
ಕೌಟುಂಬಿಕ ಪರಿಸರದ (Famil;y Environment) ಆಧಾರದ ಮೇಲೆ ವ್ಯಕ್ತಿಯ ಮಾನಸಿಕತೆ, ಆತನ ಅಭ್ಯಾಸ, ದೈನಂದಿನ ಜೀವನ (Life) ಸಾಮಾನ್ಯವಾಗಿ ರೂಪುಗೊಳ್ಳುತ್ತದೆ. ಬಹಳಷ್ಟು ಭಾರತೀಯರು ಸಂಪ್ರದಾಯವಾದಿಗಳು. ಅವರ ಜೀವನ ದೃಷ್ಟಿಕೋನ ಆಧುನಿಕ ಮನಸ್ಸಿಗಿಂತ ಭಿನ್ನವಾಗಿರುತ್ತದೆ. ನಮ್ಮ ಸಮಾಜ ಮದುವೆಗೆ ಮುಂಚಿನ ಲೈಂಗಿಕತೆಯನ್ನು (Sex Before Marriage) ಒಪ್ಪಿಕೊಳ್ಳುವುದಿಲ್ಲ. ಹಾಗಿದ್ದರೆ ಭಾರತೀಯ ಪುರುಷರು ಮತ್ತು ಮಹಿಳೆಯರು ವಿವಾಹಕ್ಕೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಿಲ್ಲವೇ? ಇದಕ್ಕೆ ಉತ್ತರ ಬಲುಕಷ್ಟ. ಸಾಮಾಜಿಕ ಮುಜುಗರದಿಂದ ಯಾರೂ ಬಹಿರಂಗವಾಗಿ ಒಪ್ಪಿಕೊಳ್ಳುವುದಿಲ್ಲ. ಈ ನಿಟ್ಟಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷಾ ವರದಿ (National Family Health Survey Report) ಕುತೂಹಲಕರ ಅಂಶವೊಂದನ್ನು ಹೊರಗೆಡವಿದೆ.
ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಪುರುಷರ ವಿವಾಹದ ವಯಸ್ಸು 25 ವರ್ಷ ಮೇಲ್ಪಟ್ಟು. ಹಲವು ಸಮುದಾಯಗಳಲ್ಲಿ ಇದರಲ್ಲಿ ಭಿನ್ನತೆ ಇರಬಹುದಾದರೂ ಸುಶಿಕ್ಷಿತ ಸಮುದಾಯಗಳಲ್ಲಿ ಸಾಮಾನ್ಯವಾಗಿ 25ಕ್ಕೂ ಮುನ್ನ ಮದುವೆಯಾಗುವುದು ಕಡಿಮೆ. ಹಾಗೆಯೇ ಯುವತಿಯರಿಗೆ 22ರ ಮೇಲ್ಪಟ್ಟು ಮದುವೆಯಾಗುತ್ತದೆ. ಆದರೆ, ಯೌವನವೆನ್ನುವುದು ಅದಕ್ಕೂ ಮುಂಚೆಯೇ ಬರುತ್ತದೆಯಲ್ಲವೇ? ಆ ಸಮಯದಲ್ಲಿ ಮೂಡುವ ಕುತೂಹಲ, ಲೈಂಗಿಕತೆಯ ಬಯಕೆ ಇವೆಲ್ಲವನ್ನೂ ಅವರು ಹತ್ತಿಕ್ಕುತ್ತಾರೆಯೇ ಅಥವಾ ಲೈಂಗಿಕ ಕ್ರಿಯೆ ನಡೆಸುತ್ತಾರೆಯೇ ಎನ್ನುವ ಪ್ರಶ್ನೆಗಳಿಗೆ ಈ ಸಮೀಕ್ಷೆಯಲ್ಲಿ ಉತ್ತರ ದೊರೆತಿದೆ. ಅಚ್ಚರಿಯೆಂದರೆ, ಧರ್ಮ ಧರ್ಮಗಳ ನಡುವೆ ಈ ಕುರಿತು ಭಿನ್ನ ನಡವಳಿಕೆ ಕಂಡುಬಂದಿದೆ. ಮೊದಲ ಬಾರಿ ಲೈಂಗಿಕ ಕ್ರಿಯೆ ನಡೆಸಿದ ವಯಸ್ಸಿಗೂ ಮದುವೆಯ ವಯಸ್ಸಿಗೂ ಸಿಕ್ಕಾಪಟ್ಟೆ ಅಂತರವಿರುವುದೂ ಸಹ ತಿಳಿದುಬಂದಿದೆ.
