ಪತಿ ನಾರಾಯಣ ಮೂರ್ತಿ, ಮಗಳು ಮತ್ತು ಅಳಿಯ ರಿಷಿ ಸುನಕ್‌ಗೆ 4 ಅಂಶಗಳ ಸಲಹೆ ನೀಡಿದ ಸುಧಾಮೂರ್ತಿ..

By BK Ashwin  |  First Published Jan 31, 2023, 10:13 PM IST

ಸದಾ ಪ್ರಚಲಿತದಲ್ಲಿರುವ ಜನರು ಯಾವಾಗಲೂ ವಿವಾದಗಳನ್ನು ಸಹ ಹೊಂದಿರುತ್ತಾರೆ ಎಂದು ಸುಧಾಮೂರ್ತಿ ಹೇಳಿದ್ದಾರೆ.


ನವದೆಹಲಿ (ಜನವರಿ 31, 2023): ಸುಧಾಮೂರ್ತಿ ಅವರು ಸರಳತೆಗೆ ಹೆಸರುವಾಸಿ. ಈ ಹಿನ್ನೆಲೆ ಇವರನ್ನು ಕಂಡರೆ ರಾಜ್ಯದ ಜನರಿಗಷ್ಟೇ ದೇಶದ ಅನೇಕರಿಗೂ ಅಚ್ಚುಮೆಚ್ಚು. ಇವರಿಗೆ ಈ ವರ್ಷ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿರುವುದು ಅನೇಕರಿಗೆ ಸಂತೋಷ ತಂದಿದೆ. ಲೇಖಕಿಯೂ ಆಗಿರುವ ಸುಧಾಮೂರ್ತಿ ಅವರು ಇಂದು ತಮ್ಮ ಪತಿ ಮತ್ತು ಇನ್ಫೋಸಿಸ್ ಸಂಸ್ಥಾಪಕ ಎನ್‌.ಆರ್. ನಾರಾಯಣ ಮೂರ್ತಿ ಅವರ ಅಳಿಯ ಮತ್ತು ಯುಕೆ ಪ್ರಧಾನಿ ರಿಷಿ ಸುನಕ್ ಹಾಗೂ ಮಗಳು ಅಕ್ಷತಾ ಮೂರ್ತಿ ಅವರಿಗೆ ನಾಲ್ಕು ಅಂಶಗಳ ಸಲಹೆಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ, ವಿವಾದಗಳನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 

ಸದಾ ಪ್ರಚಲಿತದಲ್ಲಿರುವ ಜನರು ಯಾವಾಗಲೂ ವಿವಾದಗಳನ್ನು ಸಹ ಹೊಂದಿರುತ್ತಾರೆ ಎಂದು ಸುಧಾಮೂರ್ತಿ (Sudha Murthy) ಹೇಳಿದ್ದಾರೆ. ಈ ಹಿನ್ನೆಲೆ, ಇಂತಹವರು ನೈತಿಕವಾಗಿ ಸರಿಯಾಗಿರಬೇಕು (Morally and Ethically Right) ಹಾಗೂ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು (Work Sincerely) ಎಂದು ಸುಧಾಮೂರ್ತಿ ಅವರು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಲ್ಲದೆ, ತಾಳ್ಮೆಯನ್ನು (Patience) ಮುಖ್ಯ ಅವಶ್ಯಕತೆಯಾಗಿ ಮತ್ತು ಒಬ್ಬರ ಮಿತಿಗಳನ್ನು ತಿಳಿದುಕೊಳ್ಳುವ ಬುದ್ಧಿವಂತಿಕೆಯನ್ನು ಸಹ ಪಟ್ಟಿ ಮಾಡಿದ್ದಾರೆ.

