ಬಾಯ್‌ಫ್ರೆಂಡ್ ಜೊತೆ ಹೀಗೆಲ್ಲಾ ಮಾಡಿದ್ರೆ ಬ್ರೇಕಪ್ ಆಗೋದು ಖಂಡಿತ !

By Suvarna NewsFirst Published Aug 30, 2022, 11:18 AM IST
Highlights

ಪ್ರೀತಿ ಮಾಡೋದು ತುಂಬಾ ಸುಲಭ. ಆದ್ರೆ ಆ ಪ್ರೀತಿಯನ್ನು ಜೀವನ ಪರ್ಯಂತ ಉಳಿಸೋದು ತುಂಬಾ ಕಷ್ಟ. ಹಾಗೆಂದು ಪ್ರೀತಿಯಲ್ಲಿ ಸಪರೇಟ್ ಆಗಲು ಯಾರೂ ಸಹ ಇಷ್ಟಪಡುವುದಿಲ್ಲ. ಆದ್ರೆ ನೀವು ನಿಮ್ಮ ಸಂಗಾತಿ ಜೊತೆ ಹೀಗೆಲ್ಲಾ ವರ್ತಿಸ್ತಾ ಇದ್ರೆ ಬ್ರೇಕಪ್ ಆಗೋದು ಖಂಡಿತ. 

ಪ್ರೀತಿಯಲ್ಲಿರುವುದು ಮನಸ್ಸಿಗೆ ಖುಷಿ ನೀಡುತ್ತದೆ ನಿಜ. ಆದರೆ ಅದನ್ನು ಸರಿಯಾಗಿ ನಿಭಾಯಿಸಲು ಸಹ ಬರಬೇಕು. ಇಲ್ಲದಿದ್ದರೆ ಸಂಬಂಧಗಳಲ್ಲಿ ಭಿನ್ನಾಭಿಪ್ರಾಯ ಮಾಡಿ ಬ್ರೇಕಪ್ ಆಗುವುದು ಸುಲಭ. ನಿಮ್ಮ ಸಂಗಾತಿ ಎಷ್ಟೇ ಒಳ್ಳೆಯವರಾದರೂ, ಕೆಲವೊಮ್ಮ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಬಹುದು. ಸಾಮಾಜಿಕ ಜಾಲತಾಣ ಮತ್ತು ಡೇಟಿಂಗ್ ಅಪ್ಲಿಕೇಶನ್‌ಗಳ ಈ ಯುಗದಲ್ಲಿ, ಪ್ರೀತಿ ಮತ್ತು ಸಂಗಾತಿಯ ವ್ಯಾಖ್ಯಾನ ಸಂಪೂರ್ಣವಾಗಿ ಬದಲಾಗಿದೆ. ಆದರೆ ಇದರ ಮಧ್ಯೆಯೂ ಅನೇಕರು ಸಂಗಾತಿಯನ್ನು ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಾರೆ. ಆದ್ರೆ ಇನ್ನು ಕೆಲವೊಂದು ಪ್ರೀತಿಯಲ್ಲಿ ಆರಂಭ ಚೆನ್ನಾಗಿದ್ದರೂ ಮುಕ್ತಾಯ ವಿಷಾದನೀಯವಾಗಿರುತ್ತದೆ. ಹೀಗೆ ಆಗಬಾರದು ಅಂದ್ರೆ ಹುಡುಗ-ಹುಡುಗಿ ಇಬ್ಬರೂ ಒಬ್ಬರೊನ್ನಬ್ಬರು ಪರಸ್ಪರ ಅರ್ಥ ಮಾಡಿಕೊಳ್ಳಬೇಕು. ಅದ್ರಲ್ಲೂ ನಿರ್ಧಿಷ್ಟವಾಗಿ ಕೆಲವೊಂದು ವಿಷ್ಯಗಳನ್ನು ಮಾಡ್ಕೊಳ್ಳೋದ್ರಿಂದ ಹುಡುಗರು ಬೇಗ ಸಿಟ್ಟಾಗ್ತಾರೆ. ಬ್ರೇಕಪ್ ಆಗೋದು ಖಂಡಿತ, 

