ಡಿವೋರ್ಸ್ ರೂಮರ್ಸ್ ನಡುವೆ ಮಗನೊಂದಿಗೆ ದೇಶ ತೊರೆದ್ರಾ ಹಾರ್ದಿಕ್ ಪಾಂಡ್ಯ ಪತ್ನಿ?

By Anusha Kb  |  First Published Jul 17, 2024, 6:45 PM IST

ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಜೊತೆಗೆ ವಿಚ್ಛೇದನ ಊಹಾಪೋಹಾಗಳ ಮಧ್ಯೆ ಪತ್ನಿ ನತಾಶಾ ಸ್ಟಾಂಕೋವಿಕ್ ತಮ್ಮ ಮಗನೊಂದಿಗೆ ಮುಂಬೈ ತೊರೆಯುತ್ತಿದ್ದಾರಾ ಹೀಗೊಂದು ಉಹಾಪೋಹಾ ವ್ಯಾಪಕವಾಗಿ ಹಬ್ಬಿದೆ. 


ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಜೊತೆಗೆ ವಿಚ್ಛೇದನ ಊಹಾಪೋಹಾಗಳ ಮಧ್ಯೆ ಪತ್ನಿ ನತಾಶಾ ಸ್ಟಾಂಕೋವಿಕ್ ತಮ್ಮ ಮಗನೊಂದಿಗೆ ಮುಂಬೈ ತೊರೆಯುತ್ತಿದ್ದಾರಾ ಹೀಗೊಂದು ಉಹಾಪೋಹಾ ವ್ಯಾಪಕವಾಗಿ ಹಬ್ಬಿದೆ. ಮುಂಬೈ ಏರ್‌ಪೋರ್ಟ್‌ನಲ್ಲಿ ಹಾರ್ದಿಕ್ ಪಾಂಡ್ಯಾ ಮಗ ಅಗಸ್ತ್ಯಾ ಜೊತೆ ನತಾಶಾ ಸ್ಟಾಂಕೋವಿಕ್ ಕಾಣಿಸಿಕೊಂಡಿದ್ದು, ಡಿವೋರ್ಸ್ ರೂಮರ್ಸ್‌ ನಡುವೆ ದೇಶ ತೊರೆಯುತ್ತಿದ್ದಾರಾ ಎಂಬ ಊಹಾಪೋಹಾ ಹಬ್ಬಿದೆ. ಮಾಡೆಲ್ ಆಗಿ ಬಳಿಕ ನಟಿಯಾಗಿ ಬದಲಾದ ನತಾಶಾ ಸ್ಟಾಂಕೋವಿಕ್ ಅವರು ಮುಂಬೈ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಳ್ಳುವ ವೇಳೆ ದೊಡ್ಡ ಲಗೇಜ್ ಬ್ಯಾಗ್‌ಗಳನ್ನು ಕೂಡ ಹೊಂದಿದ್ದರು. ನತಾಶಾ ನೋಡಿ ಕ್ಯಾಮರಾಗೆ ಪೋಸ್‌ ನೀಡುವಂತೆ ಕರೆದ ಪಪಾರಾಜಿ ಕರೆಗಳನ್ನು ನಿರ್ಲಕ್ಷಿಸಿ ನತಾಶ ಮುಂದೆ ಸಾಗಿದ್ದಾರೆ. 

ಇದರ ಜೊತೆಗೆ ನತಾಶ ಕೂಡ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಸೂಟ್‌ಕೇಸ್ ಇರುವ ಫೋಟೋ ಪೋಸ್ಟ್‌ ಮಾಡಿದ್ದು, 'ಇದು ವರ್ಷದ ಆ ಸಮಯ'  ಎಂದು ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ ಜೊತೆಗೆ ವಿಮಾನ ಹಾಗೂ ಮನೆಯ ಇಮೋಜಿಯನ್ನು ಹಾಕಿದ್ದಾರೆ. ಇದು ಆಕೆ ಮತ್ತೆ ತಮ್ಮ ದೇಶವಾದ ಸರ್ಬಿಯಾಗೆ ಹೋಗ್ತಿದ್ದಾರಾ ಎಂಬ ಅನುಮಾನ ಮೂಡಿಸಿದೆ. 

Tap to resize

Latest Videos

undefined

ಮಗನೊಂದಿಗೆ ವಿಶ್ವಕಪ್‌ ಗೆಲುವು ಆಚರಿಸಿಕೊಂಡ ಹಾರ್ದಿಕ್‌ ಪಾಂಡ್ಯ, ಪತ್ನಿ ನತಾಶಾ ಮಿಸ್‌!

