ನೀವು ಮಕ್ಕಳನ್ನು ನೋಡ್ಕೊಳೋದು ಕೋತಿ ಥರಾನಾ, ಬೆಕ್ಕಿನ ಥರಾನಾ?

By Suvarna News  |  First Published Sep 7, 2020, 3:22 PM IST

ಬೆಕ್ಕು ಮತ್ತು ಕೋತಿ- ಎರಡೂ ತಮ್ಮ ಮರಿಗಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತವೆ. ಆದರೆ ನೋಡಿಕೊಳ್ಳುವ, ಬೆಳೆಸುವ ವಿಧಾನ ಬೇರೆ ಬೇರೆ. ನೀವು ಯಾವ ಥರಾ ಅಂತ ನೋಡಿಕೊಳ್ಳಿ...


ಕೋತಿ ತನ್ನ ಮರಿಗಳನ್ನು ಹೆಚ್ಚು ಅವಚಿಕೊಂಡಿರುವುದಿಲ್ಲ. ಕೋತಿ ಅಮ್ಮನಾದರೂ ಅಷ್ಟೇ, ಅಪ್ಪನಾದರೂ ಅಷ್ಟೇ, ಮರಿಗಳ ಮೇಲೆ ಒಂದು ಕಣ್ಣು ಇಟ್ಟಿರುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಾಗ, ಒಂದು ಮರದಿಂದ ಇನ್ನೊಂದು ಮರಕ್ಕೆ ನೆಗೆಯುವಾಗ, ಅಮ್ಮ ಕೋತಿಯ ಹೊಟ್ಟೆಯನ್ನು ಮರಿಯೇ ಗಟ್ಟಿಯಾಗಿ ಅವಚಿ ಹಿಡಿದುಕೊಂಡಿರುತ್ತದೆ. ಮರಿಗಳು ಆಡುತ್ತಾಡುತ್ತಾ ಮರದಿಂದ ಜಾರಿಬಿದ್ದರೆ, ಅವುಗಳನ್ನು ಎತ್ತಿಕೊಳ್ಳಲು ತಾಯಿಯಾಗಲೀ ತಂದೆಯಾಗಲೀ ಹೋಗುವುದಿಲ್ಲ. ಮೊದಮೊದಲು ಹೀಗೆ ಬಿದ್ದ ಮರಿಗಳು ಚಿಟ್ಟನೆ ಚೀರುತ್ತವೆ. ಕೊನೆಗೆ ಯಾರೂ ತನ್ನ ಸಹಾಯಕ್ಕೆ ಬಾರದೇ ಇರುವುದನ್ನು ನೋಡಿ, ನಿಧಾನವಾಗಿ ತಾನೇ ಎದ್ದು ದೂಳು ಕೊಡವಿಕೊಂಡು ಹುಷಾರಾಗಿ ಎದ್ದು ಬರುವುದನ್ನು ಕಲಿಯುತ್ತದೆ. ಆಹಾರ ಹುಡುಕುವಾಗಲೂ ಅಷ್ಟೇ. ಹುಟ್ಟಿದ ಆರಂಭದ ಕೆಲವು ವಾರಗಳು ಮಾತ್ರವೇ ಅಮ್ಮ ಕೋತಿ ಮರಿಗೆ ಆಹಾರ ನೀಡುತ್ತದೆ. ನಂತರ ಅದು ತನ್ನ ಆಹಾರವನ್ನು ತಾನೇ ಹುಡುಕಿಕೊಳ್ಳುತ್ತದೆ. ಹೆಚ್ಚೆಂದರೆ ಅಪ್ಪ- ಅಮ್ಮ ಮರಿಗೆ ಆಹಾರವನ್ನು ತೋರಿಸಿಯಾರು ಅಷ್ಟೇ. 

