FeelFree: ಪಕ್ಕದ ಮನೆಯವಳ ಒಳ ಉಡುಪು ನೋಡಿದರೆ ಗಂಡನಿಗೆ ಉದ್ರೇಕ!

By Suvarna News  |  First Published Jun 7, 2021, 1:15 PM IST

ಪತ್ನಿಯ ಅಂಡರ್‌ವೇರ್‌ ನೋಡಿದರೆ ಉದ್ರೇಕಿತನಾಗುವ ಗಂಡು, ಪಕ್ಕದ ಮನೆಯವಳ ಅಂಡರ್‌ವೇರ್‌ನತ್ತ ಆಕರ್ಷಿತನಾದರೆ?


ಪ್ರಶ್ನೆ: ನನ್ನ ಗಂಡನಿಗೆ ನನ್ನ ಅಂಡರ್‌ವೇರ್‌ ನೋಡಿದರೆ ಸೆಕ್ಸ್‌ನಲ್ಲಿ ಆಸಕ್ತಿ ಕೆರಳುತ್ತದೆ. ಕೆಲವೊಮ್ಮೆ ನಾನು ಎಷ್ಟೇ ಪ್ರಚೋದಕ ಡ್ರೆಸ್ ಹಾಕಿದರೂ ಉದ್ರೇಕಿತರಾಗದ ಅವರು, ಬರಿಯ ನನ್ನ ಒಳ ಉಡುಪು ನೋಡಿದರೂ ಉದ್ರೇಕಿತರಾಗುತ್ತಾರೆ. ಕೆಲವೊಮ್ಮೆ ಬಾತ್‌ರೂಮಿನಲ್ಲಿ ನನ್ನ ಕಾಚಾ ನೋಡಿದರೂ ಸೆಕ್ಸ್‌ಗೆ ಸಿದ್ಧರಾಗುತ್ತಾರೆ. ಇದರಿಂದಾಗಿ ನಾನು ನನ್ನ ಒಳ ಉಡುಪುಗಳನ್ನು ಅಡಗಿಸಿಡಲು ಆರಂಭಿಸಿದ್ದೇನೆ. ಆದರೆ ಈಗ ಇನ್ನೊಂದು ಸಮಸ್ಯೆ ಶುರುವಾಗಿದೆ. ಪಕ್ಕದ ಮನೆಯ ಮಹಿಳೆ, ಅವರ ಅಂಡರ್‌ವೇರ್ ಬಾಲ್ಕನಿಯಲ್ಲಿ ಒಣಗಲು ಹಾಕಿದ್ದರೆ ಅದನ್ನು ನೋಡಿ ಉದ್ರೇಕಿತರಾಗಿ, ನನ್ನನ್ನು ಸೆಕ್ಸ್‌ಗೆ ಆಹ್ವಾನಿಸುತ್ತಾರೆ. ಇದು ಮಾನಸಿಕ ಸಮಸ್ಯೆಯೇ? ಇದರಿಂದ ಅಪಾಯವಿದೆಯೇ?

