ಮನೆಯಲ್ಲಿ ಕುಳಿತು ಕಚೇರಿ ಕೆಲಸವನ್ನು ಆರಾಮವಾಗಿ ಮಾಡುವ ಅವಕಾಶ ಈಗಿದೆ. ಆದ್ರೆ ಕೊರೊನಾ ಸಂದರ್ಭದಲ್ಲಿ ಈ ಕೆಲಸ ಮಾಡಿ ಸುಸ್ತಾಗಿರುವ ಜನರ ಆಯ್ಕೆ ಈಗ ಬದಲಾಗಿದೆ. ಅವರು ಕಚೇರಿಗೆ ಬರುವ ಜೊತೆಗೆ ಹೊಸ ಹೊಸ ವಿಧಾನಗಳನ್ನು ಕಚೇರಿಯಲ್ಲಿ ಅಳವಡಿಸಿಕೊಳ್ತಿದ್ದಾರೆ.
ಕೊರೊನಾ ನಂತ್ರ ಕೆಲಸ ಮಾಡುವ ಶೈಲಿ ಬದಲಾಗಿದೆ. ಕೊರೊನಾಗಿಂತ ಮೊದಲು ಮನೆಯಿಂದ ಕೆಲಸ ಮಾಡೋದು ಅಂದ್ರೆ ಏನು ಎಂಬುದೇ ಅನೇಕರಿಗೆ ತಿಳಿದಿರಲಿಲ್ಲ. ಆದ್ರೆ ಕೊರೊನಾ ವರ್ಕ್ ಫ್ರಮ್ ಹೋಮ್ ಗೆ ಜನರು ಅನಿವಾರ್ಯವಾಗಿ ಒಗ್ಗಿಕೊಳ್ಳುವಂತೆ ಮಾಡಿತ್ತು. ಕೊರೊನಾ ಸೋಂಕಿತರ ಸಂಖ್ಯೆ ನಿಧಾನವಾಗಿ ಕಡಿಮೆಯಾಗ್ತಿದ್ದಂತೆ ಕಚೇರಿಗಳ ಬಾಗಿಲು ಮತ್ತೆ ತೆರೆಯಲು ಶುರುವಾಯ್ತು. ಕೆಲ ಸಂಸ್ಥೆಗಳು ಖಾಯಂ ವರ್ಕ್ ಫ್ರಂ ಹೋಮ್ ನೀಡಿದ್ದರೂ ಬಹುತೇಕ ಕಚೇರಿಗಳು ಬಾಗಿಲು ತೆರೆದಿವೆ.
ಮತ್ತೆ ಕಚೇರಿ (Office) ಗೆ ಬರಬೇಕೆಂಬ ಕಂಪನಿ ಆಜ್ಞೆಯನ್ನು ಉದ್ಯೋಗಿ (Employee) ಗಳು ಖುಷಿಯಾಗಿ ಒಪ್ಪಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕಚೇರಿಗೆ ಹೋಗಲು ಹಿಂದೇಟು ಹಾಕುತ್ತಿದ್ದ ಜನರು ಈಗ ಕಚೇರಿಗೆ ಹೋಗುವುದನ್ನು ಆನಂದಿಸಲು ಪ್ರಾರಂಭಿಸಿದ್ದಾರೆ.
