ಕಟ್ಟಿಕೊಂಡವರ ಜೊತೆಯೇ ಕಾಂಪೀಟ್ ಮಾಡುತ್ತೀರಾ? ಒಂಟಿತನ ಫೀಲ್ ಆಗೋ ಹಾಗೆ ಮಾಡುತ್ತೆ ಹುಷಾರು!

By Suvarna News  |  First Published Aug 29, 2022, 5:51 PM IST

ಜೀವನದಲ್ಲಿ ಎಷ್ಟೇ ಸ್ನೇಹಿತರಿದ್ರೂ, ಕುಟುಂಬಸ್ಥರಿದ್ರೂ ಸಂಗಾತಿಯಿಂದ ಸಿಗುವ ಪ್ರೀತಿ ಭಿನ್ನವಾಗಿರುತ್ತದೆ. ಪ್ರತಿಯೊಬ್ಬರೂ ಸಂಗಾತಿ ಬಯಸ್ತಾರೆ. ಆದ್ರೆ ಕೆಲವರ ಬಾಳಿನಲ್ಲಿ ದೀರ್ಘಕಾಲ ಸಂಬಂಧ ಗಟ್ಟಿಯಾಗಿ ಉಳಿಯೋದೇ ಇಲ್ಲ. ಇದಕ್ಕೆ ಅನೇಕ ಕಾರಣವಿದೆ. 
 


ನಮ್ಮ ಸ್ವಭಾವ, ನಡವಳಿಕೆಯೇ ನಮಗೆ ಅನೇಕ ಬಾರಿ ಶತ್ರುವಾಗಿರುತ್ತೆ. ತಮ್ಮ ವರ್ತನೆಯಿಂದಾಗಿ ಕೆಲವರು ಜೀವನದಲ್ಲಿ ಏಕಾಂಗಿಯಾಗಿರ್ತಾರೆ. ಅವರಿಗೆ ಸ್ನೇಹಿತರಿರ್ತಾರೆ. ಆದ್ರೆ ಸಂಗಾತಿ ಇರೋದಿಲ್ಲ. ಇದಕ್ಕೆ ಅನೇಕ ಕಾರಣಗಳಿರುತ್ತವೆ. ಅದನ್ನು ನಾವು ಇಗ್ನೋರ್ ಮಾಡ್ತಾ ಬಂದಿರ್ತೇವೆ. ನಮ್ಮ ಜೀವನದಲ್ಲೂ ಒಂದು ಸ್ಪೇಷಲ್ ವ್ಯಕ್ತಿ ಇರ್ಬೇಕು ಎಂದಾದ್ರೆ ಸಣ್ಣಪುಟ್ಟ ವಿಷ್ಯಗಳನ್ನು ಕೂಡ ನಾವು ಗಮನಿಸಬೇಕು. ಕೆಲವರು ಸಂಗಾತಿ ಹೊಂದಿರ್ತಾರೆ ನಿಜ. ಆದ್ರೆ ಕೆಲವೇ ದಿನಗಳಲ್ಲಿ ಸಂಬಂಧ ಮುರಿದು ಬಿದ್ದಿರುತ್ತದೆ. ಇದಕ್ಕೂ ಅವರ ಮಾತು, ವರ್ತನೆಗಳೇ ಕಾರಣವಾಗಿರುತ್ತದೆ. ಯಾವುದೇ ಸಂಬಂಧವನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳಲು ಸಾಧ್ಯವಾಗ್ತಿಲ್ಲ ಎಂದಾದ್ರೆ ಅದಕ್ಕೆ ನಿಮ್ಮ ವರ್ತನೆಯೂ ಕಾರಣವಾಗಿರುತ್ತದೆ. ಹಾಗಿದ್ರೆ ಜೀವನದಲ್ಲಿ ಒಂಟಿಯಾಗಿರಬಾರದು, ಸಂಗಾತಿ ಜೊತೆಗಿರಬೇಕು  ಎಂದ್ರೆ ನಿಮ್ಮಲ್ಲಿ ಯಾವ ಬದಲಾವಣೆ ಮಾಡಿಕೊಳ್ಬೇಕು ಗೊತ್ತಾ?