ಇನ್ನೂ ಒಂದು ಬಗೆಯಿದೆ. ಅದು ಬೆಕ್ಕಿನದು. ಬೆಕ್ಕು ಒಂದು ಕಡೆಯಿಂದ ಇನ್ನೊಂದು ಕಡೆಗೆ ತನ್ನ ಬಿಡಾರ ಬದಲಾಯಿಸುವಾಗ ಪುಟ್ಟ ಮರಿಗಳಿದ್ದರೆ, ಮರಿಗಳನ್ನು ತಾನೇ ಕಚ್ಚಿಕೊಂಡು ಸಾಗಿಸುತ್ತದೆ. ಮರಿಗಳನ್ನು ಬಹಳ ಕೇರ್‌ ಮಾಡುತ್ತದೆ. ಸಣ್ಣಪುಟ್ಟ ಪ್ರಾಣಿಗಳನ್ನು ತಾನೇ ಬೇಟೆಯಾಡಿ ತಂದು ಮರಿಗೆ ಫೀಡ್‌ ಮಾಡುತ್ತದೆ. ಹೀಗಾಗಿ ಬೆಕ್ಕಿನ ಮರಿಗಳು ಇಂಡಿಪೆಂಡೆಂಟ್ ಆಗಲು ಹಲವು ತಿಂಗಳು ತೆಗೆದುಕೊಳ್ಳುತ್ತವೆ. 
ಈ ಎರಡು ವಿಧಗಳನ್ನು ಅನುಸರಿಸಿ ಸಂಸ್ಕೃತ ಪಂಡಿತರು ಎರಡು ವಿಧದ ಪೇರೆಂಟಿಂಗ್‌ ಅನ್ನು ಹೇಳುತ್ತಾರೆ- ಇವುಗಳನ್ನು "ನ್ಯಾಯ'' ಅನ್ನುತ್ತಾರೆ. ಮೊದಲನೆಯದು ಮಾರ್ಜಾಲಾರ್ಭಕ ನ್ಯಾಯ. ಎರಡನೆಯದು ಮರ್ಕಟ ಕಿಶೋರ ನ್ಯಾಯ. ಮಾರ್ಜಾಲ ಅಂದರೆ ಬೆಕ್ಕು. ಅರ್ಭಕ ಅಂದರೆ ಮರಿ. ಬೆಕ್ಕು ತನ್ನ ಮರಿಯನ್ನು ಜೋಪಾನ ಮಾಡುವಂತ ಕ್ರಮ ಮಾರ್ಜಾಲಾರ್ಭಕ ನ್ಯಾಯ. ಮರ್ಕಟಕಿಶೋರ ಅಂದರೆ ಮಂಗನ ಮರಿ. ಮಂಗಗಳು ತಮ್ಮ ಮರಿಯನ್ನು ನೋಡಿಕೊಳ್ಳುವ ರೀತಿ. ಇವೆರಡರಲ್ಲಿ ನೀವು ಯಾವ ಬಗೆಯ ಪೇರೆಂಟ್‌?



