ದೈಹಿಕ ಸಂಬಂಧದ ವಿಚಾರಕ್ಕೆ ಬಂದಾಗ ಹುಡುಗಿಯರು 'ನೋ' ಎಂದರೆ 'ಯೆಸ್' ಅಂತಲೇ ಅರ್ಥ, ಅವರು ಸೆಕ್ಸ್ ಬೇಡ ಅಂದರೂ ಬೇಕು ಅಂತಲೇ ಅರ್ಥ ಎಂದು ಭಾವಿಸುವ ಗಂಡಸರೇ ನಮ್ಮ ಸುತ್ತಮುತ್ತಲೂ ತುಂಬಾ ಇದ್ದಾರೆ. ಆದರೆ ಇದು ನೀವು ಭಾವಿಸಿದಷ್ಟು ಸರಳವಲ್ಲ. ಬನ್ನಿ ಹುಡುಗೀರ ಈ ಕೋಡ್, ಡೀಕೋಡ್ ಮಾಡೋಣ.
ಇತ್ತೀಚೆಗೆ ನಟಿ ಜೆನಿಲಿಯಾ ಒಂದು ಶೋದಲ್ಲಿ ಹೇಳ್ತಾ ಇದ್ಲು- ಹುಡುಗರೇ ಅರ್ಥ ಮಾಡ್ಕೊಳ್ಳಿ. ಹುಡುಗೀರು 'ಮೇ ಬಿ' ಅಂದ್ರೆ ನೋ ಅಂತರ್ಥ, ಐ ಡೋಂಟ್ ನೋ ಅಂದ್ರೂ ನೋ ಅಂತ ಅರ್ಥ. ನೋ ಅಂದ್ರೆ ನೋ ಅಂತ್ಲೇ ಅರ್ಥ. ಯೆಸ್ ಅಂದ್ರೆ ಯೆಸ್ ಕೂಡಾ ಇರಬಹುದು, ನೋ ಕೂಡಾ ಆಗಿರಬಹುದು! ಇದು ಕೇಳೋದಕ್ಕೆ ತಮಾಷೆಯಾಗಿದೆ. ಆದರೆ ಇದರಲ್ಲಿ ಸತ್ಯವಿದೆ.
ತುಂಬಾ ಸಹ ಪ್ರೀತಿಯಲ್ಲಿ ಬಿದ್ದ ಹುಡುಗರು ಪ್ರೇಯಸಿಯನ್ನು ಮುಟ್ಟಲು, ಮುದ್ದಿಸಲು, ಆಲಂಗಿಸಲು, ಸೆಕ್ಸ್ ಮಾಡಲು ಆತುರಕ್ಕೆ ಬಿದ್ದುಬಿಡುತ್ತಾರೆ. ಆಕೆಯ ಒಂದೇ ಒಂದು ಸ್ಪರ್ಶಕ್ಕಾಗಿ ಜೀವ ಬಿಡುತ್ತಾರೆ. ಆದರೆ ಆಕೆ ಮಲ್ಲಿಗೆ ಹೂವಿನಂತಹವಳು. ಸ್ವಲ್ಪ ಬಿಸಿಯುಸಿರು ತಾಕಿದರೂ ಸಾಕು ಬಾಡಿಯೇಬಿಡುತ್ತಾಳೆ. ಆಕೆಯನ್ನು ಅರ್ಥ ಮಾಡಿಕೊಳ್ಳುವುದು ಬಲು ಕಠಿಣ. ಆಕೆ ನಿಮ್ಮ ಆತುರದ ದೇಹ ಚಲನೆಯಿಂದ ಗಾಬರಿಯಾಗಿ ನೋ ಅನ್ನಬಹುದು. ಹಾಗೆಂದರೆ ನೋ ಎಂದೇ ಅರ್ಥ. ನೀವು ಆತುರಕ್ಕೆ ಬಿದ್ದು ಬಾಚಿಕೊಳ್ಳಲು ಹೋದಿರೋ, ಕೆಲಸ ಕೆಟ್ಟಿತು ಎಂದೇ.
undefined
ಇದೀಗ ಮತ್ತೆ ನೋ ಹಾಗೂ ಎಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ಹುಡುಗಿ ನೋ ಎಂದಾಗ ನೋ ಅಂತಲೇ ತಿಳಿಯಬೇಕು ಎಂಬುದು ಹುಡುಗರು ಅರ್ಥ ಮಾಡಿಕೊಳ್ಳಬೇಕಾದ್ದು. ಇದನ್ನು ಎಲ್ಲ ಗಂಡಸರೂ ಅರ್ಥ ಮಾಡಿಕೊಂಡರೆ ಸಮಾಜದಲ್ಲಿ ರೇಪ್‌ಗಳು ನಡೆಯೋಲ್ಲ. ಗಂಡಸರು ಹೆಂಗಸರ ಮೇಲೆ ಮಾಡುವ ಆಕ್ರಮಣಗಳು (Harrassment on Women) ನಿಲ್ಲುತ್ತವೆ. ದಾಂಪತ್ಯದಲ್ಲಿ ಕೂಡ ಹೆಂಡತಿಗೆ ಬೇಡದೇ ಹೋದಾಗ ಗಂಡ ಆಕೆಯನ್ನು ಬಲವಂತವಾಗಿ ಕೂಡುವುದು ತಪ್ಪುತ್ತದೆ. ಅನೇಕ ಸಲ ಗಂಡಸರ ಅವಸರಕ್ಕಾಗಿ ತಮಗೆ ಇಷ್ಟವಿಲ್ಲದಿದ್ದರೂ ಹೆಂಗಸರು ದೇಹವನ್ನು ಒಪ್ಪಿಸಿಕೊಳ್ಳುತ್ತಾರೆ.
