ಮನೆಗೆ ಬರುವ ಅಳಿಯ ಮಗಳ ಬಾಳಲ್ಲಿ ಬೆಳಕಾಗಲೆಂದು ಎಲ್ಲ ತಂದೆ ಬಯಸ್ತಾರೆ. ಕೆಲವೊಮ್ಮೆ ತಂದೆ ಮಾಡುವ ತಪ್ಪೇ ಮಗಳಿಗೆ ಮುಳುವಾಗುತ್ತದೆ. ಹುಡುಗನ ಬಣ್ಣ, ಬಂಗಲೆ ನೋಡುವ ಮೊದಲು ತಂದೆಯಾದವನು ಈ ಕೆಲಸ ಮಾಡಬೇಕು.
ಪ್ರತಿಯೊಬ್ಬ ತಂದೆಗೂ ಮಗಳೇ ಸರ್ವಸ್ವ. ತಂದೆ – ಮಗಳ ಬಾಂಧವ್ಯ ಬಹಳ ಗಟ್ಟಿಯಾಗಿರುತ್ತದೆ. ಮಗಳನ್ನು ಮುದ್ದಾಗಿ ಬೆಳೆಸುವ ತಂದೆ, ಮಗಳ ಭವಿಷ್ಯದ ಬಗ್ಗೆ ಸಾಕಷ್ಟು ಆಲೋಚನೆ ಮಾಡ್ತಾನೆ. ಮಗಳನ್ನು ಮದುವೆ ಮಾಡಿ ಇನ್ನೊಂದು ಮನೆಗೆ ಕಳುಹಿಸುವುದು ಅವನಿಗೆ ಸುಲಭದ ಕೆಲಸವಲ್ಲ. ಗಂಡನ ಮನೆಯಲ್ಲಿ ಮಗಳು ಹೇಗಿರುತ್ತಾಳೆ ಎಂಬ ಚಿಂತೆ ಆತನನ್ನು ಸದಾ ಕಾಡುತ್ತಿರುತ್ತದೆ. ತನ್ನ ಭಾವನೆಗಳನ್ನು ಬಾಯಿಬಿಟ್ಟು ಹೇಳಿಕೊಳ್ಳದ ತಂದೆ, ಮಗಳಿಗಾಗಿ ಏನು ಮಾಡಲೂ ಸಿದ್ಧನಿರುತ್ತಾನೆ. ಮಗಳಿಗೆ ಸ್ವಲ್ಪ ನೋವಾದ್ರೂ ತಾನು ನೋವು ತಿನ್ನುವ ತಂದೆಗೆ ಸಾಟಿ ಬೇರಾರಿಲ್ಲ.
ಮಗಳು (Daughter) ಬೆಳೆದು ನಿಂತಾಗ ಆಕೆಗೆ ಮದುವೆ ಮಾಡುವ ದೊಡ್ಡ ಜವಾಬ್ದಾರಿ ತಂದೆ ಮೇಲಿರುತ್ತದೆ. ಯಾವುದೇ ಸಂಬಂಧ (Relationship) ಶೇಕಡಾ ನೂರರಷ್ಟು ಪರಿಪೂರ್ಣವಾಗಿರಲು ಸಾಧ್ಯವಿಲ್ಲ. ಜೀವನದಲ್ಲಿ ಏರಿಳಿತಗಳು ಸಾಮಾನ್ಯ. ಹಾಗಂತ ಯಾವುದೋ ವ್ಯಕ್ತಿಗೆ ಮಗಳನ್ನು ಧಾರೆ ಎರೆಯುವುದು ಸರಿಯಲ್ಲ. ನನಗಿಂತ ಯೋಗ್ಯ ವ್ಯಕ್ತಿ ಮಗಳ ಕೈ ಹಿಡಿಯಬೇಕು ಎಂಬ ಆಸೆ ತಂದೆಗೆ ಇದ್ದೇ ಇರುತ್ತದೆ. ನಿಮ್ಮ ಮಗಳೂ ಮದುವೆ (Marriage) ಗೆ ಬಂದಿದ್ದು, ಆಕೆಗೆ ಸೂಕ್ತ ವರನ ಹುಡುಕಾಟದಲ್ಲಿ ನೀವಿದ್ದರೆ, ವರನ ಆಯ್ಕೆ ಮೊದಲು ಆತನ ಜೊತೆ ಮಾತನಾಡಿ. ಅಳಿಯನಾಗುವವನ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಬರೀ ಹಣ, ಆಸ್ತಿ, ಕೆಲಸ ಮಾತ್ರವಲ್ಲ ಆತನ ವ್ಯಕ್ತಿತ್ವವನ್ನು ತಿಳಿದುಕೊಳ್ಳುವುದು ಮುಖ್ಯ. ಮಗಳಿಗೆ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಹೊರಟಿದ್ದರೆ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಿ.
ಜಗಳ ಆಡುವಾಗ ಕಾರ್ತಿಕ್ ಅಗ್ಲಿಯಾಗಿ ಕಾಣ್ತಾರೆ, ಇಂಥಾ ಬಾಯ್ ಫ್ರೆಂಡ್ ಬೇಡ್ವೇ ಬೇಡ: ಸಂಗೀತಾ
ಮದುವೆ ಬಗ್ಗೆ ಆತನ ಅಭಿಪ್ರಾಯ : ನಿಮ್ಮ ಮಗಳನ್ನು ಮದುವೆ ಮಾಡಲು ಮುಂದಾಗಿರವ ವರನಿಗೆ ಮದುವೆ ಅಂದ್ರೇನು ಎಂಬ ಪ್ರಶ್ನೆಯನ್ನು ನೀವು ಕೇಳ್ಬೇಕು. ಆತ ನೀಡುವ ಉತ್ತರದಿಂದಲೇ ನೀವು ಆತ ಜೀವನವನ್ನು ಎಷ್ಟು ಅರ್ಥ ಮಾಡಿಕೊಂಡಿದ್ದಾನೆ ಎಂಬುದನ್ನು ಪತ್ತೆ ಮಾಡ್ಬಹುದು. ಮಗಳನ್ನು ಮದುವೆಯಾಗಲು ಆತ ಯೋಗ್ಯನೇ ಎಂಬುದನ್ನು ಕಂಡುಹಿಡಿಯಬಹುದು.
