ಕೂಲಿ ಮಾಡಿ ದುಡ್ಡು ಕಳಿಸ್ತಿದ್ದ ಗಂಡ, ನೆರೆಮನೆಯವನ ಜೊತೆ ಓಡಿಹೋದ್ಲು ಹೆಂಡ್ತಿ!

By Vinutha PerlaFirst Published Feb 2, 2023, 11:34 AM IST
Highlights

ಗಂಡ ಪರವೂರಿನಲ್ಲಿದ್ದುಕೊಂಡು ಕಷ್ಟಪಟ್ಟು ಕೂಲಿ ಕೆಲಸ ಮಾಡಿ ಊರಿಗೆ ಹೆಂಡತಿಗೆ ದುಡ್ಡು ಕಳಿಸ್ತಿದ್ದ. ಮನೆ, ಮಕ್ಕಳನ್ನು ಚೆನ್ನಾಗಿ ನೋಡಿಕೋ ಅಂತಿದ್ದ. ಆಕೆಯೋ ಗಂಡನ ಹಣವನ್ನು ಚೆನ್ನಾಗಿ ಖರ್ಚು ಮಾಡಿ ನೆರೆಮನೆಯವನ ಜೊತೆ ಚಕ್ಕಂದ ಮಾಡ್ತಿದ್ಲು. ಗಂಡ ಈ ಬಗ್ಗೆ ಕೇಳಿದ್ದಕ್ಕೆ ಮಕ್ಕಳನ್ನೂ ಬಿಟ್ಟು ಆ ಪ್ರಿಯಕರನ ಜೊತೆ ಓಡಿಯೇ ಹೋದ್ಲು. 

ಮದುವೆಯೆಂಬುದು ತುಂಬಾ ಸುಂದರವಾದ ಬಾಂಧವ್ಯ. ಪತಿ-ಪತ್ನಿ ನಡುವೆ ಪ್ರೀತಿ, ನಂಬಿಕೆ, ವಿಶ್ವಾಸವಿದ್ದಾಗ ದಾಂಪತ್ಯ ಖುಷಿಯಾಗಿರುತ್ತದೆ. ಜೀವನ ಹಾಯಾಗಿರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುವೆಯೆಂಬ ಸಂಬಂಧ ಹೆಚ್ಚು ಕ್ಲಿಷ್ಟಕರವಾಗುತ್ತಾ ಹೋಗುತ್ತಿದೆ. ಗಂಡ-ಹೆಂಡತಿ ನಾನಾ ನೆಪದಲ್ಲಿ ಪರಸ್ಪರ ಮೋಸ ಮಾಡುವುದು, ಅನೈತಿಕ ಸಂಬಂಧ ಇಟ್ಟುಕೊಳ್ಳುವುದು ಸಾಮಾನ್ಯವಾಗಿದೆ. ಕೊನೆಯಲ್ಲಿ ಇದು ಆತ್ಮಹತ್ಯೆ, ಕೊಲೆ ಮಾದಲಾದವುಗಳಲ್ಲಿ ಕೊನೆಯಾಗುತ್ತದೆ. ವರ್ಷಗಳು ಕಳೆಯುತ್ತಾ ಹೋದಂತೆ ಸಂಬಂಧಗಳು ಅರ್ಥಹೀನವಾಗುತ್ತಾ ಹೋಗುತ್ತಿವೆ. ಗಂಡ, ಹೆಂಡತಿ ಸುಖ ಸಂಸಾರವನ್ನು ಬಿಟ್ಟು ಬೇರೆ ಸಂಬಂಧದಲ್ಲಿ ತೊಡಗಿಕೊಳ್ಳುತ್ತಾರೆ. ಕೊನೆಗೆ ಮಕ್ಕಳನ್ನೂ ಬಿಟ್ಟು ಯಾರದೋ ಜೊತೆಗೆ ಓಡಿ ಹೋಗುತ್ತಾರೆ. ಇಲ್ಲೊಂದೆಡೆ ಹಾಗೆಯೇ ಆಗಿದೆ. 