ಗಂಡನ ಮೇಲಿನ ಹುಚ್ಚು ಪ್ರೀತಿಯಿಂದ 38ನೇ ವಯಸ್ಸಲ್ಲಿ ದುರಂತ ಅಂತ್ಯ ಕಂಡನಟಿ, ಈಕೆಯ ಜೀವನ ಪ್ರೀತಿಯೊಂದು ಪಾಠ!
ಹಾಗಾದ್ರೆ ಈ ತಪ್ಪು ಕಲ್ಪನೆ ಹೇಗೆ ಬಂತು? ಹುಡುಗಿ ನೋ ಎಂದರೂ ಎಸ್ ಎಂದು ತಿಳಿದುಕೊಳ್ಳಬಹುದು ಎಂದು ಗಂಡಸರು ಯಾಕೆ ತಿಳಿಯುತ್ತಾರೆ? ಇದಕ್ಕೆ ಉತ್ತರ ಹೆಣ್ಣು ಮಕ್ಕಳ ಬಾಡಿ ಲ್ಯಾಂಗ್ವೇಜ್‌ನಲ್ಲಿರುತ್ತದೆ. ಕೆಲವೊಮ್ಮೆ ಹುಡುಗೀರು ನೋ ಎಂದರೆ 'ಮೇ ಬಿ' ಎಂದು ಕೂಡ ಅರ್ಥ ಮಾಡಿಕೊಳ್ಳಬಹುದು. ಆದರೆ ಇಲ್ಲಿ ಗಂಡಸು ಆಕೆಯನ್ನು ಸರಿಯಾಗಿ ಗಮನಿಸಿ ಮುಂದುವರಿಯಬೇಕಾಗುತ್ತದೆ. ಆಕೆಯ ದೇಹಭಾಷೆಯನ್ನು ಅರ್ಥ ಮಾಡಿಕೊಳ್ಳಬೇಕು. ಗಂಡಸು ಸೆಕ್ಸ್‌ಗಾಗಿ ಮುಂದುವರಿದಾಗ ಆಕೆ ನೋ ಅನ್ನಬಹುದು- ಆದರೆ ನೋ ಅನ್ನುವ ಧ್ವನಿ ಕಟುವಾಗಿ, ದೃಢವಾಗಿಲ್ಲದೇ ಇದ್ದರೆ, ನೋ ಎನ್ನುವ ಧ್ವನಿಯಲ್ಲಿ ಸ್ವಲ್ಪ ಮಾದಕತೆಯೂ ಮಿಳಿತವಾಗಿದ್ದರೆ, ಹಾಗೆನ್ನುವಾಗ ಆಕೆಯ ನೋಟ ವಾರೆನೋಟವಾಗಿದ್ದು ಅದರಲ್ಲಿ ತುಂಟತನವೂ ಇದ್ದರೆ, ಆಕೆಯ ದೇಹ ನಿಮ್ಮಿಂದ ದೂರ ಸರಿಯದೇ ಇದ್ದರೆ- ಆಗ ನೋ ಎಂಬುದು ಮುಂದುವರಿ ಎಂಬುದರ ಸೂಚನೆಯೇ ಆಗಿರುತ್ತದೆ ಎಂಬುದನ್ನು ಜಾಣರಿಗೆ ತಿಳಿಸಬೇಕಿಲ್ಲ. ಸೆಕ್ಸ್‌ನ ಅಆಇಈ ಕಲಿಯುತ್ತಿರುವವನಿಗೂ ಅರ್ಥವಾಗುತ್ತದೆ.
ಹಾಗಾದ್ರೆ ಯೆಸ್ ಎಂದಾಗ ಯಾವಾಗ ನೋ ಎಂದು ಅರ್ಥ ಮಾಡಿಕೊಳ್ಳಬಹುದು? ಹೌದು, ಇಲ್ಲೂ ಆಕೆಯ ದೇಹಭಾಷೆಯನ್ನೇ ಗಮನಿಸಬೇಕು. ನೀವು ರಿಪೀಟೆಡ್ ಆಗಿ ಒತ್ತಾಯ ಮಾಡುತ್ತಾ ಇದ್ದರೆ ಮೃದು ಸ್ವಭಾವದ ಹೆಣ್ಣು ಒಂದು ಹಂತದಲ್ಲಿ ಸೆಕ್ಸ್‌ಗೆ ಒಪ್ಪಿಕೊಳ್ಳಲೂಬಹುದು. ಆದರೆ ಆಕೆಯ ಬಾಡಿ ಲ್ಯಾಂಗ್ವೇಜ್ ಗಮನಿಸಿ ಆ ಯೆಸ್‌ಗೆ ನಿಜವಾದ ಅರ್ಥ ಇದೆಯಾ ಇಲ್ಲವಾ ಅಂತ ಗೊತ್ತು ಮಾಡಿಕೊಳ್ಳಬೇಕು.
ಇಷ್ಟೆಲ್ಲ ಇದ್ದೂ ನೋ ಅಂದರೆ ಯೆಸ್ ಅಂತ ಭಾವಿಸಿ ಮುಂದುವರಿಯಲು ಹೋದಿರೋ, ಮುಂದಿನ ಕಾನೂನು ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ!
ಅವನಿಗೆ ಅವಳು ಅರ್ಪಿಸಿಕೊಂಡು ಬಿಡಬೇಕೆಂದುಕೊಂಡಾಗ, ಬೇರೆಯವಳು ಸಿಕ್ಕಾಗಿತ್ತು!