ಮಧುಮೇಹಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗಿದೆ. ನಮ್ಮ ತಪ್ಪು ಜೀವನಶೈಲಿ ಇದಕ್ಕೆ ಮುಖ್ಯ ಕಾರಣ. ಒಮ್ಮೆ ಬಂದ್ರೆ ಬೆನ್ನು ಬಿಡದ ಭೂತವಾಗಿ ಕಾಡುವ ಈ ರೋಗ, ಲೈಂಗಿಕ ಸುಖಕ್ಕೂ ಧಕ್ಕೆಯುಂಟು ಮಾಡುತ್ತದೆ. ಹಾಗಾಗಬಾರದು ಅಂದ್ರೆ ಹೀಗೆಲ್ಲ ಮಾಡ್ಬೇಕು.
ಮಧುಮೇಹ ಒಮ್ಮೆ ಬಂದ್ರೆ ಮುಗೀತು. ಸಾಯುವವರೆಗೂ ಅದು ನಮ್ಮ ಜೊತೆಗಿರುತ್ತದೆ. ಈ ಸಕ್ಕರೆ ಖಾಯಿಲೆ ದೇಹ ಮತ್ತು ಮನಸ್ಸು ಎರಡರ ಮೇಲೂ ಪರಿಣಾಮ ಬೀರುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾದಾಗ ಶಕ್ತಿ ಕಡಿಮೆಯಾಗುತ್ತದೆ. ನಮ್ಮ ಚರ್ಮದ ಮೇಲೂ ಇದ್ರ ಪರಿಣಾಮ ಕಾಣಬಹುದು. ಮಧುಮೇಹ ರೋಗಿಗಳಿಗೆ ಲೈಂಗಿಕ ಜೀವನವನ್ನು ಆನಂದಿಸಲು ಸ್ವಲ್ಪ ಕಷ್ಟವಾಗುತ್ತದೆ. ಹಾಗಂತ ಮಧುಮೇಹ ಬಂದ್ರೆ ಲೈಂಗಿಕ ಜೀವನವೇ ಮುಗೀತು ಎಂದಲ್ಲ.
ಸಕ್ಕರೆ ಖಾಯಿಲೆ (Diabetes) ಇದ್ದುಕೊಂಡೂ ನೀವು ಲೈಂಗಿಕ (Sex) ಸುಖವನ್ನು ಆನಂದಿಸಬಹುದು. ಉತ್ತಮ ಲೈಂಗಿಕ ಜೀವನ ನಿಮ್ಮದಾಗಬೇಕು ಎಂದಾದ್ರೆ ಮಧುಮೇಹಿಗಳು ಕೆಲವೊಂದು ಟಿಪ್ಸ್ ಪಾಲನೆ ಮಾಡ್ಬೇಕು.
ಲೈಂಗಿಕ ಜೀವನ – ಸಕ್ಕರೆ ಖಾಯಿಲೆ : ಅಮೇರಿಕನ್ ಡಯಾಬಿಟಿಕ್ ಅಸೋಸಿಯೇಷನ್‌ನ ಪ್ರಕಾರ, ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದ್ರೆ ಅದು ನರ (Nerve) ಗಳ ಮೇಲೆ ಪರಿಣಾಮ ಬೀರುತ್ತದೆ. ರಕ್ತನಾಳಗಳ ಮೇಲೂ ಇದು ಪ್ರಭಾವ ಬೀರುತ್ತದೆ. ಅಸಮರ್ಪಕ ರಕ್ತ ಪರಿಚಲನೆಯಿಂದಾಗಿ ಮಹಿಳೆಯರ ಯೋನಿ ಶುಷ್ಕಗೊಳ್ಳುತ್ತದೆ. ಸೆಕ್ಸ್ ವೇಳೆ ನೋವು ಕಾಣಿಸಿಕೊಳ್ಳುತ್ತದೆ. ರಕ್ತದ ಹರಿವು ಕಡಿಮೆಯಾಗುವುದಲ್ಲದೆ ಹಾಮೋರ್ನ್ ನಲ್ಲಿ ಏರುಪೇರಾಗುತ್ತದೆ. ಗರ್ಭಧಾರಣೆ (Pregnancy), ಮುಟ್ಟಿನ ಸಮಯದಲ್ಲೂ ಮಹಿಳೆಯರು ಸಮಸ್ಯೆ ಎದುರಿಸುತ್ತಾರೆ.
undefined
PICK ME GIRL ಏನಿದು ಟ್ರೆಂಡ್ ತಿಳಿಯಿರಿ
ಉತ್ತಮ ಲೈಂಗಿಕ ಜೀವನಕ್ಕೆ ಮಧುಮೇಹಿಗಳು ಏನು ಮಾಡ್ಬೇಕು?
ಟೆಸ್ಟೋಸ್ಟೆರಾನ್ ಹೆಚ್ಚಿಸುವ ಆಹಾರ ಸೇವನೆ : ಮಧುಮೇಹ ರಕ್ತದ ಹರಿವಿನ ಮೇಲೆ ಪರಿಣಾಮ ಬೀರುತ್ತದೆ. ರಕ್ತದ ಹರಿವು ಕಡಿಮೆಯಾದಾಗ ಕಾಮಾಸಕ್ತಿ ಕಡಿಮೆಯಾಗುತ್ತದೆ. ಲೈಂಗಿಕ ಆಸಕ್ತಿ ಹೆಚ್ಚಾಗಬೇಕೆಂದ್ರೆ ನಮ್ಮ ಆರೋಗ್ಯದ ಮೇಲೆ ಗಮನ ಹರಿಸಬೇಕು. ಲೈಂಗಿಕ ಬಯಕೆ ಹೆಚ್ಚಿಸುವ ಆಹಾರಕ್ಕೆ ಆದ್ಯತೆ ನೀಡ್ಬೇಕು. ಸತುವು ಮೂಲವಾಗಿರುವ ಆಹಾರಗಳು ಟೆಸ್ಟೋಸ್ಟೆರಾನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಮೀನು, ಸಮುದ್ರಾಹಾರ, ಧಾನ್ಯಗಳು, ದಾಳಿಂಬೆ ಹಣ್ಣು, ಆವಕಾಡೊ, ಬೆರ್ರಿ ಹಣ್ಣು, ಡ್ರೈ ಫ್ರೂಟ್ಸ್ ನಲ್ಲಿ ಸತು ಸಮೃದ್ಧವಾಗಿದೆ. ಹಾಗಾಗಿ ಆ ಆಹಾರವನ್ನು ನೀವು ಹೆಚ್ಚಾಗಿ ಸೇವನೆ ಮಾಡಿ. ಇದು ಲೈಂಗಿಕ ಆಸಕ್ತಿ ಹೆಚ್ಚಿಸುವ ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಲೂಬ್ರಿಕಂಟ್ ಬಳಕೆ (Use of Lubrincants): ಮಧುಮೇಹವುಳ್ಳ ಮಹಿಳೆಯ ಯೋನಿ ನಯಗೊಳ್ಳುವುದು ಕಷ್ಟ. ಈ ಸಂದರ್ಭದಲ್ಲಿ ಲೂಬ್ರಿಕಂಟ್ ಬಳಕೆ ಮಾಡಲಾಗುತ್ತದೆ. ಆದ್ರೆ ಲೂಬ್ರಿಕಂಟ್ ಖರೀದಿ ವೇಳೆ ಸಕ್ಕರೆ ಪ್ರಮಾಣದ ಬಗ್ಗೆ ಗಮನ ನೀಡಬೇಕು. ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕೋಲ್‌ನಂತಹ ಲೂಬ್ರಿಕಂಟ್ ಯೋನಿಯ ಪಿಹೆಚ್ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಯೀಸ್ಟ್ ಸೋಂಕನ್ನು ಇವು ಪ್ರಚೋದಿಸುತ್ತವೆ. ಹಾಗಾಗಿ ಸಿಲಿಕೋನ್ ಆಧಾರಿತ ಲೂಬ್ರಿಕಂಟ್ ಆಯ್ಕೆ ಮಾಡೋದು ಒಳ್ಳೆಯದು.
