ವಾಯವ್ಯ ಟರ್ಕಿಯ ಪೋಲೆಂಟೆ ಕೇಪ್‌ನಲ್ಲಿ ಬಾಯ್‌ಫ್ರೆಂಡ್ ನಿಜಾಮೆಟಿನ್ ಗುರ್ಸು ಅವರೊಂದಿಗೆ ನಿಶ್ಚಿತಾರ್ಥದ ಬಳಿಕ ಪಾರ್ಟಿ ಮಾಡುತ್ತಿದ್ದ ಮಹಿಳೆಯು ಜುಲೈ 6 ರಂದು ಕಡಿದಾದ ಪ್ರಪಾತದಿಂದ ಬಿದ್ದಿದ್ದಾರೆ ಎಂದು ವರದಿಯಾಗಿದೆ.
ಅಂಕಾರಾ ( ಜುಲೈ 25, 2023): ಜೀವನದಲ್ಲಿ ಎಂಗೇಜ್‌ಮೆಂಟ್, ಮದುವೆ ಅನ್ನೋದು ಪುರುಷ ಹಾಗೂ ಮಹಿಳೆ ಇಬ್ಬರ ಬಾಳಲ್ಲೂ ಮಹತ್ವದ ಕ್ಷಣವಾಗಿದೆ. ಆದರೆ, ಈ ಸಂಭ್ರಮ ಅವರ ಜೀವನದ ಕಡೆಯ ಸಂಭ್ರಮವಾದ್ರೆ ಹೇಗಿರುತ್ತೆ. ಹೌದು, 39 ವರ್ಷದ ಯೆಸಿಮ್ ಡೆಮಿರ್ ಎಂಬ ಮಹಿಳೆ ನಿಶ್ಚಿತಾರ್ಥ ಮಾಡಿಕೊಂಡ ಕೆಲವೇ ಕ್ಷಣಗಳಲ್ಲಿ 100 ಅಡಿ ಎತ್ತರದ ಪ್ರಪಾತಕ್ಕೆ ಜಾರಿಬಿದ್ದು ಮೃತಪಟ್ಟಿದ್ದಾಳೆ.
ವಾಯವ್ಯ ಟರ್ಕಿಯ ಪೋಲೆಂಟೆ ಕೇಪ್‌ನಲ್ಲಿ ಬಾಯ್‌ಫ್ರೆಂಡ್ ನಿಜಾಮೆಟಿನ್ ಗುರ್ಸು ಅವರೊಂದಿಗೆ ನಿಶ್ಚಿತಾರ್ಥದ ಬಳಿಕ ಪಾರ್ಟಿ ಮಾಡುತ್ತಿದ್ದ ಮಹಿಳೆಯು ಜುಲೈ 6 ರಂದು ಕಡಿದಾದ ಪ್ರಪಾತದಿಂದ ಬಿದ್ದಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
ಇದನ್ನು ಓದಿ: ಯಮುನಾ ನದಿಯಲ್ಲಿ ಸಿಕ್ಕ ಡಾಲ್ಫಿನ್ ಹಿಡಿದು ತಿಂದ ಮೀನುಗಾರರು: ನಾಲ್ವರ ವಿರುದ್ಧ ಕೇಸ್
ನಿಜಾಮೆಟಿನ್ ಗುರ್ಸು ಅವರು ಯೆಸಿಮ್ ಡೆಮಿರ್ ಅವರನ್ನು ಆಗ ತಾನೇ ಪ್ರೊಪೋಸ್ ಮಾಡಿದ್ದರು ಮತ್ತು ಈ ಹಿನ್ನೆಲೆ ಎಂಗೇಜ್ಮೆಂಟ್ ನಂತರ ಸುರ್ಯಾಸ್ತವನ್ನು ವೀಕ್ಷಿಸುತ್ತಾ ಆಹಾರ ಮತ್ತು ಡ್ರಿಂಕ್ಸ್ ಜತೆಗೆ ಸಂಭ್ರಮಾಚರಣೆ ಮಾಡಲು ನಿರ್ಧರಿಸಿದ್ದಾರೆ. ನಂತರ, ಬಾಯ್‌ಫ್ರೆಂಡ್ ಕಾರಿನಲ್ಲಿ ಏನೋ ತರಲು ಹೋದ ವೇಳೆ ಇದ್ದಕ್ಕಿದ್ದಂತೆ ಆತನಿಗೆ ಕಿರುಚಾಟ ಕೇಳಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ. ನಂತರ, ಬಾಯ್‌ಫ್ರೆಂಡ್ ಆ ಸ್ಥಳಕ್ಕೆ ಧಾವಿಸಿದಾಗ ತನ್ನ ಹೊಸ ಪ್ರೇಯಸಿ ಪ್ರಪಾತದಿಂದ ಬಿದ್ದಿರುವುದನ್ನು ಕಂಡುಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಯೆಸಿಮ್ ಡೆಮಿರ್ ಆರಂಭದಲ್ಲಿ 100 ಅಡಿ ಪ್ರಪಾತದಿಂದ ಕೆಳಗೆ ಬಿದ್ದಿದ್ದರೂ ಬದುಕುಳಿದಿದ್ದರು. ಆದರೆ ನಂತರ ಗಾಯಗಳಿಗೆ ಬಲಿಯಾಗಿದ್ದಾರೆ ಎಂದೂ ತಿಳಿದುಬಂದಿದೆ. ಈ ಸ್ಥಳ ರೊಮ್ಯಾಂಟಿಕ್ ಆಗಿರುತ್ತದೆ. ಪ್ರಪೋಸಲ್ ಆದ ಮೇಲೆ ರೊಮ್ಯಾಂಟಿಕ್ ಮೆಮೋರಿ ಇರಲೆಂದು ಆ ಸ್ಥಳ ಆಯ್ಕೆ ಮಾಡಿಕೊಂಡೆವು ಎಂದು ಮೃತ ಮಹಿಳೆಯ ಬಾಯ್‌ಫ್ರೆಂಡ್ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. ಅಲ್ಲದೆ, ಸ್ವಲ್ಪ ಮದ್ಯ ಸೇವಿಸಿದೆವು, ಎಲ್ಲವೂ ಒಮ್ಮೆಲೇ ಆಯಿತು, ಬ್ಯಾಲೆನ್ಸ್ ತಪ್ಪಿ ಕೆಳಗೆ ಬಿದ್ದಿದ್ದಾಳೆ ಎಮದೂ ಹೇಳಿದರು.
ಇದನ್ನೂ ಓದಿ: ಸೈಬರ್‌ಕ್ರೈಂ ಮೂಲಕ 700 ಕೋಟಿ ವಂಚನೆ ಪತ್ತೆಹಚ್ಚಿದ ಪೊಲೀಸರು: ಉಗ್ರರು, ಚೀನಾ ಪಾಲಾಗ್ತಿದ್ದ ಹಣ
ಅಧಿಕಾರಿಗಳು ತಕ್ಷಣ ಪ್ರದೇಶವನ್ನು ಮುಚ್ಚಿ ತನಿಖೆ ಆರಂಭಿಸಿದ್ದಾರೆ. "ಎಲ್ಲರೂ ಬಂದು ಸೂರ್ಯಾಸ್ತವನ್ನು ವೀಕ್ಷಿಸುವ ಸ್ಥಳವಾಗಿದೆ, ಆದರೆ, ಪ್ರಪಾತದ ಅಂಚಿನಲ್ಲಿ ಯಾವುದೇ ಮುನ್ನೆಚ್ಚರಿಕೆ ಇಲ್ಲ, ರಸ್ತೆಗಳು ತುಂಬಾ ಕೆಟ್ಟದಾಗಿದೆ, ಇಲ್ಲಿ ಬೇಲಿಯನ್ನು ಹಾಕಬೇಕು, ಮತ್ತಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು" ಎಂದು ಯೆಸಿಮ್ ಡೆಮಿರ್ ಅವರ ಸ್ನೇಹಿತರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಒಟ್ಟಾರೆ ಎಂಗೇಜ್‌ಮೆಂಟ್ ನಂತರ ಸಂಭ್ರಮ ಹಂಚಿಕೊಳ್ಳಲು ಹೊರಟ ಬಾಯ್‌ಫ್ರೆಂಡ್ ಹಾಗೂ ಗರ್ಲ್‌ಫ್ರೆಂಡ್‌ನ ಖುಷಿ ಕೆಲವೇ ಕ್ಷಣಗಳಲ್ಲಿ ಅಂತ್ಯ ಕಂಡಿದೆ. ಹಾಗೂ ಗರ್ಲ್‌ಫ್ರೆಂಡ್‌ನ ಪ್ರಾಣವೇ ಹಾರಿಹೋಗಿದೆ.
ಇದನ್ನೂ ಓದಿ: Love Jihad: ಹಿಂದೂ ಮಹಿಳೆಯೊಂದಿಗೆ ಫೇಸ್‌ಬುಕ್ ಲವ್: ರೇಪ್ ಮಾಡಿ ಗರ್ಭಪಾತ ಮಾಡಿಸಿ ಇಸ್ಲಾಂಗೆ ಮತಾಂತರ!