ಪ್ರೀತಿಯಲ್ಲಿ ಬಿದ್ದವರಿಗೆ ವ್ಯಾಲೆಂಟೈನ್ಸ್ ಡೇ ಅನ್ನುವುದು ಬಹಳ ವಿಶೇಷ ದಿನ. ನಿಮ್ಮ ಪ್ರೇಮಿಗಾಗಿ ನೀವೇ ಸ್ವತಃ ಹೋಗಿ ಅವರಿಗಿಷ್ಟವಾಗುವ ಗಿಫ್ಟ್ ಗಳನ್ನು ಖರೀದಿಸಿರುತ್ತೀರಿ. ನಿಮ್ಮ ಇಡೀ ದಿನವನ್ನು ಬೇರೆ ಯಾವುದೇ ಕೆಲಸಗಳು ಇಲ್ಲದಿರುವ ಹಾಗೂ ಫ್ರೀ ಮಾಡಿಕೊಂಡಿರುತ್ತೀರಿ. ಇವುಗಳ ಜೊತೆಗೆ ಈ ದಿನವನ್ನು ಎಲ್ಲಿ, ಹೇಗೆ ಆಚರಿಸಬೇಕು ಎಂಬುದನ್ನು ಕೂಡ ಅಷ್ಟೇ ಸೊಗಸಾಗಿ ಪ್ಲಾನ್ ಮಾಡಬೇಕಲ್ಲವೇ?
ಇನ್ನೇನು ಫೆಬ್ರವರಿ 14 ಹತ್ತಿರ ಬಂತು, ಎಲ್ಲರೂ ತಮ್ಮ ಸಂಗಾತಿಗೆ (Partner) ಯಾವ ರೀತಿಯ ಸರ್ಪ್ರೈಸ್ (Surprise) ನೀಡಬಹುದು ಎಂದು ಪ್ಲಾನ್ (Plan) ಮಾಡಲು ಶುರು ಮಾಡಿರುತ್ತೀರಿ. ಕೆಲವರು ದೂರದ ಯಾವುದೋ ಜಾಗಗಳಿಗೆ ಭೇಟಿ ನೀಡಬೇಕು, ನಿಮ್ಮ ವ್ಯಾಲೆಂಟೈನ್ಸ್ ಡೇ (Valentin's Day) ಆಚರಿಸಬೇಕು ಅಂದುಕೊಂಡಿದ್ದರೆ ಇನ್ನೂ ಕೆಲವರು ಯಾವುದಾದರೂ ಹತ್ತಿರದ ಹೋಟೆಲ್ ಗಳಲ್ಲಿ ಸುಂದರವಾಗಿ ಆಚರಿಸಬೇಕು ಎಂದು ಸಿದ್ಧತೆ ನಡೆಸಿರುತ್ತೀರಿ. ಕೆಲವರಿಗೆ ಲಾಂಗ್ ರೈಡ್ (Long ride) ಹೋಗುವ ಯೋಜನೆ ಕೂಡ ಇರಬಹುದು. ಆದರೆ ಇನ್ನೂ ಹೆಚ್ಚಿನವರು ಏನು ಪ್ಲಾನ್ ಮಾಡಬಹುದು ಎಂದು ತಲೆ ಕೆರೆದುಕೊಳ್ಳುತ್ತಲೇ ಇದ್ದೀರಿ ಅಲ್ಲವೇ?
ನೀವು ನಿಮ್ಮ ಸಂಗಾತಿಗೆ ಸರ್ಪ್ರೈಸ್ ನೀಡಬೇಕು ಎಂದ ಕೂಡಲೇ ಹೊರಗೆ (Outside) ಪ್ಲಾನ್ ಮಾಡಬೇಕು ಎಂದೇನಿಲ್ಲ, ಮನೆಯಲ್ಲಿಯೇ ಚಂದದ ಡೆಕೋರೇಷನ್ ಮಾಡುವ ಮೂಲಕ ಸರ್ಪ್ರೈಸ್ ನೀಡಬಹುದು. ಇಂತಹ ಸರ್ಪ್ರೈಸ್ ಪ್ಲಾನ್ಗಳಿಗಾಗಿ ನಮ್ಮಲ್ಲಿ ಕೆಲವು ಐಡಿಯಾಗಳಿವೆ. ಇದರಿಂದ ನಿಮ್ಮ ಸಂಗಾತಿಗೆ ಖುಷಿ ಪಡಿಸಬಹುದು. ಅದೇನೆಂದು ತಿಳಿದು ಈಗಿನಿಂದಲೇ ಸಿದ್ಧತೆ ಆರಂಭಿಸಿ.
ಒಂದು ಸುಂದರವಾದ ಕೆಂಪುಬಣ್ಣದ ಹಾರ್ಟನ್ನು (Red Heart) ಕೊಡುವುದರ ಮೂಲಕ ನಿಮ್ಮ ಸಂಗಾತಿಯನ್ನು ಮನೆಯೊಳಗೆ ಕರೆದುಕೊಳ್ಳಬಹುದು. ಇದು ನಿಮ್ಮ ಸಂಗಾತಿಗೆ ಎಂದೆಂದಿಗೂ ನೆನಪಿನಲ್ಲಿ ಉಳಿಯುತ್ತದೆ.
