ಸೀಮಾ ಹೈದರ್ ಉಲ್ಟಾ ಕೇಸ್, ಭಾರತದ ಅಂಜು ಹಾಗೂ ಪಾಕಿಸ್ತಾನದ ನಾಸ್ರುಲ್ಲಾ ಲವ್ ಸ್ಟೋರಿ ಭಾರಿ ಸದ್ದು ಮಾಡುತ್ತಿದೆ. ಗೆಳೆಯನ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದೇನೆ ಎಂದಿದ್ದ ಅಂಜು ಇದೀಗ ಇಸ್ಲಾಂಗೆ ಮತಾಂತರವಾಗಿ ನಾಸ್ರುಲ್ಲಾ ಜೊತೆ ಮದುವೆಯಾಗಿದ್ದಾಳೆ. ಇತ್ತ ತಾಯಿಗಾಗಿ ಕಾಯುತ್ತಿದ್ದ ಮಕ್ಕಳಿಗೆ ನಿರಾಸೆಯಾಗಿದೆ.
ನವದೆಹಲಿ(ಜು.25) ಪಾಕಿಸ್ತಾನದಿಂದ ಭಾರತಕ್ಕೆ ಬಂದ ಸೀಮಾ ಹೈದರ್ ಲವ್ ಸ್ಟೋರಿ ಬೆನ್ನಲ್ಲೇ ಭಾರತದಿಂದ ಪಾಕಿಸ್ತಾನಕ್ಕೆ ತೆರಳಿದ ಅಂಜು ಲವ್ ಸ್ಟೋರಿ ಭಾರಿ ಸಂಚಲನ ಸೃಷ್ಟಿಸಿದೆ. ಫೇಸ್‌ಬುಕ್ ಮೂಲಕ ಪರಿಚಯವಾದ ನಾಸ್ರುಲ್ಲಾ ಭೇಟಿಗಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಅಂಜು ಇದೀಗೆ ಮದುವೆಯಾಗಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ. 35 ವರ್ಷದ ವಿವಾಹಿತ ಅಂಜು, ಯಾರಿಗೂ ತಿಳಿಸದೆ ಪಾಕಿಸ್ತಾನಕ್ಕೆ ತೆರಳಿದ್ದರು. ಬಳಿಕ ತಾನೂ ಸೀಮಾ ಹೈದರ್ ರೀತಿ ಅಲ್ಲ. ಮೂರು ದಿನದಲ್ಲಿ ಭಾರತಕ್ಕೆ ಬರುವುದಾಗಿ ಹೇಳಿದ್ದಳು. ಆದರೆ ಇದೀಗ ಅಂಜು ಇಸ್ಲಾಂಗೆ ಮತಾಂತರವಾಗಿ, ನಾಸ್ರುಲ್ಲಾ ಜೊತೆ ಮದುವೆಯಾಗಿದ್ದಾಳೆ. ಇಷ್ಟೇ ಅಲ್ಲ ಅಂಜು ಫಾತಿಮಾ ಆಗಿ ಬದಲಾಗಿದ್ದಾಳೆ ಎಂದು ವರದಿಗಳು ಹೇಳುತ್ತಿದೆ.