ಮದುವೆಗೆ ಮುನ್ನ ಲೈಂಗಿಕ ಕ್ರಿಯೆ ನಡೆಸಿದ ಪುರುಷರು (Men) ಹಾಗೂ ಮಹಿಳೆಯರ (Women) ಪ್ರಮಾಣದಲ್ಲಿ ಭಾರೀ ಅಂತರವಿದೆ. ವಿವಾಹಕ್ಕೂ ಮುನ್ನ ಶೇ.7.4ರಷ್ಟು ಪುರುಷರು ಲೈಂಗಿಕ ಕ್ರಿಯೆ ನಡೆಸಿದರೆ, ಮಹಿಳೆಯರ (Female) ಪ್ರಮಾಣ ಶೇ.1.5ರಷ್ಟು. ಶೇ.12ರಷ್ಟು ಸಿಖ್ ಪುರುಷರು (Male) ವಿವಾಹಕ್ಕೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದು ಬಹಿರಂಗವಾಗಿದ್ದು, ಎಲ್ಲ ಧರ್ಮಗಳಲ್ಲಿ ಇವರೇ ಅತಿ ಹೆಚ್ಚು ಪ್ರಮಾಣ ದಾಖಲಿಸಿದ್ದಾರೆ. ಆದರೆ, ಮದುವೆಗೆ ಮುನ್ನ ಸೆಕ್ಸ್ ನಲ್ಲಿ ಪಾಲ್ಗೊಳ್ಳುವ ಸಿಖ್ (Sikh) ಮಹಿಳೆಯರ ಸಂಖ್ಯೆ ಕೇವಲ ಶೇ.0.5. ಹಿಂದು (Hindu) ಪುರುಷರು ಶೇ.7.9ರಷ್ಟು, ಮುಸ್ಲಿಂ (Muslim) ಪುರುಷರು ಶೇ.5.4, ಕ್ರೈಸ್ತ (Christ) ಪುರುಷರು ಶೇ.5.9 ರಷ್ಟು ಜನ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹಿಂದು ಮಹಿಳೆಯರು ಶೇ.1.5, ಮುಸ್ಲಿಂ ಶೇ.1.4, ಕ್ರೈಸ್ತ ಶೇ.1.5ರಷ್ಟು ಮಹಿಳೆಯರು ವಿವಾಹಕ್ಕೂ ಮುನ್ನವೇ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಗಂಡ ಯಾವಾಗ್ಲೂ ಆಫೀಸ್ ಟ್ರಿಪ್‌ನಲ್ಲಿರಲಿ, ಫ್ರೆಂಡ್ಸ್ ಜೊತೆ ಎಂಜಾಯ್ ಮಾಡ್ಬೋದು
ಆರ್ಥಿಕ ಸ್ಥಿತಿಯೂ ಕಾರಣ
ವಿವಾಹಪೂರ್ವ ಲೈಂಗಿಕತೆಯಲ್ಲಿ ಆರ್ಥಿಕ (Financial) ಸ್ಥಿತಿಯೂ ಕಾರಣವಾಗಿರುವುದು ಸಮೀಕ್ಷೆಯಿಂದ ತಿಳಿದುಬಂದಿದೆ. ಶ್ರೀಮಂತ ಪುರುಷರು ಹಾಗೂ ಬಡ ಹೆಣ್ಣುಮಕ್ಕಳು ವಿವಾಹಕ್ಕೂ ಮುನ್ನ ಲೈಂಗಿಕ ಕ್ರಿಯೆ ನಡೆಸುವುದು ಹೆಚ್ಚು. ಧಾರಾಳವಾಗಿ ಸಿಗುವ ಎಲ್ಲ ಸವಲತ್ತು ಹಾಗೂ ಕೈಯಲ್ಲಿ ಹಣವಿರುವ ಕಾರಣ ಶ್ರೀಮಂತ ಪುರುಷರು ಲೈಂಗಿಕ ಕ್ರಿಯೆ ನಡೆಸಿದರೆ, ಬಡತನದಿಂದ ಬೇಸತ್ತ ಹೆಣ್ಣುಮಕ್ಕಳು ವಿವಿಧ ರೀತಿಯ ಪ್ರಲೋಭನೆಗಳಿಗೆ ಒಳಗಾಗಿ ಲೈಂಗಿಕ ಕ್ರಿಯೆ ನಡೆಸಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ: Extramarital Affairs : ಆಸ್ಪತ್ರೆ ಬೆಡ್ ನಲ್ಲಿ ಹೆಂಡತಿ.. ಪಾರ್ಕ್ ನಲ್ಲಿ ಇನ್ನೊಬ್ಬಳ ಜೊತೆ ಪತಿ
ಪತ್ನಿ ಸೆಕ್ಸ್ ನಿರಾಕರಿಸಬಹುದೇ?
ನಮ್ಮ ದೇಶದ ಸುಪ್ರೀಂಕೋರ್ಟ್ ಆಗಾಗ್ಗೆ ಹೇಳುತ್ತದೆ, ಪತ್ನಿಗೆ ಲೈಂಗಿಕ ಕ್ರಿಯೆಗಾಗಿ ಒತ್ತಾಯ ಮಾಡುವಂತಿಲ್ಲ, ಆಕೆ ಅದನ್ನು ನಿರಾಕರಿಸುವ ಹಕ್ಕು ಹೊಂದಿದ್ದಾಳೆ ಎಂದು. ಆದರೆ, ಅದನ್ನು ಸಮಾಜ ಮಾನ್ಯ ಮಾಡುತ್ತದೆಯೇ ಎನ್ನುವ ನಿಟ್ಟಿನಲ್ಲಿ ಪ್ರಶ್ನೆ ಮಾಡಿದಾಗ ಶೇ.87ರಷ್ಟು ಮಹಿಳೆಯರು ಹಾಗೂ ಶೇ.83ರಷ್ಟು ಪುರುಷರು ಇದನ್ನು ಒಪ್ಪಿಕೊಂಡಿದ್ದಾರೆ. ಪತ್ನಿಗೆ ಲೈಂಗಿಕ ಕ್ರಿಯೆಯನ್ನು ನಿರಾಕರಿಸುವ ಹಕ್ಕಿದೆ ಹಾಗೂ ಆಕೆ ಅದನ್ನು ನಿಸ್ಸಂಶಯವಾಗಿ ಬಳಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.