
ಮದುವೆ (Marriage) ಅನ್ನೋದು ಒಂದು ಪವಿತ್ರ ಸಂಬಂಧ. ಹೀಗಾಗಿ ಗುರು-ಹಿರಿಯರು ಎಲ್ಲರೂ ನೋಡಿ ಪರಸ್ಪರ ಒಪ್ಪಿಗೆ ಸೂಚಿಸಿ ಒಳ್ಳೆಯ ಮುಹೂರ್ತ ನೋಡಿ ಮದುವೆ ಮಾಡಿಸುತ್ತಾರೆ. ಜೋಡಿ ನೂರ್ಕಾಲ ಸುಖವಾಗಿರಲಿ ಎಂದು ಹಾರೈಸುತ್ತಾರೆ. ಆದ್ರೆ ಈ ಕಾಲದಲ್ಲಿ ಎಲ್ಲಾ ವಸ್ತುಗಳ ವ್ಯಾಲಿಡಿಟಿ ಕಮ್ಮಿಯಾಗಿರೋ ಹಾಗೆಯೇ ಮದುವೆಯ ವ್ಯಾಲಿಡಿಟಿಯೂ ಕಡಿಮೆಯಾಗಿದೆ. ಮದುವೆಯಾಗಿ ತಿಂಗಳಾಗೋ ಒಳಗೇ ಡೈವೋರ್ಸ್ (Divorce)ಗೆ ಅಪ್ಲೈ ಮಾಡುವ ದಂಪತಿಯಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡ ನಂತರವೂ ಮದುವೆ ಕ್ಯಾನ್ಸಲ್ (Cancel) ಮಾಡಿಕೊಳ್ಳುವುದು ಅತಿ ಸಾಮಾನ್ಯವಾಗಿದೆ.
ಇವತ್ತಿನ ಕಾಲದ ಮದುವೆ (Marriage) ಹೇಗಂದರೆ ಮದುವೆ ಶಾಸ್ತ್ರಗಳು ಸಂಪೂರ್ಣವಾಗಿ ಮುಗಿದು ಜೋಡಿ ಜೊತೆಯಾಗಿ ಹೋಗುವ ವರೆಗೂ ಮದುವೆ ಆಯ್ತು ಅಂತ ಹೇಳುವಂತಿಲ್ಲ. ಯಾಕೆಂದರೆ ಕೊನೆಯ ಕ್ಷಣದಲ್ಲೂ ಮದುವೆ ಕ್ಯಾನ್ಸಲ್ ಆಗಿ ಬಿಡುತ್ತದೆ. ಇವತ್ತಿನ ಕಾಲದಲ್ಲಿ ಹುಡುಗ-ಹುಡುಗಿಯರಿಗೆ ಮದುವೆ ಕ್ಯಾನ್ಸಲ್ ಮಾಡಲು ದೊಡ್ಡ ಕಾರಣವೂ ಬೇಕಿಲ್ಲ. ಸೀರೆ ಇಷ್ಟವಾಗಿಲ್ಲ. ಮದುವೆ ಡೆಕೊರೇಷನ್ ಚೆನ್ನಾಗಿಲ್ಲ. ಊಟ ಚೆನ್ನಾಗಿಲ್ಲ, ಹುಡುಗಿಗೆ ಚಿನ್ನ ಜಾಸ್ತಿ ಹಾಕಿಲ್ಲ. ಹೀಗೆ ಸಣ್ಣಪುಟ್ಟ ಕಾರಣಕ್ಕೆಲ್ಲಾ ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇಲ್ಲಿ ಕೂಡಾ ಅಂಥಹದ್ದೇ ಘಟನೆ ನಡ್ದಿದೆ. ಕ್ಷುಲಕ ಕಾರಣಕ್ಕೆ ಸಿಟ್ಟುಗೊಂಡ ವಧು (Bride) ಮದುವೆ ಮಂಟಪ ಬಿಟ್ಟು ನಡೆದಿದ್ದಾಳೆ. ಇಷ್ಟಕ್ಕೂ ಮದ್ವೆ ಕ್ಯಾನ್ಸಲ್ ಆಗಿದ್ಯಾಕೆ ?
