ಗಂಡ-ಹೆಂಡತಿಯ ಸಂಬಂಧದಲ್ಲಿ ಪೊಸೆಸಿವ್‌ನೆಸ್ ಇರೋದು ಸಾಮಾನ್ಯ. ಪತಿ ನನ್ನನ್ನೇ ಹೊಗಳಬೇಕು, ನನ್ನ ಜೊತೆಯೇ ಸಮಯ ಕಳೆಯಬೇಕು ಅಂತ ಬಹುತೇಕ ಪತ್ನಿಯರು ಅಂದ್ಕೊಳ್ತಾರೆ. ಆದ್ರೆ ಇಲ್ಲೊಬ್ಬ ಹೆಂಡ್ತಿ ಮಾತ್ರ ಇದಕ್ಕೆ ಅಪವಾದ ಎಂಬಂತಿದ್ದಾಳೆ. ಗಂಡ ಬೇರೆ ಮಹಿಳೆ ಜೊತೆ ಮಲಗಿದ್ರೂ ನನ್ಗೇನು ಪ್ಲಾಬ್ಲಂ ಇಲ್ಲ ಅಂತಿದ್ದಾಳೆ.
ದಾಂಪತ್ಯ ಅನ್ನೋದು ಸುಂದರವಾದ ಸಂಬಂಧ. ಕಷ್ಟನೋ ಸುಖಾನೋ ಪತಿ-ಪತ್ನಿ ನಿನಗೆ ನಾನು, ನನಗೆ ನೀನು ಎಂದು ಅನ್ಯೋನ್ಯವಾಗಿ ಜೀವನ ನಡೆಸುತ್ತಾರೆ. ಇಬ್ಬರು ನಡುವೆ ಸುಮಧುರ ಸಾಂಗತ್ಯವಿರುತ್ತದೆ. ಹೀಗಾಗಿಯೇ ಸಹಜವಾಗಿಯೇ ಪೊಸೆಸಿವ್‌ನೆಸ್ ಕೂಡಾ ಇರುತ್ತದೆ. ಹೆಂಡ್ತಿ ನನ್ನನ್ನೇ ಪ್ರೀತಿಸಬೇಕು, ಹೆಚ್ಚು ಸಮಯ ಕಳೆಯಬೇಕು ಎಂದು ಪತಿ ಅಂದುಕೊಳ್ಳುತ್ತಾನೆ. ಪತಿ ನನ್ನನ್ನೇ ಹೊಗಳಬೇಕು, ನನ್ನ ಜೊತೆಯೇ ಸಮಯ ಕಳೆಯಬೇಕು ಅಂತ ಬಹುತೇಕ ಪತ್ನಿಯರು ಅಂದ್ಕೊಳ್ತಾರೆ. ಆದ್ರೆ ಇಲ್ಲೊಬ್ಬ ಹೆಂಡ್ತಿ ಮಾತ್ರ ಇದಕ್ಕೆ ಅಪವಾದ ಎಂಬಂತಿದ್ದಾಳೆ. ಗಂಡ ಬೇರೆ ಮಹಿಳೆ ಜೊತೆ ಮಲಗಿದ್ರೂ ನನ್ಗೇನು ಪ್ಲಾಬ್ಲಂ ಇಲ್ಲ ಅಂತಿದ್ದಾಳೆ.
ಗಂಡ ಖುಷಿಯಾಗಿರ್ಲಿ ಅಂತ ಮತ್ತೊಬ್ಬಳ ಜೊತೆ ಮಲಗೋಕೆ ಕಳಿಸ್ತಾಳೆ!