ನಾನಲ್ಲ ನೀವು ಎನ್ನುವ ಸ್ವಭಾವ : ಮಾತು ಆಡಿದ್ರೆ ಹೋಯ್ತು, ಮುತ್ತು ಒಡೆದ್ರೆ ಹೋಯ್ತು ಎನ್ನುವ ಮಾತಿದೆ. ಆಡುವ ಮಾತು ಯಾವಾಗ್ಲೂ ಆಲೋಚಿಸಿ ಬಂದಿರಬೇಕು. ಅನೇಕ ಬಾರಿ ತಪ್ಪು (wrong) ನಮ್ಮಿಂದಲೇ ನಡೆದಿರುತ್ತದೆ. ಆದ್ರೆ ಇದನ್ನು ಒಪ್ಪಿಕೊಳ್ಳಲು ಅಹಂ ಅಡ್ಡಿಯಾಗಿರುತ್ತದೆ. ಹಾಗಾಗಿ ಪ್ರತಿ ಬಾರಿ ಏನೇ ತಪ್ಪು ನಡೆದ್ರು ಸಂಗಾತಿಯನ್ನು ಹೊಣೆ ಮಾಡಿರ್ತೇವೆ. ಪ್ರತಿ ವಿಷ್ಯದಲ್ಲೂ ನಾನೇ ಸರಿ ಎಂಬ ಭಾವ ನಿಮ್ಮಲ್ಲಿರುತ್ತದೆ. ಇದು ಕೂಡ ಸಂಬಂಧ (relationship) ಹಾಳು ಮಾಡುತ್ತದೆ. ತಪ್ಪನ್ನು ಒಪ್ಪಿಕೊಂಡು, ಸಂಗಾತಿ ಮಾತನ್ನು ಕೇಳಿದ್ರೆ ಇಬ್ಬರ ಮಧ್ಯೆ ಬಾಂಡಿಂಗ್ ಬೆಳೆಯಲು ಸಾಧ್ಯ.

Tap to resize

Latest Videos

ನೀನಿಲ್ಲವೆಂದ್ರೆ ಇನ್ನೊಬ್ಬರು ಎಂಬ ಮಾತು (Talk) ಗಳು : ಅನೇಕರು ಮಾತಿನ ಭರಾಟೆಯಲ್ಲಿ ನೀನಿಲ್ಲವೆಂದ್ರೂ ಇನ್ನೊಬ್ಬರ ಜೊತೆ ನಾನು ಬಾಳ್ವೆ ಮಾಡಬಲ್ಲೆ ಎನ್ನುತ್ತಾರೆ. ನೀವು ಈ ಮಾತನ್ನು ಪದೇ ಪದೇ ಹೇಳ್ತಿದ್ದರೆ ಸಂಗಾತಿಗೆ ನೋವಾಗುತ್ತದೆ. ನಾನಿಲ್ಲದೆಯೂ ಇವರು ಇರಬಲ್ಲರು ಎಂಬುದು ಅವರ ಅರಿವಿಗೆ ಬರುತ್ತದೆ. ತನ್ನ ಪ್ರೀತಿಗೆ ಬೆಲೆಯಿಲ್ಲ ಎಂದು ಅವರು ಭಾವಿಸ್ತಾರೆ. ನಿಧಾನವಾಗಿ ನಿಮ್ಮಿಂದ ದೂರವಾಗಲು ಬಯಸ್ತಾರೆ. ಅಲ್ಲಿಗೆ ನಿಮ್ಮ ಸಂಬಂಧ ಹಾಳಾದಂತೆ. 

ಸಂಬಂಧ ಚೆನ್ನಾಗಿರಬೇಕಂದ್ರೆ ದೈಹಿಕ ಸಂಬಂಧವಿದ್ದರಷ್ಟೇ ಸಾಲದು !

