
ಸಂಬಂಧ(Relationship)ಗಳು ಬಹಳ ಸೂಕ್ಷ್ಮವಾಗಿರುತ್ತವೆ. ಹಾಗೆಯೇ ಪ್ರತಿಯೊಂದು ಸಂಬಂಧಕ್ಕೂ ಅದರದೇ ಆದ ಮಹತ್ವವಿದೆ. ಸಹೋದರ(Brother)-ಸಹೋದರಿ(Sister)ಸಂಬಂಧ ಅತ್ಯಂತ ಪವಿತ್ರವಾದ ಸಂಬಂಧ. ಇಬ್ಬರ ಮಧ್ಯೆ ಪ್ರೀತಿ (Love),ವಾತ್ಸಲ್ಯವಿರುತ್ತದೆ. ಇತ್ತೀಚಿನ ದಿನಗಳಲ್ಲಿ ತಂದೆ-ಮಗಳು,ಸಹೋದರ-ಸಹೋದರಿ ಮಧ್ಯೆಯೂ ಅಕ್ರಮ ಸಂಬಂಧದ ಸುದ್ದಿ ಬರ್ತಿದೆ. ತಂದೆಯೇ ಮಗಳ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ವರದಿಯಾಗಿದೆ. ಸಹೋದರನ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪ್ರಕರಣಗಳು ಬೆಳಕಿಗೆ ಬಂದಿವೆ. ಹಾಗಾಗಿ ಅನೇಕರು ಎಲ್ಲ ಪವಿತ್ರ ಸಂಬಂಧವನ್ನೂ ಅನುಮಾನದಲ್ಲಿ ನೋಡಲು ಶುರು ಮಾಡಿದ್ದಾರೆ. ಎಲ್ಲಕ್ಕಿಂತ ಪ್ರೀತಿಯ ಸಂಬಂಧವನ್ನು ಬಹಳ ಜಾಗರೂಕತೆಯಿಂದ ನಿಭಾಯಿಸಬೇಕು. ಸ್ವಲ್ಪ ನಿರ್ಲಕ್ಷ್ಯ ಮಾಡಿದ್ರೂ ಪ್ರೀತಿಸಿದ ವ್ಯಕ್ತಿ ಕೈತಪ್ಪಿ ಹೋಗುವ ಅಪಾಯವಿರುತ್ತದೆ. ಪ್ರೇಯಸಿ ಬಗ್ಗೆ ಪ್ರೇಮಿಯೊಬ್ಬನ ಸಂಶಯ ಪ್ರೀತಿ ಮುರಿದುಬೀಳಲು ಕಾರಣವಾಗಿದೆ. ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಾರದು. ಒಂದು ರೂಮಿನಲ್ಲಿ ಗಂಡು-ಹೆಣ್ಣು ಒಟ್ಟಿಗಿದ್ದಾರೆಂದ್ರೆ ಅವರಿಬ್ಬರ ಮಧ್ಯೆ ಎಲ್ಲವೂ ನಡೆದಿದೆ ಎಂದಲ್ಲ. ಆದ್ರೆ ವ್ಯಕ್ತಿಯೊಬ್ಬ ತನ್ನ ಪ್ರೇಯಸಿ ಬಗ್ಗೆ ತಪ್ಪು ಆರೋಪ ಮಾಡಿ, ಆಕೆಯಿಂದ ದೂರವಾಗಿದ್ದಾನೆ. ಸಾಮಾಜಿಕ ಜಾಲತಾಣದ ಮೂಲಕ ಯುವತಿ ತನ್ನ ನೋವನ್ನು ಹಂಚಿಕೊಂಡಿದ್ದಾಳೆ.
ಪ್ರೀತಿಗೆ ಅಡ್ಡಿಯಾಯ್ತು ಮಂಚ : ಯುವತಿಯೊಬ್ಬಳು ರೆಡ್ಡಿಟ್ ನಲ್ಲಿ ಕಥೆಯನ್ನು ಹೇಳಿದ್ದಾಳೆ. ಯುವತಿ ಗುರುತನ್ನು ಅನಾಮಧೇಯವಾಗಿ ಇಟ್ಟಿದ್ದಾಳೆ. ಒಂದು ದಿನ ಸಂಜೆ ಘಟನೆ ನಡೆದಿದೆ. ಮಂಚದ ಮೇಲೆ ಯುವತಿ ಹಾಗೂ ಆಕೆ ಸಹೋದರನನ್ನು ಪ್ರೇಮಿ ನೋಡಿದ್ದಾನೆ. ಇದೇ ಆತನ ಕೋಪಕ್ಕೆ ಕಾರಣವಾಗಿದೆ.