ಹಿಂದಿ ಬಿಗ್ಬಾಸ್ ಮಾಜಿ ಸ್ಪರ್ಧಿಯಾಗಿದ್ದ ನತಾಶಾ ಸ್ಟಾಂಕೋವಿಕ್ ಡಾನ್ಸರ್ ಕೂಡ ಹೌದು, 2020ರ ಮೇ 31 ರಂದು  ಈಕೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯಾ ಅವರನ್ನು ಮದುವೆಯಾಗಿದ್ದರು. ಇದಾದ ನಂತರ 2023ರ  ಫೆಬ್ರವರಿಯಲ್ಲಿ ಹಿಂದೂ ಹಾಗೂ ಕ್ರಿಶ್ಚಿಯನ್ ಶೈಲಿಯಲ್ಲಿ ಇವರು ತಮ್ಮ ಮದುವೆಯ ಸಂಪ್ರದಾಯಗಳನ್ನು ನಡೆಸಿದ್ದರು. ಆದರೆ ಈ ವರ್ಷದ ಮೇ ಸಮಯದಲ್ಲಿ ಇವರಿಬ್ಬರ ಮಧ್ಯೆ ಎಲ್ಲವೂ ಸರಿ ಇಲ್ಲ, ಇಬ್ಬರೂ ದೂರಾಗಿದ್ದು, ವಿಚ್ಛೇದನ ಪಡೆದುಕೊಳ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನತಾಶಾ ಅವರು ಪಾಂಡ್ಯ ಸರ್‌ನೇಮ್ ಅನ್ನು ತೆಗೆದು ಹಾಕಿದ ನಂತರ ಈ ಗಾಸಿಪ್ ಹಬ್ಬಿದ್ದವು.

ಇದಾದ ನಂತರ ರೆಡಿಟ್‌ನಲ್ಲೂ ಒಬ್ಬರು ನತಾಶಾ ಹಾಗೂ ಹಾರ್ದಿಕ್ ದೂರಾಗಿದ್ದಾರಾ ಎಂದು ಪ್ರಶ್ನೆ ಮಾಡಿ ಪೋಸ್ಟ್ ಮಾಡಿದ್ದರು. ಈ ಪೋಸ್ಟ್ ಕೂಡ ಸಾಕಷ್ಟು ವೈರಲ್ ಆಗಿ ಎಲ್ಲರ ಗಮನ ಸೆಳೆದಿತ್ತು. ಇಬ್ಬರು ಕೂಡ ಪರಸ್ಪರರ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುತ್ತಿಲ್ಲ, ಎಂಬುದನ್ನು ಜನ ಗುರುತಿಸಿದ್ದರು. ಇದರ ಜೊತೆಗೆ 2024ರ ಐಪಿಎಲ್‌ನಲ್ಲಿಯೂ ನತಾಶ ಎಲ್ಲೂ ಕಾಣಿಸಿಕೊಂಡಿರಲಿಲ್ಲ.

ಸಂಕಷ್ಟಕ್ಕೆ ಸಿಲುಕುತ್ತಾರಾ ಹಾರ್ದಿಕ್ ? ಸರ್ಬಿಯಾ ವಿಚ್ಛೇದನ ನಿಯಮ ಏನು?

ಇದಾದ ನಂತರ ಬಾಂಬೆ ಪೋಸ್ಟ್ ಕೂಡ ನತಾಶ ಹಾಗೂ ಹಾರ್ದಿಕ್ ತಮ್ಮ ದಾಂಪತ್ಯ ಜೀವನದಲ್ಲಿ ಕಳೆದ ಆರು ತಿಂಗಳಿಂದ ಏರುಪೇರುಗಳನ್ನು ಅನುಭವಿಸುತ್ತಿದ್ದಾರೆಎಂದು ವರದಿ ಆಗಿತ್ತು. ಈ ಜೋಡಿ ದೂರಾಗುತ್ತಿದ್ದಾರೆ ಆದರೆ ಇಬ್ಬರ ನಡುವೆ ವಿಚ್ಛೇದನವಾದರೆ ನತಾಶಾಗೆ ಎಷ್ಟು ಪರಿಹಾರ ಸಿಗುತ್ತದೆ ಎಂಬ ವಿಚಾರವೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಗಿತ್ತು. ಇದರ ಜೊತೆಗೆ ಇತ್ತೀಚೆಗೆ ಭಾರತ ವಿಶ್ವಕಪ್ ಗೆದ್ದ ಸಂದರ್ಭದಲ್ಲೂ ವಿಶ್ವಕಪ್ ಹೀರೋ ಎನಿಸಿರುವ ತನ್ನ ಪತಿಯ ಬಗ್ಗೆ ಎಲ್ಲೂ ಒಂದೇ ಒಂದು ಪೋಸ್ಟ್ ಮಾಡಿರಲಿಲ್ಲ ಇವೆಲ್ಲವೂ ಈ ರೂಮರ್ಸ್‌ಗೆ ರೆಕ್ಕೆಪುಕ್ಕ ತಂದಿದ್ದವು. ಆದಾಗ್ಯೂ ಈಗ ಈಕೆ ಮಗನ ಜೊತೆ ಲಗೇಜ್‌ನೊಂದಿಗೆ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದು, ದೇಶ ತೊರೆಯುತ್ತಿದ್ದಾರಾ ಎಂಬ ಶಂಕೆ ಮೂಡಿದೆ. 

 

click me!