ಕೆಟ್ಟ ಕೆಟ್ಟದಾಗಿ ಮಾತಾಡ್ಬೇಡಿ: ಪ್ರೀತಿ (Love)ಯೆಲ್ಲಿದ್ದಾಗ ಸಂಗಾತಿ (Partner)ಯೊಂದಿಗೆ ನಾವು ಹೆಚ್ಚು ಸಲುಗೆಯಿಂದ ಇರಬಹುದು ನಿಜ. ಆದರೆ ಮನಸ್ಸಿಗೆ ಬೇಸರವನ್ನುಂಟು ಮಾಡುವ ಪದಗಳನ್ನು ಬಳಸುವುದು ಸರಿಯಲ್ಲ. ಕೆಲವೊಬ್ಬರು ಸಿಟ್ಟಿನಿಂದ ಹುಚ್ಚ, ಮೂರ್ಖ ಮೊದಲಾದ ಪದಗಳನ್ನು ಬಳಸಲು ಆರಂಭಿಸುತ್ತಾರೆ. ಇದು ಇಬ್ಬರ ನಡುವಿನ ಸಂಬಂಧ (Relationship)ವನ್ನೇ ಹಾಳು ಮಾಡಬಹುದು.

ಲವ್ ಮಾಡಿದ್ರೆ ಸಾಲ್ದು, ಬ್ರೇಕಪ್ ಆಗ್ಬಾರ್ದು ಅಂದ್ರೆ ಹೀಗೆಲ್ಲಾ ಮಾಡ್ಬೇಕು !

ಆಂಗ್ರಿಬರ್ಡ್‌ ಇಷ್ಟವಾಗಲ್ಲ: ಮನುಷ್ಯನಲ್ಲಿ ಕೋಪ (Angry)ಗೊಳ್ಳುವ ಗುಣ ಸಾಮಾನ್ಯ. ಆದ್ರೆ  ಕೆಲವೊಮ್ಮೆ ಕೋಪವನ್ನು ನಿಯಂತ್ರಿಸಿಕೊಳ್ಳದಿದ್ದರೆ ಅನಾಹುತವಾದೀತು. ಅದರಲ್ಲೂ ಸಂಬಂಧಕ್ಕೆ ಬಂದ ನಂತರವೂ ನಿಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ನಿಮ್ಮ ಸಂಗಾತಿಗೆ ಈ ನಡವಳಿಕೆ ಇಷ್ಟವಾಗದೇ ಇರಬಹುದು. ನಿಮ್ಮ ಸಂಗಾತಿಯನ್ನು ನೀವು ಹೆಚ್ಚು ಪ್ರೀತಿಸಿದಾಗ ಅವನು ತನ್ನನ್ನು ತುಂಬಾ ಅದೃಷ್ಟಶಾಲಿ ಎಂದು ಪರಿಗಣಿಸಲು ಪ್ರಾರಂಭಿಸುತ್ತಾನೆ. ಆದರೆ ವಿಪರೀತ ಕೋಪ ಯಾರಿಗೂ ಇಷ್ಟವಾಗದು. ಪುರುಷರು ಅಂತಹ ಮಹಿಳೆಯರಿಂದ ದೂರವಿರಲು ಇಷ್ಟಪಡುತ್ತಾರೆ. ಸಂಬಂಧದಿಂದ ಬೇರೆಯಾಗಲು ನಿರ್ಧರಿಸುತ್ತಾರೆ. ಹೀಗಾಗಿ ನಿಮ್ಮ ಕೋಪವನ್ನು ನಿಯಂತ್ರಿಸಲು ನೀವು ಕಲಿಯುವುದು ಉತ್ತಮ.

ಗೆಳೆಯನೆಂದರೆ ಗುಲಾಮನಲ್ಲ: ಸಂಬಂಧದಲ್ಲಿರುವ ಕೆಲವು ಹುಡುಗಿಯರು (Girls) ತಮ್ಮ ಸಂಗಾತಿಯನ್ನು ಟೇಕನ್ ಫಾರ್ ಗ್ರಾಂಟೆಡ್ ಆಗಿ ತೆಗೆದುಕೊಳ್ಳುತ್ತಾರೆ. ಕರೆದಾಗ ಬರಬೇಕು. ಡ್ರಾಪ್ ನೀಡಬೇಕು. ಕೇಳಿದ್ದೆಲ್ಲಾ ಕೊಡಿಸಬೇಕು ಎಂದು ಅಂದುಕೊಳ್ಳುತ್ತಾರೆ. ಆದರೆ ಸಂಗಾತಿಯೆಂದರೆ ನೀವು ಹೇಳಿದಂತೆ ಕುಣಿಯಲು ಅವರು ಗುಲಾಮರಲ್ಲ. ಮೊದಲಿಗೆ ನಿಮ್ಮ ಸಂಬಂಧವನ್ನು ನೀವು ಗೌರವಿಸಬೇಕು. ಇದರಲ್ಲಿ ನಿಮ್ಮ ಸಂಗಾತಿಯ ಆಲೋಚನೆಗಳು ಸಹ ಮುಖ್ಯವಾಗಿರುತ್ತದೆ. ಇತರ ವಿಷಯಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ನೀವು ಎಷ್ಟೇ ಒಳ್ಳೆಯವರಾಗಿರುತ್ತೀರಿ, ಆದರೆ ನೀವು ಸಂಬಂಧದಲ್ಲಿ ಬಾಸ್ ಎಂದು ಯೋಚಿಸಲು ಪ್ರಾರಂಭಿಸಿದಾಗ, ಗೆಳೆಯನಿಗೆ ನಿಮ್ಮೊಂದಿಗೆ ತೊಂದರೆ ಉಂಟಾಗುತ್ತದೆ.