ನಿಮ್ಮ ಈ ವಿಶೇಷ ದಿನವನ್ನು (Special Day) ಯಾವ ರೂಮಿನಲ್ಲಿ ಆಚರಿಸಬೇಕೆಂದು ಅಂದುಕೊಂಡಿರುತ್ತೀರೋ ಆ ರೂಮನ್ನು ಸಣ್ಣ ಸಣ್ಣ ಹಾರ್ಟ್ ನ ಸರಗಳ ಮೂಲಕ ಅಲಂಕರಿಸಬಹುದು. ಇದರಲ್ಲಿ ಪುಟ್ಟ ಬಣ್ಣಬಣ್ಣದ ಹಾರ್ಟ್ಗಳನ್ನು ಸೇರಿಸಿದರೆ ಇದು ಇನ್ನೂ ಹೆಚ್ಚು ಸುಂದರವಾಗಿ ಕಾಣಿಸುತ್ತದೆ.
ನಿಮ್ಮ ಸಂಗಾತಿಗೆ ಇಷ್ಟವಾಗುವ ಅಡುಗೆಯನ್ನು (Dish) ಅಥವಾ ಯಾವುದೇ ಸಿಹಿ ತಿಂಡಿಯನ್ನು ನೀವು ಕೈಯಾರೆ ತಯಾರಿಸಿ. ತಯಾರಿಸಿದ ತಿಂಡಿಯನ್ನು ಚೆನ್ನಾಗಿ ಅಲಂಕರಿಸಿ. ನೀವು ಪಟ್ಟ ಶ್ರಮದಲ್ಲೇ ಪ್ರೀತಿ ವ್ಯಕ್ತವಾಗುತ್ತದೆ.
ನೀವು ಸುಂದರವಾಗಿ, ಹೆಚ್ಚು ಅಟ್ರಾಕ್ಟಿವ್ (Attractive) ಆಗಿ ಕಾಣಬೇಕೆಂದರೆ ಅದಕ್ಕಾಗಿ ಮೇಲೆ ಬಣ್ಣ ಬಣ್ಣದ ಲೈಟ್ ಗಳನ್ನು ಹಾಕಿ. ಇಲ್ಲವೇ ಕ್ಯಾಂಡಲ್ ನಿಂದ ಅಲಂಕರಿಸಿದರೆ ಅದು ಇನ್ನೂ ಹೆಚ್ಚು ವಿಶೇಷ ಭಾವನೆ ಮೂಡಿಸುತ್ತದೆ.
ಇಷ್ಟೆಲ್ಲ ಅಲಂಕಾರ ಮಾಡಿದ ಮೇಲೆ ರೂಮಿನೊಳಗೆ ಸುವಾಸನೆ (Fragrance) ಬೀರುತ್ತಿದ್ದರೆ ಅದು ಆ ರೂಮಿನ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ನೀವು ಹಾಗೂ ನಿಮ್ಮ ಸಂಗಾತಿ ಇಷ್ಟಪಡುವಂತಹ ಸುವಾಸನೆ ಬೀರುವ ದ್ರವ್ಯ ಬಳಸಬಹುದು.
ಇದರ ಜೊತೆಗೆ ರೂಮಿನಲ್ಲಿ ರೊಮ್ಯಾಂಟಿಕ್ ಮ್ಯೂಸಿಕ್ (Romantic Music) ಕೇಳುತ್ತಿದ್ದರೆ ಅದು ನಿಮ್ಮನ್ನು ಬೇರೆಯದೇ ಲೋಕಕ್ಕೆ ಕರೆದೊಯ್ಯುವುದರಲ್ಲಿ ಸಂಶಯವಿಲ್ಲ.
ಇನ್ನು ನೀವು ಈ ವಿಶೇಷ ದಿನವನ್ನು ನಿಮ್ಮ ಸಂಗಾತಿಯೊಂದಿಗೆ ಕಳೆಯುತ್ತಿದ್ದೀರ ಅಂದ ಮೇಲೆ ಹೊರಜಗತ್ತಿನಿಂದ ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು. ಅಂದರೆ ನಿಮ್ಮ ಫೋನನ್ನು (Mobile) ಸ್ವಿಚ್ ಆಫ್ ಮಾಡಿ, ಇಲ್ಲವೇ ಅದನ್ನು ದೂರದಲ್ಲಿ ಇಟ್ಟು ನಿಮ್ಮ ಸಂಗಾತಿಗೆಂದೇ ಕೆಲವು ಸಮಯ ಮುಡಿಪಾಗಿಡಿ.
ಇನ್ನು ಜಗಳ ಆಡುವುದು ಪ್ರತಿದಿನ ಇದ್ದದ್ದೇ, ಆದರೆ ಇದೊಂದು ದಿನವಾದರೂ ನಿಮಗೆ ಅವರ ಮೇಲಿರುವ ಭಾವನೆಯನ್ನು (Feelings), ಎಷ್ಟು ಪ್ರೀತಿ ಮಾಡುತ್ತೀರ ಎಂದು ಅವರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ.
ಇದೆಲ್ಲಾ ಮುಗಿದ ಮೇಲೆ ಇಬ್ಬರೂ ಒಟ್ಟಿಗೆ ಕುಳಿತು ಮನಸ್ಸು ಬಿಚ್ಚಿ ಮಾತನಾಡುತ್ತಾ ಊಟ ಮಾಡಿ. ಇದೆಲ್ಲದರ ನಡುವೆ ಇಂಥ ಒಂದು ವಿಶೇಷ ದಿನವನ್ನು ಆಚರಿಸಿದ ಸವಿ ನೆನಪಿಗಾಗಿ ಸೆಲ್ಫಿ (selfy) ಕ್ಲಿಕ್ಕಿಸಲು ಮರೆಯಬೇಡಿ. ಮರೆತರೆ ನಿಮ್ಮ ವಾಟ್ಸಾಪ್ ಸ್ಟೇಟಸ್ ಸೊರಗೀತು!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.