Relationship Tips: ನೀವು ಕೆಟ್ಟ ಅಮ್ಮನಾ, ಒಳ್ಳೆಯ ಅಮ್ಮನಾ? ಚೆಕ್‌ ಮಾಡ್ಕೊಳಿ

By Suvarna News  |  First Published Apr 21, 2023, 7:33 PM IST

ವರ್ತನೆ ಸಂಬಂಧಿ ದೋಷಗಳು ಎಲ್ಲರಲ್ಲೂ ಇರುತ್ತವೆ. ಆಕೆ ಅಮ್ಮನಾದರೂ ಸರಿ, ಅತ್ತೆಯಾದರೂ ಸರಿ. ಕೆಟ್ಟ ಅಮ್ಮಂದಿರು ಮಕ್ಕಳ ಜೀವನವನ್ನು ಅರಿಯದೇ ಹಾಳು ಮಾಡಬಲ್ಲರು. ಅಥವಾ ಅವರಲ್ಲಿ ಆತ್ಮವಿಶ್ವಾಸವಿಲ್ಲದಂತೆ ಮಾಡಿಬಿಡಬಲ್ಲರು. 
 


ಅಮ್ಮನ ಪ್ರೀತಿ, ಆಕೆಯ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಕ್ಕಳ ಕುರಿತಾಗಿ ಆಕೆಯ ಭಾವನೆಗಳನ್ನು ಅಕ್ಷರಶಗಳಲ್ಲಿ ಹಿಡಿದಿಡಲು ಅಸಾಧ್ಯ. ಮಕ್ಕಳಿಗೂ ಅಮ್ಮನೆಂದರೆ ಬಿಡಿಸಲಾಗದ ಬಂಧವೇನೋ ನಿಜ. ಆದರೆ, ನಾವೇ ಸುತ್ತಮುತ್ತ ನೋಡುವಂತೆ ಎಲ್ಲ ಅಮ್ಮಂದಿರೂ ಖಂಡಿತವಾಗಿ ಒಳ್ಳೆಯವರಾಗಿರುವುದಿಲ್ಲ. ಋಣಾತ್ಮಕ ಧೋರಣೆಯ ಮಹಿಳೆಯರು ಮಕ್ಕಳ ಬೆಳವಣಿಗೆ, ವ್ಯಕ್ತಿತ್ವದ ಮೇಲೆ ಭಾರೀ ಕೆಟ್ಟ ಪ್ರಭಾವ ಬೀರುತ್ತಾರೆ. ಕೆಲವು ಅಮ್ಮಂದಿರು ತಮ್ಮ ಮಕ್ಕಳನ್ನು ಕೆಟ್ಟದಾಗಿ ಟೀಕೆ ಮಾಡಬಹುದು, ಆಕೆ ಒರಟಾಗಿ ನಡೆದುಕೊಳ್ಳಬಹುದು, ಅನಗತ್ಯವಾಗಿ ಏನಾದರೊಂದು ಕಮೆಂಟ್‌ ಮಾಡುತ್ತಲೇ ಇರಬಹುದು, ಪದೇ ಪದೆ ಬೇರೊಬ್ಬರೊಂದಿಗೆ ಹೋಲಿಕೆ ಮಾಡಿ ಮಕ್ಕಳನ್ನು ಕುಗ್ಗಿಸುತ್ತಿರಬಹುದು. ಇಂತಹ ಅಮ್ಮಂದಿರು ಮಕ್ಕಳ ವ್ಯಕ್ತಿತ್ವಕ್ಕೆ ಹಾನಿ ಒಡ್ಡುತ್ತಾರೆ. ಕೆಟ್ಟ ಅಮ್ಮಂದಿರನ್ನು ಹೊಂದಿರುವ ಮಕ್ಕಳಲ್ಲಿ ಸಾಮಾನ್ಯವಾಗಿ ಆತಂಕ, ಖಿನ್ನತೆ, ಅನಾರೋಗ್ಯಕರ ಪ್ರವೃತ್ತಿ, ಕೆಲಸಗಳನ್ನು ನಿಭಾಯಿಸಿಕೊಳ್ಳುವ ಶಕ್ತಿ ಇಲ್ಲದಿರುವುದು, ಸಂಬಂಧಗಳಲ್ಲಿ ಸಮಸ್ಯೆ, ನಂಬಿಕೆಯ ಸಮಸ್ಯೆ ಮುಂತಾದವು ಕಂಡುಬರುತ್ತದೆ. ಕೆಟ್ಟ ಅಮ್ಮಂದಿರ ಕೆಲವು ಲಕ್ಷಣಗಳು ಹೀಗಿರುತ್ತವೆ.