undefined
ಓಬೀರಾಯನ ಕಾಲದ ಪೇರೆಂಟಿಂಗ್ ಸ್ಟೈಲ್ ಬಿಟ್ಬಿಡಿ, ಇಲ್ಲಿದೆ Modern Parenting ಟಿಪ್ಸ್
ಲಿಂಕ್ಡ್ ಇನ್‌ನ (LinkedIn) ಸಮೀಕ್ಷೆಯಲ್ಲಿ ಆಸಕ್ತಿಕರ ವಿಷ್ಯ ಬಹಿರಂಗವಾಗಿದೆ. ಲಿಂಕ್ಡ್ ಇನ್ ನಡೆಸಿದ ಸಮೀಕ್ಷೆ ಪ್ರಕಾರ, ಶೇಕಡಾ 78 ರಷ್ಟು ಅಂದರೆ 10 ಭಾರತೀಯರಲ್ಲಿ ಸುಮಾರು 8 ಜನರು ಕಚೇರಿಗೆ ಬಂದು ಕೆಲಸ ಮಾಡೋದನ್ನು ಇಷ್ಟಪಡುತ್ತಿದ್ದಾರೆ. ತಮ್ಮ ಸಹೋದ್ಯೋಗಿಗಳೊಂದಿಗೆ ಬೆರೆಯಲು ಮತ್ತು ಸಂಪರ್ಕ ಸಾಧಿಸಲು ಕಚೇರಿಗೆ ಬರ್ತಿದ್ದೇವೆ ಎಂದು ಬಹುರಂಗಪಡಿಸಿದ್ದಾರೆ. ಕಚೇರಿಯಿಂದ ದೂರವಿದ್ದು ಕೆಲಸ ಮಾಡಿದ್ರೂ ನಮ್ಮ ವೃತ್ತಿಜೀವನದ ಮೇಲೆ ಯಾವುದೇ ಹಾನಿಕಾರಕ ಪರಿಣಾಮ ಬೀರಿಲ್ಲ ಎಂದು ಶೇಕಡಾ 63 ರಷ್ಟು ಉದ್ಯೋಗಿಗಳು ಹೇಳಿದ್ದಾರೆ. ಆದ್ರೆ ಉಳಿದ ಜನರು, ಕಚೇರಿಯಿಂದ ದೂರ ಉಳಿದ್ರೆ ಅದು ನಮ್ಮ ವೃತ್ತಿ ಬೆಳವಣಿಗೆಯ ಸಾಮರ್ಥ್ಯವನ್ನು ಕಡಿಮೆಯಾಗಬಹುದು ಎಂದಿದ್ದಾರೆ. ಲಿಂಕ್ಡ್ ಇನ್ ಫೆಬ್ರವರಿ 28 ಮತ್ತು ಮಾರ್ಚ್ 6, 2023ರ ನಡುವೆ ಈ ಸಮೀಕ್ಷೆ ನಡೆಸಿದೆ. ಭಾರತದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ 1,001 ಕ್ಕೂ ಹೆಚ್ಚು ಉದ್ಯೋಗಿಗಳೊಂದಿಗೆ ಸಮೀಕ್ಷೆ ನಡೆಸಲಾಗಿದೆ. ವರದಿಯ ಪ್ರಕಾರ, ಹಿಂದೆ ಜನರು ಕಚೇರಿಗೆ ಬರಬೇಕೆಂದು ಕಂಪನಿ ಒತ್ತಡ ಹೇರ್ಬೇಕಿತ್ತು. ಆದ್ರೆ ಈಗ ಸಂದರ್ಶನಕ್ಕೆ ಬರುವ ಶೇಕಡಾ 78ರಷ್ಟು ಮಂದಿ ತಾವೇ ಕಚೇರಿಗೆ ಬರೋದಾಗಿ ಹೇಳ್ತಿದ್ದಾರೆ. ಟೀಂನ ಭಾಗವಾಗಿರಲು ಹಾಗೂ ಎಲ್ಲರ ಜೊತೆ ಬೆರೆಯುವ ಉದ್ದೇಶದಿಂದ ಉದ್ಯೋಗಿಗಳು ಕಚೇರಿಗೆ ಬರಲು ಬಯಸ್ತಾರೆ. ಟೀ ವಿರಾಮದ ಬಾಂಧ್ಯವನ್ನು ನಾವು ವರ್ಕ್ ಫ್ರಂ ಹೋಮ್ ನಲ್ಲಿ ಕಳೆದುಕೊಳ್ತೇವೆ ಎಂದು ಶೇಕಡಾ 72ರಷ್ಟು ಮಂದಿ ಹೇಳಿದ್ದಾರೆ. ಟೀ ಬ್ರೇಕ್ ನಲ್ಲಿ ಸಹೋದ್ಯೋಗಿಗಳು ವೃತ್ತಿ ಹಾಗೂ ಖಾಸಗಿ ಜೀವನದ ಬಗ್ಗೆ ಮಾತನಾಡುತ್ತಾರೆ.
