90ರ ಹುಡುಗ್ರಾ ಬೇಗ ಮದ್ವೆಯಾಗ್ರೋ... 'ಜೀವನಸಾಥಿ'ಯಿಂದ ಹೀಗೊಂದು ಟ್ರೋಲ್‌ ಅಭಿಯಾನ!

Published : Dec 07, 2024, 04:44 PM ISTUpdated : Dec 07, 2024, 06:20 PM IST
90ರ ಹುಡುಗ್ರಾ ಬೇಗ ಮದ್ವೆಯಾಗ್ರೋ... 'ಜೀವನಸಾಥಿ'ಯಿಂದ ಹೀಗೊಂದು ಟ್ರೋಲ್‌ ಅಭಿಯಾನ!

ಸಾರಾಂಶ

ವಯಸ್ಸು 30 ದಾಟಿದರೂ ಇನ್ನೂ ಮದುವೆಯ ಬಗ್ಗೆ ಯೋಚಿಸದವರು ಹಲವಾರು ಮಂದಿ ಇದ್ದಾರೆ. ಅವರಿಗೆ ಬೇಗ ಮದುವೆಯಾಗಿ ಎನ್ನುವ ಅಭಿಯಾನವನ್ನು ಜೀವನಸಾಥಿ ಶುರು ಮಾಡಿದೆ. ಇಲ್ಲಿದೆ ವಿಡಿಯೋ   

ಇಂದಿನ ಬಹುತೇಕ ಯುವಕ-ಯುವತಿಯರಿಗೆ ಮದುವೆ ಎಂದರೆ ಅಲರ್ಜಿ. ಅದರಲ್ಲಿಯೂ ಈಚೆಗೆ ನಡೆದಿರುವ ಸಮೀಕ್ಷೆ ಪ್ರಕಾರ 1990ರ ದಶಕದಲ್ಲಿ ಹುಟ್ಟಿರುವವರಿಗೆ ಕರಿಯರ್‍‌ ಮುಖ್ಯವಾಗಿದ್ದು, ಮದುವೆಯ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗ್ತಿಲ್ಲ. ಯಾಂತ್ರಿಕ ಜೀವನದಲ್ಲಿ ತಮ್ಮನ್ನು ತಮ್ಮಷ್ಟಕ್ಕೇ ಬಿಟ್ಟುಬಿಡಿ, ಮದುವೆಯೆನ್ನುವ ಗೋಳು ಯಾರಿಗೆ ಬೇಕು ಎನ್ನುವವರೇ ಹೆಚ್ಚು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ, ದಂಪತಿನಡುವಿನ ಮನಸ್ತಾಪ ಎಲ್ಲವನ್ನೂ ಕಾಣುತ್ತಿರುವ ಯುವಕ-ಯುವತಿಯರಿಗೆ ಮದುವೆಯ ಮೇಲೆ ಜುಗುಪ್ಸೆ ಬಂದಿದೆಯಂತೆ. ಹೀಗಂತೆ ಇದಾಗಲೇ ಹಲವಾರು ಮಂದಿ ಹೇಳಿದ್ದುಂಟು.  ಮದುವೆಯಾಗಬೇಕು ಅಂದುಕೊಳ್ಳುವ ಹೆಚ್ಚಿನ ಗಂಡುಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ ಎನ್ನುವ ಕೊರಗು ಇಂದಿನ ಬಹುತೇಕ ಯುವಕರನ್ನು ಕಾಡುತ್ತಿರುವುದು ನಿಜ. ಇಂದಿನ ಹೆಣ್ಣುಮಕ್ಕಳ ಬಯಕೆಗಳಿಗೆ ಗಂಡುಮಕ್ಕಳು ಸುಸ್ತಾಗುತ್ತಿದ್ದಾರೆ. ಅದೇ ಇನ್ನೊಂದೆಡೆ ಬಹುತೇಕ ಹೆಣ್ಣು ಮಕ್ಕಳಿಗೆ ಮದುವೆ ಎನ್ನುವುದು ದೊಡ್ಡ ಹೊರೆ ಎನ್ನಿಸುತ್ತಿದೆ. ತಮ್ಮ ಜೀವನದ ಜೊತೆ ಕಾಂಪ್ರಮೈಸ್‌ ಮಾಡಿಕೊಳ್ಳುವುದು ಹೆಣ್ಣುಮಕ್ಕಳಿಗೆ ಇಷ್ಟವಾಗುತ್ತಿಲ್ಲ. ಅದೇನೇ ಇದ್ದರೂ 90ರ ದಶಕದ ಅವಿವಾಹಿತರೇ ಬೇಗ ಮದ್ವೆಯಾಗ್ರೋ ಎನ್ನುವ ಅಭಿಯಾನವನ್ನು ಜೀವನಸಾಥಿ ಡಾಟ್‌ ಕಾಮ್‌ನಿಂದ ವಿಶೇಷ ರೀತಿಯಲ್ಲಿ ದೆಹಲಿಯಲ್ಲಿ  ಅಭಿಯಾನ ಶುರು ಮಾಡಲಾಗಿದೆ. ಇದರ ವಿಡಿಯೋ ವೈರಲ್‌ ಆಗುತ್ತಿದೆ. 

