ಅಭಿಮಾನ ಅತಿಯಾದ್ರೆ ಆಪತ್ತು ಗ್ಯಾರಂಟಿ. ಎಲ್ಲವೂ ಇತಿಮಿತಿಯಲ್ಲಿ ಇರಬೇಕು. ಇಲ್ಲೊಬ್ಬ ವ್ಯಕ್ತಿ, ತನ್ನ ಡ್ರೀಮ್ ನಟಿಯಂತೆ ಫಿಟ್ನೆಸ್ ಮೆಂಟೇನ್ ಮಾಡೋಕೆ ಪತ್ನಿಗೆ ಒತ್ತಡ ಹೇರ್ತಿದ್ದಾನೆ. ಇದು ಆತನ ಸಂಸಾರವನ್ನು ಹಾಳು ಮಾಡ್ತಿದೆ.
ಒಂದಲ್ಲ ಒಂದು ಕಾರಣಕ್ಕೆ ನಾವು ನಮ್ಮ ಸುತ್ತಮುತ್ತಲಿರುವ ಅಥವ ಕಲಾವಿದರ ಇಲ್ಲವೆ ಆಟಗಾರರ ಪ್ರಭಾವಕ್ಕೆ ಒಳಗಾಗ್ತೇವೆ. ಅವರಂತೆ ನಾವೂ ಇರಬೇಕಿತ್ತು ಎಂದುಕೊಳ್ತೇವೆ. ಅವರ ಜೀವನಶೈಲಿಯನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಅದನ್ನು ಪಾಲಿಸೋದು ತಪ್ಪೇನಿಲ್ಲ. ಹಾಗಂತ ಅಭಿಮಾನ, ಪ್ರಭಾವ ಎರಡೂ ಅತಿಯಾದ್ರೆ ನಮ್ಮ ವೈಯಕ್ತಿಕ ಜೀವನ ಹಾಳಾಗುತ್ತದೆ.
ಪ್ರತಿಯೊಬ್ಬರೂ ತಮ್ಮದೇ ಆದ ವ್ಯಕ್ತಿತ್ವ (Personality), ದೇಹದ ಆಕಾರವನ್ನು ಹೊಂದಿರುತ್ತಾರೆ. ಬೇರೆಯವರಂತೆ ದೇಹದ ಬಣ್ಣ, ಸೌಂದರ್ಯ (Beauty) , ಫಿಟ್ನೆಸ್ ನಮಗಿಲ್ಲ ಎಂದು ಮರಗುವುದು ಮೂರ್ಖತನ. ಹಾಗೆಯೇ ಅವರಂತಾಗು, ಇವರಂತಾಗು ಅಂತಾ ನಮ್ಮ ಆಪ್ತರಿಗೆ ಒತ್ತಡ ಹೇರುವುದು ಕೂಡ ಸೂಕ್ತವಲ್ಲ.
ನೀವು ಎಮೋಷನಲ್ಲಾ..? ಎಮೋಷನಲಿ ವೀಕಾ..?
ಬಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಚಿತ್ರರಂಗದಲ್ಲಿ ನಮ್ಮನ್ನು ಆಕರ್ಷಿಸುವ ಅನೇಕ ಕಲಾವಿದರಿದ್ದಾರೆ. ನಟಿಯರು ಜಿಮ್, ಡಯಟ್ ಅಂತಾ ತಮ್ಮ ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡ್ತಾರೆ. ಅವರ ಸೌಂದರ್ಯ ನೋಡಿ ಖುಷಿಪಡಬೇಕೇ ವಿನಃ ನನ್ನ ಗರ್ಲ್ ಫ್ರೆಂಡ್ ಅಥವಾ ಪತ್ನಿ ಕೂಡ ಹಾಗೆ ಇರಬೇಕು ಎನ್ನುವುದು ತಪ್ಪು. ಕೆಲವೊಬ್ಬರು ನಟಿಯಂತೆ ತನ್ನ ಪತ್ನಿ ಕಾಣ್ಬೇಕೆಂಬ ಮೊಂಟುಹಠಕ್ಕೆ ಬಿದ್ದು ಸಂಸಾರವನ್ನು ಹಾಳು ಮಾಡಿಕೊಳ್ತಾರೆ. ಅದ್ರಲ್ಲಿ ನನ್ನ ಪತಿ ಕೂಡ ಸೇರಿದ್ದಾನೆ ಎನ್ನುತ್ತಾಳೆ ಈ ಮಹಿಳೆ.
ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ (Katrina Kaif) ಅಂದ್ರೆ ಯಾರಿಗೆ ಇಷ್ಟವಿಲ್ಲ ಹೇಳಿ. ಆಕೆಯ ಮೈ ಬಣ್ಣ, ದೇಹದ ಆಕಾರ ಹುಡುಗ್ರನ್ನು ಮಾತ್ರವಲ್ಲ ಹುಡುಗಿಯರನ್ನು ಕೂಡ ಸೆಳೆಯುತ್ತದೆ. ಅವಳಂತೆ ಕಾಣ್ಬೇಕೆಂದು ಅನೇಕ ಹುಡುಗಿಯರು ಪ್ರಯತ್ನ ನಡೆಸ್ತಾನೆ. ನನ್ನ ಪತಿ ಕೂಡ ಇದೇ ಹುಚ್ಚಿಗೆ ಬಿದ್ದಿದ್ದಾನೆ. ಕತ್ರಿನಾ ಕೈಫ್ ಬಿಗ್ ಫ್ಯಾನ್ ಆಗಿರುವ ಆತ, ಯಾವಾಗ ಕತ್ರಿನಾ ಕೈಫ್ ನೋಡಿದ್ರೂ, ನನ್ನ ಬಳಿ ಆಕೆಯಂತೆ ನೀನು ಕಾಣ್ಬೇಕು ಎಂದು ಒತ್ತಡ ಹೇರ್ತಾನೆ.
ಕತ್ರಿನಾಳಂತೆ ಸುಂದರವಾಗಿ ಹಾಗೂ ಫಿಟ್ ಆಗಿರು ಎನ್ನುತ್ತಾನೆ. ಆಕೆಯಂತೆ ದೇಹದ ಆಕಾರಕ್ಕೆ ಸಂಬಂಧಿಸಿದಂತೆ ವರ್ಕ್ ಔಟ್ ಮಾಡು ಎನ್ನುತ್ತಾನೆ. ಭಿನ್ನವಾಗಿ ಡ್ರೆಸ್ ಅಪ್ ಆಗಲು ಸಲಹೆ ನೀಡ್ತಾನೆ. ಸೆಕ್ಸಿಯಾಗಿ ಕಾಣುವಂತೆ ಪದೇ ಪದೇ ಹೇಳ್ತಿರುತ್ತಾನೆ. ನನಗೆ ಇದು ಸ್ವಲ್ಪವೂ ಇಷ್ಟವಿಲ್ಲ. ನನಗೆ ನನ್ನ ದೇಹದ ಮೇಲೆ ಪ್ರೀತಿಯಿದೆ. ಆದ್ರೆ ಪತಿಯ ಈ ವರ್ತನೆಯಿಂದ ನಾನು ಬೇಸತ್ತಿದ್ದೇನೆ. ಏನು ಮಾಡ್ಬೇಕು ತಿಳಿಯುತ್ತಿಲ್ಲ ಎಂದು ಮಹಿಳೆ ಪ್ರಶ್ನಿಸಿದ್ದಾಳೆ.
ತಜ್ಞರ ಸಲಹೆ : ಕೆಲವರಿಗೆ ರೀಲ್ ಹಾಗೂ ರಿಯಲ್ ಲೈಫ್ ವ್ಯತ್ಯಾಸ ತಿಳಿದಿರೋದಿಲ್ಲ. ತೆರೆ ಮೇಲೆ ತೋರಿಸಿದ್ದೆಲ್ಲ ಸತ್ಯವೆಂದು ನಂಬುತ್ತಾರೆ. ಇನ್ನು ಕೆಲವರು, ತಾವು ನೆಚ್ಚಿಕೊಂಡ ವ್ಯಕ್ತಿ ಏನು ಮಾಡಿದ್ರೂ ಅದು ಸರಿ ಎಂದು ವಾದಿಸ್ತಾರೆ. ಅಂಥವರ ಜೊತೆ ಕುಳಿತು ನಿಧಾನವಾಗಿ ಮಾತನಾಡೋದು ಒಳ್ಳೆಯದು ಎನ್ನುತ್ತಾರೆ ತಜ್ಞರು. ಪತಿ ಜೊತೆ ಮಾತನಾಡಿ. ಕತ್ರಿನಾ ಟಾಪ್ ನಟಿ. ಆಕೆ ಸುತ್ತಮುತ್ತ ಒಂದು ದೊಡ್ಡ ಟೀಂ ಇರುತ್ತೆ. ಆಕೆ ಏನು ತಿನ್ನಬೇಕು, ಹೇಗೆ ಫಿಟ್ನೆಸ್ ಮೆಂಟೇನ್ ಮಾಡ್ಬೇಕು ಎಂಬುದನ್ನು ಅವರು ಹೇಳ್ತಾರೆ. ನನ್ನಿಂದ ಅದು ಸಾಧ್ಯವಿಲ್ಲವೆಂದು ಪತಿಗೆ ತಿಳಿಸಿ ಹೇಳಿ ಎನ್ನುತ್ತಾರೆ ತಜ್ಞರು.
ನಿಮ್ಮ ಸಂಗಾತಿಯೂ ಈ ತರ ಆಡ್ತಾರಾ? ಇನ್ನು ಲವ್ ಮಾಡೋದು ವೇಸ್ಟ್
ಪತಿ, ಪ್ರಬುದ್ಧರಾಗಿ ವರ್ತಿಸುವುದು ಮುಖ್ಯ. ಅವರು ತಮ್ಮ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಈ ಬಗ್ಗೆ ಅವರಿಗೆ ವಿವರಿಸಿ ಹೇಳಬೇಕು. ಆಸೆ- ನಿರೀಕ್ಷೆ ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಅವರು ಅರ್ಥಮಾಡಿಕೊಳ್ಳಬೇಕು. ನೀವು ಹೇಗಿದ್ದೀರೋ ಹಾಗೆಯೇ ಅವರನ್ನು ಸ್ವೀಕರಿಸಬೇಕು ಎಂಬುದನ್ನು ಅವರಿಗೆ ಮನವರಿಕೆ ಮಾಡಿ ಎನ್ನುತ್ತಾರೆ ತಜ್ಞರು. ವಯಸ್ಕರಾದವರು ಹೀಗೆ ವರ್ತಿಸೋದು ಸರಿಯಲ್ಲ. ವಿದ್ಯಾವಂತ ವ್ಯಕ್ತಿಗಳು ಹೇಗಿರಬೇಕು ಎಂಬುದನ್ನು ನೀವು ಕೂಗಾಡದೆ, ಶಾಂತ ರೀತಿಯಲ್ಲಿ ಅವರಿಗೆ ತಿಳಿಸಿ ಎನ್ನುತ್ತಾರೆ ತಜ್ಞರು.