ಪ್ರೇಮಿಗಳು ದೂರವಾಗುವುದು ಎಂದಿನಿಂದಲೂ ಇದ್ದಿದ್ದೇ. ಎಲ್ಲ ಸಂಬಂಧವೂ ಜೀವಮಾನದ ಸಂಬಂಧವಾಗಿರುವುದಿಲ್ಲ. ಕೆಲವೊಮ್ಮೆ ಅದಕ್ಕೆ ಅಂತ್ಯ ಹೇಳಬೇಕಾಗುತ್ತದೆ. ಇದೊಂದು ನೋವಿನ ಪ್ರಕ್ರಿಯೆ. ಆದರೆ, ಕೆಲವು ಜನ ಸಂಬಂಧ ಕೊನೆಗೊಂಡ ಬಳಿಕ ಮಾಜಿ ಸಂಗಾತಿ ಜತೆಗೆ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಾರೆ.
ಸಂಬಂಧಗಳು ಒಮ್ಮೊಮ್ಮೆ ದುಃಖಮಯವಾಗಿ ಅಂತ್ಯವಾಗುತ್ತವೆ. ಅನಿವಾರ್ಯವಾಗಿ ಸಂಬಂಧಕ್ಕೆ ಗುಡ್ ಬೈ ಹೇಳುವ ಸಂದರ್ಭ ಒದಗುತ್ತದೆ. ಇಬ್ಬರೂ ಪರಸ್ಪರ ಮಾತುಕತೆ ಮೂಲಕ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹಂಚಿಕೊಂಡು ಸಂಬಂಧವನ್ನು ಕೊನೆಗೊಳಿಸುವುದು ಉತ್ತಮ ಸಂಗತಿ. ಪರಸ್ಪರ ಕಚ್ಚಾಡಿಕೊಂಡು, ಒಬ್ಬರ ಮುಖ ಮತ್ತೊಬ್ಬರು ನೋಡುವುದಿಲ್ಲ ಎಂದು ಗಲಾಟೆ ಮಾಡಿಕೊಂಡು ದೂರವಾಗುವುದಕ್ಕಿಂತ ಗಂಭೀರವಾಗಿ ಪರಸ್ಪರ ಗೌರವ ಇಟ್ಟುಕೊಂಡೇ ದೂರವಾಗುವುದು ಒಳ್ಳೆಯದು. ಏನೇ ಆದರೂ, ಸಂಬಂಧವೊಂದು ಮುರಿದಾಗ ತೀವ್ರವಾಗಿ ನೋವಾಗುತ್ತದೆ. ಈಗೋ ಹರ್ಟ್ ಆಗುತ್ತದೆ. ಅಷ್ಟು ದಿನಗಳ ಒಡನಾಟ ಪದೇ ಪದೆ ನೆನಪಿಗೆ ಬಂದು ಕಳೆದುಕೊಂಡಿರುವ ನೋವಿನ ತೀವ್ರತೆ ಹೆಚ್ಚಾಗುತ್ತದೆ. ಖಿನ್ನತೆ ಕಾಡುತ್ತದೆ. ಪ್ರೇಮ ಸಂಬಂಧ ಅಂತ್ಯವಾದಾಗ ಸಾಕಷ್ಟು ಜನ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಕೆಲವರು ಮಾನಸಿಕವಾಗಿ ಭಾರೀ ಜರ್ಜರಿತರಾಗುತ್ತಾರೆ. ಕೆಲವರು ಮತ್ತೊಬ್ಬರ ಮೇಲೆ ತೀವ್ರವಾದ ಹಗೆಯನ್ನಿಟ್ಟುಕೊಂಡು ಇನ್ನಿಲ್ಲದಂತೆ ಸತಾಯಿಸುತ್ತಾರೆ. ಇವರ ಪ್ರೀತಿ ದ್ವೇಷವಾಗಿ ಬದಲಾಗುತ್ತದೆ. ಸ್ವಭಾವತಃ ಕೆಟ್ಟ ವ್ಯಕ್ತಿಗಳಾಗಿರುವವರು ಪ್ರೇಮ ಸಂಬಂಧ ಕೊನೆಗೊಂಡಾಗ ವಿವಿಧ ರೀತಿಯಲ್ಲಿ ಅದನ್ನು ತೋರ್ಪಡಿಸಿಕೊಳ್ಳುತ್ತಾರೆ. ಆಗ ತಾಳ್ಮೆ, ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಬೇಕಾಗುತ್ತದೆ. ಅವರ ವರ್ತನೆ ಕೆಟ್ಟ ರೀತಿಯಲ್ಲೇ ಇರುತ್ತದೆ.