ಉತ್ತರ: ಇದನ್ನು ಅಂಡರ್‌ವೇರ್‌ ಫೆಟಿಶ್ ಅಥವಾ ಪ್ಯಾಂಟಿ ಫೆಟಿಶ್‌ ಎನ್ನುತ್ತಾರೆ. ಅಂದರೆ ವಿರುದ್ಧ ಲಿಂಗಿಯ ಒಳ ಉಡುಪು ನೋಡಿ ಉದ್ರೇಕಿತರಾಗುವುದು. ಇವರನ್ನು ಸೆಕ್ಸ್‌ನಲ್ಲಿ ಇನ್‌ವಾಲ್ವ್ ಮಾಡಲು ಇದು ಸುಲಭದ ತಂತ್ರವೂ ಹೌದು. ಇದು ಅಸಹಜ ಸ್ವಭಾವ. ಆದರೆ ಲೋಕದಲ್ಲಿ ಎಲ್ಲೂ ಇಲ್ಲದ್ದೇನಲ್ಲ. ಒಂದು ಅಂದಾಜು ಪ್ರಕಾರ ಸುಮಾರು ಶೇ.25 ಗಂಡಸರು ಹೀಗೆ ಅನ್ಯ ಸ್ತ್ರೀಯರ ಒಳ ಉಡುಪು ನೋಡಿ ಉದ್ರೇಕಿತರಾಗುತ್ತಾರೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಸಾಮಾನ್ಯವಾಗಿ ಇದು ನಿರಪಾಯಕಾರಿ. ಇದರಿಂದ ಸಮಸ್ಯೆಯೇನಿಲ್ಲ. ಅವರ ಈ ಗೀಳಿನಿಂದ ನಿಮಗೂ ಖುಷಿಯೇ ಆಗುತ್ತಿದೆಯಲ್ವೇ? ಒಂದು ವೇಳೆ ಆ ಗೀಳು ಹಿಡಿತ ತಪ್ಪಿ ಹೋಗುತ್ತಿದೆ ಎಂದಾದರೆ ಮಾತ್ಎ ಕೌನ್ಸೆಲಿಂಗ್ ಮಾಡುವ ಅಗತ್ಯವಿದೆ. ನಿಮ್ಮ ಗಂಡನ ವಿಷಯದಲ್ಲಿ ಸದ್ಯಕ್ಕೆ ಅದು ಅಗತ್ಯವಿಲ್ಲ ಎನಿಸುತ್ತದೆ. ಅಂದ ಹಾಗೆ, ಅವರು ಪಕ್ಕದ ಮನೆಯವರ ಕಾಚಾ ನೋಡುವುದಕ್ಕಿಂತಲೂ ಮುನ್ನವೇ ನಿಮ್ಮ ಅಂಡರ್‌ವೇರ್‌ ಬಳಸಬಾರದೇಕೆ?

Tap to resize

Latest Videos

#Feelfree: ವೀರ್ಯದ್ರವ ಸಾಕಷ್ಟಿದೆ, ಆದರೆ ವೀರ್ಯವಿಲ್ಲ! ...

ಪ್ರಶ್ನೆ : ನಾನು ಇಪ್ಪತ್ತಾರು ವರ್ಷದ ಉದ್ಯೋಗಿ. ಮದುವೆ ಆಗಿಲ್ಲ. ಒಂದಿಷ್ಟು ದಿನದಿಂದ ವರ್ಕ್ ಫ್ರಂ ಹೋಂ ಅಂತ ಮನೆಯಲ್ಲೇ ಬಂಧಿಯಾಗಿದ್ದೇನೆ. ಲಾಕ್ಡೌನ್ನಿಂದಾಗಿ ಮನೆಯಿಂದ ಆಚೆ ಬರೋದಕ್ಕೇ ಕಷ್ಟ ಆಗ್ತಿದೆ. ತುಂಬ ಜನ ಈ ಕಾರಣಕ್ಕೇ ಡಿಪ್ರೆಷನ್‌ಗೆ ತುತ್ತಾಗಿದ್ದಾರೆ. ನನಗೆ ಡಿಪ್ರೆಶನ್ ಅನ್ನೋದಕ್ಕಿಂತ ಒಂದು ಬಗೆಯ ಮಂಕುತನ ಇರೋದಂತೂ ನಿಜ. ನನಗೊಬ್ಬ ಬಾಯ್ ಫ್ರೆಂಡ್ ಇದ್ದಾನೆ. ನನ್ನ ಈ ಸಮಸ್ಯೆಯನ್ನು ನನ್ನ ಬಾಯ್ ಫ್ರೆಂಡ್ ಹತ್ರ ಹೇಳಿದ್ರೆ, ಸೆಕ್ಸ್ ಮಾಡಿದ್ರೆ ಇಂಥಾ ಸಮಸ್ಯೆ ಎಲ್ಲ ಕಡಿಮೆಯಾಗುತ್ತೆ ಅಂತಿದ್ದಾನೆ. ನನಗೆ ಸೆಕ್ಸ್ ಬಗ್ಗೆ ಆಸೆಯ ಜೊತೆಗೆ ಆತಂಕವೂ ಇದೆ. ನಾವಿಬ್ಬರೂ ಸೆಕ್ಸ್ ಮಾಡಿದ್ರೆ ಏನಾದ್ರೂ ಸಮಸ್ಯೆ ಆಗಬಹುದಾ? 