Tap to resize

Latest Videos

ಇದನ್ನು ಓದಿ: Padma Awards 2023: ಎಸ್‌ಎಂ ಕೃಷ್ಣಗೆ ಪದ್ಮವಿಭೂಷಣ, ಎಸ್‌ಎಲ್‌ ಭೈರಪ್ಪ, ಸುಧಾಮೂರ್ತಿಗೆ ಪದ್ಮಭೂಷಣ ಗೌರವ!

ಈ ಮಧ್ಯೆ, ಸಾಮಾನ್ಯ ಜನರಿಗೂ ಸಲಹೆ ನೀಡಿದ ಸುಧಾಮೂರ್ತಿ, ಪ್ರತಿಯೊಬ್ಬರಿಗೂ ಸಾಮರ್ಥ್ಯವಿದೆ, ಆದರೆ ಮಿತಿಗಳಿವೆ ಎಂದೂ ಹೇಳಿದ್ದಾರೆ. ಭಾರತದ ಮೂರನೇ ಅತ್ಯುನ್ನತ ನಾಗರಿಕ ಗೌರವಕ್ಕೆ ಆಯ್ಕೆಯಾದ ದಿನಗಳ ನಂತರ ಅವರು NDTV ಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನಾಡಿದ್ದಾರೆ.

ಮಹಿಳೆಯರಿಗೂ ಸಹ ಸುಧಾಮೂರ್ತಿ ಸಲಹೆಯೊಂದನ್ನು ನೀಡಿದ್ದಾರೆ, ವಿಶೇಷವಾಗಿ ತಮ್ಮ ವೃತ್ತಿಯೊಂದಿಗೆ ವೈಯಕ್ತಿಕ ಜೀವನವನ್ನು ಸಹ ನಿಭಾಯಿಸಿಕೊಂಡು ಹೋಗುವವರಿಗೆ ಹೀಗೆ ಹೇಳಿದ್ದಾರೆ ನೋಡಿ.. "ನಾನು ಎಲ್ಲಾ ಭಾರತೀಯ ಮಹಿಳೆಯರಿಗೆ ಹೇಳಲು ಬಯಸುವುದು, ಒಮ್ಮೆ ಮಕ್ಕಳು ಬಂದರೆ, ಅವರು ಆದ್ಯತೆಯಾಗುತ್ತಾರೆ, ನೀವು ಮತ್ತೆ (ನಿಮ್ಮ ವೃತ್ತಿಗೆ) ಸೇರಿದಾಗ, ನೀವು ಅದೇ ಮಟ್ಟಕ್ಕೆ ಸೇರುವುದಿಲ್ಲ. ಆದರೆ ನೆನಪಿಡಿ, ವಯಸ್ಸು ಯಾವುದೇ ಅಡ್ಡಿಯಾಗುವುದಿಲ್ಲ. ನಿಮ್ಮ ಉತ್ಸಾಹವೇ ನಿಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಮತ್ತು ಉತ್ತಮ ಬೆಂಬಲ ವ್ಯವಸ್ಥೆಯೂ ಅಗತ್ಯ ಎಂದು ಸುಧಾಮೂರ್ತಿ ಮಹಿಳೆಯರಿಗೆ ಸಲಹೆ ನೀಡಿದ್ದಾರೆ. 