• ಕೆಟ್ಟ ಸಂದೇಶ (Bad Messages) ಕಳಿಸುವುದು
ಸಂಗಾತಿಯಿಂದ (Partner) ದೂರವಾದ ಬಳಿಕ ಹಲವರು ಕೆಟ್ಟ ಕೆಟ್ಟ ಸಂದೇಶ ಕಳುಹಿಸಿ ನೋವುಂಟು ಮಾಡಲು ಯತ್ನಿಸುತ್ತಾರೆ. ಆರೋಪ ಮಾಡಬಹುದು, ಕೋಪಿಸಿಕೊಳ್ಳಬಹುದು, ಶಾಪ (Curse) ಹಾಕಬಹುದು, ಭವಿಷ್ಯ (Future) ಕೆಟ್ಟದಾಗಲಿ ಎಂದು ಹೇಳಬಹುದು, ಹಿಂದಿನ ತಪ್ಪುಗಳ ಬಗ್ಗೆ ಮಾತನಾಡಬಹುದು.
ಇವತ್ತು ಮದ್ವೆಯಾಗಿ ನಾಳೆ ಡಿವೋರ್ಸ್ ಮಾಡೋರು ಈ ವೀಡಿಯೋ ನೋಡಿ ಬದುಕೋದ ಕಲೀರಿ!
• ನಿಮ್ಮ ಬಗ್ಗೆ ಕೆಟ್ಟ ಅಭಿಪ್ರಾಯ (Bad Opinion) ಬರುವಂತಹ ಮಾತು
ನಿಮ್ಮ ಹಿಂದಿನಿಂದ ಸ್ನೇಹಿತರು, ಕುಟುಂಬ ಸೇರಿದಂತೆ ನಿಮ್ಮ ಪರಿಚಯದ ಎಲ್ಲರ ಬಳಿ ನಿಮ್ಮ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಬಹುದು. ನಿಮ್ಮೊಂದಿಗೆ ನೇರವಾಗಿ ಮಾತನಾಡುವ ಬದಲು ಮೂರನೆಯವರು ನಿಮ್ಮ ನಡುವೆ ಪ್ರವೇಶಿಸುವಂತೆ ಮಾಡುತ್ತಾರೆ. ಹಿಂದೆ ಅಷ್ಟೆಲ್ಲ ಪ್ರೀತಿ (Love), ಕಾಳಜಿ (Care) ಮಾಡುತ್ತಿದ್ದವರು ಏಕಾಏಕಿ ನಿಮ್ಮ ಬಗ್ಗೆ ಇಷ್ಟು ಕೆಟ್ಟದಾಗಿ ವರ್ತಿಸಲು ಸಾಧ್ಯವೇ ಎನ್ನಿಸಬಹುದು, ಹಾಗಿರುತ್ತದೆ ಅವರ ಧೋರಣೆ.
• ಸೋಷಿಯಲ್ ಮೀಡಿಯಾದಲ್ಲಿ ದುಃಖ (Pain)
ಕೆಟ್ಟ ಮನಸ್ಸಿನ ಅಥವಾ ನೆಗೆಟಿವ್ (Negative) ಧೋರಣೆಯ ಮಾಜಿ ಪ್ರೇಮಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವನ್ನು ಹೊರಹಾಕಿಕೊಳ್ಳುವುದು ಹೆಚ್ಚು. ತಮ್ಮ ಕೋಪ (Angry), ನೋವನ್ನು ಸಾರ್ವಜನಿಕಗೊಳಿಸುತ್ತಾರೆ. ನಿರಾಶೆಯನ್ನು ಶೋಆಫ್ ಮಾಡುತ್ತಾರೆ. ಎಷ್ಟು ಕೆಟ್ಟದಾಗಿ ನಿಮ್ಮನ್ನು ನೋವಿಗೆ ಗುರಿಪಡಿಸಲು ಸಾಧ್ಯವೋ ಅಷ್ಟು ಪ್ರಯತ್ನಿಸುತ್ತಾರೆ.