ಯುವತಿಯ ಪ್ರೇಮಿಯ ತಾಯಿಗೆ ಅನಾರೋಗ್ಯ ಕಾಡಿತ್ತಂತೆ. ಹಾಗಾಗಿ ಆತ ತಾಯಿ ನೋಡಲು ಹೋಗಿದ್ದನಂತೆ. ಈ ವೇಳೆ ಯುವತಿ ತನ್ನ ಸಹೋದರನ ಜೊತೆ ಒಂದೇ ಮಂಚದ ಮೇಲೆ ಮಲಗಿದ್ದಳಂತೆ. ಇಬ್ಬರು ಒಟ್ಟಿಗೆ ಮಲಗಿದ್ದು ಇದೇ ಮೊದಲೇನಲ್ಲ. ಆದ್ರೆ ಕೆಲ ಸಮಯದ ನಂತ್ರ ಅಲ್ಲಿಗೆ ಬಂದ ಪ್ರೇಮಿ, ಇಬ್ಬರನ್ನು ಒಂದೇ ಮಂಚದ ಮೇಲೆ ನೋಡಿದ್ದಾನೆ. ಇದ್ರಿಂದ ಆತನ ಕೋಪ ನೆತ್ತಿಗೇರಿದೆ. ಸಹೋದರನ ಜೊತೆ ಅಕ್ರಮ ಸಂಬಂಧ ಹೊಂದಿದ್ದೀಯಾ ಎಂಬ ಆರೋಪ ಮಾಡಿ, ಪ್ರೇಮಿ ಈಕೆಯನ್ನು ಬಿಟ್ಟು ಹೋಗಿದ್ದಾನಂತೆ. ಆತನ ಕೋಪ ತಣಿಸಲು ನನಗೆ ಸಾಧ್ಯವಾಗ್ಲಿಲ್ಲ ಎನ್ನುತ್ತಾಳೆ ಯುವತಿ. ತನ್ನ ಸಹೋದರನ ಜೊತೆ ಮಲಗಿದ್ದೆ. ನಮ್ಮಿಬ್ಬರ ಮಧ್ಯೆ ಯಾವುದೇ ಕೆಟ್ಟ ಸಂಬಂಧವಿಲ್ಲ. ಇದನ್ನು ಆತನಿಗೆ ಮನವರಿಕೆ ಮಾಡಲು ಯತ್ನಿಸಿದ್ರೂ ಪ್ರಯೋಜನವಾಗಲಿಲ್ಲವೆಂದು ಆಕೆ ಹೇಳಿದ್ದಾಳೆ. ಆತನಿಗೆ ನಮ್ಮಿಬ್ಬರ ಸಂಬಂಧ ಅರ್ಥೈಸಲು ಇನ್ನೇನು ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ. ಆತ ನನ್ನ ಜೊತೆ ಸಂಪೂರ್ಣ ಸಂಬಂಧ ಕಡಿದುಕೊಂಡಿದ್ದಾನೆ. ಇಬ್ಬರ ಮಧ್ಯೆ ಮಾತು ನಿಂತಿದೆ ಎಂದು ಯುವತಿ ಹೇಳಿದ್ದಾಳೆ.
Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?
ನನ್ನ ಕುಟುಂಬದಲ್ಲಿ ಇದು ಸಾಮಾನ್ಯ : ರೆಡ್ಡಿಟ್ ನಲ್ಲಿ ಕಥೆ ಹೇಳಿದ ಯುವತಿ, ನನ್ನ ಕುಟುಂಬದಲ್ಲಿ ಇದು ಸಾಮಾನ್ಯ ಎಂದಿದ್ದಾಳೆ. ಆಕೆ ಕುಟುಂಬದಲ್ಲಿ ಮಾತ್ರವಲ್ಲ ಅನೇಕರ ಮನೆಯಲ್ಲಿ ಸಹೋದರ-ಸಹೋದರಿಯರು ತುಂಬಾ ಆತ್ಮೀಯರಾಗಿರ್ತಾರೆ. ಇಬ್ಬರು ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುವುದ್ರಿಂದ ಹಿಡಿದು ಒಂದೇ ಮಂಚದ ಮೇಲೆ ಮಲಗ್ತಾರೆ. ಹಾಗಾಂತ ಅವರು ಅಕ್ರಮ ಸಂಬಂಧ ಹೊಂದಿದ್ದಾರೆ ಎಂದಲ್ಲ. ಇಬ್ಬರ ಮಧ್ಯೆ ಪರಿಶುದ್ಧ ಬಾಂಧವ್ಯವಿರುತ್ತದೆ. ಇದನ್ನು ಯುವತಿ, ಪ್ರೇಮಿಗೆ ಅರ್ಥ ಮಾಡಿಸುವ ಪ್ರಯತ್ನ ಮಾಡಿ ವಿಫಲವಾಗಿದ್ದಾಳೆ.
Misunderstanding: ಸಂಬಂಧದಲ್ಲಿ ಅಪಾರ್ಥಗಳನ್ನು ಹೀಗೆ ಬಗೆಹರಿಸಿಕೊಳ್ಳಿ..
ಯುವತಿ ಕಥೆಗೆ ಸಾಮಾಜಿಕ ಜಾಲತಾಣದಲ್ಲಿ ಭಿನ್ನ ಪ್ರತಿಕ್ರಿಯೆ : ಸಾಮಾಜಿಕ ಜಾಲತಾಣ ಬಳಕೆದಾರರು ತಮ್ಮದೇ ಆದಂತಹ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಅನೇಕರು ಯುವತಿ ಪರ ಮಾತನಾಡಿದ್ದಾರೆ. ಮತ್ತೆ ಕೆಲವರು ಯುವತಿ, ಸಹೋದರನ ಜೊತೆ ಮಲಗಬಾರದಿತ್ತು ಎಂಬ ಸಲಹೆಯನ್ನೂ ನೀಡಿದ್ದಾರೆ. ಒಂದು ವಯಸ್ಸಿನ ನಂತ್ರ ಸಹೋದರನ ಜೊತೆ ಮಲಗವುದು ಸೂಕ್ತವಲ್ಲ. ಇದರಿಂದ ಕೆಲವರಿಗೆ ಅನುಮಾನ ಬರುವುದು ಸಹಜ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.