Marriage Problem : 34 ವರ್ಷವಾದ್ರೂ ಈ ಕಾರಣಕ್ಕೆ ಯುವತಿಗೆ ಮದುವೆಯಾಗ್ತಿಲ್ಲ !

Published : May 19, 2022, 02:47 PM ISTUpdated : May 19, 2022, 02:53 PM IST
Marriage Problem : 34 ವರ್ಷವಾದ್ರೂ ಈ ಕಾರಣಕ್ಕೆ ಯುವತಿಗೆ ಮದುವೆಯಾಗ್ತಿಲ್ಲ !

ಸಾರಾಂಶ

ಮದುವೆ (Marriage) ಎರಡು ಜೀವಗಳ ಜೊತೆ ಸಂಬಂಧ ಬೆಸೆಯುವುದಲ್ಲ. ಎರಡು ಕುಟುಂಬ (Family)ಗಳನ್ನು ಒಂದು ಮಾಡುತ್ತದೆ. ಇದೇ ಕಾರಣಕ್ಕೆ ಮದುವೆ ಮುನ್ನ ನೂರು ಬಾರಿ ಆಲೋಚನೆ (Think) ಮಾಡಲಾಗುತ್ತದೆ. ಮದುವೆ ನಂತ್ರ ಎರಡೂ ಕುಟುಂಬ ಖುಷಿಯಾಗಿರಬೇಕೆಂದು ಬಯಸುತ್ತಾರೆ. ಆದ್ರೆ ಕೆಲ ನಂಬಿಕೆಗಳು (Belief) ಸಮಸ್ಯೆಯುಂಟು ಮಾಡುತ್ತದೆ.   

ಮದುವೆ (Marriage) ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎನ್ನುವ ಮಾತಿದೆ. ಕಂಕಣ ಭಾಗ್ಯ ಕೂಡಿ ಬಂದಾಗ ಮದುವೆಯಾಗ್ಬೇಕು ಎಂಬ ನಂಬಿಕೆಯೂ ಇದೆ. ಮದುವೆ ಬಗ್ಗೆ ಪ್ರತಿಯೊಬ್ಬರೂ ತಮ್ಮದೆ ಕಲ್ಪನೆ ಹೊಂದಿರುತ್ತಾರೆ. ವಯಸ್ಸು (Age) 25ರ ಗಡಿ ದಾಟುತ್ತಿದ್ದಂತೆ ಮಕ್ಕಳ (Children) ಮದುವೆ ಮಾಡಲು ಪಾಲಕರು (Parents) ಆತುರ ಮಾಡ್ತಾರೆ. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಪಾಲಕರ ಜವಾಬ್ದಾರಿ (Responsibility) ಹೆಚ್ಚು. ಮಗಳಿಗೆ ಓದು ಮುಗಿಯುತ್ತಿದ್ದಂತೆ ಮದುವೆ ಮಾಡಲು ಗಂಡಿನ ಹುಡುಕಾಟ ಶುರುವಾಗುತ್ತದೆ. ಹಿಂದೂ ಧರ್ಮದಲ್ಲಿ ಈಗ್ಲೂ ಜಾತಕ (Horoscope) ನೋಡಿ ಮದುವೆ ಮಾಡಲಾಗುತ್ತದೆ.

ಜಾತಕ ಹೊಂದಾಣಿಕೆಯಾದ್ರೆ ಮಾತ್ರ ಮದುವೆ ಎನ್ನುವವರಿದ್ದಾರೆ. ಜಾತಕದಲ್ಲಿ ಸಣ್ಣಪುಟ್ಟ ದೋಷವಿದ್ರೂ ಮದುವೆಯಾಗೋದು ಕೆಲವೊಮ್ಮೆ ಕಷ್ಟವಾಗುತ್ತದೆ. ಹೆಣ್ಣು ಮಕ್ಕಳ ಜಾತಕದಲ್ಲಿ ದೊಡ್ಡ ದೋಷವಿದ್ರೆ ಪಾಲಕರಿಗೆ ತಲೆನೋವು ಹೆಚ್ಚು, ಯಾಕೆಂದ್ರೆ ಜಾತಕದಲ್ಲಿ ದೋಷವಿರುವ ಹೆಣ್ಣು ಮಕ್ಕಳನ್ನು ಮದುವೆ ಮಾಡೋದು ಸುಲಭದ ಮಾತಲ್ಲ. ಮಹಿಳೆಯೊಬ್ಬಳು ಸಾಮಾಜಿಕ ಜಾಲತಾಣದಲ್ಲಿ (Social Media) ತನ್ನ ನೋವನ್ನು ಹೇಳಿಕೊಂಡಿದ್ದಾಳೆ. ಜಾತಕದಲ್ಲಿರುವ ದೋಷ ಆಕೆಯ ಮದುವೆ ಕನಸ (Dream) ನ್ನು ಹಾಳು ಮಾಡಿದೆ.  ಆಕೆ ಸಮಸ್ಯೆ (Problem) ಏನು ಎಂಬುದನ್ನು ನಾವಿಂದು ಹೇಳ್ತೇವೆ.

