Relationship Tips: ಮೊದಲ ಭೇಟಿಯ ನಾಚಿಕೆ ಬದಿಗಿಡಿ-ಮಾತುಕತೆಗೆ ಸಿದ್ಧತೆ ಮಾಡಿಕೊಳ್ಳಿ

By Suvarna News  |  First Published May 19, 2022, 7:20 PM IST

ಭವಿಷ್ಯದಲ್ಲಿ ಸಂಗಾತಿಯಾಗಬಹುದಾದ ವ್ಯಕ್ತಿಗಳನ್ನು ಮೊದಲ ಬಾರಿ ಭೇಟಿಯಾಗುವಾಗ ಒಂದು ರೀತಿಯ ನಾಚಿಕೆ, ಪುಳಕ ಇದ್ದಿದ್ದೇ. ಆದರೆ, ಅಂತಹ ಭಾವನೆಗಳನ್ನು ಬದಿಗಿಟ್ಟು ಅವರೊಂದಿಗೆ ಮುಕ್ತವಾಗಿ ಮಾತನಾಡಿ. ಅವರ ಭಾವನೆ, ನಿಲುವುಗಳನ್ನು ಅರಿತುಕೊಳ್ಳಲು ಯತ್ನಿಸಿ.
 


ಮ್ಯಾಟ್ರಿಮೊನಿ ವೆಬ್ ಸೈಟ್ (Matrimony Website) ನಲ್ಲಿ ಪರಿಚಯವಾದವರನ್ನು ಭೇಟಿ (Meet) ಮಾಡಬೇಕಾದ ಸಂದರ್ಭ ಏನೋ ಒಂದು ರೀತಿಯ ಹಿಂಜರಿಕೆ ಸಹಜ. ದೀರ್ಘಕಾಲದ ಸಂಬಂಧಕ್ಕೆ (Relationship) ಮುನ್ನುಡಿ ಬರೆಯಬೇಕಾದ ಸನ್ನಿವೇಶದಲ್ಲಿ ಮಾತನಾಡಲು ತಿಳಿಯದೇ ಹೋಗುವ ಸಾಧ್ಯತೆಗಳೇ ಹೆಚ್ಚು. ಆಗ ಕೇವಲ ಔಪಚಾರಿಕ ಮಾತುಕತೆಯಲ್ಲೇ ಮೊದಲ ಭೇಟಿ ಮುಗಿದು ಹೋಗುತ್ತದೆ.  ಹುಡುಗ-ಹುಡುಗಿಗೆ ಪರಸ್ಪರ ಇಷ್ಟಾನಿಷ್ಟಗಳನ್ನು ಅರಿತುಕೊಳ್ಳಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಹೀಗಾಗಿ, ಅರ್ಥಪೂರ್ಣ (Meaningful) ಮಾತುಕತೆಗೆ ನೀವು ಮುಂದಾಗಬೇಕು. ಅದಕ್ಕಾಗಿ ಒಂದಿಷ್ಟು ತಯಾರಿ ಮಾಡಿಕೊಳ್ಳಬೇಕು. 

ನೀವು ಭೇಟಿಯಾಗುವವರು ಇಂಟ್ರಾವರ್ಟ್ (Introvert) ಆಗಿದ್ದರೆ ಅವರಿಂದ ಮಾತುಗಳನ್ನು ಹೊರಡಿಸುವುದು ಕಷ್ಟ. ಆದರೂ ಅಂಥವರು ಅರ್ಥಪೂರ್ಣ ಮಾತುಕತೆಯನ್ನು ಇಷ್ಟಪಡುತ್ತಾರೆ. ಇನ್ನು, ಮಾತುಗಾರರಂತೂ ಕೇಳುವುದೇ ಬೇಡ, ನೀವು ಚೆನ್ನಾಗಿ ಮಾತನಾಡಲು ಶುರು ಮಾಡಿದರೆ ಅವರು ಮುಂದುವರಿಸಿಕೊಂಡು ಹೋಗುತ್ತಾರೆ. ಒಟ್ಟಿನಲ್ಲಿ ಮುಜುಗರವಿಲ್ಲದೆ, ಔಪಚಾರಿಕ ಮಾತುಕತೆಗೆ ಸೀಮಿತವಾಗದೆ ಆ ಭೇಟಿ ಫಲಪ್ರದವಾಗಬೇಕು. ಅದಕ್ಕಾಗಿ ಈ ಟಿಪ್ಸ್ ಅನುಸರಿಸಿ.

