ಒಂದೇ ಆಸ್ಪತ್ರೆ ಒಂದೇ ಸಮಯದಲ್ಲಿ ಇಬ್ಬರು ವೈದ್ಯರ ಪ್ರೀತಿಸಿದ ನರ್ಸ್; ಗೊತ್ತಾದಾಗ ಐಸಿಯುನಲ್ಲಿ ಮೂವರು!

By Chethan Kumar  |  First Published Aug 9, 2024, 10:26 AM IST

ಒಂದೇ ಆಸ್ಪತ್ರೆಯಲ್ಲಿ ಒಂದೇ ಸಮಯದಲ್ಲಿ ಇಬ್ಬರು ವೈದ್ಯರ ಪ್ರೀತಿ ಬಲೆಯಲ್ಲಿ ನರ್ಸ್ ಬಿದ್ದಿದ್ದಾಳೆ. ಇಬ್ಬರಿಂದಲೂ ದುಬಾರಿ ಗಿಫ್ಟ್ ಪಡೆದುಕೊಂಡಿದ್ದಾಳೆ. ಆದರೆ ಈ ವಿಚಾರ ಕೊನೆಯ ಹಂತದಲ್ಲಿ ವೈದ್ಯರಿಗೆ ಗೊತ್ತಾಗಿದೆ. ಇದೀಗ ಇದೇ ಮೂವರು ಅದೇ ಆಸ್ಪತ್ರೆಯ ಐಸಿಯುನಲ್ಲಿದ್ದಾರೆ.


ಬೀಜಿಂಗ್(ಆ.09) ತ್ರಿಕೋನ ಪ್ರೀತಿ ಹೊಸದೇನಲ್ಲ. ಇಬ್ಬರು ಒಬ್ಬಳನ್ನೇ ಪ್ರೀತಿ ಬಳಿಕ ಮಾರಾಮಾರಿ,ಕೊಲೆ, ಯುದ್ಧಗಳು ನಡೆದಿದೆ. ವಿಶ್ವದ ಎಲ್ಲಾ ಮೂಲಗಳಲ್ಲೂ ಪ್ರೀತಿ ವಿಚಾರದ ಫಾರ್ಮುಲಾದಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಇದೀಗ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಇಬ್ಬರು ವೈದ್ಯರಿಗೆ ಅದೇ ಅಸ್ಪತ್ರೆಯ ನರ್ಸ್ ಮೇಲೆ ಪ್ರೀತಿ ಶುರುವಾಗಿದೆ. ಪ್ರೀತಿ ಗಾಢವಾಗಿದೆ. ನರ್ಸ್ ಒಬ್ಬ ವೈದ್ಯರಿಂದ ಐಷಾರಾಮಿ ಮನೆ ಗಿಫ್ಟ್ ಪಡೆದುಕೊಂಡರೆ, ಮತ್ತೊಬ್ಬ ವೈದ್ಯರಿಂದ ಲಕ್ಷುರಿ ಕಾರು ಉಡುಗೊರೆಯಾಗಿ ಪಡೆದುಕೊಂಡಿದ್ದಾರೆ. ಈ ತ್ರಿಕೋನ ಪ್ರೇಮ ಕತೆ ಹೀಗೆ ಸಾಗಿದೆ. ಆದರೆ ಅಚಾನಕ್ಕಾಗಿ ನಾವಿಬ್ಬರು ಪ್ರೀತಿಸುತ್ತಿರುವುದುದು ಒಬ್ಬಾಕೆಯನ್ನೇ ಅನ್ನೋದು ಗೊತ್ತಾಗಿದೆ. ಶುರುವಾಯ್ತು ಯುದ್ಧ. ವೈದ್ಯರಿಬ್ಬರ ನಡುವಿನ ಹೊಡೆದಾಟ ಬಳಿಕವೂ ಮತ್ತೆ ಇವರ ತ್ರಿಕೋನ ಸರಣಿ ಐಸಿಯುನಲ್ಲೂ ಮುಂದುವರ ರೋಚಕ ಘಟನೆ ಇದು. ನಮ್ಮ ದೇಶದ ಪಕ್ಕದ ಚೀನಾದಲ್ಲಿ ನಡೆದ ಘಟನೆ ಇದು.

ಚೀನಾದ ವುಕ್ಸಿ ಪೀಪಲ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿನ 27 ವರ್ಷದ ನರ್ಸ್ ಇಬ್ಬರು ವೈದ್ಯರನ್ನು ಪ್ರೀತಿಸಿದ್ದಾಳೆ. ಇಬ್ಬರು ವೈದ್ಯರ ವಯಸ್ಸು 50. ತಮ್ಮ ಬರುವ ವೇತನದಲ್ಲಿ ಬಹುತೇಕ ಹಣವನ್ನು ಈ ನರ್ಸ್‌ಗಾಗಿ ಇಬ್ಬರು ಖರ್ಚು ಮಾಡಿದ್ದಾರೆ. ಒಬ್ಬ ವೈದ್ಯ ಕೋಟಿ ರೂಪಾಯಿ ಬೆಲೆಬಾಳುವ ಕಾರು ಉಡುಗೊರೆಯಾಗಿ ನೀಡಿದ್ದರೆ, ಮತ್ತೊಬ್ಬ ವೈದ್ಯ ಐಷಾರಾಮಿ ಮನೆ ಉಡುಗೊರೆ ನೀಡಿದ್ದಾರೆ. ಈ ತ್ರಿಕೋನ ಪ್ರೇಮ ಕೊನೆಗೂ ವೈದ್ಯರಿಬ್ಬರಿಗೆ ತಿಳಿದಿದೆ.

