ತಾಳಿ ಕಟ್ಟಿರೋ ಗಂಡ, ಅದಕ್ಕೆ ಹೊಡ್ದೆ; ಭಾಗ್ಯಗೆ ಕಪಾಳಮೋಕ್ಷ ಮಾಡಿದ ತಾಂಡವ್‌ ಮಾತಿಗೆ ನೆಟ್ಟಿಗರು ಕಿಡಿ

By Vinutha Perla  |  First Published Nov 24, 2023, 3:08 PM IST

ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್‌ ಭಾರೀ ಕುತೂಹಲ ಸೃಷ್ಟಿಸುತ್ತಿದೆ. ಪತಿ-ಪತ್ನಿ ಮತ್ತು ಗಂಡನ ಅನೈತಿಕ ಸಂಬಂಧದ ಕಥೆಯನ್ನು ಹೊಂದಿರುವ ಸೀರಿಯಲ್‌ನಲ್ಲಿ ತಾಂಡವ್‌ನ ವರ್ತನೆ ಮಿತಿ ಮೀರುತ್ತಿದೆ. ಸಿಟ್ಟಿಗೆದ್ದು ಹೆಂಡ್ತಿಗೆ ಹೊಡೆದಿದ್ದಾನೆ. ತಾಳಿ ಕಟ್ಟಿರೋ ಗಂಡ, ಅದಕ್ಕೆ ಹೊಡ್ದೆ ಎಂದಿದ್ದಾನೆ. ತಾಂಡವ್‌ ಮಾತಿಗೆ ನೆಟ್ಟಿಗರು ಕಿಡಿಕಾರಿದ್ದಾರೆ.


ಕಲರ್ಸ್ ಕನ್ನಡದಲ್ಲಿ ಮೂಡಿ ಬರುತ್ತಿರುವ 'ಭಾಗ್ಯಲಕ್ಷ್ಮೀ' ಸೀರಿಯಲ್‌ ಭಾರೀ ಕುತೂಹಲ ಸೃಷ್ಟಿಸುತ್ತಿದೆ. ಪತಿ-ಪತ್ನಿ ಮತ್ತು ಗಂಡನ ಅನೈತಿಕ ಸಂಬಂಧದ ಕಥೆಯನ್ನು ಹೊಂದಿರುವ ಸೀರಿಯಲ್‌ನಲ್ಲಿ ತಾಂಡವ್‌ನ ವರ್ತನೆ ಮಿತಿ ಮೀರುತ್ತಿದೆ. ಹೆಂಡ್ತಿಯನ್ನು ದಡ್ಡಿ, ಪೆದ್ದಿ, ಲೋಕ ಜ್ಞಾನ ಇಲ್ಲದವಳು ಎಂದು ಹಂಗಿಸುವ ತಾಂಡವ್‌, ತನ್ನ ಕಚೇರಿಯ ಸಹೋದ್ಯೋಗಿ ಶ್ರೇಷ್ಢಾ ಜೊತೆ ಸಂಬಂಧವಿಟ್ಟುಕೊಂಡಿದ್ದಾನೆ. ಇಬ್ಬರು ಪತಿ-ಪತ್ನಿಯರಂತೆ ಎಲ್ಲೆಡೆ ಸುತ್ತಾಡುತ್ತಾರೆ. ಇತ್ತ, ಭಾಗ್ಯ ಮನೆಯಲ್ಲಿ ಇದ್ಯಾವುದರ ಅರಿವಿಯಿಲ್ಲದೆ ಅಡುಗೆ ಮಾಡುತ್ತಾ, ಅತ್ತೆ-ಮಾವ, ಗಂಡ-ಮಕ್ಕಳ ಚಾಕರಿ ಮಾಡುತ್ತಾ ಕುಳಿತಿದ್ದಾಳೆ. ಇತ್ತೀಚಿಗೆ ಭಾಗ್ಯನಿಗೆ ಗಂಡನ ಮೋಸದ ಅರಿವಾಗಿದೆ. ಇದನ್ನು ಪ್ರಶ್ನಿಸಿದ್ದಕ್ಕೆ ತಾಂಡವ್‌, ಭಾಗ್ಯಳ ಕೆನ್ನೆಗೆ ಹೊಡೆದಿದ್ದಾನೆ.