Tap to resize

Latest Videos

•    ಎದುರು ಪಾರ್ಟಿಯ ಯೋಚನೆ (Thoughts), ನಂಬಿಕೆ ಅರಿತುಕೊಳ್ಳಲು ಯತ್ನಿಸಿ
ನಿಮ್ಮ ಉದ್ದೇಶವೂ ಇದೇ ಆಗಿರುತ್ತದೆ, ಭೇಟಿಯಾಗುವವರ ಭಾವನೆಗಳನ್ನು (Feelings) ಅರಿತುಕೊಳ್ಳಲು ಯತ್ನಿಸಬೇಕು ಎಂದೇ ಇರುತ್ತದೆ. ಅಂತಹ ಸನ್ನಿವೇಶದಲ್ಲಿ ಸುಖಾಸುಮ್ಮನೆ “ಕೆಲಸ ಮಾಡುವುದು ಎಲ್ಲಿ, ಕಚೇರಿಗೆ ಹೇಗೆ ಹೋಗ್ತೀರಿ’ ಇತ್ಯಾದಿ ಮಾತಿನಲ್ಲೇ ಸಮಯ ಕಳೆಯುವುದು ವೇಸ್ಟ್. ಇಂಥವೂ ಬೇಕು. ಆದರೆ, ಈ ಮಾತುಗಳೆಲ್ಲ ಮುಗಿದ ಬಳಿಕ ತುಂಬ ಕ್ಯಾಶುವಲ್ ಆಗಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಮಾತನಾಡಲು ಆರಂಭಿಸಬಹುದು. ಅವರ ಮಾತಿಗೆ ನಿಮ್ಮ ಅಭಿಪ್ರಾಯಗಳನ್ನು ತುಂಬ ಬಲವಾಗಿ ಹೇಳಲು ತೊಡಗಬೇಡಿ. ಇಂತಹ ಮಾತುಕತೆಯಿಂದ ಅವರು ಯಾವುದನ್ನು ನಂಬುತ್ತಾರೆ, ಸಾಮಾನ್ಯ ಜನಜೀವನದ ಬಗ್ಗೆ, ಮಹಿಳೆಯರ ಬಗ್ಗೆ ಅವರ ನಿಲುವೇನು ಎನ್ನುವುದನ್ನು ಅರಿತುಕೊಳ್ಳಬಹುದು. ಇದಕ್ಕಾಗಿ ನೀವೂ ಒಂದಿಷ್ಟು ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. 

•    ಮಾತುಗಳನ್ನು ಹೊರತೆಗೆಯುವಂತಹ ಪ್ರಶ್ನೆ (Question) ಸಿದ್ಧ ಮಾಡಿಕೊಳ್ಳಿ
ಕೆಲವು ಪ್ರಶ್ನೆಗಳಿಗೆ ಉತ್ತರ ಚುಟುಕಾಗಿ ಇರುತ್ತದೆ. ಆದರೆ, ಕೆಲವು ಪ್ರಶ್ನೆಗಳಿಗೆ ದೀರ್ಘ ಉತ್ತರ ನೀಡಬೇಕಾಗುತ್ತದೆ. ಇಂಥವುಗಳನ್ನೇ ಅವರ ಬಳಿ ಕೇಳಿ. ಕೆಲಸವನ್ನು ಇಷ್ಟಪಡುತ್ತೀರಾ, ಯಾಕೆ ಇಷ್ಟಪಡುತ್ತೀರಿ, ನಿಮಗೆ ಮುಖ್ಯವಾಗಿರುವ ವ್ಯಕ್ತಿ ಯಾರು, ಯಾಕಾಗಿ? ಎಂಬಲ್ಲಿಂದ ಹಿಡಿದು, ಬಾಲ್ಯಕಾಲದ (Chilhood) ಅನುಭವಗಳ ಬಗ್ಗೆ ಕೇಳಬಹುದು. ಸಂದರ್ಶನದ ಮಾದರಿಯಲ್ಲಿ ಕೇಳಬೇಡಿ, ಮಾತುಕತೆ (Conversation) ಸಹಜವಾಗಿರಲಿ. ಇದರಿಂದ ಅವರನ್ನು ಆಳವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ. 

ಇದನ್ನೂ ಓದಿ: Sex ವೇಳೆ ಯೋನಿಯಲ್ಲಿ ಶುಷ್ಕತೆ, ಸೈಡ್‌ ಎಫೆಕ್ಟ್ ಇಲ್ಲದೇ ನಿವಾರಿಸೋದು ಹೇಗೆ?