SEX ವೇಳೆ ಯೋನಿಯಲ್ಲಿ ಶುಷ್ಕತೆ, ಸೈಡ್‌ ಎಫೆಕ್ಟ್ ಇಲ್ಲದೇ ನಿವಾರಿಸೋದು ಹೇಗೆ?

ಆಕೆ ವಯಸ್ಸು 34 ವರ್ಷ. ಒಳ್ಳೆ ಕುಟುಂಬ (Family) ದಲ್ಲಿ ಜನಿಸಿದ ಯುವತಿ. ವಿದ್ಯಾಭ್ಯಾಸ ಮುಗಿದಿದೆ. ಆದ್ರೆ ಮದುವೆ ಮಾಡುವುದು ಪಾಲಕರಿಗೆ ಸಮಸ್ಯೆಯಾಗಿದೆ. ಕಳೆದ ನಾಲ್ಕೈದು ವರ್ಷಗಳಿಂದ ಗಂಡಿನ ಹುಡುಕಾಟ ನಡೆಸುತ್ತಿದ್ದಾರೆ. ಆದ್ರೆ ಯಾವುದೇ ಹುಡುಗ ಈಕೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಇದಕ್ಕೆ ಕಾರಣ ಆಕೆ ಸೌಂದರ್ಯವಲ್ಲ. ಜಾತಕದಲ್ಲಿರುವ ದೋಷ. ಆಕೆ ಜಾತಕದಲ್ಲಿ ಮಂಗಳ ದೋಷವಿದೆಯಂತೆ. ಇದೇ ಕಾರಣಕ್ಕೆ ಯಾರೂ ಮದುವೆಯಾಗಲು ಬರ್ತಿಲ್ಲವಂತೆ. 

ಈ ಮಧ್ಯೆ ಯುವತಿಯನ್ನು ಆಕೆ ಕಚೇರಿಯಲ್ಲಿರುವ ಸಹೋದ್ಯೋಗಿ ಪ್ರೀತಿಸುತ್ತಿದ್ದನಂತೆ. ಯುವತಿಗೆ ಪ್ರೀತಿಯ ನಿವೇದನೆ ಮಾಡಿದ್ದನಂತೆ. ಜಾತಿ ಬೇರೆಯಾದ್ರೂ ಜಾತಕದ ಕಾರಣ ಯುವತಿ ಮದುವೆಗೆ ಒಪ್ಪಿಕೊಂಡಿದ್ದಳಂತೆ. ಯುವತಿ ಪಾಲಕರು ಕೂಡ ಇದಕ್ಕೆ ಸೈ ಎಂದಿದ್ದರಂತೆ.

ಆದ್ರೆ ಯುವಕನ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರಂತೆ. ಯಾವುದೇ ಕಾರಣಕ್ಕೂ ಮಂಗಳ ದೋಷವಿರುವ ಹುಡುಗಿಯನ್ನು ಮಗ ಮದುವೆಯಾಗಲು ಬಿಡೋದಿಲ್ಲ ಎನ್ನುತ್ತಿದ್ದಾರಂತೆ. ಅವರಿಗೆ ಒಂದೇ ಮಗ. ಮಗನ ಬಾಳಲ್ಲಿ ಯಾವುದೇ ಸಮಸ್ಯೆಯಾಗಬಾರದು ಎಂಬುದೇ ಅವರ ಆಶಯ. ಅವರ ಒಪ್ಪಿಗೆಯಿಲ್ಲದೆ ಮದುವೆಯಾಗಲು ಸಾಧ್ಯವಿಲ್ಲ. ನನ್ನ ಬಾಳಲ್ಲಿ ಮದುವೆ ಬರೀ ಕನಸು ಎನ್ನುತ್ತಿದ್ದಾಳೆ ಮಹಿಳೆ.