• ಸಂಬಂಧವನ್ನು ಕೆಳಮಟ್ಟಕ್ಕೆ ಇಳಿಸುವುದು
ನಿಮ್ಮ ಸಂಬಂಧ (Relation) ಹಿಂದಿನಿಂದಲೂ ಕೆಟ್ಟ ತಳಹದಿಯ ಮೇಲೆಯೇ ಇತ್ತು ಎನ್ನುವುದು, ಮೊದಲಿನಿಂದಲೂ ವಿಶ್ವಾಸ ಇರಲಿಲ್ಲ ಎನ್ನುವುದು ಸಾಮಾನ್ಯ. ನಿಮ್ಮ ಸಂಬಂಧ ಯಾವತ್ತೂ ಮೌಲ್ಯಯುತವಾಗಿರಲಿಲ್ಲ ಎಂದುಬಿಡುತ್ತಾರೆ. ಸುಳ್ಳು (Lie) ಹೇಳಿ ಸಂಬಂಧ ಹಾಳು ಮಾಡಿರುವ ಆರೋಪ ನಿಮ್ಮ ಮೇಲೆ ಬರುತ್ತದೆ. ತಾವು ಶೋಷಿತರು (Victim) ಎನ್ನುವ ಪೋಸ್ ನೀಡುತ್ತಾರೆ. ಆರಂಭದಲ್ಲಿ ನೀವು ಗಮನ ಹರಿಸದಿದ್ದರೂ ಕೊನೆಗೊಮ್ಮೆ ಬ್ಲಾಸ್ಟ್ ಆಗುವ ಚಾನ್ಸ್ ಇರುತ್ತದೆ. ಹೀಗಾಗಿ, ಎಚ್ಚರಿಕೆ ಅಗತ್ಯ.
ಒಮ್ಮೆ ಗಂಡ-ಹೆಂಡ್ತಿ ಸಂಬಂಧ ಮುರಿದರೆ ಕಟ್ಟೋದು ಕಷ್ಟ, ಸರಿ ಮಾಡಲು ಹೀಗೂ ಯತ್ನಿಸಬಹುದು!
• ಸಂಬಂಧ ಹಾಳಾಗಲು ನೀವೇ ಕಾರಣ
ನಿಮ್ಮ ಸಂಬಂಧ ಕೊನೆಗೊಳ್ಳಲು ನೀವೇ ಕಾರಣವೆಂದು ಹತ್ತಾರು ಸುಳ್ಳುಗಳ ಮೂಲಕ ಆರೋಪ (Blame) ಮಾಡುವುದು ಅತ್ಯಂತ ಸಹಜ. ಒಂದೊಮ್ಮೆ ಅವರ ಕಡೆಯಿಂದಲೇ ತಪ್ಪಾಗಿದ್ದರೂ ಅವರು ಅದನ್ನು ನಿಮ್ಮ ಮೇಲೆ ಹೊರಿಸುತ್ತಾರೆ. ನೀವು ಕೆಟ್ಟ ಮನುಷ್ಯ ಎನ್ನುವಂತೆ ಬಿಂಬಿಸುತ್ತಾರೆ. ನಿಮ್ಮಲ್ಲಿ ತಪ್ಪಿತಸ್ಥ (Guilt) ಭಾವನೆ ಮೂಡಿಸಲು ಯತ್ನಿಸುತ್ತಾರೆ.
• ಮುಂದಿನ ಸಂಬಂಧದ ಮೇಲೂ ಕಣ್ಣು
ಒಂದೊಮ್ಮೆ ನೀವು ಪ್ರೇಮಿಯಿಂದ (Lover) ದೂರವಾಗಿ ಬೇರೊಂದು ಸಂಬಂಧದಲ್ಲಿದ್ದರೆ ಅದರ ಮೇಲೆಯೂ ಅವರು ಕಣ್ಣಿಡುತ್ತಾರೆ, ಅದರ ಬಗ್ಗೆ ಎಲ್ಲರ ಬಳಿ ಹೇಳಬಹುದು ಅಥವಾ ನಿಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಬಹುದು.