ಚೀನಾದಲ್ಲಿ ಗಗನಕ್ಕೇರುತ್ತಿದೆ ವಧು ದಕ್ಷಿಣೆ, ಬಡ ಹುಡುಗರು ಕಂಗಾಲು!

By Suvarna News  |  First Published Mar 28, 2023, 2:36 PM IST

ಚೀನಾದಲ್ಲಿ ಹುಡುಗರಿಗೆ, ಅವರ ಮನೆಯವರಿಗೆ ಮದುವೆ ಅನ್ನೋದು ದುಃಸ್ವಪ್ನವಾಗಿ ಕಾಡುತ್ತಿದೆ. ಇದಕ್ಕೆ ಕಾರಣ ಏರುತ್ತಿರುವ ವಧು ದಕ್ಷಿಣೆ. ಲಕ್ಷದಿಂದ ಕೋಟಿಗಳವರೆಗೆ ಇರುವ ವಧು ದಕ್ಷಿಣೆ ಹುಡುಗರು ಕಂಗಾಲಾಗಿದ್ದಾರೆ.


ಚೀನಾ ದೇಶದಲ್ಲಿ ಒಂದು ಕಾಲದಲ್ಲಿ ವರ ದಕ್ಷಿಣೆ, ಗಂಡು ಮಕ್ಕಳಿಗಾಗಿ ಹಪಹಪಿಸೋದು ಇತ್ಯಾದಿಗಳು ನಡೆಯುತ್ತಿದ್ದವು. ನಮ್ಮಲ್ಲಿ ಹಿಂದೆ ಇದ್ದಂತೆ ಅಲ್ಲೂ ಕುಟುಂಬದಲ್ಲಿ ಗಂಡಿಗೆ ಪ್ರಾಧಾನ್ಯತೆ ಹೆಚ್ಚಿತ್ತು. ಮನೆಯಲ್ಲಿ ಗಂಡು ಮಗು ಹುಟ್ಟಿದರೆ ಖುಷಿ ಪಟ್ಟರೆ, ಹೆಣ್ಣು ಮಗುವನ್ನು ಹೊರೆಯಂತೆ ಪರಿಗಣಿಸುವ ಪರಂಪರೆ ಇತ್ತು. ಆದರೆ ಈಗ ಕಾಲ ಬದಲಾಗಿದೆ. ಗಂಡು ಮಕ್ಕಳ ಮನೆಯವರು ಕಂಗಾಲಾಗಿ ಕುಳಿತಿದ್ದಾರೆ. ಗಂಡು ಮಗು ಹುಟ್ಟುತ್ತಿರುವಂತೆ ಪೋಷಕರಲ್ಲಿ ಸಣ್ಣ ಆತಂಕವೂ ಹುಟ್ಟುತ್ತಿದೆ. ಕಾರಣ ಇಲ್ಲಿ ಸಂಕೀರ್ಣವಾಗುತ್ತಿರುವ ವಿವಾಹ ವ್ಯವಸ್ಥೆ. ಇದರಿಂದ ಗಂಡಿನ ಮನೆಯವರು ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನೆಲ್ಲ ಹೆಣ್ಣಿನ ಪೋಷಕರಿಗೆ ನೀಡಬೇಕಾಗಿ ಬಂದಿದೆ. ಬಡತನದ ಹಿನ್ನೆಲೆಯ ಹುಡುಗರದಂತೂ ಶೋಚನೀಯ ಪರಿಸ್ಥಿತಿ. ಅವರನ್ನು ಮದುವೆಯಾಗಲು ಯಾವ ಹೆಣ್ಣೂ ಮನಸ್ಸು ಮಾಡುತ್ತಿಲ್ಲ. ಹೆಣ್ಣಿಗಿಂತಲೂ ಆಕೆಯ ಮನೆಯವರು ತಮ್ಮ ಮಗಳನ್ನು ಬಡ ಹುಡುಗನಿಗೆ ವಿವಾಹ ಮಾಡಿಕೊಡಲು ಒಪ್ಪುತ್ತಿಲ್ಲ. ಇದಕ್ಕೆ ಕಾರಣ ಮಗಳು ಸುಖವಾಗಿರಲಿ ಅನ್ನುವ ಆಸೆ ಒಂದು ಕಡೆ ಆದರೆ ವಧು ದಕ್ಷಿಣೆಗೆ ಆಕೆಯ ಮನೆಯವರು ಹಪಹಪಿಸೋದು ಎರಡನೆಯ ಕಾರಣ.

ಚೀನಾದಲ್ಲಿ ಇತ್ತೀಚೆಗೆ ಕಮ್ಯೂನಿಸ್ಟ್ ಸರ್ಕಾರ ಒಂದು ವಿಚಾರ ಸಂಕಿರಣ ಏರ್ಪಡಿಸಿತ್ತು. ಅದರಲ್ಲಿ ಗಗನಕ್ಕೇರುತ್ತಿರುವ ವಧು ದಕ್ಷಿಣೆಯನ್ನು ಹೇಗಾದರೂ ಮಾಡಿ ಹತೋಟಿಗೆ ತರಬೇಕು ಅನ್ನುವ ನಿಟ್ಟಿನಲ್ಲಿ ಚರ್ಚೆಗಳು ನಡೆದವು. ಸುಮಾರು ಮೂವತ್ತರ ಆಸುಪಾಸಿನ ಒಂದಿಷ್ಟು ಹೆಣ್ಣುಮಕ್ಕಳನ್ನು ಕರೆದು ಅವರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಯಿತು. ಈ ಸಭೆ ವಿಶ್ವಮಟ್ಟದಲ್ಲಿ ಸುದ್ದಿಯಾಯಿತು. ಈ ಸಭೆಯ ಮೂಲಕವೇ ಚೀನಾದಲ್ಲಿ ಈ ಮಟ್ಟಿನ ವಧು ದಕ್ಷಿಣೆ ಏರಿಕೆ ಕಂಡು ಬಂದಿರುವುದು ಜಗತ್ತಿಗೆ ತಿಳಿಯಿತು. ಆ ಬಗ್ಗೆ ಊಹೆ ಇತ್ತಾದರೂ ಈ ಮಟ್ಟಿನ ವಧು ದಕ್ಷಿಣೆ ಇರಬಹುದು ಎಂಬ ಕಲ್ಪನೆ ಇರಲಿಲ್ಲ. ಇಲ್ಲೀಗ ನಮ್ಮ ಭಾರತೀಯ ಲೆಕ್ಕಾಚಾರದಲ್ಲಿ ಹೇಳೋದಾರೆ ಇಪ್ಪತ್ತು ಲಕ್ಷ ರು.ಗಳಿಂದ ಕೋಟಿಗಳ ವರೆಗೆ ವಧು ದಕ್ಷಿಣೆ ನಡೆಯುತ್ತಿದೆ.

Latest Videos

undefined

ಚೀನಾ ಏನೂ ಶ್ರೀಮಂತ ದೇಶ ಅಲ್ಲ. ಇಲ್ಲಿನ ಜನರಲ್ಲಿ ಬಡವರ ಸಂಖ್ಯೆಯೂ ಹೆಚ್ಚಿದೆ. ಇದೀಗ ಇಲ್ಲಿನ ಗಂಡು ಹೆತ್ತವರು ತಮ್ಮ ಜೀವಮಾನದ ಸಂಪಾದನೆಯನ್ನೆಲ್ಲ ವಧುವಿನ ಮನೆಯವರಿಗೆ ವಧು ದಕ್ಷಿಣೆಯಾಗಿ ನೀಡಬೇಕಾಗಿದೆ ಬಂದಿದೆ. ಎಷ್ಟೋ ಮಂದಿ ಹುಡುಗರು ಮದುವೆ ಇಲ್ಲದೇ ಕುಳಿತಿದ್ದಾರೆ. ಇದರಿಂದ ಅಲ್ಲಿನ ಸಾಮಾಜಿಕತೆ ಗಂಭೀರ ಹಂತಕ್ಕೆ ಬಂದು ನಿಂತಿದೆ.