•    ಕಂಡಿಷನ್‌ (Condition) ಮೇಲೆ ಗಿಫ್ಟ್‌ (Gift)
ಕೆಟ್ಟ ಅಮ್ಮಂದಿರ (Toxic Mother) ಪ್ರಮುಖ ಲಕ್ಷಣವೆಂದರೆ, ತಾವು ಮಕ್ಕಳಿಗೆ (Children) ಏನೇ ನೀಡಲಿ, ಅದನ್ನು ಯಾವುದಾದರೂ ಕಂಡಿಷನ್‌ ಮೇಲೆ ಮಾತ್ರ ನೀಡುವುದು. ಅಂತಹ ಅಮ್ಮಂದಿರು ಮಕ್ಕಳಿಗೆ ಗಿಫ್ಟ್‌ (Gift) ನೀಡುವ ಜತೆಗೆ ಅವರಿಂದ ಏನಾದರೂ ಬಯಸುತ್ತಾರೆ. ಇಂಥ ಸಮಯದಲ್ಲಿ ಮಕ್ಕಳಿಗೆ ಆ ಗಿಫ್ಟ್‌ ದೊರೆತ ಸಂಭ್ರಮ ಇರುವುದಿಲ್ಲ. ಏಕೆಂದರೆ, ಅದಕ್ಕೆ ಬದಲಾಗಿ ಅಮ್ಮ ಏನಾದರೂ ತಮ್ಮಿಂದ ಬಯಸುತ್ತಾಳೆ ಎನ್ನುವುದು ಅರಿವಿರುತ್ತದೆ. 

Latest Videos

undefined

Relationship tips : ಪರ್ಫೆಕ್ಟ್ ಪತ್ನಿ ಅನಿಸಿಕೊಳ್ಳಬೇಕು ಅಂದ್ರೆ ಹೀಗ್ ಮಾಡಿ

•    ಸಮಸ್ಯೆಗೆ ಅತಿ ಸ್ಪಂದನೆ (Over Reaction to Problem)
ಅಮ್ಮ-ಮಕ್ಕಳ ನಡುವೆ ಭಿನ್ನಾಭಿಪ್ರಾಯ (Difference) ಸಹಜ. ಮಕ್ಕಳು ಬೆಳೆದು ದೊಡ್ಡವರಾದ ಬಳಿಕವೂ ತಮ್ಮ ಮಾತನ್ನೇ ಕೇಳಬೇಕು ಎನ್ನುವ ತಾಯಂದಿರು ಖಂಡಿತವಾಗಿ ಕೆಟ್ಟ ಧೋರಣೆ ಹೊಂದಿರುತ್ತಾರೆ. ಅಲ್ಲದೆ, ಏನಾದರೂ ಸಮಸ್ಯೆಯ ಸಂದರ್ಭದಲ್ಲಿ ಆಕೆ ಅತಿಯಾಗಿ ಆಡುತ್ತಾರೆ. ಮಕ್ಕಳಿಗೆ ಸಂಬಂಧಿಸಿದ ಸಮಸ್ಯೆಯನ್ನು ನಾಟಕೀಯ ಶೈಲಿಯಲ್ಲಿ ಬಿಂಬಿಸುತ್ತಾರೆ. ತಮ್ಮ ಮಾತು ಕೇಳದಿದ್ದರೆ ಕೋಪಿಸಿಕೊಳ್ಳುತ್ತಾರೆ. ಪರಿಣಾಮವಾಗಿ, ಮಕ್ಕಳಲ್ಲೂ ವರ್ತನೆ (Behaviour) ಸಂಬಂಧಿ ಸಮಸ್ಯೆಗಳು ಉಂಟಾಗಬಹುದು.

•    ಮಕ್ಕಳ ವೈವಾಹಿಕ ಜೀವನದಲ್ಲಿ (Married Life) ಪ್ರವೇಶಿಸುವುದು
ಕೆಟ್ಟ ಅಮ್ಮಂದಿರ ಅತಿ ದೊಡ್ಡ ತಪ್ಪೆಂದರೆ, ಮಕ್ಕಳ ವೈವಾಹಿಕ ಜೀವನದಲ್ಲಿ ಅತಿಯಾಗಿ ಭಾಗಿಯಾಗುತ್ತಾರೆ. ಮಗ-ಸೊಸೆ ಅಥವಾ ಮಗಳು-ಅಳಿಯನಿಗೆ ಅತಿಯಾಗಿ ಸಲಹೆ (Suggestion) ನೀಡುವುದು, ತಾವು ಹೇಳಿದಂತೆ ಮನೆಯ ಎಲ್ಲ ಕೆಲಸ-ಕಾರ್ಯಗಳೂ ಸಾಗಬೇಕು ಎನ್ನುವುದು, ಚೂರೂ ಸ್ವಾತಂತ್ರ್ಯವಿಲ್ಲದಂತೆ ನಿರ್ದೇಶನ (Guide) ನೀಡುವುದು, ಮಗುವನ್ನು (Baby) ಯಾವಾಗ ಮಾಡಿಕೊಳ್ಳಬೇಕು ಎನ್ನುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಸಲಹೆ ನೀಡುತ್ತಲೇ ಇರುವ ಅಮ್ಮಂದಿರು ನಿಜವಾಗಿಯೂ ಕೆಟ್ಟ ಪ್ರಭಾವ (Bad Effect) ಬೀರುತ್ತಾರೆ. ಇಂತಹ ಅಮ್ಮಂದಿರ ಕಾರಣದಿಂದಲೇ ಮಕ್ಕಳ ವೈವಾಹಿಕ ಜೀವನ ಹಾಳಾಗುವ ಸಾಧ್ಯತೆ ಅಧಿಕ.