ವರ್ಷಗಳು ಕಳೆಯುತ್ತಾ ಹೋದಂತೆ ಸಂಬಂಧಗಳು (Relationship) ಅರ್ಥಹೀನವಾಗುತ್ತಾ ಹೋಗುತ್ತಿವೆ. ಪ್ರೀತಿ, ನಂಬಿಕೆ, ವಿಶ್ವಾಸ ಅನ್ನೋದು ಮರೀಚಿಕೆಯಾಗುತ್ತಿದೆ. ಗಂಡ-ಹೆಂಡಿರ (Husband-wife) ಮಧ್ಯೆ ಮತ್ತೊಬ್ಬ, ಮತ್ತೊಬ್ಬಳು ಬರೋದು ಸಾಮಾನ್ಯವಾಗಿದೆ. ಇಲ್ಲಿಯೂ ಅಂಥಹದ್ದೇ ಘಟನೆಯೊಂದು ನಡೆದಿದೆ. ಪರವೂರಿನಲ್ಲಿ ಕೂಲಿ ಕೆಲಸ ಮಾಡಿ ಗಂಡ ದುಡ್ಡು ಕಳಿಸ್ತಾ ಇದ್ರೆ, ಹೆಂಡ್ತಿ ಮಾತ್ರ ಪರಪುರುಷನ ಜೊತೆ ಚಕ್ಕಂದವಾಡಿ ಮನೆಬಿಟ್ಟು ಓಡಿ ಹೋಗಿದ್ದಾಳೆ. 

Relationship Tips: ಇಂಥಾ ತಪ್ಪು ಮಾಡಿದ್ರೆ ಹೆಂಡ್ತಿ ದೂರ ಆಗೋದು ಖಂಡಿತ

ಗಂಡ, ಮಕ್ಕಳನ್ನು ಬಿಟ್ಟು ನೆರೆಮನೆಯವನ ಜೊತೆ ಓಡಿಹೋದ ಹೆಂಡ್ತಿ
ಬಿಹಾರದ ಅಸರ್‌ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಕ್ವಾ ಗ್ರಾಮದಲ್ಲಿ ವಾಸಿಸುವ ತ್ರಿಪುರಾರಿ ಸಾಹ್, ಬೇಗುಸರಾಯ್‌ನಲ್ಲಿ ವಾಸಿಸುವ ನರ್ಮದಾ ಅವರನ್ನು 2007ರಲ್ಲಿ ವಿವಾಹವಾಗಿದ್ದನು. ಇಬ್ಬರ ಜೀವನವೂ ಸುಖಮಯವಾಗಿತ್ತು. ಇಬ್ಬರು ಮಕ್ಕಳೂ (Children) ಇದ್ದರು. ಮದುವೆಯಾದ ಕೆಲವು ವರ್ಷಗಳ ನಂತರ, ತ್ರಿಪುರಾರಿ ಸಾಹ್ ಮನೆಯನ್ನು ನೋಡಿಕೊಳ್ಳಲು ಮುಂಬೈಗೆ ತೆರಳಿದನು. ಅಲ್ಲಿ ಕೂಲಿ ಕೆಲಸ ಮಾಡಿ ಮನೆಗೆ ದುಡ್ಡು ಕಳುಹಿಸುತ್ತಿದ್ದನು. ಹಳ್ಳಿಯಲ್ಲಿ ಮನೆಯ ಪರಿಸ್ಥಿತಿ ನಿಭಾಯಿಸಿ ಮಗುವನ್ನು ಚೆನ್ನಾಗಿ ಬೆಳೆಸಲೆಂದು ಹೆಂಡತಿಗೆ ಹಣ ಕಳುಹಿಸುತ್ತಿದ್ದನು.