ನಿನ್ನೆಯ ಸಂಚಿಕೆಯಲ್ಲಿ ಭಾಗ್ಯ, ತಾಂಡವ್‌ ತಪ್ಪನ್ನು ಪ್ರಶ್ನಿಸುತ್ತಾಳೆ.  'ನಿಮ್ಮ ಕೆಟ್ಟ ಬುದ್ಧಿ ನೋಡಿ ಮಕ್ಕಳೂ ಅದನ್ನೇ ಕಲಿಯುತ್ತಿದ್ದಾರೆ. ಮಗಳು ಮುಖಕ್ಕೆ ಹೊಡೆದಂತೆ ಸುಳ್ಳು ಹೇಳುತ್ತಿದ್ದಾಳೆ. ಮಗಳ ದಾರಿ ತಪ್ಪಿಸಿ ನೀವು ಈಗ ಅವಳನ್ನು ಚಾಲಾಕಿ, ಕೆಟ್ಟ ಬುದ್ಧಿ ಅಂತಿದ್ದೀರಾ. ನೀವೊಬ್ಬರು ಕೆಟ್ಟ ಅಪ್ಪ' ಎಂದು ಆಕ್ರೋಶ (Angry) ವ್ಯಕ್ತಪಡಿಸುತ್ತಾಳೆ. ಮಾತ್ರವಲ್ಲ, 'ಹಿಂದೆಲ್ಲಾ ನಾನು ನಿಮ್ಮ ತಪ್ಪನ್ನು ಸಹಿಸಿಕೊಂಡೆ. ಮಕ್ಕಳ ಬಳಿ ನಿಮ್ಮ ಪರ ವಹಿಸಿ ಮಾತನಾಡುತ್ತಿದ್ದೆ. ಆದರೆ ಇನ್ನು ಹಾಗಾಗುವುದಿಲ್ಲ. ಮಕ್ಕಳು ದೊಡ್ಡವರಾಗುತ್ತಿದ್ದಾರೆ. ಅವರಿಗೆ ಎಲ್ಲವೂ ಅರ್ಥವಾಗುತ್ತಿದೆ. ನಾನು ಸುಳ್ಳು ಹೇಳಲಾಗುವುದಿಲ್ಲ' ಎಂದು ಹೇಳುತ್ತಾಳೆ. 

Tap to resize

Latest Videos

ರೆಡ್‌ ಹ್ಯಾಂಡ್‌ ಆಗಿ ಗಂಡನನ್ನು ಹಿಡಿದು ಬಾಯಿಗೆ ಬಂದಂತೆ ಬೈಯ್ದಳು ಭಾಗ್ಯಲಕ್ಷ್ಮೀ; ಮುಂದೇನು ತಾಂಡವ್ ಕಥೆ?

ಭಾಗ್ಯಳಂಥ ಒಳ್ಳೆ ಹೆಂಡ್ತಿ ಸಿಕ್ರೂ ಕೆನ್ನೆಗೆ ಹೊಡೆದ ತಾಂಡವ್‌
ಭಾಗ್ಯ ತನ್ನ ತಪ್ಪನ್ನು ಎತ್ತಿ ಹೇಳ್ತಿರೋದಕ್ಕೆ ಸಿಟ್ಟಿಗೆದ್ದ ತಾಂಡವ್‌, ನಿನ್ನದು ಅತಿಯಾಗುತ್ತಿದೆ ಭಾಗ್ಯ ಎಂದು ಬೀಸಿ ಆಕೆಯ ಕೆನ್ನೆಗೆ ಹೊಡೆಯುತ್ತಾನೆ (Slap). ಹೊಡೆತ ತಿಂದ ಭಾಗ್ಯ ಆಘಾತಕ್ಕೊಳಗಾಗುತ್ತಾಳೆ. ಆಗ ತಾನೇ ರೂಮ್‌ನಿಂದ ಹೊರ ಬಂದ ಗುಂಡಣ್ಣ ತನ್ನ ಅಪ್ಪ, ಅಮ್ಮನಿಗೆ ಹೊಡೆಯುವುದನ್ನು ನೋಡುತ್ತಾನೆ. ಮನೆಯವರೆಲ್ಲಾ ಕೂಗಿ ಕರೆದು ಅಪ್ಪ, ಅಮ್ಮನಿಗೆ ಹೊಡೆದ ವಿಚಾರವನ್ನು ಹೇಳುತ್ತಾನೆ.

ತಾಂಡವ್‌ ತಾಯಿ ಕುಸುಮಾ ಹಾಗೂ ಭಾಗ್ಯಳ ತಾಯಿ ಈ ಬಗ್ಗೆ ತಾಂಡವ್‌ ಬಳಿ ಪ್ರಶ್ನಿಸುತ್ತಾರೆ. ಆದರೆ ಆರಂಭದಲ್ಲಿ ತಾಂಡವ್‌ ಈ ಬಗ್ಗೆ ಏನೂ ಹೇಳುವುದಿಲ್ಲ. ಭಾಗ್ಯಳ ತಾಯಿ, 'ಅಳಿಯಂದ್ರೇ ಯಾಕೆ ನನ್ನ ಮಗಳಿಗೆ ಹೊಡೆದ್ರಿ ಹೇಳಿ' ಎಂದು ಮತ್ತೆ ಮತ್ತೆ ಪ್ರಶ್ನಿಸುತ್ತಾರೆ. ಆಗ ತಾಂಡವ್‌, 'ಯಾಕಂದ್ರೆ ನಾನು ಅವಳಿಗೆ ತಾಳಿ ಕಟ್ಟಿದ್ದೀನಿ. ಅವಳಿಗೆ ಹೊಡೆಯುವ ಹಕ್ಕಿದೆ' ಎಂದು ಬಿಡುತ್ತಾನೆ. ಆತನ ಮಾತಿನಿಂದ ಎಲ್ಲರೂ ಗಾಬರಿಯಾಗುತ್ತಾರೆ. 

