ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸ್ತಾರೆ. ಪ್ರತಿ ದಿನ ಸ್ನಾನ ಮಾಡೋರು ಒಂದಿಷ್ಟು ಮಂದಿಯಿದ್ರೆ ಕೆಲವರು ಎರಡು ದಿನ, ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡ್ತಾರೆ. ಇದ್ರ ಜೊತೆ ಒಳ ಉಡುಪನ್ನೂ ಬದಲಿಸೋದಿಲ್ಲ ಅಂದ್ರೆ ಹೆಂಗ್ ಆಗ್ಬೇಡ?
ಸಾಮಾಜಿಕ ಜಾಲತಾಣದಲ್ಲಿ ಜನರು ತಮ್ಮ ಖುಷಿಯನ್ನು ಮಾತ್ರ ಹಂಚಿಕೊಳ್ಳೋದಿಲ್ಲ. ತಮ್ಮ ದುಃಖವನ್ನು ಕೂಡ ಹೇಳಿಕೊಳ್ತಾರೆ. ಹಾಗೆಯೇ ತಮ್ಮ ಜೀವನ ಹೇಗಿದೆ, ಜೀವನ ಶೈಲಿ ಹೇಗಿದೆ, ಸಂಗಾತಿ ಹೇಗಿದ್ದಾರೆ ಎಂಬೆಲ್ಲ ವೈಯಕ್ತಿಕ ವಿಷ್ಯವನ್ನು ಕೂಡ ತೆರೆದಿಡ್ತಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲ ವಿಷ್ಯಗಳು ಅಚ್ಚರಿ ಹುಟ್ಟಿಸುತ್ತವೆ. ಈಗ ಹುಡುಗಿಯೊಬ್ಬಳು ತನ್ನ ಪ್ರೇಮಿಯ ವಿಚಿತ್ರ ಕೆಲಸವನ್ನು ಪೋಸ್ಟ್ ಮಾಡಿದ್ದಾಳೆ. ಆಕೆ ಹೇಳಿದ ವಿಷ್ಯ ಕೇಳಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ.
ಬಾಯ್ ಫ್ರೆಂಡ್ (Boy Friend) ವರ್ತನೆಯಿಂದ ಬೇಸತ್ತ ಹುಡುಗಿ ಈ ಪೋಸ್ಟ್ ಹಾಕಿದ್ದಾಳೆ. ಆತನ ಒಂದು ಅಭ್ಯಾಸ (Practice) ಹುಡುಗಿಗೆ ತಲೆಕೆಡುವಂತೆ ಮಾಡಿದೆ. ಮಹಿಳೆ ರೆಡ್ಡಿಟ್ ನಲ್ಲಿ ವಿಷ್ಯವನ್ನು ಬರೆದುಕೊಂಡಿದ್ದಾಳೆ. ಹಾಗೆ ನೆಟ್ಟಿಗರಿಗೆ ಪ್ರಶ್ನೆ ಮಾಡಿದ್ದಾಳೆ. ರೆಡ್ಡಿಟ್ (Reddit) ನ AskUK ನಲ್ಲಿ ಈ ಪ್ರಶ್ನೆಯನ್ನು ಎತ್ತಿದ್ದಾರೆ. ನಾನು ಪ್ರತಿ ದಿನ ನನ್ನ ಉಳಉಡುಪನ್ನು ಬದಲಿಸ್ತೇನೆ. ಆದರೆ ನನ್ನ ಬಾಯ್ ಫ್ರೆಂಡ್ ಒಳ ಉಡುಪು ಮತ್ತು ಸಾಕ್ಸನ್ನು ಕೇವಲ ಆತ ಸ್ನಾನ (Bathing) ಮಾಡುವ ದಿನ ಮಾತ್ರ ಬದಲಿಸುತ್ತಾನೆ. ಒಂದು ವೇಳೆ ಆತ ಸ್ನಾನ ಮಾಡಿಲ್ಲವೆಂದ್ರೆ ಅದೇ ಹಳೆ ಒಳ ಉಡುಪು ಹಾಗೂ ಸಾಕ್ಸ್ ಹಾಕಿಕೊಂಡು ಸುತ್ತಾಡುತ್ತಿರುತ್ತಾನೆ. ನಮ್ಮಿಬ್ಬರಲ್ಲಿ ಯಾರು ಸರಿ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ. ಹಾಗೆಯೇ ನೀವು ಪ್ರತಿ ದಿನ ಸಾಕ್ಸ್ ಹಾಗೂ ಒಳ ಉಡುಪನ್ನು ಬದಲಿಸ್ತೀರಾ ಇಲ್ಲ ಸ್ನಾನ ಮಾಡುವ ದಿನ ಮಾತ್ರ ಬದಲಿಸ್ತೀರಾ ಎಂದು ಕೇಳಿದ್ದಾಳೆ.
