Online Auction: ಪತಿಯನ್ನು ಮಾರಾಟಕ್ಕಿಟ್ಟರೆ, ಮಹಿಳೆಯರು ಕ್ಯೂ ನಿಲ್ಲೋದಾ?

Contributor Asianet   | Asianet News
Published : Feb 04, 2022, 06:44 PM ISTUpdated : Feb 04, 2022, 06:47 PM IST
Online Auction: ಪತಿಯನ್ನು ಮಾರಾಟಕ್ಕಿಟ್ಟರೆ, ಮಹಿಳೆಯರು ಕ್ಯೂ ನಿಲ್ಲೋದಾ?

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಚಿತ್ರ ವಿಚಿತ್ರ ಜನರನ್ನು ನಾವು ನೋಡ್ತಿದ್ದೇವೆ. ಹಾಗೆ ಅಚ್ಚರಿಗೊಳಿಸುವ ಸುದ್ದಿಗಳು ಹೊರ ಬರುತ್ತಿರುತ್ತವೆ. ಈಗ ಮಹಿಳೆಯೊಬ್ಬಳು ಮಾಡಿದ ಕೆಲಸ ಚರ್ಚೆಯಲ್ಲಿದೆ. ಅಷ್ಟಕ್ಕೂ ಆಕೆ ಮಾಡಿದ್ದೇನು ಎಂಬುದನ್ನು ಇಲ್ಲಿ ಹೇಳ್ತೆವೆ.  

ಇದು ಆನ್ಲೈನ್(Online)ಯುಗ ಸ್ವಾಮಿ. ಇಲ್ಲಿ ಎಲ್ಲವೂ ಮಾರಾಟ(sale)ಕ್ಕೆ ಸಿಗುತ್ವೆ. ಸಗಣಿಯಿಂದ ಹಿಡಿದು ಬಾಡಿಗೆ ತಂದೆ-ತಾಯಿಯವರೆಗೆ ಎಲ್ಲವೂ ಆನ್ಲೈನ್ ನಲ್ಲಿ ಸಿಗುವ ಕಾಲ ಬಂದಿದೆ. ಆನ್ಲೈನ್ ಮಾರಾಟ ಹಾಗೂ ಖರೀದಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೊರೊನಾ ನಂತ್ರ ಅಂಗಡಿಗಳಿಗೆ ಹೋಗಿ ವಸ್ತುಗಳನ್ನು ಖರೀದಿ ಮಾಡುವ ಬದಲು ಅನೇಕ ಜನರು ಆನ್ಲೈನ್ ಸೈಟ್ ಗಳ ಮೂಲಕ ಖರೀದಿ ಮಾಡ್ತಿದ್ದಾರೆ. ಹಾಗಾಗಿಯೇ ಆನ್ಲೈನ್ ಕಂಪನಿಗಳ ವಹಿವಾಟು ಹೆಚ್ಚಾಗಿದೆ. ನಿಮಗೆಲ್ಲ ಗೊತ್ತಿರುವಂತೆ ಬಟ್ಟೆ,ಚಪ್ಪಲಿ,ಮನೆ ವಸ್ತುಗಳೆಲ್ಲ ಆನ್ಲೈನ್ ನಲ್ಲಿ ಸಿಗ್ತವೆ. ಆದ್ರೆ ಇಲ್ಲೊಬ್ಬ ಮಹಿಳೆ ತನ್ನ ಗಂಡನನ್ನೇ ಮಾರಾಟಕ್ಕಿಟ್ಟಿದ್ದಾಳೆ.ಯಸ್. ಇದು ತಮಾಷೆಯಲ್ಲ. ಆಕೆ ನೀಡಿದ ಜಾಹೀರಾತು ಎಲ್ಲರ ಗಮನ ಸೆಳೆದಿದೆ.