ನಾಸ್ರುಲ್ಲಾ ತವರು ಖೈಬರ್ ಪಖ್ತಾಂಕ್ವಾದ ಅಪ್ಪರ್ ದೀರ್ ಜಿಲ್ಲಾ ಕೋರ್ಟ್‌ನಲ್ಲಿ ಮದುವೆ ನಡೆದಿದೆ. ಇದಕ್ಕೂ ಮೊದಲು ಮಸೀದಿಗೆ ತೆರಳಿದ ಅಂಜು ಹಾಗೂ ನಾಸ್ರುಲ್ಲಾ ಕುಟುಂಬಸ್ಥರು ಇಸ್ಲಾಂಗೆ ಮತಾಂತರವಾಗಿದ್ದಾಳೆ. ಫಾತಿಮಾ ಎಂಬ ಹೆಸರು ಇಡಲಾಗಿದೆ. ಮದುವೆ ಬಳಿಕ ಇದೇ ಖೈಬರ್ ಪಂಖ್ತಾಕ್ವಾದಲ್ಲಿನ ಪ್ರವಾಸಿ ತಾಣಗಳಲ್ಲಿ ಭೇಟಿ ನೀಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದು ಅಂಜು ಲವ್ಸ್ ನಾಸ್ರುಲ್ಲಾ; ಪ್ರೀತಿಗಾಗಿ ಪಾಕಿಸ್ತಾನಕ್ಕೆ ಹಾರಿದ ಭಾರತದ ಯುವತಿಯ ಕಹಾನಿ!
ಮಲಾಕಂಡ್ ಡಿವಿಶನ್ ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ನಾಸಿರ್ ಮೆಹಮ್ಮೂದ್ ಸತ್ತಿ, ಅಂಜು ಮತಾಂತರವನ್ನು ಖಚಿತಪಡಿಸಿದ್ದಾರೆ. 35 ವರ್ಷದ ಅಂಜು ಸ್ವಯಂ ಇಚ್ಚೆಯಿಂದ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಇನ್ನು ಮುಂದೆ ಫಾತಿಮಾ ಹೆಸರಿನಲ್ಲಿ ಗುರುತಿಸಲ್ಪಡುತ್ತಾರೆ ಎಂದಿದ್ದಾರೆ. ಮತಾಂತರ ಬಳಿಕ ಜಿಲ್ಲಾ ದೀರ್ ಕೋರ್ಟ್‌ಗೆ ಹಾಜರಾಗಿದ್ದಾರೆ. ನಾಸ್ರುಲ್ಲಾ ಹಾಗೂ ಅಂಜು ಜೊತೆ ಕುಟುಂಬಸ್ಥರು, ಆಪ್ತರು, ಭದ್ರತಾ ಪೊಲೀಸ್ ಹಾಗೂ ವಕೀಲರು ಹಾಜರಾಗಿದ್ದಾರೆ. ಭಾರತದಿಂದ ಆಗಮಿಸಿರುವ ಕಾರಣ ಅಂಜುಗೆ ಹಾಗೂ ಕುಟಂಬಸ್ಥರಿಗೆ ಪೊಲೀಸ್ ಭದ್ರತೆ ನೀಡಲಾಗಿದೆ.
Video: Indian girl with her Pakistani friend Nasrullah Khan in his home district Dir pic.twitter.com/jJJaCmxq1U
— Naimat Khan (@NKMalazai)
ತಾನು ಸೀಮಾ ಹೈದರ್ ರೀತಿ ಅಲ್ಲ. ಪಾಕಿಸ್ತಾನಕ್ಕೆ ತೆರಳಲು ವೀಸಾ ಪಡೆದಿದ್ದೇನೆ. ಎಲ್ಲಾ ದಾಖಲೆ ನೀಡಿದ್ದೇನೆ. ನಾನು ಗೆಳೆಯ ನಾಸ್ರುಲ್ಲಾ ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ್ದೇನೆ. ಇಲ್ಲಿ ಒಂದು ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ನಾಸ್ರುಲ್ಲಾ ಜೊತೆ ಮದುವೆಯಾಗುವ ಯೋಚನೆ ಇಲ್ಲ. ಎರಡು ಅಥವಾ ಮೂರು ದಿನದಲ್ಲಿ ಭಾರತಕ್ಕೆ ಮರಳಿ ಮಕ್ಕಳ ಜೊತೆ ಇರುತ್ತೇನೆ. ಪತಿ ಜೊತೆಗಿನ ಸಂಬಂಧ ಸರಿಯಿಲ್ಲ. ಹೀಗಾಗಿ ಮಕ್ಕಳ ಜೊತೆ ಇರುತ್ತೇನೆ ಎಂದಿದ್ದರು. ಈ ಹೇಳಿಕೆ ನೀಡಿದ ಮರುದಿನವೇ ಇದೀಗ ಅಂಜು ಫಾತಿಮಾ ಆಗಿದ್ದಾಳೆ. ಇಷ್ಟೇ ಅಲ್ಲ 29 ವರ್ಷದ ನಾಸ್ರುಲ್ಲಾ ಪತ್ನಿಯಾಗಿದ್ದಾಳೆ. ಆದರೆ ನಿನ್ನೆ ನೀಡಿದ ಹೇಳಿಕೆಯಿಂದ ಕೊಂಚ ಸಮಾಧಾನಗೊಂಡಿದ್ದ ಅಂಜು ಮಕ್ಕಳು ಇಂದು ಮತ್ತೆ ಆಘಾತಗೊಂಡಿದ್ದಾರೆ. ಅಮ್ಮನಿಗಾಗಿ ಕಾಯುತ್ತಿದ್ದ ಮಕ್ಕಳು ಇತ್ತ ತಬ್ಬಲಿಯಾಗಿದ್ದಾರೆ.
ಲೈಲಾ-ಮಜ್ನು ಗೊತ್ತಲ್ವಾ ಹಂಗೆ ನಾವು, ಅಕ್ಷಯ್-ಆಲಿಯಾ ಭಾರತದಲ್ಲಿ ಇರ್ತಾರೆ ಅಂದ್ರೆ ನನಗ್ಯಾಕೆ ಸಾಧ್ಯವಿಲ್ಲ!
ಉತ್ತರಪ್ರದೇಶ ಕೈಲೊರ್ ಗ್ರಾಮದಲ್ಲಿ ಜನಿಸಿದ ಹಾಗೂ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನೆಲೆಸಿರುವ ಅಂಜು (34) ಎಂಬ ಮಹಿಳೆಯೇ ಪಾಕಿಸ್ತಾನಕ್ಕೆ ಭೇಟಿ ನೀಡಿದಾಕೆ. ಈಕೆಗೆ ಕೆಲವು ತಿಂಗಳುಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪಾಕಿಸ್ತಾನದ ಖೈಬರ್ ಪಖ್ತೂನ್‌ಖ್ವ ಪ್ರಾಂತ್ಯದ ಅಪ್ಪರ್ ದೀರ್ ಜಿಲ್ಲೆಯ 29 ವರ್ಷದ ಯುವಕ ನಸ್ರುಲ್ಲಾ ಪರಿಚಯವಾಗಿದ್ದ. ವೈದ್ಯಕೀಯ ಕ್ಷೇತ್ರದಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದಾನೆ. ಅವನನ್ನು ನೋಡುವ ಉದ್ದೇಶದಿಂದ ತನ್ನ ಪತಿ ಹಾಗೂ ಮಕ್ಕಳಿಗೂ ತಿಳಿಸದೆ ಈ ವಿವಾಹಿತ ಮಹಿಳೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಳೆ. ಒಂದು ತಿಂಗಳ ವೀಸಾ ಆಕೆಗೆ ಸಿಕ್ಕಿದ್ದು, ಆ.20ರೊಳಗೆ ಭಾರತಕ್ಕೆ ಮರಳಬೇಕಾಗಿದೆ.
ಫೇಸ್‌ಬುಕ್ ಗೆಳೆಯನನ್ನು ವಿವಾಹವಾಗುವ ಉದ್ದೇಶದಿಂದ ಅಂಜು ಪಾಕಿಸ್ತಾನಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ, ನನಗೂ ಅಂಜುಳನ್ನು ವಿವಾಹವಾಗುವ ಬಯಕೆ ಇಲ್ಲ ಎಂದು ನಸ್ರುಲ್ಲಾ ಹೇಳಿಕೊಂಡಿದ್ದರು.