•    ಪ್ರಾಮಾಣಿಕವಾಗಿ (Honest) ಮಾತನಾಡಿ
ಆರೋಗ್ಯಪೂರ್ಣ ಮಾತುಕತೆ ಬಲವಂತದಿಂದ ಬರುವುದಿಲ್ಲ. ನೀವು ಅದರಲ್ಲಿ ಪ್ರಾಮಾಣಿಕವಾಗಿ ಒಳಗೊಳ್ಳಬೇಕು. ಸುಳ್ಳೇ ಸುಳ್ಳು ಹವ್ಯಾಸಗಳ ಬಗ್ಗೆ ಹೇಳುವುದು, ಸ್ನೇಹಿತರು, ಕೆಲಸ ಇತ್ಯಾದಿ ಬಗ್ಗೆ ಯಾವುದೇ ತಪ್ಪು ಮಾಹಿತಿ ನೀಡಬೇಡಿ. ದೀರ್ಘಕಾಲದ ಸಂಬಂಧಕ್ಕೆ ಸೋಗು, ಸುಳ್ಳು ಬುನಾದಿಯಲ್ಲ. 

•    ಒಂದು ಶಬ್ದದ (Single Word) ಉತ್ತರವನ್ನು ನೀವೂ ನೀಡಬೇಡಿ:
ಅವರಿಂದ ಹೇಗೆ ಕೆಲವು ಮಾಹಿತಿಯನ್ನು ನೀವು ಬಯಸುತ್ತೀರೋ ಹಾಗೆಯೇ ಅವರೂ ನಿಮ್ಮಿಂದ ಮಾಹಿತಿ ಬಯಸುತ್ತಾರೆ ಎನ್ನುವುದು ನೆನಪಿನಲ್ಲಿರಲಿ. ನೀವು ಮಾತುಕತೆಯನ್ನು ಇಷ್ಟಪಡುತ್ತೀರೋ ಇಲ್ಲವೋ, ಹೆಚ್ಚು ಮಾತನಾಡಲು ಇಷ್ಟಪಡದವರಾಗಿದ್ದರೆ ಅದನ್ನು ಮೊದಲೇ ಸ್ಪಷ್ಟಪಡಿಸಿ ಬಿಡಿ. ಆದರೆ, ಕೆಲವು ಪ್ರಶ್ನೆಗಳಿಗೆ ಒಂದು ಶಬ್ದದ ಉತ್ತರ ಹೇಳಿ ಸುಮ್ಮನಿರಬೇಡಿ. ವಿಸ್ತಾರವಾದ ಮಾತುಕತೆ ಇರಲಿ. ಹಾಗೆಂದು ನಿಮ್ಮ ಬಗ್ಗೆಯೇ ಕೊರೆಯಬೇಡಿ.

ಇದನ್ನೂ ಓದಿ: ರೋಮ್ಯಾಂಟಿಕ್ ಸಂಗಾತಿ ಬೇಕಿದ್ರೆ ಈ ರಾಶಿಗಳು ಬೆಸ್ಟ್

•    ಸಕಾರಾತ್ಮಕ (Positive) ವಿಷಯ ಮಾತ್ರ ಹಂಚಿಕೊಳ್ಳಿ
ಮಾತುಕತೆ ಸಕಾರಾತ್ಮಕವಾಗಿರಲಿ. ಅವರ ಜತೆಗಿನ ಮಾತುಕತೆ ಸಂತಸ ಮೂಡಿಸಿದೆ ಎನ್ನುವುದು ನಿಮ್ಮ ಹಾವಭಾವದಲ್ಲೇ ತಿಳಿಯುವಂತೆ ಇರಲಿ. ಆದರೆ, ಅದು ಅತಿಯಾಗುವುದು ಬೇಡ. ವರ್ತನೆಯಲ್ಲಿ ಪ್ರಾಮಾಣಿಕತೆ ಇದ್ದರೆ ಇದೆಲ್ಲವೂ ಸಹಜವಾಗಿ ಆಗಿಬಿಡುತ್ತದೆ. ಮಾತನಾಡುವ ಭರದಲ್ಲಿ ಹಿಂದೊಮ್ಮೆ ಹೀಗೆಯೇ ಯಾರನ್ನೋ ಭೇಟಿಯಾದಾಗಿನ ಸಂದರ್ಭಗಳನ್ನು ಉಲ್ಲೇಖಿಸಬೇಡಿ. ಅದರಿಂದ ಸೂಕ್ಷ್ಮ ಮನಸ್ಸಿನವರಿಗೆ ಮುಜುಗರವಾಗುತ್ತದೆ. 

click me!