RELATIONSHIP TIPS : ಪರ್ಫೆಕ್ಟ್ ಪತ್ನಿ ಅನಿಸಿಕೊಳ್ಳಬೇಕು ಅಂದ್ರೆ ಹೀಗ್ ಮಾಡಿ
ಕೆಲ ದಿನ ಒಳ ಉಡುಪು ಬದಲಿಸಿಲ್ಲ ಅಂದ್ರೆ ಏನಾಗುತ್ತೆ? : ರೆಡ್ಡಿಟ್ ನಲ್ಲಿ ಆಕೆ ಒಳ ಉಡುಪಿನ ಬಗ್ಗೆ ಪೋಸ್ಟ್ ಮಾಡ್ತಿದ್ದಂತೆ ಇದು ಗಂಭೀರ ಚರ್ಚೆಗೆ ಕಾರಣವಾಗಿದೆ. ಜನರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ಶುರು ಮಾಡಿದ್ದಾರೆ. 500ಕ್ಕೂ ಹೆಚ್ಚು ಕಮೆಂಟ್ ಮಾಡಿ, ಜನರು ತಮ್ಮ ಅಭಿಪ್ರಾಯ ಹಂಚಿಕೊಳ್ತಿದ್ದಾರೆ. ಕೆಲವರು ಪ್ರತಿ ದಿನ ಒಳ ಉಡುಪು ಬದಲಿಸಲಬೇಕು ಎಂದು ಹೇಳಿದ್ದಾರೆ. ಮತ್ತೆ ಕೆಲವರು ಪ್ರತಿ ದಿನ ಒಳ ಉಡುಪು ಬದಲಿಸದೆ ಹೋದ್ರೆ ಯಾವುದೇ ಸಮಸ್ಯೆ ಆಗೋದಿಲ್ಲ ಎಂದಿದ್ದಾರೆ.
ಛೀ ನಿನ್ನ ಬಾಯ್ ಫ್ರೆಂಡ್ ಎಷ್ಟು ವಿಚಿತ್ರ ಎಂದು ಒಬ್ಬರು ಬರೆದ್ರೆ ಮತ್ತೊಬ್ಬರು ನಿನ್ನ ಬಾಯ್ ಫ್ರೆಂಡ್ ಕೂಡ ನನ್ನ ಬಾಯ್ ಫ್ರೆಂಡ್ ಅಂತೆ. ಮನುಷ್ಯ ಪ್ರತಿ ದಿನ ಒಮ್ಮೆಯಾದ್ರೂ ಸ್ನಾನ ಮಾಡ್ಬೇಕು. ಆಗ ಸ್ನಾನ ಮಾಡದೆ ಒಳ ಉಡುಪನ್ನು ಬದಲಿಸುವ ಪ್ರಶ್ನೆಯೇ ಬರೋದಿಲ್ಲ ಎಂದು ಮಹಿಳೆಯೊಬ್ಬಳು ಕಮೆಂಟ್ ಮಾಡಿದ್ದಾಳೆ. ಇನ್ನು ಕೆಲವರು, ತಾವು ಪ್ರತಿ ದಿನ ಒಂದಕ್ಕಿಂತ ಹೆಚ್ಚು ಬಾರಿ ಸ್ನಾನ ಮಾಡ್ತೇವೆ. ಸ್ನಾನ ಮಾಡಿದಾಗಲೆಲ್ಲ ಒಳ ಉಡುಪನ್ನು ಬದಲಿಸ್ತೇವೆ ಎಂದಿದ್ದಾರೆ. ಆದ್ರೆ ಕೆಲವರು ಇದನ್ನು ವಿರೋಧಿಸಿದ್ದಾರೆ. ದಿನದಲ್ಲಿ ನಾಲ್ಕೈದು ಬಾರಿ ಸ್ನಾನ ಮಾಡುವ ಅಗತ್ಯವೇನಿರುತ್ತದೆ. ಇದು ನೀರು ಪೋಲು ಮಾಡಿದಂತೆ ಎಂದಿದ್ದಾರೆ.
ಇವತ್ತು ಮದ್ವೆಯಾಗಿ ನಾಳೆ ಡಿವೋರ್ಸ್ ಮಾಡೋರು ಈ ವೀಡಿಯೋ ನೋಡಿ ಬದುಕೋದ ಕಲೀರಿ!
ಸಾಮಾಜಿಕ ಜಾಲತಾಣದಲ್ಲಿ ಇಂಥ ಅನೇಕ ಸುದ್ದಿಗಳನ್ನು ನಾವು ಕೇಳ್ತಿರುತ್ತೇವೆ. ಮೊನ್ನೆಯಷ್ಟೇ ಮಹಿಳೆಯೊಬ್ಬಳು ತನ್ನ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದೇನೆ ಎಂದಿದ್ದಳು. ಕಾರಣ ಆಕೆಯ ಬೆಕ್ಕನ್ನು ಪತಿ ಮಾರಾಟ ಮಾಡಿರೋದು. ಬೆಕ್ಕಿನಲ್ಲಿ ತಂದೆ ಆತ್ಮವಿದೆ ಎಂದು ಭಾವಿಸಿದ್ದ ಮಹಿಳೆಗೆ ಪತಿ ಬೆಕ್ಕನ್ನು ನೀಡಿದ್ದು ಆಘಾತವುಂಟು ಮಾಡಿದೆ. ಕೆಲ ದಿನಗಳ ಹಿಂದೆ ಪತಿ ಸ್ನಾನ ಮಾಡ್ತಿಲ್ಲ ಎನ್ನುವ ಕಾರಣಕ್ಕೆ ವಿಚ್ಛೇದನ ನೀಡುವುದಾಗಿ ಮಹಿಳೆಯೊಬ್ಬಳು ಹೇಳಿದ ಸುದ್ದಿ ಹರಿದಾಡ್ತಿತ್ತು.