ಪ್ರೀತಿಸಿದ ಹುಡುಗಿ ಬೇರೆಯವನನ್ನು ಮದ್ವೆಯಾಗ್ತಿದ್ದಾಳೆ, ಖಿನ್ನತೆಗೆ ಒಳಗಾಗಿದ್ದೇನೆ ಏನ್ಮಾಡ್ಲಿ ?

ಅಳುಮುಂಜಿಯಾಗಬೇಡಿ: ಎಲ್ಲರೂ ಖುಷಿಯಾಗಿರಬೇಕೆಂದ ಬಯಸುತ್ತಾರೆ. ಯಾವಾಗಲೂ ಸಪ್ಪೆ ಮೋರೆ ಹಾಕಿಕೊಂಡಿರುವ, ಅಳುತ್ತಾ (Crying) ಕೂರುವ ಹುಡುಗಿ ಯಾರಿಗೂ ಇಷ್ಟವಾಗುವುದಿಲ್ಲ. ಹುಡುಗಿಯರರು ಹೇಗೆ ಅಳುವ ಹುಡುಗರನ್ನು ಇಷ್ಟಪಡುವುದಿಲ್ಲವೋ ಹಾಗೆಯೇ ಪುರುಷರೂ ಸಹ ಅಂತಹ ಮಹಿಳೆಯರನ್ನು ಇಷ್ಟಪಡುವುದಿಲ್ಲ. ನಿಮ್ಮ ಸಂಗಾತಿಯ ಬಳಿ ಯಾವಾಗಲೂ ದುಃಖದಲ್ಲಿದ್ದು ಏನನ್ನಾದರೂ ಅಳುತ್ತಾ ಹೇಳುತ್ತಿದ್ದರೆ ಇದು ಅವರಿಗೆ ಕಿರಿಕಿರಿಯನ್ನುಂಟು ಮಾಡಬಹುದು. ಕ್ರಮೇಣ ಅವರನ್ನು ನಿಮ್ಮಿಂದ ದೂರ ಉಳಿಯಲು ಯತ್ನಿಸಬಹುದು. 

ಎಲ್ಲದಕ್ಕೂ ಡಿಪೆಂಡ್ ಆಗಬೇಡಿ: ಸಂಗಾತಿ ಸಿಕ್ಕ ತಕ್ಷಣ ಕೆಲವೊಬ್ಬರು ತಮ್ಮ ಎಲ್ಲಾ ಜವಾಬ್ದಾರಿ (Responsibility)ಯನ್ನು ಅವರ ಮೇಲೆ ಹಾಕಿಬಿಡುತ್ತಾರೆ. ಸಣ್ಣಪುಟ್ಟ ವಿಷಯಕ್ಕೂ ಅವರ ನೆರವು ಕೇಳಲು ಶುರು ಮಾಡುತ್ತಾರೆ. ಆದರೆ ಇಂಥಾ ಅಭ್ಯಾಸ ಒಳ್ಳೆಯದಲ್ಲ. ಇದು ನಿಮ್ಮ ಸಂಗಾತಿಯ ಮನಸ್ಸಲ್ಲಿ ವಿಪರೀತ ಒತ್ತಡಕ್ಕೆ ಕಾರಣವಾಗಬಹುದು. ಕ್ರಮೇಣ ಅವರು ಸಂಬಂಧದಿಂದ ಹೊರಗುಳಿಯಲು ನೋಡಬಹುದು. 

click me!