Latest Videos

ಡಿವೋರ್ಸ್ ಬಳಿಕ ಅರಿವಾಯಿತು ತಪ್ಪು:ಆದೇಶ ರದ್ದುಗೊಳಿಸಲು ಮನವಿ ಮಾಡಿದ ಜೋಡಿಗೆ ಕೋರ್ಟ್ ಶಾಕ್!

ಆಕೆ ನನ್ನ ಹುಡುಗಿ ಎಂದು ಒಬ್ಬ ವೈದ್ಯ ಜಗಳ ಶುರುಮಾಡಿದರೆ, ಆಕೆ ನನ್ನಾಕೆ ಮತ್ತೊಬ್ಬ ಯುದ್ಧ ಆರಂಭಿಸಿದ್ದಾನೆ. ಇವರಿಬ್ಬರ ಜಗಳದಲ್ಲಿ ಒರ್ವ  ವೈದ್ಯ ಗಂಭೀರವಾಗಿ ಗಾಯಗೊಂಡಿದ್ದಾನೆ. ತಲೆಗೆ ಗಾಯವಾದ ಕಾರಣ ಅದೇ ಆಸ್ಪತ್ರೆಯ ಐಸಿಯುಗೆ ವೈದ್ಯನ ದಾಖಲಿಸಿದ್ದಾರೆ. ಈ ವೈದ್ಯನ ತಲೆಗೆ ಹೊಲಿಗೆ ಸೇರಿದಂತೆ ಚಿಕಿತ್ಸೆ ನರ್ಸ್‌ನ ಮತ್ತೊಬ್ಬ ಪ್ರೇಮಿ ವೈದ್ಯನನ್ನೇ ಡ್ಯೂಟಿಗೆ ಹಾಕಿದ್ದಾರೆ. ಐಸಿಯುನಲ್ಲಿ ಹೊಡೆದಾಡಿಕೊಂಡ ಒಬ್ಬ ವೈದ್ಯ ರೋಗಿಯಾಗಿದ್ದರೆ,ಮತ್ತೊಬ್ಬ ಚಿಕಿತ್ಸೆ ನೀಡುವ ವೈದ್ಯನಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ, ಇವರಿಬ್ಬರನ್ನು ಏಕಕಾಲಕ್ಕೆ ಪ್ರೀತಿಸಿದ ಇದೇ ನರ್ಸ್‌ನ್ನು ಸುಶ್ರೂಷೆ ಡ್ಯೂಟಿಗೆ ಹಾಕಿದ್ದಾರೆ. 

ತ್ರಿಕೋನ ಪ್ರೇಮ, ಬಳಿಕ ಜಗಳ, ಇದೀಗ ಐಸಿಯುನಲ್ಲೂ ತ್ರಿಕೋನ ಚಿಕಿತ್ಸೆ ಕಾರ್ಯಗಳು ನಡೆಯುತ್ತಿದೆ. ಆದರೆ ಗಾಯಗೊಂಡ ವೈದ್ಯನ ಪರಿಸ್ಥಿತಿ ಗಂಭೀರವಾಗಿದೆ. ಇದೀಗ ವೈದ್ಯನ ಉಳಿಸಿಕೊಳ್ಳಬೇಕಾದ ಅನಿವಾರ್ಯ ಮತ್ತೊಬ್ಬ ವೈದ್ಯನಿಗೆ ಎದುರಾಗಿದೆ. ವೈದ್ಯ ಮೃತಪಟ್ಟರೆ ಜೈಲು ಸೇರುವುಧು ಖಚಿತ. ಹೀಗಾದರೆ ಈ ನರ್ಸ್ ಮೂರನೇ ವ್ಯಕ್ತಿಯನ್ನು ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆ ಹೆಚ್ಚು. ಐಸಿಯುನಲ್ಲೂ ಇದೀಗ ಭಾರಿ ಲೆಕ್ಕಾಚಾರಗಳು ನಡೆಯುತ್ತಿದೆ

ಹಾರ ಬದಲಿಸುವ ಮುನ್ನ ಗೆಳೆಯ ಕಿವಿಯಲ್ಲಿ ಉದುರಿಸಿದ 2 ಶಬ್ದಕ್ಕೆ ಪ್ರಜ್ಞೆ ತಪ್ಪಿ ಬಿದ್ದ ವರ!

click me!