ಶ್... ಮಹಿಳೆಯರ ದೇಹಕ್ಕೆ ಸಂಬಂಧಿಸಿದ ಸೀಕ್ರೆಟ್ಸ್ ಇವು!
ಪಿಎಚ್ ಮಟ್ಟ (PH Level) : ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಾಗ, ಯೋನಿಯ ಪಿಹೆಚ್ ಸಮತೋಲನದಲ್ಲಿ ಏರುಪೇರಾಗುತ್ತದೆ. ಇದು ಯೋನಿಯ ಸೋಂಕಿಗೆ ಕಾರಣವಾಗುತ್ತದೆ. ಯೋನಿಯಲ್ಲಿ ಪಿಎಚ್ ಮಟ್ಟ ಹೆಚ್ಚಾದಾಗ ಯೋನಿಯಲ್ಲಿರುವ ಆರೋಗ್ಯಕರ ಲ್ಯಾಕ್ಟೋಬಾಸಿ ಸಾಯುತ್ತದೆ. ಇದ್ರಿಂದ ಬ್ಯಾಕ್ಟೀರಿಯಾ ಸಮತೋಲನ ಸಾಧ್ಯವಾಗೋದಿಲ್ಲ. ಹಾಗಾಗಿ ನೀವು ಸ್ತ್ರೀರೋಗ ತಜ್ಞರ ಸಲಹೆ ಪಡೆಯಬೇಕು. ಅವರು ನೀಡುವ ಜೆಲ್ ಅನ್ನು ವಾರದಲ್ಲಿ ಎರಡು ಬಾರಿ ಅನ್ವಯಿಸಬೇಕು.
ಗ್ಲೂಕೋಸ್ (Glucose) ಮಟ್ಟ ಗಮನಿಸಿ : ದೇಹದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಸಕ್ಕರೆ ಮಟ್ಟ ನಿಯಂತ್ರಣದಲ್ಲಿದ್ದರೆ ನರ ಹಾಗೂ ರಕ್ತನಾಳಗಳು ಆರೋಗ್ಯವಾಗಿರುತ್ತದೆ. ಯೋನಿಯ ಸೋಂಕು ಕೂಡ ಕಾಡೋದಿಲ್ಲ. ಹಾಗಾಗಿ ಆಹಾರ ಸೇವನೆ ವೇಳೆ ನೀವು ಗ್ಲೂಕೋಸ್ ಮಟ್ಟದ ಬಗ್ಗೆ ಗಮನ ಹರಿಸಬೇಕು. ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಮಾಡುವ ಆಹಾರದಿಂದ ದೂರವಿರಬೇಕು.
ಸತ್ಯ ಒಪ್ಪಿಕೊಂಡು ನಡೆಯೋದು ಮುಖ್ಯ : ದೈಹಿಕ ಆರೋಗ್ಯದ ಜೊತೆ ಮಾನಸಿಕ ದೃಢತೆ ಮುಖ್ಯವಾಗುತ್ತದೆ. ಮಧುಮೇಹಿಗಳಿಗೆ ಅನೇಕ ಸಮಸ್ಯೆ ಕಾಡುತ್ತದೆ. ಅದ್ರಲ್ಲಿ ಬೊಜ್ಜು ಕೂಡ ಒಂದು. ಬೊಜ್ಜಿನ ಕಾರಣಕ್ಕೆ ನಿಮ್ಮನ್ನು ನೀವು ಹೀಗಳೆಯುತ್ತ, ಲೈಂಗಿಕ ಸುಖದಿಂದ ದೂರ ಉಳಿಯಬಾರದು. ವ್ಯಾಯಾಮ, ಯೋಗ, ಧ್ಯಾನ, ನಿದ್ರೆ, ಆಹಾರದ ಮೂಲಕ ತೂಕವನ್ನು ನಿಯಂತ್ರಿಸಿಕೊಳ್ಳುವ ಪ್ರಯತ್ನ ನಡೆಸಬೇಕು. ಅದ್ರ ಜೊತೆ ನಿಮ್ಮನ್ನು ನೀವು ಮೊದಲು ಪ್ರೀತಿಸಬೇಕು.