ಬ್ರೇಕ್ ಅಪ್ ಆದ ಬಳಿಕ ಮುಂದೇನು ? ಚಿಂತಿಸಬೇಡಿ, ಇಲ್ಲಿದೆ ಟಿಪ್ಸ್

ತಜ್ಞರು ಹೇಳೋದೇನು ? : ಗಂಡಾಗಿರಲಿ ಇಲ್ಲ ಹೆಣ್ಣಾಗಿರಲಿ ಹಿಂದೂ ಧರ್ಮದಲ್ಲಿ ಜಾತಕಕ್ಕೆ ಮಹತ್ವ ನೀಡುತ್ತಾರೆ. ಅದರಲ್ಲೂ ಮಂಗಲ ದೋಷವಿದ್ರೆ ಮದುವೆ ಮಾಡುವುದು ಸುಲಭವಲ್ಲ. ಇಂಥ ಸಮಸ್ಯೆಯಿರುವ ಸಂಗಾತಿಯನ್ನೇ ಆಯ್ಕೆ ಮಾಡಲಾಗುತ್ತದೆ. ಒಬ್ಬರಿಗೆ ಮಂಗಳ ದೋಷವಿದ್ದು, ಇನ್ನೊಬ್ಬರಿಗೆ ಮಂಗಳ ದೋಷವಿಲ್ಲದೆ ಹೋದ್ರೆ, ಅಂಥವರು ಮದುವೆಯಾದ್ರೆ ದಾಂಪತ್ಯ ಸುಖವಾಗಿರುವುದಿಲ್ಲವೆಂದು ನಂಬಲಾಗಿದೆ. ಮದುವೆಗೆ ಮೊದಲು ಮಂಗಳ ದೋಷವಿರುವ ಜನರು ತಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಎದುರಿಸಬಾರದು ಎಂಬ ಕಾರಣಕ್ಕೆ ಅನೇಕ ಪೂಜೆಗಳನ್ನು ಕೂಡ ಮಾಡ್ತಾರೆ. ಇದು ಅವರವರ ನಂಬಿಕೆ ಎನ್ನುತ್ತಾರೆ ತಜ್ಞರು.

ಆದ್ರೆ ಸಂಗಾತಿ ಸಿಗಲಿಲ್ಲ ಎನ್ನುವ ಕಾರಣಕ್ಕೆ ಅತಿಯಾಗಿ ಚಿಂತಿಸುವ ಅಗತ್ಯವಿಲ್ಲ. ಇಲ್ಲಿಯವರೆಗೆ ಜೀವನ ಸುಖಕರವಾಗಿರಲಿಲ್ಲ. ಅನೇಕ ಏರಿಳಿತಗಳನ್ನು ಅನುಭವಿಸಿದ್ದೀರಿ. ಮುಂದೆ ಸುಂದರವಾದ ಭವಿಷ್ಯವಿದೆ ಎಂಬ ಭರವಸೆಯಲ್ಲಿ ಬದುಕಬೇಕು. ಇಂಥಹ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದಂತಹ ಉತ್ತಮ ಸಂಗಾತಿಯನ್ನು ನೀವು ಹುಡುಕಿಕೊಳ್ಳುವ ಅಗತ್ಯವಿದೆ. ಸಂಪೂರ್ಣ ವಿವರಗಳೊಂದಿಗೆ ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ನಿಮ್ಮ ರೆಸ್ಯೂಮ್ ಅನ್ನು ನೀವು ಹಾಕಬಹುದು. ಅಲ್ಲಿಂದಲೂ ಉತ್ತಮ ಸಂಬಂಧಗಳನ್ನು ಹುಡುಕಿಕೊಳ್ಳಬಹುದು ಎನ್ನುತ್ತಾರೆ ತಜ್ಞರು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