ರಾತ್ರಿ 10 ಗಂಟೆ ನಂತ್ರ ಬಾಲ್ಕನಿ ಬಳಸಂಗಿಲ್ಲ, ಗೆಸ್ಟ್‌ಗೆ ನೋ ಎಂಟ್ರಿ; ಬೆಂಗಳೂರು ಬ್ಯಾಚುಲರ್ಸ್‌ಗೆ ಹೊಸ ರೂಲ್ಸ್!

ವಿಶ್ವದಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ದೇಶವಾಗಿ ಗುರುತಿಸಿಕೊಂಡ ಚೀನಾದಲ್ಲಿ ಇದೀಗ ಜನನ ಪ್ರಮಾಣ (Birth rate) ಕುಸಿಯುತ್ತಿದೆ. ಇದಕ್ಕೆ ಇಲ್ಲಿ ಕುಸಿಯುತ್ತಿರುವ ವಿವಾಹವೂ ಕಾರಣ. ಜಪಾನ್‌ನಲ್ಲಿ ಕೆಲವು ದಿನಗಳ ಹಿಂದೆ ಇಂಥದ್ದೇ ಸ್ಥಿತಿ ಇತ್ತು. ಅಲ್ಲಿ ಹೆಣ್ಣುಮಕ್ಕಳು ಸ್ವತಂತ್ರ ಪ್ರವೃತ್ತಿಯವರಾಗಿದ್ದು ಮಗುವಿನ ಪೋಷಣೆ, ಮನೆಯ ಜವಾಬ್ದಾರಿಗಳನ್ನು ಹೊರಲು ನಿರಾಕರಿಸುತ್ತಿದ್ದಾರೆ. ಪರಿಣಾಮ ಅಲ್ಲಿ ಜನನ ಪ್ರಮಾಣ ತೀವ್ರವಾಗಿ ಕುಸಿದು ರೋಬೋಟ್ ಗಳ ಮೇಲೆ ಅವಲಂಬನೆ ಹೆಚ್ಚಾಗುತ್ತಿದೆ.

ಚೀನಾದ ಈ ಸ್ಥಿತಿ ನಮ್ಮ ಭಾರತದಲ್ಲೂ ಇಲ್ಲದಿಲ್ಲ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಕರಾವಳಿ ಭಾಗದ ಎಷ್ಟೋ ಮಂದಿ ಕೃಷಿಕರನ್ನು ಇಲ್ಲಿನ ಹೆಣ್ಣುಮಕ್ಕಳು ಮದುವೆಯಾಗಲು ನಿರಾಕರಿಸಿದ ಕಾರಣ ಅವರು ಅನಾಥಾಶ್ರಮಗಳ, ಬೇರೆ ಭಾಗಗಳ ಹೆಣ್ಣುಮಕ್ಕಳನ್ನು ವಧು ದಕ್ಷಿಣೆ ಕೊಟ್ಟು ಮದುವೆಯ ಖರ್ಚನ್ನೆಲ್ಲ ಭರಿಸಿ ವಿವಾಹವಾಗುತ್ತಿರುವುದು ಕಳೆದೊಂದು ದಶಕದಲ್ಲಿ ಮಾಮೂಲಾಗಿದೆ.

ಸದ್ಯ ಚೀನಾದ ಸರ್ಕಾರ, ವಧು ದಕ್ಷಿಣೆ(Bride price) ವಿಚಾರದಲ್ಲಿ ಹೆಣ್ಣುಮಕ್ಕಳು ಅವರ ಮನೆಯವರು ಮನಸ್ಸು ಬದಲಾಯಿಸಲಿ ಅಂತ ಒತ್ತಡ ಹೇರುತ್ತಿದೆ. ಮುಂದೆ ಇದೆಲ್ಲ ಸರಿಹೋಗಬಹುದಾ ಅಂತ ಕಾದು ನೋಡಬೇಕು.

ಗಂಡಸರು ಹಿಂಗ್ ಕಿರಿ ಕಿರಿ ಮಾಡಿದ್ರೆ, ನಿಮ್ಮ ಶ್ರೇಯಸ್ಸು ಸಹಿಸಿಕೊಳ್ತಿಲ್ಲ ಎಂದರ್ಥ!

click me!