•    ಪದೇ ಪದೆ ಇತಿಹಾಸ (History) ಎಳೆಯುವುದು
ಕೆಟ್ಟ ಜನರೇ ಹಾಗೆ, ಅವರು ಪದೇ ಪದೆ ಹಿಂದೆ ಆಗಿಹೋದ ವಿವಿಧ ಘಟನೆಗಳನ್ನು ಎಳೆದು ತಂದು ತಮ್ಮವರನ್ನು ಮುಜುಗರಕ್ಕೆ, ಕಿರಿಕಿರಿಗೆ ಸಿಲುಕಿಸುತ್ತಾರೆ. ಎಷ್ಟೇ ಸಮಯ ಕಳೆದರೂ ಕೆಲವು ನೋವಿನ (Painful) ಸನ್ನಿವೇಶಗಳನ್ನು ಆಕೆ ಮರೆಯಲು ಬಿಡುವುದಿಲ್ಲ. ಇತರರ ಎದುರೂ ಇಂತಹ ಸನ್ನಿವೇಶಗಳನ್ನು ನೆನಪಿಸಿಕೊಂಡು ಮಕ್ಕಳ ಮೇಲೆ ನೆಗೆಟಿವ್‌ (Nagetive) ಪರಿಣಾಮ ಬೀರುತ್ತಾರೆ. ಹೀಗಾಗಿ, ಹಳೆಯದನ್ನು ನೆನಪಿಸಿಕೊಂಡು ಮತ್ತೊಬ್ಬರನ್ನು ಹೀಗಳೆಯುವ ಜನರ ಬಳಿ ಎಂದಿಗೂ ಅನುಭವ ಶೇರ್‌ (Share) ಮಾಡಿಕೊಳ್ಳಬಾರದು.

Mental Health Tips: ಗಡಿಬಿಡಿ ಜೀವನದಿಂದ ಬೇಸತ್ತಿದ್ದರೆ ಇಲ್ಲಿವೆ ಬೆಸ್ಟ್ ಸೊಲ್ಯೂಷನ್

•    ಅತಿಯಾದ ಟೀಕೆ (Criticism)
ಮಕ್ಕಳು ಬುದ್ಧಿವಂತರಾಗಲಿ, ಎಲ್ಲದರಲ್ಲೂ ಸೈ ಎನಿಸಿಕೊಳ್ಳಲಿ ಎನ್ನುವುದು ಎಲ್ಲ ಅಮ್ಮಂದಿರ ಬಯಕೆ. ಆದರೆ, ಖಂಡಿತವಾಗಿ ಎಲ್ಲ ಮಕ್ಕಳು ಹೀಗಿರಲು ಸಾಧ್ಯವಿಲ್ಲ. ಈ ಮಿತಿಯನ್ನು ಅರಿತುಕೊಳ್ಳದ ಕೆಲವು ತಾಯಂದಿರು ಮಕ್ಕಳನ್ನು ಅತಿಯಾಗಿ ಟೀಕಿಸುತ್ತಾರೆ. ತಮ್ಮ ವಿಮರ್ಶನಾತ್ಮಕ ಧೋರಣೆಯಿಂದ ಅವರನ್ನು ಕುಗ್ಗಿಸುತ್ತಲೇ ಇರುತ್ತಾರೆ. ಇದರಿಂದಾಗಿ, ತಾಯಿ ತಮ್ಮನ್ನು ಪ್ರೀತಿಸುವುದಿಲ್ಲ ಎನ್ನುವ ಭಾವನೆ (Feel) ಮಕ್ಕಳಲ್ಲಿ ದೃಢವಾಗಬಹುದು. ಮಕ್ಕಳು ಮಾಡುವ ಪ್ರತಿ ಕೆಲಸದಲ್ಲೂ ಕೊರತೆ (Mistake) ಹುಡುಕುತ್ತಾರೆ, ಯಾವ ಕೆಲಸವನ್ನೂ ಮೆಚ್ಚಿಕೊಳ್ಳುವುದಿಲ್ಲ.   
 

click me!