ದಂಪತಿ(Couple)ಮಧ್ಯೆ ಭಿನ್ನಾಭಿಪ್ರಾಯ ಸಾಮಾನ್ಯ. ಕೆಲವರು ದಿನಕ್ಕೆ ನೂರು ಬಾರಿ ಕಿತ್ತಾಡುತ್ತಾರೆ. ಸಂಬಂಧ ಹಳಸಿದ್ರೆ ವಿಚ್ಛೇದನ ನೀಡುವವರಿದ್ದಾರೆ. ಮತ್ತೆ ಕೆಲವರು ಹೊಂದಾಣಿಕೆ ಮಾಡಿಕೊಂಡು ಜೀವನ ನಡೆಸ್ತಾರೆ. ಆದ್ರೆ ನ್ಯೂಜಿಲ್ಯಾಂಡ್ ನಲ್ಲಿ ಮಹಿಳೆಯೊಬ್ಬಳು ಗಂಡನ ಮಾರಾಟಕ್ಕೆ ಮುಂದಾಗಿದ್ದಾಳೆ. ಪತ್ನಿ ಜೊತೆ ಮಕ್ಕಳನ್ನು ಮನೆಯಲ್ಲಿ ಬಿಟ್ಟು,ಪತಿ  ಟ್ರಿಪ್ ಗೆ ಹೋಗಿದ್ದೇ ಕಾರಣವಾಗಿದೆ. ಇದು ತಮಾಷೆಗಾಗಿಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಆನ್ಲೈನ್ ಸೈಟ್ ನಲ್ಲಿ ಜಾಹೀರಾತು : ವರದಿಯ ಪ್ರಕಾರ ಐರಿಶ್ ಮಹಿಳೆ ಲಿಂಡಾ ಮೆಕ್‌ಅಲಿಸ್ಟರ್ ತನ್ನ ಪತಿ ಜಾನ್ ಮತ್ತು ಇಬ್ಬರು ಮಕ್ಕಳೊಂದಿಗೆ ನ್ಯೂಜಿಲೆಂಡ್‌ನಲ್ಲಿ ವಾಸವಾಗಿದ್ದಾಳೆ. ಅವಳು ತನ್ನ ಗಂಡ ಜಾನ್ ನನ್ನು ಮಾರಲು ನಿರ್ಧರಿಸಿದ್ದಾಳೆ. ಅದಕ್ಕಾಗಿ ಜಾಹೀರಾತನ್ನು ಹಾಕಿದ್ದಾಳೆ. ಗಂಡನಿಗೆ ಸರಿಯಾಗಿ ಆಹಾರ ನೀಡಿದ್ರೆ ಆತ ಪ್ರಾಮಾಣಿಕವಾಗಿರುತ್ತಾನೆಂದು ಜಾಹೀರಾತಿನಲ್ಲಿ ಲಿಂಡಾ ಮೆಕ್‌ಅಲಿಸ್ಟರ್ ಹೇಳಿದ್ದಾಳೆ. ಟ್ರೇಡ್ ಮಿ ಸೈಟ್ ನಲ್ಲಿ ಮಹಿಳೆ ಜಾಹೀರಾತು ಹಾಕಿದ್ದಾಳೆ.

ಕೆಲವೇ ಕ್ಷಣದಲ್ಲಿ ಖರೀದಿಗೆ ಆಸಕ್ತಿ ತೋರಿದ ಮಹಿಳೆಯರು : ಮಹಿಳೆಯೇನೋ ತನ್ನ ಗಂಡನನ್ನ ಮಾರಾಟ ಮಾಡ್ತೆನೆ ಅಂತಾ ಜಾಹೀರಾತು ಹಾಕಿದ್ಲು ಸರಿ. ಈ ಮಹಿಳೆಯರಿಗೆ ಬುದ್ದಿ ಇಲ್ವ? ಮಹಿಳೆ ಗಂಡನ ಖರೀದಿಗೆ ನಾ ಮುಂದು,ತಾ ಮುಂದು ಅಂತಾ ಕ್ಯೂನಲ್ಲಿ ನಿಂತಿದ್ದೆ. ಒಂದಲ್ಲ ಎರಡಲ್ಲ 12 ಮಹಿಳೆಯರು ಲಿಂಡಾ ಮೆಕ್‌ಅಲಿಸ್ಟರ್ ಪತಿ ಜಾನ್ ಖರೀದಿಗೆ ಆಸಕ್ತಿ ತೋರಿಸಿದ್ದರು. ಹರಾಜು 5 ಸಾವಿರ ರೂಪಾಯಿವರೆಗೆ ಏರಿಕೆಯಾಗಿತ್ತು ಅಂದ್ರೆ ನೀವು ನಂಬ್ಲೇಬೇಕು. 