ತಜ್ಞರು ಹೇಳುವ ಪ್ರಕಾರ, ಬೆಕ್ಕಿನ ಕ್ರಮಕ್ಕಿಂತಲೂ ಕೋತಿಯ ಕ್ರಮವೇ ಹೆಚ್ಚು ಉತ್ತಮ ಪೇರೆಂಟಿಂಗ್‌. ಅನೇಕ ಹೆತ್ತವರು ತಮ್ಮ ಮಕ್ಕಳನ್ನು ತುಂಬಾ ಮುಚ್ಚಟೆಯಿಂದ ಸಾಕಿರುತ್ತಾರೆ. ಎಷ್ಟೆಂದರೆ, ಎಲ್ಲಿ ಹೋದರೂ ಅಲ್ಲಿಯ ನೀರನ್ನು ಕುಡಿಯಲು ಬಿಡುವುದಿಲ್ಲ. ಮನೆಯಿಂದ ಕೊಂಡೊಯ್ದ ನೀರನ್ನೇ ಕುಡಿಸುತ್ತಾರೆ. ಅಲ್ಲಿಯ ಆಹಾರ ಸೇವಿಸಲು ಬಿಡುವುದಿಲ್ಲ. ಮನೆಯಲ್ಲಿ ಮಾಡಿದ ಆಹಾರ ಆರೋಗ್ಯಕರವೇ ನಿಜ. ಆದರೆ ಹೊರಗಡೆ ಆಹಾರವನ್ನೂ ಸೇವಿಸಿ, ಇತರ ಕಡೆಗಳ ನೀರನ್ನೂ ಕುಡಿದು, ನಾನಾ ಬಗೆಯ ಬ್ಯಾಕ್ಟೀರಿಯಾ- ವೈರಸ್‌ಗಳಿಗೆ ಒಡ್ಡಿಕೊಳ್ಳುವ ಮೂಲಕವೇ ನಮ್ಮ ದೇಹ ಎಲ್ಲ ಬಗೆಯ ರೋಗಗಳನ್ನು ಎದುರಿಸಲು ಸಜ್ಜಾಗುತ್ತದೆ. ಇನ್ನು ಕೆಲವು ಅಮ್ಮಂದಿರು ತಮ್ಮ ಮಕ್ಕಳನ್ನು ಇತರ ಮಕ್ಕಳೊಡನೆ ಬೀದಿಯಲ್ಲಿ ಆಡಲೂ ಕಳಿಸುವುದಿಲ್ಲ. ಇದು ಇನ್ನೂ ಅಪಾಯಕಾರಿ. ಮೊದಮೊದಲು ಮಗು ಇತರ ಮಕ್ಕಳೊಡನೆ ಆಡುವ ಆಸೆಯಿಂಧ ಹಠ ಮಾಡುತ್ತದೆ, ಆದರೆ ತನ್ನ ಹೆತ್ತವರು ಬಿಡದೆ ಇರುವುದನ್ನು ನೋಡಿ ರೊಚ್ಚಿಗೇಳಲು ಕಲಿಯುತ್ತದೆ. ಇನ್ನು ಕೆಲವು ಮಕ್ಕಳು ಆಗ ಸುಮ್ಮನಾಗಬಹುದು, ಆದರೆ ಒಳಗಿಂದೊಳಗೇ ಮಾನಸಿಕ ಸಮಸ್ಯೆಗಳಿಂದ ನರಳುತ್ತವೆ. ಬಾಲ್ಯದಲ್ಲಿ ಸರಿಯಾದ ಆಟ, ಇತರ ಮಕ್ಕಳೊಡನೆ ಒಡನಾಟ, ಸೋಶಿಯಲೈಸೇಷನ್ ಸಿಗದೆ ಹೋದ ಮಕ್ಕಳು ದೊಡ್ಡವರಾದ ಮೇಲೆ ಮುಖೇಡಿಗಳಾಗಿ, ನಾಚಿಕೆ ಸ್ವಭಾವದವರಾಗಿ, ಬಾಳಿನ ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲದವರಾಗಿ ಹೋಗುತ್ತಾರೆ.

ಕೋತಿ ಕ್ರಮದ ಪೇರೆಂಟಿಂಗ್ ಇಂಥ ಸಮಸ್ಯೆಗಳು ಬರದಂತೆ ಮಕ್ಕಳನ್ನು ರೆಡಿ ಮಾಡುತ್ತದೆ. ಎಲ್ಲವನ್ನೂ ಎದುರಿಸಲು ತಯಾರಾಗುವಂತೆ ಮಕ್ಕಳನ್ನು ಬೆಳೆಸುತ್ತದೆ. 

Tap to resize

Latest Videos

undefined

ಆರಾಧ್ಯ ವಿಷಯದಲ್ಲಿ ಐಶ್ವರ್ಯ ರೈ ಸೂಪರ್‌ ಮಾಮ್ ಅಂತೆ! 

ಕೋತಿ ಪೇರೆಂಟ್‌ ಆಗಲು ನೀವು ಏನು ಮಾಡಬೇಕು?
ಮಕ್ಕಳು ಸಣ್ಣ ವಯಸ್ಸಿನಿಂದಲೇ ತಮ್ಮ ಕೆಲಸಗಳನ್ನು ತಾವೇ ಮಾಡಲು ಪ್ರೋತ್ಸಾಹಿಸಿ. ತಮ್ಮ ಹಾಸಿಗೆ ಹೊದಿಕೆಗಳನ್ನು ತಾವೇ ತಯಾರು ಮಾಡಿಕೊಳ್ಳುವುದು, ತಮ್ಮ ಶೂ ತಾವೇ ಪಾಲಿಶ್ ಮಾಡುವುದು, ಸಣ್ಣಪುಟ್ಟ ಬಟ್ಟೆಗಳನ್ನು ತಾವೇ ಒಗೆಯುವುದು, ಇವನ್ನೆಲ್ಲ ಕಲಿಸಿ, ಜೊತೆಗೆ ಸಮಯವಿದ್ದರೆ ಅಡುಗೆ ಮನೆಯಲ್ಲಿ ನಿಮಗೆ ಸಹಾಯ ಮಾಡುವುದನ್ನೂ ಹೇಳಿಕೊಡಿ. ತಮ್ಮ ಹೋಮ್‌ವರ್ಕ್ ತಾವೇ ಮಾಡಿಕೊಳ್ಳಲಿ. ನೀವು ಹೇಳಿಕೊಟ್ಟ ರೀತಿಯಲ್ಲಿ ಅಲ್ಲದೆ, ಬೇರೆ ರೀತಿಯಲ್ಲಿ ಮಾಡಲು ಪ್ರಯತ್ನಿಸಲಿ. ಅದರಲ್ಲಿ ತಪ್ಪಾದರೆ, ಆ ತಪ್ಪಿನಿಂದಲೂ ಅವರು ಪಾಠ ಕಲಿಯುತ್ತಾರೆ. ಅವರದೇ ಆರ್ಟ್‌ವರ್ಕ್‌ಗಳನ್ನು ಅವರದೇ ವಿಧಾನದಲ್ಲಿ ಮಾಡಲಿ. ಅವರದೇ ಆಟಗಳನ್ನು ರೂಪಿಸಿಕೊಳ್ಳಲಿ. ನೀವು ನೆರವಾಗಿ, ಆದರೆ ತುಂಬಾ ಸಹಾಯ ಬೇಡ.

ಪಾಂಡಾ ಪೇರೆಂಟಿಂಗ್: ಮಕ್ಕಳನ್ನು ಸಶಕ್ತರಾಗಿಸಲು ವಿಶಿಷ್ಠ ಶೈಲಿ 

ಬದುಕಿನ ಬಗ್ಗೆ ಅವರದೇ ಚಿಂತನೆ ರೂಪಿಸಿಕೊಳ್ಳಲು ಕಲಿಸಿ. ಘಟನೆಗಳನ್ನು ನೋಡಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳುವ ಬದಲು ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರ ಅವರೇ ಕಂಡುಕೊಳ್ಳುವಂತೆ ಮಾಡಿ, ಪ್ರಯೋಗಗಳನ್ನು ಪ್ರೋತ್ಸಾಹಿಸಿ. ಸಣ್ಣ ಪ್ರಾಯದಲ್ಲೇ ಅವರದೇ  ಆದ ಗಳಿಕೆಯ ವಿಧಾನಗಳನ್ನು ರೂಪಿಸಿಕೊಳ್ಳಲು ಕಲಿಸಿ.

ನಿದ್ದೆಗಣ್ಣಿನ ಮಗು, ಬೆಡ್‌ನಲ್ಲೇ ಪಾಠ, ಏನೀ ಆನ್‌ಲೈನ್‌ ಕ್ಲಾಸ್ ಅವಸ್ಥೆ! ...

 

click me!