ಡೆಸ್ಕ್ ಬಾಂಬಿಂಗ್ ಹೊಸ ಟ್ರೆಂಡ್ : ಕೊರೊನಾ ನಂತ್ರ ಕಚೇರಿಗೆ ಬರುತ್ತಿರುವ ಉದ್ಯೋಗಿಗಳಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಜನರು ಡೆಸ್ಕ್ ಬಾಂಬಿಂಗ್ ಇಷ್ಟಪಡ್ತಿದ್ದಾರೆ. ಅಂದ್ರೆ ಸಹೋದ್ಯೋಗಿ ಡೆಸ್ಕ್ ಬಳಿ ಹೋಗಿ ಕಾಲ ಕಳೆಯುವುದು ಇದಾಗಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇಕಡಾ 62ರಷ್ಟು ಮಂದಿ ಇದನ್ನು ಒಪ್ಪಿಕೊಂಡಿದ್ದಾರೆ.
SOCIAL MEDIA INFLUENCERS :ಭಾರತದ ಕಂಪನಿಗಳಿಗೆ ಮೂನ್ ಲೈಟ್ ಬಳಿಕ ಹೊಸ ಸವಾಲು?
ಈ ದಿನ ಕಚೇರಿಗೆ ಹೋಗೋದು ಬೋರ್ : ಹಿಂದೆ ವಾರದ ಎಲ್ಲ ದಿನ ಜನರು ಕಚೇರಿಗೆ ಹೋಗ್ಬೇಕಿತ್ತು. ಶುಕ್ರವಾರ ಬಂತೆಂದ್ರೆ ಎಲ್ಲಿಲ್ಲದ ಖುಷಿ. ಶನಿವಾರ, ಭಾನುವಾರ ರಜೆ ಸಿಗುವ ಕಾರಣ, ಶುಕ್ರವಾರ ಕಚೇರಿ ವಾತಾವರಣ ಭಿನ್ನವಾಗಿರುತ್ತಿತ್ತು. ಆದ್ರೆ ಈಗ ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಆಯ್ಕೆ ನೀಡಿವೆ. ಈ ಆಯ್ಕೆ ನಂತ್ರ ಉದ್ಯೋಗಿಗಳ ಆಸಕ್ತಿ ಬದಲಾಗಿದೆ. ಶೇಕಡಾ 50ರಷ್ಟು ಉದ್ಯೋಗಿಗಳು ಶುಕ್ರವಾರ ಕಚೇರಿಗೆ ಬರಲು ಇಷ್ಟಪಡ್ತಿಲ್ಲ. ಗುರುವಾರವೇ ಈಗ ಶುಕ್ರವಾರವಾಗಿ ಬದಲಾಗ್ತಿದೆ. ಶುಕ್ರವಾರ ಕಚೇರಿಗೆ ಬರುವವರ ಸಂಖ್ಯೆ ಬಹಳ ಕಡಿಮೆ. ಜನರು, ಕುಟುಂಬಸ್ಥರು, ಸ್ನೇಹಿತರ ಜೊತೆ ಶುಕ್ರವಾರವನ್ನು ಎಂಜಾಯ್ ಮಾಡಲು ಬಯಸ್ತಿದ್ದಾರೆ. ಇಲ್ಲವೆ ತಮ್ಮ ಬೇರೆ ಕೆಲಸ ಮಾಡಲು ಮುಂದಾಗ್ತಾರೆ ಎಂದು ಸಮೀಕ್ಷೆಯಲ್ಲಿ ಹೇಳಲಾಗಿದೆ.