ಮೋನಿಕಾ ಹಲ್ಟ್ ಎಂಬ ಅಮೇರಿಕನ್ ಮಹಿಳೆ (Women) ಹೀಗೆ ತನ್ನ ಗಂಡ ಯಾರ ಜೊತೆ ಸುತ್ತಾಡಿದ್ರೂ, ಮಲಗಿದ್ರೂ ನನಗೇನು ಸಮಸ್ಯೆಯಾಗಲ್ಲ ಅಂತ ಹೇಳುತ್ತಾಳೆ. ತನ್ನ ಪುರುಷನ ಅಗತ್ಯತೆಗಳು ಏನೇ ಇರಲಿ ಅವನನ್ನು ಸಂತೋಷಪಡಿಸುವುದು ತನ್ನ ಕರ್ತವ್ಯ ಎಂದು ಮಹಿಳೆ ನಂಬುತ್ತಾಳೆ. ನ್ಯೂಯಾರ್ಕ್ ಪೋಸ್ಟ್ ಜೊತೆ ಮಾತನಾಡಿದ ಮೋನಿಕಾ, ಪತಿ (Husband) ಜಾನ್ ಅನ್ನು ಸಂತೋಷಪಡಿಸುವುದು ಹೆಂಡತಿಯಾಗಿ (Wife) ತನ್ನ ಪ್ರಾಥಮಿಕ ಗುರಿಯಾಗಿದೆ. ತನ್ನ ಪತಿಗೆ ಇತರ ಮಹಿಳೆಯರೊಂದಿಗೆ ಮಲಗಲು ಅವಕಾಶ ನೀಡುವುದು ಅವರ ಸಂಬಂಧಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಹೆಣ್ಣಿಗೂ ಅರ್ಥವಾಗೋಲ್ಲ ಗಂಡಸರ ಈ ವರ್ತನೆ, ಯಾಕ್ಹಿಂಗ್ ಆಡ್ತಾರೋ?
ಮೋನಿಕಾ ಹಲ್ಟ್, ಅಡುಗೆ ಮನೆ (Kitchen), ಸ್ವಚ್ಛಗೊಳಿಸುವ ಮತ್ತು ಮನೆಕೆಲಸಗಳನ್ನು ನೋಡಿಕೊಳ್ಳುವಾಗ, ತನ್ನ ಪತಿಯನ್ನು ಇತರ ಮಹಿಳೆಯರೊಂದಿಗೆ ಸಮಯ ಕಳೆಯಲು ಕಳುಹಿಸುತ್ತಾಳೆ. ತನ್ನ ಪತಿಗೆ ಕೆಲಸದ ನಡುವೆ ಬಿಡುವಿನ ವೇಳೆಯನ್ನು ಹುಡುಕುವುದು ಕಷ್ಟಕರವಾದ ಕಾರಣ ತಾನು ಇದನ್ನು ಮಾಡಲು ಪ್ರಾರಂಭಿಸಿದೆ ಎಂದು ಗೃಹಿಣಿ ಹೇಳಿಕೊಂಡಿದ್ದಾಳೆ. ಹಲ್ಟ್ ಮನೆಯಲ್ಲಿ ಎಲ್ಲಾ ಕೆಲಸಗಳನ್ನು ಮುಗಿಸಿದ ನಂತರ ಮಾತ್ರ ಜಾನ್ ಮನೆಗೆ ಹಿಂದಿರುಗುತ್ತಾನೆ.
ಮನೆಗೆಲಸದ ಸಮಯದಲ್ಲಿ ಇತರ ಮಹಿಳೆಯ ಜೊತೆ ಸಮಯ ಕಳೆಯಲು ಅವಕಾಶ
ಇದಲ್ಲದೆ ತಾನು ಮನೆಯಲ್ಲಿ ಏನು ಧರಿಸಬೇಕು ಎಂಬುದನ್ನು ಪತಿ ನಿರ್ಧರಿಸುತ್ತಾರೆ. ಈ ಬಗ್ಗೆ ನನಗೆ ಖುಷಿಯಿದೆ. ಜಾನ್ ನಾನು ಮನೆಯಲ್ಲಿ ಚೆನ್ನಾಗಿ ಉಡುಗೆ ಮಾಡಲು ಇಷ್ಟಪಡುತ್ತಾನೆ. ಮತ್ತು ನಾನು ಮನೆಯಲ್ಲಿದ್ದಾಗ ಮೇಕಪ್ ಧರಿಸುವುದನ್ನು ಅವನು ಇಷ್ಟಪಡುವುದಿಲ್ಲ. ಗಂಡಂದಿರು ಕೆಲವು ಮಹಿಳೆಯರು ಏನು ಮಾಡಬೇಕೆಂದು ಅಥವಾ ಧರಿಸಬೇಕೆಂದು ಹೇಳುತ್ತಾರೆ. ಹೀಗಾಗಿ ಅವನು ಸೂಚನೆಗಳನ್ನು ಕೊಟ್ಟಾಗ ನನಗೆ ಖುಷಿಯಾಗುತ್ತದೆ ಎಂದು ಮಹಿಳೆ ಹೇಳಿದ್ದಾರೆ. ಅವನು ಬೇರೆ ಮಹಿಳೆಯೊಂದಿಗೆ ಸಮಯ ಕಳೆದು ಖುಷಿ ಖುಷಿಯಾಗಿ ಮನೆಗೆ ಮರಳುತ್ತಾನೆ. ಇದು ನನ್ನಲ್ಲಿ ಸಹ ಖುಷಿ ಮೂಡಿಸುತ್ತದೆ ಎಂದು ಮಹಿಳೆ ಮೋನಿಕಾ ಹಲ್ಟ್ ಹೇಳಿದ್ದಾರೆ.
