ಮಹಿಳೆಯರು ಫಿಗರ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ತಾರೆ. ಸ್ಲಿಮ್ ಆಗಿ, ಸುಂದರವಾಗಿ ಕಾಣ್ಬೇಕು ಎನ್ನುವುದು ಮಹಿಳೆಯರ ಕನಸು. ಈ ಬಗ್ಗೆ ಅಧ್ಯಯನವೊಂದು ನಡೆದಿದೆ. ಅದ್ರಲ್ಲಿ ಪುರುಷರಿಗೆ ಯಾವ ಮಹಿಳೆ ಸುಂದರವಾಗಿ ಕಾಣ್ತಾಳೆ ಎಂಬುದನ್ನು ಪತ್ತೆ ಹೆಚ್ಚುವ ಪ್ರಯತ್ನ ನಡೆದಿದೆ.
ಶರೀರದ ಫಿಟ್ನೆಸ್ ಕಾಯ್ದುಕೊಳ್ಳುವುದು ಇಂದು ಎಲ್ಲರ ದೊಡ್ಡ ಸವಾಲು. ಪರ್ಫೆಕ್ಟ್ ಬಾಡಿಯನ್ನು ಹೊಂದಲು ಇಂದು ಅನೇಕರು ಫಿಟ್ ನೆಸ್ ತರಬೇತಿಯನ್ನು ತೆಗೆದುಕೊಳ್ಳುತ್ತಾರೆ. ಜಿಮ್, ಯೋಗ ಹಾಗೂ ವ್ಯಾಯಾಮಗಳ ಮೂಲಕ ತೂಕ ಇಳಿಸಲು ಮತ್ತು ಫಿಟ್ ಆಗಿರಲು ಬಯಸುತ್ತಾರೆ.
ಹೆಣ್ಣು ಮಕ್ಕಳಂತೂ ತಮ್ಮ ಶರೀರ (Body) ದ ಬಗ್ಗೆ ಹೆಚ್ಚಿನ ಒಲವು ತೋರಿಸುವುದು ಸಾಮಾನ್ಯ ಸಂಗತಿ. ಸ್ವಲ್ಪ ದಪ್ಪವಾದರೆ ಸಾಕು ನೋಡು ನಾನು ಎಷ್ಟು ದಪ್ಪವಾಗಿದೀನಿ, ಹೊಟ್ಟೆ (Stomach) ಕೂಡ ದೊಡ್ಡದಾಗಿ ಕಾಣಿಸ್ತಾ ಇದೆ ಎಂಬ ಮಾತು ನಿತ್ಯವೂ ಕೇಳಿಸುತ್ತದೆ. ಈಗ ಎಲ್ಲ ಹೆಣ್ಣುಮಕ್ಕಳೂ ತೆಳ್ಳನೆಯ ಶರೀರ ಹಾಗೂ ಟೋನ್ಡ್ ಎಬಿಎಸ್ ಅನ್ನೇ ಇಷ್ಟಪಡುತ್ತಾರೆ. ಆದರೆ ಇದು ಎಷ್ಟರ ಮಟ್ಟಿಗೆ ಸರಿ? ನಿಜವಾಗಿಯೂ ಇದು ಆಕರ್ಷಕವೇ ಎಂಬುದು ತಿಳಿದಿಲ್ಲ. ಆದರೆ ಜಗತ್ತಿನಾದ್ಯಂತ ಈ ಟ್ರೆಂಡ್ ವ್ಯಾಪಕವಾಗಿ ಹರಡಿರುವುದಂತೂ ನಿಜ. ಟೆಕ್ಸಾಸ್ (Texas) ವಿಶ್ವವಿದ್ಯಾಲಯ, ಪುರುಷರು ಯಾವ ರೀತಿಯ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದರ ಕುರಿತು ಅಧ್ಯಯನ ನಡೆಸಿತು. ಈ ಅಧ್ಯಯನ (Study) ಪ್ರಕಾರ, ಪುರುಷರು ಕೂಡ ಕರ್ವಿ ಫಿಗರ್ ಹೊಂದಿದ ಮಹಿಳೆಯರನ್ನೇ ಹೆಚ್ಚು ಇಷ್ಟಪಡುತ್ತಾರೆ ಎಂಬುದು ತಿಳಿದುಬಂದಿದೆ.