ಗಂಡನ ಅನುಪಸ್ಥಿತಿಯಲ್ಲಿ, ನರ್ಮದಾ, ನೆರೆಮನೆಯ ಕೈಲಾಶ್ ಸಾಹ್ ಜೊತೆ ಸಂಬಂಧ ಇಟ್ಟುಕೊಂಡಿದ್ಲು. ಸಂಬಂಧದಲ್ಲಿ ಅವನು ಅವಳ ಸೋದರಮಾವನಂತೆ ತೋರುತ್ತಿದ್ದನು.  ಹೀಗಿದ್ದೂ ನಾಲ್ಕು ಮಕ್ಕಳ ತಂದೆಯ ಜೊತೆ ಎರಡು ಮಕ್ಕಳ ತಾಯಿಯ ಚಕ್ಕಂದ ಮುಂದುವರೆದಿತ್ತು. ಇಬ್ಬರೂ ಗಂಟೆಗಟ್ಟಲೆ ಫೋನಿನಲ್ಲಿ ಮಾತನಾಡತೊಡಗಿದರು. ಕೆಲ ದಿನಗಳ ಬಳಿಕ ತ್ರಿಪುರಾರಿಗೆ ಈ ವಿಷಯ ಗೊತ್ತಾಗಿತ್ತು, ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆಯಿತು. ಘಟನೆ ನಡೆದ ನಾಲ್ಕು ದಿನಗಳ ನಂತರ ವಿವಾಹಿತ ಮಹಿಳೆ ನೆರೆಮನೆಯವನ ಜೊತೆ ಓಡಿ ಹೋಗಿದ್ದಾಳೆ (Elpoe). ಅಷ್ಟೇ ಅಲ್ಲ ಮಕ್ಕಳಿಬ್ಬರನ್ನೂ ಕರೆದುಕೊಂಡು ನಾಪತ್ತೆಯಾಗಿದ್ದಾಳೆ.

ಅಯ್ಯಯ್ಯೋ..ಜಗಳದಲ್ಲಿ ಗಂಡನ ನಾಲಗೆ ಕಚ್ಚಿದ ಹೆಂಡ್ತಿ, ತುಂಡಾಗಿ ಬಿತ್ತು ನಾಲಗೆ!

ಬಟ್ಟೆಬರೆ, ಒಡವೆ, ಧಾನ್ಯಗಳನ್ನೆಲ್ಲಾ ತೆಗೆದುಕೊಂಡು ಓಡಿ ಹೋದ್ಲು
ಈ ವಿಷಯ ತಿಳಿದ ಪತಿ ಮನೆಗೆ ತಲುಪಿದಾಗ ಇಡೀ ಮನೆ ಖಾಲಿಯಾಗಿತ್ತು. ಮದುವೆಯಲ್ಲಿ ಸಿಕ್ಕ ಒಡವೆಗಳ ಜೊತೆಗೆ ಬಟ್ಟೆ-ಧಾನ್ಯಗಳನ್ನೆಲ್ಲ ಪತ್ನಿ  ತೆಗೆದುಕೊಂಡು ಹೋಗಿದ್ದಳು. ಬಳಿಕ ಸಂತ್ರಸ್ತೆಯ ಪತಿ ಪೊಲೀಸ್ ಠಾಣೆಗೆ ಬಂದು ದೂರು (Complaint) ದಾಖಲಿಸಿದ್ದಾರೆ. ಕೈಲಾಶ್ ಸೇರಿದಂತೆ ನಾಲ್ವರ ವಿರುದ್ಧ ಲಿಖಿತ ದೂರು ಪತ್ರ ನೀಡಿದ್ದಾರೆ. ಸುಮಾರು 2 ವರ್ಷಗಳಿಂದ ನನ್ನ ಪತ್ನಿ ಪಕ್ಕದ ಮನೆಯ ಕೈಲಾಶ್ ಷಾ ಅವರೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು ಎಂದು ಅವರು ಹೇಳಿದರು. ಈ ವಿಚಾರವಾಗಿ ನಮ್ಮ ನಡುವೆ ಜಗಳ ನಡೆಯುತ್ತಿತ್ತು. ಜನವರಿ 23 ರಂದು, ಅವಳು ಅವನೊಂದಿಗೆ ಓಡಿಹೋಗಿದ್ದಳು ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ನರ್ಮದಾ ಮತ್ತು ಕೈಲಾಶ್‌ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಅದೇನೆ ಇರ್ಲಿ, ಗಂಡ ಇನ್ನೊಂದು ಊರಲ್ಲಿ ಕಷ್ಟಪಟ್ಟು ದುಡಿಯುತ್ತಿರುವಾಗ ಪತ್ನಿ ಮಾತ್ರ ಎಲ್ಲವನ್ನೂ ಮರೆತು ಅನೈತಿಕ ಸಂಬಂಧ ಇಟ್ಟುಕೊಂಡು ಅನ್ಯಾಯವೆಸಗಿದ್ದಾಳೆ. ಮಾತ್ರವಲ್ಲ ಮೈ ಮರೆತು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ದೋಚಿ ಮಕ್ಕಳೊಂದಿಗೆ ಓಡಿ ಹೋಗಿರೋದು ವಿಪರ್ಯಾಸವೇ ಸರಿ. 

click me!