ಉತ್ತರ: ಮೊದಲನೆಯದಾಗಿ ಸೆಕ್ಸ್‌ನಿಂದ ಮಂಕುತನ ಕಡಿಮೆ ಆಗುತ್ತಾ ಅಂತ ಕೇಳಿದ್ದೀರಿ. ಸೆಕ್ಸ್ ಟೈಮ್‌ನಲ್ಲಿ ಬಿಡುಗಡೆಯಾಗುವ ಹಾರ್ಮೋನ್‌ಗಳು ಡಿಪ್ರೆಶನ್ ಅನ್ನು ಕಡಿಮೆ ಮಾಡೋದು ನಿಜ. ಜೊತೆಗೆ ಉದ್ವೇಗವನ್ನೂ ನಿವಾರಿಸುತ್ತದೆ. ಲೈಂಗಿಕತೆ ವೇಳೆಗೆ ಬಿಡುಗಡೆಯಾಗುವ ಡೊಪಮೈನ್, ಎಂಡಾರ್ಫಿನ್ ಮೊದಲಾದ ಹಾರ್ಮೋನ್‌ಗಳು ಮೂಡ್ ಬೂಸ್ಟರ್‌ಗಳಂತೆ ಕೆಲಸ ಮಾಡುತ್ತವೆ. ಈ ಎಲ್ಲ ಮಾನಸಿಕ ಸಮಸ್ಯೆ ಕಡಿಮೆ ಮಾಡಿ ಮನಸ್ಸು ಕೂಲ್ ಆಗೋ ಥರ ಮಾಡುತ್ತವೆ. ಸ್ಟ್ರೆಸ್‌ನಂಥಾ ಸಮಸ್ಯೆಗೂ ಸೆಕ್ಸ್ ಉತ್ತಮ ಪರಿಹಾರ. ಆದರೆ ಇಲ್ಲೊಂದು ವಿಷಯ ಇದೆ. ಈ ಪರಿಹಾರ ತಾತ್ಕಾಲಿಕ. ಸೆಕ್ಸ್ ಮಾಡಿದ ಇಪ್ಪತ್ತನಾಲ್ಕು ಗಂಟೆಯವರೆಗೆ ಈ ಫ್ರೆಶ್‌ನೆಸ್ ಇರಬಹುದು. ಆಮೇಲೆ ನೀವು ನಿಮ್ಮ ಹಿಂದಿನ ಮನಸ್ಥಿತಿಗೆ ಮರಳುವ ಸಾಧ್ಯತೆಯನ್ನು ಅಲ್ಲಗೆಳೆಯಲಾಗುವುದಿಲ್ಲ.

#Feelfree: ಹಸ್ತಮೈಥುನ ಬಿಟ್ಟ ನಂತರ ದೇಹದಲ್ಲಿ ಏನಾಗುತ್ತೆ ಬದಲಾವಣೆ? ...

ಈಗ ನೀವು ಬಾಯ್ ಫ್ರೆಂಡ್ ಜೊತೆಗೆ ಸೆಕ್ಸ್ ಮಾಡಬಹುದಾ ಅಂತ ಕೇಳಿದ್ದೀರಿ. ನಮ್ಮ ಸಾಮಾಜಿಕ ಹಿನ್ನೆಲೆಯಲ್ಲಿ ಮದುವೆಗೂ ಮುನ್ನ ಸೆಕ್ಸ್ ಮಾಡಿದರೆ ಒಂದಿಷ್ಟು ಸವಾಲುಗಳು ಇದ್ದೇ ಇರುತ್ತವೆ. ಆ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ. ಇಷ್ಟಾಗಿಯೂ ನೀವು ಮುಂದುವರಿಯುತ್ತೀರಿ ಅಂತಾದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳಲೇ ಬೇಕು. ಕಾಂಡೋಮ್ ಬಳಸದೇ ಸೆಕ್ಸ್ ಮಾಡಿದರೆ ಗರ್ಭ ಧರಿಸುವ ಸಾಧ್ಯತೆ ಇದೆ. ಗರ್ಭ ನಿರೋಧಕ ಬಳಸಿ ಸೆಕ್ಸ್ ಮಾಡೋದು ಸೇಫ್.
ಎಲ್ಲಕ್ಕಿಂತ ಹೆಚ್ಚಾಗಿ ಇದು ಕೊರೋನಾ ಟೈಮ್. ನಿಮ್ಮ ಫ್ರೆಂಡ್ ಜನ ಸಂಪರ್ಕದಿಂದ ಕಳೆದ ಹದಿನಾಲ್ಕು ದಿನಗಳಿಂದ ದೂರವಿದ್ದರೆ ಸೇಫ್. ಇಲ್ಲ ಅಂತಾದರೆ ಅವರಿಗೇನಾದರೂ ಸೋಂಕು ತಗುಲಿದ್ದರೆ ನಿಮಗೂ ಹರಡುವ ಸಾಧ್ಯತೆ ಇದೆ.
ಸೆಕ್ಸ್ ಮಾಡಲ್ಲ ಅಂದರೂ ನಿಮ್ಮ ಮಾನಸಿಕ ಸಮಸ್ಯೆಗೆ ಪರಿಹಾರ ಇದೆ. ಧ್ಯಾನ, ಪ್ರಾಣಾಯಾಮ, ಯೋಗ ನಿಮ್ಮ ಮಾನಸಿಕ ವಿಷಣ್ಣತೆಯನ್ನು ತಹಬಂದಿಗೆ ತರುತ್ತದೆ. ಮನೆಯೊಳಗೇ ಒಂದಿಲ್ಲೊಂದು ಕೆಲಸದಲ್ಲಿ ಮಗ್ನರಾಗೋದು ಒಳ್ಳೆಯದು. ಎಲ್ಲೂ ಯೋಚನೆಗೆ ಟೈಮ್ ಇರದ ಹಾಗೆ ನೋಡಿಕೊಳ್ಳಿ. ಮನೆಯಲ್ಲಿ ಪುಸ್ತಕ ಇಲ್ಲ ಅಂದರೆ ಇ ಬುಕ್ ಓದಿ. ಸಿನಿಮಾ ನೋಡಿ. ಇಡೀ ದಿನ ಬ್ಯುಸಿಯಾಗಿರಿ. ಮನೆಯೊಳಗೇ ಹಾಡು ಹಾಕಿಕೊಂಡು ಡ್ಯಾನ್ಸ್ ಮಾಡಬಹುದು. ವೀಡಿಯೋ ಕಾಲ್ ಮಾಡಿ ಹಳೇ ಫ್ರೆಂಡ್ಸ್ ಜೊತೆಗೆ ಮಾತನಾಡಬಹುದು. ವಾಲೆಂಟೀರ್ ಆಗಿ ಹಸಿದವರಿಗೆ ಅನ್ನ ನೀಡುವ ಕೆಲಸಕ್ಕೆ ಮುಂದಾಗಬಹುದು. ಬೀದಿನಾಯಿಗಳಿಗೆ ಆಹಾರ ನೀಡಬಹುದು. ಆಗ ನಿಮ್ಮ ಮನಸ್ಸಿಗೆ ಸಮಾಧಾನವೂ ಇರುತ್ತದೆ. ಯಾವುದಕ್ಕೂ ಚೆನ್ನಾಗಿ ಯೋಚಿಸಿ ಮುಂದುವರಿಯಿರಿ.

#Feelfree: ಅವಳಿಗೆ ಸಡನ್ನಾಗಿ ಮೂಡ್ ಹೋಗುತ್ತೆ, ಏನ್ಮಾಡ್ಲೀ... ...

   

click me!