ಬೆಳಗ್ಗಿನ ಲೈಂಗಿಕ ಕ್ರಿಯೆ ದಿನವಿಡೀ ರಿಫ್ರೆಶ್ ಆಗಿರುವಂತೆ ಮಾಡುತ್ತೆ
ಅಧ್ಯಯನ ಹೀಗೆ ಹೇಳುತ್ತೆ? : ಟೆಕ್ಸಾಸ್ ವಿಶ್ವವಿದ್ಯಾಲಯವು ಸುಮಾರು 100 ಪುರುಷರಿಗೆ ಬೇರೆ ಬೇರೆ ರೀತಿ ಪ್ರಶ್ನೆ ಕೇಳಿದೆ. ಮಹಿಳೆಯರ ಬೇರೆ ಬೇರೆ ಫೋಟೋಗಳನ್ನು ತೋರಿಸಿ ಅವರು ಯಾವ ರೀತಿಯ ಮಹಿಳೆಯರನ್ನು ಹೆಚ್ಚು ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲಾಗಿದೆ. ಎಲ್ಲ ಪುರುಷರಿಗೂ ಬಟಕ್ ಕರ್ವ್ ಹೊಂದಿರುವ ಮಹಿಳೆಯರನ್ನೇ ಇಷ್ಟಪಟ್ಟರು. ಈ ರೀತಿಯ ಶರೀರ ಯಶಸ್ವಿ ಗರ್ಭಧಾರಣೆಗೆ ಯೋಗ್ಯವಾಗಿರುತ್ತದೆ ಎಂದು ಹಿಂದಿನ ಕಾಲದಲ್ಲಿ ಹೇಳುತ್ತಿದ್ದರು ಎಂಬುದನ್ನು ಕೂಡ ಈ ಅಧ್ಯಯನ ಹೇಳಿದೆ. ಈ ರೀತಿಯ ಬೆನ್ನುಮೂಳೆಯ ರಚನೆಯು ಮಹಿಳೆಯರಿಗೆ ಸೊಂಟ ಮತ್ತು ದೇಹದ ನಡುವಿನ ತೂಕವನ್ನು ಸಮತೋಲನಗೊಳಿಸಲು ಸಹಾಯಮಾಡುತ್ತದೆ ಎಂದು ಅಧ್ಯಯನ ತಿಳಿಸಿದೆ. ಕರ್ವಿ ಫಿಗರ್ ಗೂ ಲೈಂಗಿಕ ಆಕರ್ಷಣೆಗೂ ನಿಕಟ ಸಂಬಂಧವಿದೆ. ಏಕೆಂದರೆ ತೆಳ್ಳಗಿನ ಮಹಿಳೆಯರಿಗಿಂತ ಕರ್ವಿ ಫಿಗರ್ ಹೊಂದಿದ ಮಹಿಳೆಯರೇ ಹೆಚ್ಚು ಆಕರ್ಷಕವಾಗಿ ಕಾಣಿಸುತ್ತಾರೆ.
Trending : ಛೀ..! ಒಳ ಉಡುಪು ಬದಲಿಸಲ್ವಂತೆ ಈಕೆ ಬಾಯ್ ಫ್ರೆಂಡ್, ಏನ್ಮಾಡ್ಲೀ ಕೇಳಿದ್ದಾಳೆ
ವೈಜ್ಞಾನಿಕ ಕಾರಣವೇನು? : ಕರ್ವಿ ಫಿಗರ್ ಹೊಂದಿದ ಮಹಿಳೆಯರನ್ನು ಹೆಚ್ಚು ಇಷ್ಟಪಡಲು ಪ್ರಮುಖ ಕಾರಣ ಅವರಲ್ಲಿರುವ ಸಂತಾನೋತ್ಪತ್ತಿಯ ಶಕ್ತಿ. ಇಂತಹ ಅಂಗಾಂಗಗಳನ್ನು ಹೊಂದಿದ ಮಹಿಳೆಯರ ಕೆಲವು ಪ್ರಮುಖ ಭಾಗಗಳಲ್ಲಿ ಹೆಚ್ಚುವರಿ ಕೊಬ್ಬು ಇರುತ್ತದೆ. ಕೊಬ್ಬು ಎಂದರೆ ಒಮೇಗಾ 3 ಫ್ಯಾಟಿ ಎಸಿಡ್ ಹೆಚ್ಚಿರುತ್ತದೆ. ಇದರಿಂದ ಚರ್ಮ ಮತ್ತು ಶರೀರ ಎರಡೂ ಆಕರ್ಷಕವಾಗಿ ಕಾಣುತ್ತದೆ. ಇದರಿಂದ ಗರ್ಭಧಾರಣೆಯ ಸಮಯದಲ್ಲಿ ತಾಯಿ ಮತ್ತು ಮಗುವಿನ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಟೆಕ್ಸಾಸ್ ಯುನಿವರ್ಸಿಟಿ ತನ್ನ ಅಧ್ಯಯನದಲ್ಲಿ ಗರ್ಭಧಾರಣೆಯ ನಂತರ ತೂಕ ಹೆಚ್ಚಿಸಿಕೊಂಡ ಮಹಿಳೆಯರು ಆಕರ್ಷಕವಾಗಿ ಕಾಣುತ್ತಾರೆ ಎಂದು ಹೇಳಿದೆ. ಅದೇ ಅಧ್ಯಯನದಲ್ಲಿ ಭಾಗವಹಿಸಿದ ಪುರುಷರ ಎಮ್ ಆರ್ ಐ ಸ್ಕ್ಯಾನ್ ಮಾಡಿದಾಗ ಅವರ ಮೆದುಳು ಡ್ರಗ್ಸ್ ಔಷಧಿಗಳಿಗೆ ಸ್ಪಂದಿಸುವಂತೆ ಸಂಕೇತಗಳನ್ನು ನೀಡುವುದು ತಿಳಿದುಬಂತು.
ಪುರುಷರ ವರ್ತನೆಯೂ ಇಲ್ಲಿ ಮುಖ್ಯ : ವೈಜ್ಞಾನಿಕ ಕಾರಣಗಳು ಏನೇ ಇದ್ದರು ಕೂಡ ಪುರುಷರ ಸ್ವಭಾವ ಹಾಗೂ ವರ್ತನೆಯ ಮೇಲೆ ಅವರ ಇಷ್ಟಗಳು ಕೂಡ ಅವಲಂಬಿಸಿರುತ್ತೆ. ಶೇಕಡಾ 32.7 ಪುರುಷರಿಗೆ ಮೀಡಿಯಮ್ ಸೈಜ್ ಮಹಿಳೆಯರು, ಶೇಕಡಾ 24.4 ಪುರುಷರಿಗೆ ಲಾರ್ಜ್ ಸೈಜ್ ಮಹಿಳೆಯರು ಹಾಗೂ ಶೇಕಡಾ 19.1 ಪುರುಷರಿಗೆ ಎಕ್ಸಟ್ರಾ ಲಾರ್ಜ್ ಮಹಿಳೆಯರು ಇಷ್ಟವಾಗುತ್ತಾರೆ.