ಮಕ್ಕಳ ಬಗ್ಗೆ ಅವರ ಅಭಿಪ್ರಾಯವೇನು? : ಮದುವೆಗೆ ಮೊದಲೇ ಮಕ್ಕಳ ಬಗ್ಗೆ ಪ್ರಶ್ನೆ ಯಾಕೆ ಅಂತಾ ನೀವು ಕೇಳ್ಬಹುದು. ಮದುವೆಯಾದ್ಮೇಲೆ ಸಂಸಾರ, ಮಕ್ಕಳು ಅಗತ್ಯ. ಮಕ್ಕಳ ಬಗ್ಗೆ ಆತನ ಅಭಿಪ್ರಾಯ ಆತ ಒಳ್ಳೆ ಪಾಲಕನಾಗಬಹುದೇ ಎಂಬುದನ್ನು ತಿಳಿಸುತ್ತದೆ.
ಮಗಳ ಜೊತೆ ಸುದೀರ್ಘ ಜೀವನಕ್ಕೆ ಸಿದ್ಧರಾಗಿದ್ದೀರಾ? : ಮದುವೆ ಯೂಸ್ ಆಂಡ್ ಥ್ರೋ ಅಲ್ಲ. ಜೀವನ ಪರ್ಯಂತ ಇಬ್ಬರು ಒಟ್ಟಿಗೆ ಇರಬೇಕು. ಮಗಳಿಗಾಗಿ ಅಳಿಯ ತನ್ನ ಜೀವನವನ್ನು ಎಷ್ಟರ ಮಟ್ಟಿಗೆ ಸಮರ್ಪಿಸಬಲ್ಲ, ಹೊಂದಾಣಿಕೆ ಮಾಡಿಕೊಳ್ಳಬಲ್ಲ ಎಂಬ ಪ್ರಶ್ನೆಗೆ ನೀವು ಉತ್ತರ ಕಂಡುಕೊಳ್ಳಬೇಕು.
ಅಮಿತಾಭ್ ಬಚ್ಚನ್‌ಗೂ ಹೆಂಡ್ತಿ ಭಯವಂತೆ, ಮಡದಿ ಮಲಗಿದ ಮೇಲೆ ಈ ಕೆಲ್ಸ ಮಾಡೋದಂತೆ!
ಅಳಿಯ ಸಾಲ ಮಾಡಿದ್ದಾನಾ? : ಅಳಿಯನ ಆಯ್ಕೆ ವೇಳೆ ಆತನ ಕೆಲಸ ಯಾವುದು, ಕುಟುಂಬ ಯಾವುದು, ಮನೆ ಹೇಗಿದೆ ಎಂಬೆಲ್ಲವನ್ನು ವಿಚಾರಿಸುತ್ತೇವೆ. ಆದ್ರೆ ಆತ ಸಾಲ ಮಾಡಿದ್ದಾನಾ? ಬರುವ ಹಣ ಹೇಗೆ ಖರ್ಚು ಮಾಡ್ತಿದ್ದಾನೆ ಎಂಬುದನ್ನು ನೋಡಲು ಹೋಗೋದಿಲ್ಲ. ತಂದೆಯಾದವನು ಈ ಬಗ್ಗೆ ತಿಳಿದುಕೊಳ್ಳಬೇಕು. ಆತ ಎಷ್ಟು ಸಾಲ ಮಾಡಿದ್ದಾನೆ, ಆರ್ಥಿಕ ಸ್ಥಿತಿ ಹೇಗಿದೆ, ಮುಂದೆ ಸಮಸ್ಯೆ ಆಗಬಹುದೇ ಎಂಬೆಲ್ಲವನ್ನು ತಿಳಿದು ತೀರ್ಮಾನಕ್ಕೆ ಬರಬೇಕು.
ಕುಟುಂಬದ ಬಗ್ಗೆ ಅಳಿಯನ ಅಭಿಪ್ರಾಯವೇನು? : ತಂದೆಯಾದವನು, ತನ್ನ ಮಗಳನ್ನು ಮದುವೆಯಾಗುವ ಹುಡುಗ ಫ್ಯಾಮಿಲಿ ಮೆನ್ ಆಗಿರಬೇಕೆಂದು ಬಯಸ್ತಾರೆ. ಪತಿ ಪ್ರೀತಿ ಹಾಗೂ ಸಮಯಕ್ಕೆ ಮಗಳು ಕಷ್ಟಪಡಬಾರದು ಎಂಬ ಭಾವನೆ ತಂದೆಯದ್ದು. ಕುಟುಂಬಕ್ಕೆ ಆತ ಎಷ್ಟು ಮಹತ್ವ ನೀಡ್ತಾನೆ ಎಂಬ ಪ್ರಶ್ನೆ ಕೇಳುವ ಮೂಲಕ ನೀವು ಅದಕ್ಕೆ ಉತ್ತರ ಕಂಡುಕೊಳ್ಳಬಹುದು.