್ದಾರೆ. ಆಗ ನಡೆದ ಮಾತುಕತೆ ಕ್ಯೂಟ್ ಆಗಿದ್ದು, ಇನ್ ಸ್ಟಾಗ್ರಾಮ್ ನಲ್ಲಿ 10 ಮಿಲಿಯನ್ ಗೂ ಅಧಿಕ ವೀಕ್ಷಣೆಗೆ ಒಳಗಾಗಿದೆ.
ಅಷ್ಟಕ್ಕೂ ಈ ವೀಡಿಯೋದಲ್ಲಿ (Video) ಏನಿದೆ ಎನಿಸಬಹುದು. ಎತ್ತರದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದಂಪತಿಯನ್ನು (Parents) ಅಂಶು ಮಾತನಾಡಿಸುತ್ತಾರೆ. ಆಗ ತಿಳಿದು ಬರುವ ಸಂಗತಿ ನಿಜಕ್ಕೂ ಅಚ್ಚರಿದಾಯಕ. ಅವರ ಮದುವೆಯಾಗಿ ಬರೋಬ್ಬರಿ 52 ವರ್ಷಗಳಾಗಿವೆ. ಅಜ್ಜಿಯ (Older Woman) ನಗುಮುಖ ಸೆಳೆಯುತ್ತದೆ. ತಾತ ಕೂಡ ಚುರುಕಾಗಿದ್ದಾರೆ. “ನಿಮ್ಮ ಮದುವೆಯಾಗಿ (Marriage) ಎಷ್ಟು ವರ್ಷವಾಗಿವೆ?ʼ ಎನ್ನುವ ಪ್ರಶ್ನೆಗೆ ತಾತ “52 ವರ್ಷವಾದವು’ ಎಂದು ಉತ್ತರಿಸುತ್ತಾರೆ.
ಕ್ಯೂಟ್ ಫೋಟೋಸ್
ಅಂಶು ಅವರಿಗೆ ಫೋಟೊಗ್ರಫಿ (Photography) ಹವ್ಯಾಸವಾಗಿದ್ದು, ಫೋಟೊಗಳನ್ನು ಕ್ಲಿಕ್ಕಿಸುವುದೆಂದರೆ ಭಾರೀ ಖುಷಿ ಎನ್ನುತ್ತಾರೆ. 'ಫೋಟೊಗ್ರಫಿ ನನಗೆ ಇಷ್ಟ, ನೀವಿಬ್ಬರೂ ಜತೆಯಾಗಿ ತುಂಬ ಕ್ಯೂಟ್ (Cute) ಆಗಿದ್ದೀರಿ. ನಿಮ್ಮಿಬ್ಬರ ಫೋಟೊ ತೆಗೆದುಕೊಳ್ಳುತ್ತೇನೆʼ ಎಂದು ಅವರಲ್ಲಿ ಮನವಿ ಮಾಡಿಕೊಳ್ಳುತ್ತಾರೆ. ಆಗ ಅಜ್ಜಿ, 'ಈ ಫೋಟೊವನ್ನು ಎಲ್ಲಿ ಹಾಕುತ್ತೀರಿ?ʼ ಎಂದು ಪ್ರಶ್ನಿಸುತ್ತಾರೆ. ಬಳಿಕ, ಅಂಶು ಅವರು ಕ್ಲಿಕರ್ ಅಂಶು ಹೆಸರಿನ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ಹಾಕಿರುವ ವೀಡಿಯೋಗಳನ್ನು ವೀಕ್ಷಿಸಿ, 'ಓಹೊ, ಹೀಗಾ?ʼ ಎಂದು ಎನ್ನುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಅವರು ಹಾಕಿರುವ ಫೋಟೊಗಳನ್ನು ನೋಡಿದ ಬಳಿಕ ಹಿರಿಯ ದಂಪತಿ ಫೋಟೊಕ್ಕೆ ಪೋಸ್ ನೀಡುತ್ತಾರೆ.