ಸೈಟ್ ನಿಂದ ಜಾಹೀರಾತು ನಾಪತ್ತೆ : ಮಹಿಳೆಯರ ಸಂಖ್ಯೆ ಹೆಚ್ಚಾಗ್ತಿದ್ದಂತೆ,ಪತಿಯ ಹರಾಜಿನ ಬೆಲೆ ಏರಿಕೆಯಾಗ್ತಿದ್ದಂತೆ  ಟ್ರೇಡ್ ಮಿ ಸೈಟ್ ಎಚ್ಚೆತ್ತುಕೊಂಡಿದೆ. ತಕ್ಷಣ ಈ ಜಾಹೀರಾತನ್ನು ಕಿತ್ತೆಸೆದಿದೆ. 

LOVE BREAKUP : ಸಹೋದರನ ಜೊತೆ ಮಂಚದ ಮೇಲೆ ಮಲಗಿ ಪ್ರೀತಿ ಕಳೆದುಕೊಂಡ ಯುವತಿ!

ಗಂಡನ ಬಗ್ಗೆ ಪತ್ನಿ ಹೇಳಿದ್ದೇನು? : ಗಂಡನ ಮಾರಾಟ ಜಾಹೀರಾತಿನ ವೇಳೆ ಪತ್ನಿ ಅನೇಕ ವಿಷ್ಯಗಳನ್ನು ಹೇಳಿದ್ದಾಳೆ. ಗಂಡನ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಜಾಹೀರಾತಿನ ಮೂಲಕ ತಿಳಿಸಿದ್ದಾಳೆ. ಲಿಂಡಾ ಮೆಕ್‌ಅಲಿಸ್ಟರ್ ಜಾಹೀರಾತಿನ ಪ್ರಕಾರ, ಜಾನ್ 6 ಅಡಿ 1 ಇಂಚು ಉದ್ದವಿದ್ದಾನಂತೆ. ಆತನಿಗೆ 37 ವರ್ಷವಂತೆ. ಅವನು ಶೂಟಿಂಗ್ ಮತ್ತು ಮೀನುಗಾರಿಕೆಯನ್ನು ಇಷ್ಟಪಡುತ್ತಾನಂತೆ. ಅವನೂ ಒಬ್ಬ ರೈತನೆಂದು ಲಿಂಡಾ ಮೆಕ್‌ಅಲಿಸ್ಟರ್ ಹೇಳಿದ್ದಾಳೆ. ಜಾನ್ ಹೊಸ ಸ್ಥಳದಲ್ಲಿ ಸ್ವಲ್ಪ ಆತಂಕಕ್ಕೊಳಗಾಗಬಹುದು .ಆದರೆ ಅವನು ತನ್ನದೇ ಆದ ರೀತಿಯಲ್ಲಿ ಸಂತೋಷವಾಗಿರುತ್ತಾನೆ. ಅದರ ಬಗ್ಗೆ ಟೆನ್ಷನ್ ತೆಗೆದುಕೊಳ್ಳುವ ಅಗತ್ಯವಿಲ್ಲ. ಜಾನ್ ತುಂಬಾ ಒಳ್ಳೆಯವನು ಎಂದು ಪತ್ನಿ ಬರೆದಿದ್ದಾಳೆ.

Valentines Day: ಗಿಫ್ಟ್ ಕೊಟ್ರೆ ಪ್ರೀತಿ ಹೆಚ್ಚಾಗುತ್ತಾ ?

ಇಷ್ಟೇ ಅಲ್ಲ ಎಲ್ಲ ವಸ್ತುಗಳಂತೆ ಪತಿ ಜಾನ್  ಮಾರಾಟವೇ ಅಂತಿಮ ಎಂದಿದ್ದಾಳೆ. ಅಂದ್ರೆ ಜಾನ್ ಖರೀದಿ ಮಾಡಿದ ಜನರು ಮತ್ತೆ ಪತಿಯನ್ನು ತನಗೆ ವಾಪಸ್ ನೀಡುವಂತಿಲ್ಲ. ನನ್ನ ಬಳಿ ವಿನಿಮಯ ಆಯ್ಕೆಯೂ ಇಲ್ಲವೆಂದು ಪತ್ನಿ ಲಿಂಡಾ ಮೆಕ್‌ಅಲಿಸ್ಟರ್ ಹೇಳಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೀಲ್ಸ್‌ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ
ಕುಬೇರನ ಸಂಪತ್ತು ತರುವ ಡಿಫರೆಂಟ್‌ ಹೆಸರು ನಿಮ್ಮ ಮಗನಿಗೂ ಇಡಬಹುದು!