ಅಪ್ಪನ ಪ್ರೀತಿ ಆಕಾಶವೇ ಮಿತಿ: ಪುಟ್ಟ ಮಗಳೊಂದಿಗೆ ವ್ಹೀಲ್‌ ಚೇರ್‌ನಲ್ಲೇ ನರ್ತಿಸಿದ ವಿಶೇಷಚೇತನ ಅಪ್ಪ

By Anusha KbFirst Published May 3, 2023, 2:41 PM IST
Highlights

ವಿಕಲ ಚೇತನ ತಂದೆಯೊಬ್ಬರು ವ್ಹೀಲ್ ಚೇರ್‌ನಲ್ಲೇ ಕುಳಿತು ಮಗಳ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಗಳೊಂದಿಗೆ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡುಗರನ್ನು ಭಾವುಕರನ್ನಾಗಿಸಿದೆ.

ಪೋಷಕರು ಮಕ್ಕಳ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಮಕ್ಕಳ ಏಳ್ಗೆಗಾಗಿ ತಮಗೆ ಸಾಧ್ಯವಿಲ್ಲದಿದ್ದರೂ ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡುತ್ತಾರೆ.  ಮಕ್ಕಳ ಮೇಲೆ ಪೋಷಕರ ಪ್ರೀತಿಗೆ ಬೆಲೆ ಕಟ್ಟಲಾಗದು.  ಅವರ ನಿಷ್ಕಲ್ಮಶ ಪ್ರೀತಿಯ ಮುಂದೆ ಯಾವುದು ದೊಡ್ಡದಲ್ಲ. ಅದೇ ರೀತಿ ಇಲ್ಲೊಬ್ಬರು ತಂದೆ ತನ್ನ ಮಗಳ ಖುಷಿಗಾಗಿ ತನ್ನಿಂದ ಸಾಧ್ಯವಿಲ್ಲದನ್ನು ಸಾಧ್ಯವಾಗಿಸಿದ್ದಾರೆ. ವಿಕಲ ಚೇತನ ತಂದೆಯೊಬ್ಬರು ವ್ಹೀಲ್ ಚೇರ್‌ನಲ್ಲೇ ಕುಳಿತು ಮಗಳ ಶಾಲೆಯ ಕಾರ್ಯಕ್ರಮವೊಂದರಲ್ಲಿ ಮಗಳೊಂದಿಗೆ ಡಾನ್ಸ್ ಮಾಡಿದ್ದಾರೆ. ಈ ವಿಡಿಯೋ ನೋಡುಗರನ್ನು ಭಾವುಕರನ್ನಾಗಿಸಿದೆ.

The Figen ಎಂಬ ಟ್ವಿಟ್ಟರ್ (Twitter) ಪೇಜ್‌ನಿಂದ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋದಲ್ಲಿ ತಂದೆ ಮಗಳ ಶುದ್ಧವಾದ ಪ್ರೀತಿಯೊಂದು ಕಾಣಿಸುತ್ತಿದೆ.  ಮಗಳ ಪಾಲಿಗೆ ಯಾವಾಗಲೂ ಮೊದಲ ಪ್ರೀತಿ ಅಪ್ಪನೇ ಆಗಿರುತ್ತಾನೆ ಎಂಬುದನ್ನು ನೀವು ಕೇಳಿರುತ್ತೀರಿ ಈ ಮಾತಿನ ಮೂಲಕವೇ ಅಪ್ಪ ಮಗಳ ಸಂಬಂಧ ಎಂಥ ಗಾಢವಾದುದು ಎಂಬುದನ್ನು ಹೇಳಬಹುದು. ಮಗಳ ಮೇಲೆ ಎಲ್ಲರಿಗಿಂತ ತುಸು ಹೆಚ್ಚೇ ಪ್ರೀತಿ ತೋರುವ ಅಪ್ಪ ಮಗಳಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅದೇ ರೀತಿ ಇಲ್ಲಿ ಮಗಳಿಗಾಗಿ ಅಪ್ಪ ವ್ಹೀಲ್ ಚೇರ್‌ನಲ್ಲಿ ಡಾನ್ಸ್ ಮಾಡಿದ್ದಾರೆ. 

Latest Videos

ಸುಷ್ಮಾ ಸ್ವರಾಜ್ ಹುಟ್ಟುಹಬ್ಬ: ಹಳೆ ಫೋಟೋ ಪೋಸ್ಟ್ ಮಾಡಿ ಅಮ್ಮನ ನೆನೆದ ಅಪ್ಪ ಮಗಳು

 ವಿಡಿಯೋದಲ್ಲಿ ಕಾಣಿಸುವಂತೆ ಈ ವಿಶೇಷ ಚೇತನ ಅಪ್ಪ (Specially Abled Father) ಹಾಗೂ ಆತನ ಮಗಳು ಹಾಗೂ ಇನ್ನಿಬ್ಬರು ಅಪ್ಪ ಮಗಳ (Father Daughter) ಜೋಡಿಗಳು ವೇದಿಕೆಯಲ್ಲಿ ನೃತ್ಯ ಮಾಡುತ್ತಾರೆ. ಆದರೆ ಸಾಮಾನ್ಯರಂತೆ ಈ ಅಪ್ಪನಿಗೆ ಎದ್ದು ನಿಲ್ಲಲು ಸಾಧ್ಯವಿಲ್ಲ. ಆದರೂ ಡಾನ್ಸ್‌ ನಲ್ಲಿ ಬರುವಂತೆ ಮಗಳನ್ನು (Daughter)  ಎತ್ತಿ ಡಾನ್ಸ್ ಮಾಡುವ ವೇಳೆ ಅಪ್ಪ ಕುಳಿತಲ್ಲಿಂದಲೇ ಮಗಳನ್ನು ಎತ್ತಿ ಡಾನ್ಸ್ (Dance)ಮಾಡಿಸಿದ್ದು, ಈ ದೃಶ್ಯ ಎಲ್ಲರ ಹೃದಯವನ್ನು ಭಾವುಕರನ್ನಾಗಿಸಿದೆ.  ಈ ವಿಶೇಷ ಚೇತನ ತಂದೆ ಈ ಮೂಲಕ ಎಲ್ಲರ ಹೃದಯ ಗೆದ್ದಿದ್ದಾರೆ.  

ಮಗಳಿಗೆ ಸೆಲ್ಯೂಟ್‌ ಮಾಡಿ ಭಾವನಾತ್ಮಕವಾದ ಅಸ್ಸಾಂ ಪೊಲೀಸ್ ಮುಖ್ಯಸ್ಥ: ನೆಟ್ಟಿಗರಿಂದ ಮೆಚ್ಚುಗೆ

ತನ್ನ ಅಸಮರ್ಥತೆಯ ಹೊರತಾಗಿಯೂ ತಂದೆ ಯಾರಿಗೂ ಕಡಿಮೆ ಇಲ್ಲದಂತೆ ತನ್ನ ಮಗಳ ನೃತ್ಯಕ್ಕೆ ಸಹಕರಿಸಿ ಮಗಳು ಹೆಮ್ಮೆ ಪಡುವಂತೆ ಮಾಡಿದ್ದಾನೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. 7 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದು,  ಈ ತಂದೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ.  ಅನೇಕರು ಈ ವಿಡಿಯೋಗೆ ಡಾಡ್ಸ್ ಆರ್ ಸೂಪರ್ ಹೀರೋಸ್ ಎಂದು ಕಾಮೆಂಟ್ ಮಾಡಿದ್ದಾರೆ. 

Despite everything, that dad is with his daughter, he did not make excuses!pic.twitter.com/9RZkwzhdED

— The Figen (@TheFigen_)

 

 

click me!