ಇದನ್ನೂ ಓದಿ: ರೊಮ್ಯಾನ್ಸ್ ಆದ್ಮೇಲೆ? ರಿಯಲ್ ಲೈಫ್ ಸತ್ಯಗಳ ಬಗ್ಗೆ ಸುಧಾಮೂರ್ತಿ ಮಾತು!
.
ಈ ಬಗ್ಗೆ ತನ್ನ ಸ್ವಂತ ಜೀವನವನ್ನೇ ಉದಾಹರಣೆಯಾಗಿ ನೀಡಿದ ಸುಧಾಮೂರ್ತಿ: "ನಾನು ನನ್ನ ವೃತ್ತಿಜೀವನದಿಂದ ಬ್ರೇಕ್‌ ತೆಗೆದುಕೊಂಡಾಗ, ಇದು [ಬರವಣಿಗೆಯಲ್ಲಿ ವೃತ್ತಿಜೀವನ] ಸಾಧ್ಯ ಎಂದು ನಾನು ಎಂದಿಗೂ ಯೋಚಿಸಸಿರಲಿಲ್ಲ. ನಾನು ತಂತ್ರಜ್ಞನಾಗಿದ್ದರಿಂದ ಮತ್ತು ನಾನು ತಾಂತ್ರಿಕ ಕಂಪನಿಯಲ್ಲಿ ಕೆಲಸ ಮಾಡಲು ಇಷ್ಟಪಟ್ಟಿದ್ದರಿಂದ ಇದು ನನಗೆ ಕಷ್ಟಕರವಾಗಿತ್ತು. ಆದರೆ, ಇತರೆ ವ್ಯಕ್ತಿಗಳನ್ನು ನಕಲು ಮಾಡುವ ಬದಲಿಗೆ, ನಾನು ಬೇರೆ ಏನಾದರೂ ಮಾಡಲು ನಿರ್ಧರಿಸಿದೆ." ಎಂದು ಹೇಳಿದ್ದಾರೆ.

ಮೂಲತಃ ಎಂಜಿನಿಯರ್ ಮತ್ತು ಕಂಪ್ಯೂಟರ್ ಸೈನ್ಸ್ ತಜ್ಞರಾಗಿರುವ ಸುಧಾಮೂರ್ತಿ ಅವರು 20 ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಟಿವಿ ಸೀರಿಸ್‌ಗಳಿಗೆ ಸ್ಫೂರ್ತಿ ನೀಡಿವೆ. ಇನ್ನು, ನನಗೆ ಬರವಣಿಗೆಯ ಉತ್ಸಾಹವಿದೆ, ನಾನು ಆರಂಭದಲ್ಲಿ ಕನ್ನಡದಲ್ಲಿ ಬರೆಯುತ್ತಿದ್ದೆ. ಆದರೆ, ಇಂಗ್ಲಿಷ್‌ನಲ್ಲಿ ನನ್ನ ಮೊದಲ ಪುಸ್ತಕ ಪ್ರಕಟವಾದಾಗ, ಅದು ನನ್ನ ಜೀವನದಲ್ಲಿ ಒಂದು ಮಹತ್ವದ ತಿರುವು ಏಕೆಂದರೆ ಅದು ಎಲ್ಲಾ ಭಾರತೀಯ ಭಾಷೆಗಳಿಗೆ ಅನುವಾದವಾಯ್ತು. ನನ್ನನ್ನು ಮರುಶೋಧಿಸಲು ನನಗೆ ಸಾಧ್ಯವಾಯ್ತು’’ ಎಂದೂ ಸುಧಾಮೂರ್ತಿ ಈ ಬಗ್ಗೆ ಹೇಳಿದ್ದಾರೆ. 

ಇದನ್ನು ಓದಿ: ಜೈಪುರದಲ್ಲಿ ಜನವರಿ 19ರಿಂದ ನಡೆಯಲಿರುವ ಸಾಹಿತ್ಯ ಉತ್ಸವದಲ್ಲಿ ಸುಧಾಮೂರ್ತಿ

ಅಲ್ಲದೆ, ಹಣ ಇದ್ದರೂ, ಸಂಪತ್ತನ್ನು ಇತರರಿಗೆ ತೋರಿಸೋದು ಏನಿದೆ. ನನಗಿಂತ ಮುಂಚೆಯೂ ಶ್ರೀಮಂತರಿದ್ದರು ಮತ್ತು ನನ್ನ ನಂತರವೂ ಇರುತ್ತಾರೆ ಎಂದು ತಮ್ಮ ಸರಳತೆಯ ಬಗ್ಗೆಯೂ ಪಾಠ ಮಾಡಿದ್ದಾರೆ ಸುಧಾಮೂರ್ತಿ.

click me!