ಇದರಲ್ಲಿ ದೆಹಲಿಯ ಯುವಕರನ್ನು ಕೇಂದ್ರೀಕರಿಸಲಾಗಿದೆ. ಒಂದಿಷ್ಟು ಮಂದಿ ವಾದ್ಯಗೋಷ್ಠಿ ಮಾಡುವವರನ್ನು ಕರೆಸಿದ್ದು, 90ರ ಮಕ್ಕಳಾ ಇನ್ನಾದರೂ ಮದುವೆಯಾಗಿ, ನಿಮ್ಮ ಮದುವೆ ಮೆರವಣಿಗೆ ಹೊರಡುವುದು ಯಾವಾಗ ಎಂದು ಟ್ರೋಲ್‌ ಮಾಡಲಾಗುತ್ತಿದೆ. ಇದಕ್ಕೆ ಥಹರೇವಾರಿ ರೀತಿಯ ಕಮೆಂಟ್ಸ್‌ ಬಂದಿವೆ. ಅದರಲ್ಲಿ ಹೆಚ್ಚಿನವರು ಮದುವೆ ಆಗಬೇಕು, ಆದ್ರೆ ಹೆಣ್ಣೇ ಸಿಕ್ತಿಲ್ಲ ಎಂದು ಗೋಳು ತೋಡಿಕೊಳ್ಳುತ್ತಿದ್ದಾರೆ. ಮತ್ತೆ ಕೆಲವರು, ಈಗಿನ ಹೆಣ್ಣು ಮಕ್ಕಳಿಗೆ ಡಿಮಾಂಡ್‌ ಜಾಸ್ತಿ, ಅದನ್ನು ಪೂರೈಸೋದು ಕಷ್ಟ ಎನ್ನುತ್ತಿದ್ದರೆ, ಮತ್ತೆ ಕೆಲವರು, ಅಯ್ಯೋ ಅವಳು ಬಿಟ್ಟು ಹೋಗುವುದೂ ಸಾಕು- ನಮ್ಮ ಆಸ್ತಿಯನ್ನು ಅವಳಿಗೆ ಪರಿಹಾರದ ರೂಪದಲ್ಲಿ ಕೊಡುವುದೂ ಸಾಕು ಎಂದು ಕಮೆಂಟ್‌ ಮಾಡುತ್ತಿದ್ದಾರೆ. ಇದಕ್ಕೆ ಕೆಲವು ಹೆಣ್ಣುಮಕ್ಕಳೂ ಕಮೆಂಟ್‌ ಮಾಡಿದ್ದು, ಗಂಡಸರ ಸಹವಾಸ ಸಾಕು, ಒಂಟಿತನವೇ ಲೇಸು ಎನ್ನುತ್ತಿದ್ದಾರೆ.

ಎರಡು ಮಕ್ಕಳಾಗೋ ತನಕ ಸುಮ್ಮನಿದ್ದಿ ಯಾಕೆ? ಲೈವ್‌ನಲ್ಲಿ ಬೆವರಿಳಿಸಿದ ವೀಕ್ಷಕರಿಗೆ ತಾಂಡವ್‌ ಉತ್ತರ ಕೇಳಿ...