ಸಂಗಾತಿ ನ್ಯೂನ್ಯತೆ ಹುಡುಕೋದು : ಮುಂದಿರುವ ವ್ಯಕ್ತಿಯ ನ್ಯೂನ್ಯತೆ ಹುಡುಕೋದು ಹೆಗ್ಗಳಿಕೆಯ ಕೆಲಸವಲ್ಲ. ಇದು ಸಂಬಂಧವನ್ನು ಹಾಳು ಮಾಡುತ್ತದೆ. ಅದ್ರಲ್ಲೂ ದಾಂಪತ್ಯ (Marriage) ದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಅನೇಕರು ಸಂಗಾತಿಯ ನ್ಯೂನ್ಯತೆಯನ್ನು ಸದಾ ಎತ್ತಿ ತೋರಿಸುತ್ತಿರುತ್ತಾರೆ. ಸಂಗಾತಿ ದೌರ್ಬಲ್ಯವನ್ನು ತಮಾಷೆ ಮಾಡುವುದು, ಚುಚ್ಚು ಮಾತನಾಡುವ ಮೂಲಕ ಅವರನ್ನು ನೋಯಿಸ್ತಾರೆ. ಯಾರೂ ಪರಿಪೂರ್ಣರಲ್ಲ ಎಂಬುದನ್ನು ಅರಿಯುವುದು ಮುಖ್ಯ. ಸಂಗಾತಿಯಲ್ಲಿ ನ್ಯೂನ್ಯತೆಗಳಿದ್ದರೆ ನೀವು ಅದನ್ನೂ ಒಪ್ಪಿಕೊಳ್ಳಬೇಕು. ಆಗ್ಲೇ  ಸಂಬಂಧ ಗಟ್ಟಿಯಾಗಲು ಸಾಧ್ಯ.

ಬ್ಯುಸಿನೆಸ್ ಟೂರ್ ಮಧ್ಯೆಯೂ ತಂದೆ – ಮಕ್ಕಳ ಸಂಬಂಧ ಹೀಗಿದ್ದರೆ ಚೆನ್ನ

ಸಂಗಾತಿ ಜೊತೆ ಸ್ಪರ್ಧೆ (Competition) ಸಲ್ಲದು : ಇದು ಸ್ಪರ್ಧಾಯುಗ. ಎಲ್ಲದರಲ್ಲೂ ಸ್ಪರ್ಧೆ ಅನಿವಾರ್ಯ. ಆದ್ರೆ ಈ ಸ್ಪರ್ಧೆ ಸಂಗಾತಿ ಮಧ್ಯೆ ಬಂದ್ರೆ ಅದು ಸಂಬಂಧ ಹಾಳು ಮಾಡುತ್ತದೆ. ಸಂಗಾತಿಯೊಂದಿಗೆ ಸ್ಪರ್ಧೆಗಿಳಿಯುವುದು ಎಂದಿಗೂ ಸರಿಯಲ್ಲ. ತನ್ನ ಜೊತೆ ಸ್ಪರ್ಧೆ ನಡೆಸುವ ವ್ಯಕ್ತಿ ಜೊತೆ ಜೀವನ ನಡೆಸಲು ಯಾವುದೇ ವ್ಯಕ್ತಿ ಬಯಸುವುದಿಲ್ಲ. ಇಲ್ಲಿ ಪ್ರೀತಿಗಿಂತ ಪ್ರತಿಷ್ಠೆ ಹೆಚ್ಚಾಗುತ್ತದೆ.  ಸಂಬಂಧ ದುರ್ಬಲವಾಗುತ್ತದೆ.  ಸಂಗಾತಿ ಜೊತೆ ಸ್ಪರ್ಧೆ ನಡೆಸುವ ಬದಲು ಸಂಗಾತಿಯನ್ನು ಬೆಂಬಲಿಸುವುದು ಸಂಸಾರದಲ್ಲಿ ಮುಖ್ಯವಾಗುತ್ತದೆ.  ಸಂಗಾತಿ ಮಾಡಿದ ಕೆಲಸವನ್ನು ಪ್ರಶಂಸಿಸಬೇಕು. ಪಾಲುದಾರರ ಬಗ್ಗೆ ಅಸೂಯೆಪಡಬಾರದು. ಪಾಲುದಾರರನ್ನು ಪ್ರೋತ್ಸಾಹಿಸಬೇಕು. ಅವರ ಯಶಸ್ಸನ್ನು ನಿಮ್ಮ ಯಶಸ್ಸೆಂದು ಭಾವಿಸ್ಬೇಕು. ನೀವು ಸ್ಪರ್ಧೆಗಿಳಿದ್ರೆ ಸಂಗಾತಿ ನಿಮ್ಮಿಂದ ದೂರವಾಗ್ತಾರೆ. ಆಗ ಒಂಟಿ ಜೀವನ ನಿಮ್ಮದಾಗುತ್ತದೆ. ಸಂಗಾತಿ ಜೊತೆಗಿರಬೇಕೆಂದ್ರೆ ಅವರ ಜೊತೆ ಹೆಜ್ಜೆ ಹಾಕುವುದು ಮುಖ್ಯವಾಗುತ್ತದೆ. 
 

click me!