ಹೆಂಡ್ತಿ ಭಾಗ್ಯ ಇದ್ರೂ ಶ್ರೇಷ್ಠಾ ಜೊತೆ ಸುತ್ತಾಡೋ ತಾಂಡವ್‌; ಮುದ್ದಾದ ಹೆಂಡ್ತಿಯಿದ್ರೂ ಗಂಡಸರಿಗ್ಯಾಕೆ ಇಷ್ಟು ಚಪಲ?

ತಾಳಿ ಕಟ್ಟಿಬಿಟ್ರೆ ಹೆಂಡ್ತಿಗೆ ಹೊಡೆಯೋದು, ಬಡಿಬೋದು ಅಂದೋರ್ಯಾರು?
ಸೀರಿಯಲ್‌ನಲ್ಲಿ ಹೇಳಿರುವಂತೆ ಬಹುತೇಕ ಗಂಡಂದಿರು (Husband) ತಾಳಿ ಕಟ್ಟಿಬಿಟ್ಟರೆ ಹೆಂಡ್ತಿ ಮೇಲೆ ತನಗೆ ಸಂಪೂರ್ಣ ಹಕ್ಕಿದೆ. ಬೈಯುವುದು, ಹೊಡೆಯುವುದು, ಬಡಿಯುವುದು ಏನು ಬೇಕಾದರೂ ಮಾಡಬಹುದು ಎಂದುಕೊಂಡಿದ್ದಾರೆ. ಹೀಗಾಗಿ ಇವತ್ತಿಗೂ ಅದೆಷ್ಟೋ ಮನೆಗಳಲ್ಲಿ ಗಂಡ, ಹೆಂಡತಿಗೆ ಹೊಡೆಯುವುದು ದಿನಚರಿಯ ನಿತ್ಯ ಭಾಗವಾಗಿ ಉಳಿದಿದೆ. ಅದರ ಬಗ್ಗೆ ಅಳೋದು, ದೂರು ಕೊಡೋದು ಇದ್ಯಾವುದನ್ನೂ ಹೆಂಡ್ತೀರು (Wife) ಮಾಡೋದಿಲ್ಲ. ಮದುವೆಯಾದ ಮೇಲೆ ಇದು ಸಾಮಾನ್ಯ ಎಂದು ನಿರ್ಲಿಪ್ತವಾಗಿಬಿಟ್ಟಿದ್ದಾರೆ.

ಆದರೆ ಹೆಣ್ಣಿಗೂ ಒಂದು ವ್ಯಕ್ತಿತ್ವವಿದೆ. ಮದುವೆ (Marriage)ಯಾದ ತಕ್ಷಣ ಆಕೆ ಇನ್ನೊಬ್ಬ ವ್ಯಕ್ತಿಯ ಗುಲಾಮಳಾಗುವುದಿಲ್ಲ ಎಂಬುದನ್ನು ಎಲ್ಲಾ ಪುರುಷರು ಅರ್ಥ ಮಾಡಿಕೊಳ್ಳಬೇಕಿದೆ. ಹೆಣ್ಣಿಗೆ ಹೊಡೆದರೆ ನಾನೇ ಶೂರ, ಧೀರ. ಹೆಂಡ್ತಿಗೆ ಹೊಡದರೆ ನಾನೇ ಬಲಶಾಲಿ ಎಂಬ ಎಲ್ಲಾ ಪೊಳ್ಳು ಭರವಸೆಯೂ ಹೆಂಡ್ತಿ ನ್ಯಾಯದ ಮೊರೆ ಹೋದರೆ ಇಳಿದು ಹೋದೀತು. ತ್ಯಾಗಮಯಿಯಾಗಿ ಹೆಣ್ಣು ಎಲ್ಲವನ್ನೂ ಸಹಿಸಿಕೊಳ್ಳುತ್ತಾಳಷ್ಟೇ, ಸಹನೆ ಮೀರಿದರೆ ಗಂಡಸರು ಹಕ್ಕು ಎಂದು ಅಂದುಕೊಳ್ಳೋ ಈ ತಾಳಿಯೇ, ಅವರಿಗೆ ಉರುಳಾದೀತು ಹುಷಾರ್‌.

click me!