ಅಷ್ಟಕ್ಕೂ ಕೆಲ ತಿಂಗಳ ಹಿಂದೆ ಕೆಲವು ಮೂವತ್ತು ವರ್ಷ ದಾಟಿದ ಅವಿವಾಹಿತೆಯರನ್ನು ಮಾತನಾಡಿಸಿ, ಮದುವೆಯಾಗದೇ ಇರುವುದಕ್ಕೆ ಕಾರಣ ಕೇಳಲಾಗಿತ್ತು. ಅವರು ಕೊಟ್ಟ ಕಾರಣಗಳು ವೈರಲ್‌ ಆಗಿದ್ದವು. ಅದರಲ್ಲಿ ಒಬ್ಬಾಕೆ, ವೃತ್ತಿಜೀವನದ ಮೇಲೆ ಕೇಂದ್ರೀಕರಿಸುವುದು ನನ್ನ ಆದ್ಯತೆಯಾಗಿದೆ.  30ವರ್ಷವಾದರೂ  ಒಂಟಿಯಾಗಿರುವುದು  ಸವಾಲಿನ ಸಂಗತಿ. ಒಂದು ಕಡೆ, ನನ್ನ ವೃತ್ತಿಯ ಮೇಲೆ ಕೇಂದ್ರೀಕರಿಸಲು, ನನ್ನ ಉತ್ಸಾಹವನ್ನು ಮುಂದುವರಿಸಲು ಮತ್ತು ಯಾವುದೇ ಬದ್ಧತೆಗಳಿಲ್ಲದೆ ಪ್ರಯಾಣಿಸಲು ನನಗೆ ಸ್ವಾತಂತ್ರ್ಯವಿದೆ. ಆದರೆ ಮತ್ತೊಂದೆಡೆ, ಸಮಾಜ ಒತ್ತಡಗಳು ಮತ್ತು ನಿರೀಕ್ಷೆಗಳು ಅಗಾಧವಾಗಿರಬಹುದು.  ನಾನು ಯಾಕೆ ಮದುವೆಯಾಗಿಲ್ಲ ಅಥವಾ ಇನ್ನೂ ಮಕ್ಕಳನ್ನು ಹೊಂದಿಲ್ಲ ಎಂದು ನಿರಂತರವಾಗಿ ಜನರು ಕೇಳುತ್ತಿರುತ್ತಾರೆ.  ಇದನ್ನು ಕಿವಿಯ ಮೇಲೆ ಹಾಕಿಕೊಳ್ಳದೇ  ನನ್ನ ಸ್ವಾತಂತ್ರ್ಯವನ್ನು ಸ್ವೀಕರಿಸಲು ಮತ್ತು ನನ್ನದೇ ಆದ ಆದ್ಯತೆ ನೀಡಲು ಕಲಿತಿದ್ದು, ಇದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದರೆ, ಮತ್ತೊಬ್ಬಾಕೆ . ಏಕಾಂಗಿಯಾಗಿರುವುದು ನಾನು ಅಪೂರ್ಣಎಂದು ಅರ್ಥವಲ್ಲ; ಇದರರ್ಥ ನಾನು ಅನ್ವೇಷಿಸಲು ಮತ್ತು ಸ್ವೀಕರಿಸಲು ಸ್ವಾತಂತ್ರ್ಯವನ್ನು ಹೊಂದಿದ್ದೇನೆ ಎಂದರ್ಥ ಎಂದಿದ್ದಳು. 

ಸಂತೋಷವಾಗಿರಲು ಮತ್ತು ನನ್ನ ಅಗತ್ಯಗಳನ್ನು ಪೂರೈಸಲು ನನಗೆ ಸಂಗಾತಿಯ ಅಗತ್ಯವಿಲ್ಲ ಎಂಬ ಕಲ್ಪನೆಯನ್ನು ನಾನು ನನ್ನ 30ನೇ ವಯಸ್ಸಿನಲ್ಲಿ ಸ್ವೀಕರಿಸಿದ್ದೇನೆ ಎನ್ನುವ ಉತ್ತರ ಇನ್ನೊಬ್ಬಳಿಂದ ಬಂದಿತ್ತು. ಈ ವಯಸ್ಸಿನಲ್ಲಿ ನಾನು ಒಂಟಿಯಾಗುವ ಹಿನ್ನೆಲೆಯಲ್ಲಿ, ನನ್ನ ಸ್ವಂತ ಆಸೆಗಳು, ಕನಸುಗಳನ್ನು ಈಡೇರಿಸಿಕೊಳ್ಳಲು ಅವಕಾಶ ದೊರೆತಿದೆ.  ಸಮಾಜದ ನಿರೀಕ್ಷೆಗಳು ಕೆಲವೊಮ್ಮೆ ನನ್ನ ಆಯ್ಕೆಗಳನ್ನು ಪ್ರಶ್ನಿಸುವಂತೆ ಮಾಡುತ್ತದೆ, ಆದರೆ ನಾನು  ನನ್ನ ಪ್ರವೃತ್ತಿಯನ್ನು ನಂಬಿ ಸಾಗುತ್ತಿದ್ದೇನೆ.  ಒಂಟಿಯಾಗಿರುವುದು  ನನ್ನ ಜೀವನದ ಒಂದು ಅಧ್ಯಾಯವಾಗಿದ್ದು ಅದು ನನ್ನ ಸ್ವಂತ ಶಕ್ತಿಯನ್ನು ಕಂಡುಹಿಡಿಯಲು ನನಗೆ ಅವಕಾಶ ಮಾಡಿಕೊಟ್ಟಿದೆ ಎಂದು ಇನ್ನೋರ್ವ ಅವಿವಾಹಿತೆ ಹೇಳಿದ್ದಳು! 

ಅದೃಶ್ಯ ವ್ಯಕ್ತಿ ಜೊತೆ ಸೇಲ್ಸ್ ಗರ್ಲ್ ಮಾತುಕತೆ? ಅಂಗಡಿಯ ಸಿಸಿಟಿಯಲ್ಲಿ ಶಾಕಿಂಗ್‌ ಘಟನೆ ಸೆರೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು