Relationship Doubts: ಆ ಹುಡುಗಿ ಬಗ್ಗೆ ಮಾತಾಡುವಾಗ ಪತಿಯ ಮುಖ ಹೊಳಪೇರುತ್ತದೆ!

By Suvarna News  |  First Published Mar 6, 2022, 5:49 PM IST

ನನಗೀಗ 28 ವರ್ಷ. ಒಂದು ಮಗುವಿನ ತಾಯಿ. ಇತ್ತೀಚೆಗೆ ನನ್ನ ಪತಿ ಅವರ ಸಹೋದ್ಯೋಗಿ ಹುಡುಗಿಯ ಮೋಹದಲ್ಲಿ ಬಿದ್ದ ಹಾಗೆ ಕಾಣುತ್ತಿದೆ. ಅವಳ ಬಗ್ಗೆ ಹೇಳುವಾಗಲೆಲ್ಲ ಅವರ ಮುಖ ಹೊಳೆಯುತ್ತದೆ. ಏನು ಮಾಡಲಿ ನಾನೀಗ?


ಪ್ರಶ್ನೆ: ನಮ್ಮಿಬ್ಬರದು ಅರೇಂಜ್ಡ್ ಮ್ಯಾರೇಜ್ (Arranged marriage). ಮದುವೆ ಆಗಿ 3 ವರ್ಷಗಳಾಗಿವೆ. ನಾನೀಗ ಒಂದು ವರ್ಷದ ಮಗುವಿನ ತಾಯಿ (Mother). ನಮ್ಮಿಬ್ಬರ ಸಂಬಂಧ ಚೆನ್ನಾಗಿಯೇ ಇದೆ. ಮಗುವಾದ ಮೇಲೆ ಎಲ್ಲಾ ವಿಷಯದಲ್ಲೂ ಮೊದಲಿನ ಹಾಗೆ ಇರುವುದು ಸಾಧ್ಯವಾಗುತ್ತಿಲ್ಲ. ಅದು ಸಹಜ ತಾನೇ? ಆದರೆ ಇತ್ತೀಚೆಗೆ ಅವರಲ್ಲಿ ಒಂದು ಸೂಕ್ಷ್ಮ ಬದಲಾವಣೆ ಗಮನಿಸಿದ್ದೇನೆ. ಅವರು ನನ್ನ ಜೊತೆಗೆ ಮಾತನಾಡುವಾಗಲೆಲ್ಲ ಅವರ ಸಹೋದ್ಯೋಗಿ ಹುಡುಗಿಯೊಬ್ಬಳ ವಿಷಯ ಬಂದೇ ಬರುತ್ತದೆ. ಆಫೀಸಿನ ಪ್ರತೀ ವಿಷಯಕ್ಕೆ ಅವಳನ್ನು ಲಿಂಕ್ ಮಾಡುತ್ತಾರೆ. ಅಷ್ಟೇ ಆದರೆ ಪರವಾಗಿರಲಿಲ್ಲ, ಪ್ರತೀ ಮಾತು ಅವಳನ್ನು ಹೊಗಳೋದೇ. ಅವಳ ಕೆಲಸ, ಅವಳ ಅಚ್ಚುಕಟ್ಟು, ಅವಳ ಡ್ರೆಸಿಂಗ್ ಸ್ಟೈಲ್, ಅವಳ ನಗು ಇದನ್ನೆಲ್ಲ ನನ್ನ ಮುಂದೆ ಹೊಗಳುತ್ತಾರೆ. ಶುರು ಶುರುವಿಗೆ ಇದನ್ನೆಲ್ಲ ಸಹಜವಾಗಿಯೇ ತೆಗೆದುಕೊಳ್ಳುತ್ತಿದ್ದೆ. ಆದರೆ ಇತ್ತೀಚೆಗೆ ಒಂದು ಸೂಕ್ಷ್ಮ ಬದಲಾವಣೆ ಗಮನಿಸಿದ್ದೇನೆ. ಅವಳ ಬಗ್ಗೆ ಮಾತನಾಡುವಾಗಲೆಲ್ಲ ಇವರ ಮುಖ ಹೊಳಪೇರುತ್ತದೆ. ಪದೇ ಪದೇ ಅವಳ ವಿಷಯವನ್ನೇ ತೆಗೆದು ಮಾತನಾಡುವುದು ಅಭ್ಯಾಸವಾಗಿ ಬಿಟ್ಟಿದೆ. ಇದನ್ನೆಲ್ಲ ಗಮನಿಸುತ್ತಿದ್ದರೆ ಅವಳ ಮೇಲೆ ಇವರು ಮೋಹಗೊಂಡ ಹಾಗೆ ಕಾಣುತ್ತಿದೆ. ಹಾಗಂತ ಅವರಿಬ್ಬರ ನಡುವೆ ಸಂಬಂಧ ಶುರುವಾಗಿದೆಯಾ ಅನ್ನುವ ಬಗ್ಗೆ ಖಚಿತತೆ ಇಲ್ಲ. ಆದರೆ ಪತಿಯ ವರ್ತನೆ ನನ್ನಲ್ಲಿ ಇನ್‌ಸೆಕ್ಯೂರಿಟಿ ಫೀಲ್ ಮೂಡಿಸುತ್ತದೆ. ಒಂದು ಕಡೆ ಮಗುವನ್ನು ಸಂಭಾಳಿಸಬೇಕಾದ ಜವಾಬ್ದಾರಿ, ಇನ್ನೊಂದು ಕಡೆ ಈ ವಿಚಾರ. ಯಾವತ್ತೂ ಬೇಸರದಲ್ಲೇ ದಿನದೂಡುವಂತಾಗಿದೆ. ಈ ಗೊಂದಲದಿಂದ ಹೊರ ಬರುವುದು ಹೇಗೆ? ಇದು ಹೀಗೆ ಮುಂದುವರಿದರೆ ನನ್ನ ಭವಿಷ್ಯದ ಕತೆಯೇನು?

ಉತ್ತರ: ನಿಮ್ಮ ಈ ಮಾತು ಗಮನಿಸಿದರೆ ನಿಮ್ಮ ಅನುಮಾನ ಸಹಜ ಅನಿಸುತ್ತದೆ. ಇದನ್ನು ನಿಮ್ಮ ಪತಿ ಅರಿವಿದ್ದು ಮಾಡುತ್ತಾರೋ, ಅರಿವಿಲ್ಲದೇ ಹೀಗೆ ಮಾತನಾಡುತ್ತಿದ್ದಾರೋ ಗೊತ್ತಿಲ್ಲ, ಅದನ್ನು ನೀವೇ ಪತ್ತೆ ಹಚ್ಚಬೇಕು. ಬಹುಶಃ ಇದು ನಿಮ್ಮ ಪತಿ ಇನ್ನೊಬ್ಬ ಹುಡುಗಿಯತ್ತ ಅಕರ್ಷಿತರಾಗುತ್ತಿರುವುದರ ಸೂಚನೆ ಅಂತ ಮೇಲ್ನೋಟಕ್ಕೆ ಅನಿಸುತ್ತದೆ. ಇದನ್ನು ಮುಂದುವರಿಯಲು ಬಿಡುವುದು ನಿಮ್ಮ ದಾಂಪತ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಬದಲಿಗೆ ಅವರು ನಿಮ್ಮ ಲೈಫ್ ಪಾರ್ಟನರ್. ನಿಮ್ಮ ಕಷ್ಟಕ್ಕೂ ಸುಖಕ್ಕೂ ಆಗುವ ವ್ಯಕ್ತಿ. ಹೀಗಾಗಿ ನಿಮ್ಮ ಮನಸ್ಸಿನ ಈ ಗೊಂದಲ, ನೋವುಗಳನ್ನೆಲ್ಲ ಅವರ ಬಳಿ ಮುಕ್ತವಾಗಿ ಹಂಚಿಕೊಳ್ಳಿ. ಇದಕ್ಕೆ ಅವರ ಪ್ರತಿಕ್ರಿಯೆ ಏನು ಅನ್ನುವುದನ್ನು ಗಮನಿಸಿ. ಅವರು ರೇಗಿದರೆ ನಿಮ್ಮ ಮನಸ್ಥಿತಿಯ ಬಗ್ಗೆ ಅವರಿಗೆ ಅರಿವು ಮೂಡಿಸಿ. ಕೆಲವೊಮ್ಮೆ ಈ ಅವಧಿಯಲ್ಲಿ ಹೆಣ್ಮಕ್ಕಳ ಗಮನವೆಲ್ಲ ಮಗುವಿನ ಮೇಲೇ ಇರುತ್ತದೆ. ಇದು ಗಂಡಸರಿಗೆ ಇನ್‌ಸೆಕ್ಯೂರಿಟಿ ಫೀಲ್ ತರುವುದೂ ಇದೆ. ಮಗುವಿನ ಬಗ್ಗೆ ಕಾಳಜಿ ಮಾಡುವಷ್ಟೇ ಗಮನವನ್ನು ಗಂಡನ ಬಗೆಗೂ ಹರಿಸಿದರೆ ನಿಮ್ಮ ದಾಂಪತ್ಯಕ್ಕೆ ಒಳ್ಳೆಯದು. 

Tap to resize

Latest Videos

Employee Appreciation: ಸಹೋದ್ಯೋಗಿಗಳನ್ನೇಕೆ ಹೊಗಳಬೇಕು?

ಪ್ರಶ್ನೆ: ನನಗೆ 30 ವರ್ಷ, ಮಹಿಳೆ. ಮದುವೆಯಾಗಿ ನಾಲ್ಕು ವರ್ಷಗಳಾಗಿವೆ. ಆದರೆ ಇತ್ತೀಚೆಗೆ ಯಾಕೋ ಗಂಡನ ಬಗ್ಗೆ ಆಸಕ್ತಿ ಹೋಗುತ್ತಿದೆ. ಆತ ಹೊರೆ ಅಂತ ಅನಿಸುತ್ತಿದ್ದಾನೆ. ಅವನ ಮಾತು, ನಡತೆಗಳಲ್ಲೆಲ್ಲ ಕೊರತೆಯೇ ಕಾಣುತ್ತಿದೆ. ನಾನು ತಪ್ಪು ವ್ಯಕ್ತಿಯನ್ನು ಆಯ್ಕೆ ಮಾಡಿದೆನೇನೋ ಅನ್ನುವ ಯೋಚನೆ ಶುರುವಾಗಿದೆ. ಕೆಲವೊಮ್ಮೆ ಡಿವೋರ್ಸ್ ಪಡೆಯೋಣ ಅನಿಸುವಷ್ಟು ಅಸಹನೆ. ಡಿವೋರ್ಸ್ ತಗೊಳ್ಳಬಹುದಾ? ಅಥವಾ ನನ್ನ ಮನೋಭಾವ ಬದಲಾಯಿಸಿಕೊಳ್ಳಬೇಕಾ?

ಸೊಸೆಯನ್ನು ಸಾಯಿಸಿ ಬಿಡೋವಷ್ಟು ಸಿಟ್ಟು ಬರುತ್ತೆ, ಯಾಕ್ಹೀಗೆ?

ಉತ್ತರ: ನಿಮ್ಮಲ್ಲಿ ಈ ಥರದ ಭಾವನೆಗಳು ಆರಂಭದಲ್ಲೇ ಇದ್ದ ಹಾಗಿಲ್ಲ. ಬಹುಶಃ ಇತ್ತೀಚೆಗೆ ಅಂದರೆ ಒಂದು ವರ್ಷದಿಂದ ಅಥವಾ ಕೆಲವು ತಿಂಗಳುಗಳಿಂದ ಶುರುವಾದ ಹಾಗಿದೆ. ಮದುವೆಯಾದ ಹೊಸತರಲ್ಲಿ ಗಂಡ ಹೆಂಡತಿ ನಡುವೆ ಒಂದು ದೈಹಿಕ ಆಕರ್ಷಣೆ ಇರುತ್ತದೆ. ಆದರೆ ಕೆಲವು ಸಮಯದ ಬಳಿಕ ಈ ಆಕರ್ಷಣೆ ಕಡಿಮೆ ಆಗುತ್ತಾ ಬರುತ್ತದೆ. ಇದಕ್ಕೆ ಡಿವೋರ್ಸ್ ಪರಿಹಾರವಲ್ಲ. ಬದಲಿಗೆ ಮಾತುಕತೆ ಉತ್ತಮ. ಒಬ್ಬ ವ್ಯಕ್ತಿಯನ್ನು ನೀವು ಒಪ್ಪಿಕೊಂಡಾಗ ಅವನ ಕೊರತೆ ಸಮೇತ ಒಪ್ಪಿಕೊಳ್ಳಬೇಕಾಗುತ್ತದೆ. ಕೊರತೆಯನ್ನೇ ಮುಖ್ಯ ಮಾಡಿದರೆ ಮನಃಶಾಂತಿ ಇರುವುದಿಲ್ಲ. ಸೂಕ್ಷ್ಮವಾಗಿ ನಿಮ್ಮ ವರ್ತನೆಯನ್ನು ಗಮನಿಸಿ. ಗಂಡನ ಯಾವೆಲ್ಲ ಗುಣ ಅಸಹನೆ ತರುತ್ತದೆ ಅನ್ನೋದನ್ನು ಪತ್ತೆ ಹಚ್ಚಿ. ಅವರ ಜೊತೆ ಮುಕ್ತವಾಗಿ ಮಾತನಾಡಿ. ದಿನ ಒಂದಿಷ್ಟು ಸಮಯ ಜೊತೆಯಾಗಿ ಕಳೆಯಿರಿ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಆಗ ಕಿರಿಕಿರಿ ಕಡಿಮೆಯಾಗುತ್ತದೆ. 

ಪತಿಯ ಚಿಂತೆಗೆ ಕಾರಣವಾಯ್ತು ಪತ್ನಿಯ ದಿರಿಸು!
 

click me!