ಹೃದಯಾಘಾತದಿಂದ ಮತ್ತೆ ಮೂಡಿತು ಒಲವು; ಡಿವೋರ್ಸ್ ಆಗಿ ಐದು ವರ್ಷದ ನಂತ್ರ ಒಂದಾದ ಜೋಡಿ
ಮದುವೆಯ ಬಗ್ಗೆ ಕೇಳಿದಾಗ ಅಜ್ಜಿ, 'ನಾನು ದೆಹಲಿಯವಳು, ಇವರು ಶಿಮ್ಲಾದವರು. ಕಳೆದ 52 ವರ್ಷಗಳಿಂದ ಶಿಮ್ಲಾದಲ್ಲಿಯೇ ಇದ್ದೇವೆʼ ಎನ್ನುತ್ತಾರೆ. “ಹಾಗಿದ್ರೆ ನಿಮ್ಮದು ಲವ್ (Love) ಮ್ಯಾರೇಜಾ?ʼ ಎಂದು ಕೇಳಿದರೆ, ಅಜ್ಜಿ “ಇಲ್ಲ, ಇಲ್ಲ, ನಮ್ಮದು ಅರೇಂಜ್ (Arrange) ಮ್ಯಾರೇಜೇʼ ಎಂದು ಉತ್ತರಿಸುತ್ತಾರೆ.
ಮೆಚ್ಚುಗೆಯ ಕಾಮೆಂಟ್ಸ್ (Comments)
ಕ್ಯಾಮರಾದಲ್ಲಿ ಸೆರೆ ಹಿಡಿದಿರುವ ಈ ಹಿರಿಯ ದಂಪತಿ ಅಷ್ಟೂ ಕ್ಷಣಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಅಂಶು ಶೇರ್ ಮಾಡಿದ್ದಾರೆ. ಇದೀಗ ಈ ವೀಡಿಯೋ ಸಖತ್ ವೈರಲ್ (Viral) ಆಗಿದೆ. ಸಾಕಷ್ಟು ಕಾಮೆಂಟ್ ಗಳೂ ಬಂದಿವೆ. ಒಬ್ಬರು, “ಪ್ರೀತಿಯೇ ಎಲ್ಲಕ್ಕಿಂತ ಅಧಿಕ, ಇದನ್ನು ಹರಡಲು ಎಲ್ಲರೂ ಯತ್ನಿಸಿʼ ಎಂದು ಹೇಳಿದ್ದಾರೆ. ಮತ್ತೊಬ್ಬರು, “ಇದು ನಮ್ಮ ಭಾರತೀಯ ಸಂಸ್ಕೃತಿಯ ಸೌಂದರ್ಯ (Beauty)ʼ ಎಂದು ಹೊಗಳಿದರೆ, “ಆಂಟೀಜಿ ತಮ್ಮ ಯೌವನದ ಕಾಲದಲ್ಲಿ ಸಿಕ್ಕಾಪಟ್ಟೆ ಸೌಂದರ್ಯವತಿಯಾಗಿರಬೇಕುʼ ಎಂದು ಹೇಳಿದ್ದಾರೆ. “ಈ ದಂಪತಿ ಸಖತ್ ಕ್ಯೂಟ್ ಆಗಿದ್ದಾರೆʼ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನಡು ವಯಸ್ಸಿನ ಹೆಣ್ಣು ಬೇರೊಬ್ಬನೊಂದಿಗೆ ಹೋಗೋದು ಲೈಂಗಿಕ ಆಸೆಗೋಸ್ಕರನಾ?
ಹಿರಿಯ ದಂಪತಿಯ ಪುತ್ರಿ ಮಮತಾ ಮಿನೋಚಾ ಗೌತಮ್ ಅವರೂ ಸಹ ವೀಡಿಯೋ ಹಾಗೂ ಚಿತ್ರಗಳಿಗೆ ಕಾಮೆಂಟ್ ಮಾಡಿದ್ದು, “ಈ ಚಿತ್ರಗಳಿಗೆ ಧನ್ಯವಾದ, ಇವರು ತಮ್ಮ ಪಾಲಕರು (Parents)ʼ ಎಂದಿದ್ದಾರೆ.