ಇಬ್ಬರು ಹೆಂಡಿರ ಮುದ್ದಿನ ಗಂಡ: ಇಬ್ಬರ ಜೊತೆಗೂ ವಾರದಲ್ಲಿ 3 ದಿನ ಕಳೆಯಲು ಆದೇಶಿಸಿದ ಕೋರ್ಟ್..!
ತಂಗಿಯನ್ನೇ ಮದ್ವೆಯಾಗಿ ಸಂಸಾರ ನಡೆಸಿದ್ದ
ವ್ಯಕ್ತಿಯೊಬ್ಬ ತನ್ನ ತಂಗಿಯನ್ನೇ ಮದ್ವೆಯಾಗಿ ಸಂಸಾರ ಮಾಡಿದ್ದಾನೆ. ಮದ್ವೆಯಾಗಿ ಆರು ವರ್ಷದ ನಂತ್ರ ಸತ್ಯಾಂಶ ತಿಳಿದಿದೆ. ತಾನು ಮದುವೆಯಾಗಿರುವ ಹುಡುಗಿಯೇ ತನ್ನ ತಂಗಿಯೆಂಬ ಆಘಾತಕಾರಿ ವಿಚಾರ ಬಯಲಾಗಿದೆ. ಚಿಕ್ಕಂದಿನಲ್ಲೇ ಇಬ್ಬರೂ ಬೇರೆ ಬೇರೆಯಾಗಿದ್ದ ಕಾರಣ ತಾವಿಬ್ಬರೂ ಅಣ್ಣ-ತಂಗಿ ಎಂಬುದು ಇಬ್ಬರಿಗೂ ಗೊತ್ತಿರಲ್ಲಿಲ್ಲ. ಹುಟ್ಟಿದ ಕೆಲವೇ ನಿಮಿಷಗಳಲ್ಲಿ ಗಂಡು ಮಗುವನ್ನು ದತ್ತು ತೆಗೆದುಕೊಳ್ಳಲಾಯಿತು. ದತ್ತು ಸ್ವೀಕಾರದ ವಿಚಾರಗಳನ್ನು ಎಲ್ಲಿಯೂ ಬಹಿರಂಗಪಡಿಸಬಾರದು ಎಂಬ ನಿಯಮವಿರುವ ಕಾರಣ ಹುಡುಗನಿಗೆ (Boy) ತನ್ನ ಪೋಷಕರ (Parents) ಬಗ್ಗೆ ಯಾವುದೇ ಮಾಹಿತಿ ಇರಲ್ಲಿಲ್ಲ.
ಅದೆಷ್ಟೋ ವರ್ಷಗಳ ನಂತರ ವ್ಯಕ್ತಿ ಹುಡುಗಿಯೊಬ್ಬಳನ್ನು ಮದುವೆಯಾದ (Marriage). ಜೊತೆಯಾಗಿ ಆರು ವರ್ಷ ಸಂಸಾರವೂ ನಡೆಸಿದ. ಇತ್ತೀಚಿಗೆ ತನ್ನ ಕಿಡ್ನಿಯನ್ನು ಪತ್ನಿಗೆ ದಾನ ಮಾಡಬಹುದೇ ಎಂದು ಕೆಲವು ಪರೀಕ್ಷೆಗಳಿಗೆ ಒಳಪಡಿಸಿದಾಗ ಇಬ್ಬರೂ ಒಂದೇ ತಾಯಿಯ ಮಕ್ಕಳೆಂಬುದು ಪತ್ತೆಯಾಯಿತು. ಆರು ವರ್ಷದಿಂದ ಜೊತೆಯಾಗಿ ಸಂಸಾರ ಮಾಡುತ್ತಿದ್ದ ಹೆಂಡತಿ ಮತ್ತು ತನ್ನ ಮಕ್ಕಳ ತಾಯಿ, ನಿಜವಾಗಿಯೂ ತನ್ನ ಸಹೋದರಿ ಎಂದು ತಿಳಿದಾಗ ವ್ಯಕ್ತಿ ಆಘಾತಕ್ಕೊಳಗಾದ.