ಫೋಟೋಗ್ರಾಫರ್ ಕರೆಸಿಲ್ಲ ಎಂದು ಮದ್ವೆ ನಿರಾಕರಿಸಿದ ವಧು
ವರನ ಕುಟುಂಬ ಕಡಿಮೆ ಚಿನ್ನಾಭರಣ ಕಳುಹಿಸಿದ್ದಕ್ಕೆ ವಧುವಿಗೆ ಸಿಟ್ಟು
ವರನ ಕುಟುಂಬವು ತನಗೆ ಕಡಿಮೆ ಚಿನ್ನಾಭರಣಗಳನ್ನು (Gold Jewellery) ಕಳುಹಿಸಿದೆಯೆಂದು ವಧು ಮದುವೆ ಕ್ಯಾನ್ಸಲ್ ಮಾಡಿಕೊಂಡಿದ್ದಾಳೆ. ಕಾನ್ಪುರ ದೇಹತ್‌ನ ಸಿಕಂದರಾ ಪೊಲೀಸ್ ಠಾಣೆ ವ್ಯಾಪ್ತಿಯ ಮನ್‌ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಎಪ್ರಿಲ್ 30ರಂದು ಮನ್‌ಪುರ ಗ್ರಾಮದ ವರನ ಮದುವೆಯನ್ನು ಬನ್ವಾರಿಪುರ ಗ್ರಾಮದ ಹುಡುಗಿಯೊಂದಿಗೆ ನಿಗದಿಪಡಿಸಲಾಗಿತ್ತು. ವರನು ತನ್ನ ಅದ್ದೂರಿ ಮೆರವಣಿಗೆಯಲ್ಲಿ ವಧುವಿನ ಮನೆಗೆ ತಲುಪಿದನು. ವಧುವಿನ ಕುಟುಂಬವು ಅವರನ್ನು ಸ್ವಾಗತಿಸಿತು. ಎಲ್ಲವೂ ಸರಿಯಾಗಿಯೇ ನಡೆಯುತ್ತಿತ್ತು. ಮದುವೆಯ ವಿಧಿವಿಧಾನವು ವರಮಾಲಾ ಸಮಾರಂಭದೊಂದಿಗೆ ಪ್ರಾರಂಭವಾಯಿತು, ನಂತರ ವರನ ಕುಟುಂಬವು ವಧುವಿಗೆ ಖರೀದಿಸಿದ ಆಭರಣಗಳು, ಬಟ್ಟೆಗಳು ಮತ್ತು ಇತರ ವಸ್ತುಗಳನ್ನು ಮದುವೆಯ ಮಂಟಪದಲ್ಲಿ ನೀಡಿದರು.
ಆದರೆ, ವರನ ಮನೆಯವರು ನೀಡಿದ ಚಿನ್ನಾಭರಣಗಳಿಂದ ವಧು ಮತ್ತು ಆಕೆಯ ಕುಟುಂಬದವರು (Family) ಸಂತೋಷ ಪಡಲ್ಲಿಲ್ಲ. ಇದರಿಂದ ಕೋಪಗೊಂಡ ವಧುವಿನ ಮನೆಯವರು ಮದುವೆಯನ್ನು ರದ್ದುಗೊಳಿಸಿದ್ದರು. ಮದುವೆ ರದ್ದಾದ ನಂತರ ಉದ್ವಿಗ್ನತೆ ಉಂಟಾಗಿದ್ದು, ವರ ಮತ್ತು ವಧುವಿನ ಕುಟುಂಬದವರು ಪೊಲೀಸ್ ಠಾಣೆಗೆ ತಲುಪಿದ್ದಾರೆ.
ಕುಡಿದು ಡ್ಯಾನ್ಸ್ ಮಾಡುತ್ತಾ ಮೈಮರೆತ ಮದುಮಗ, ಕಾದು ಕಾದು ಸುಸ್ತಾಗಿ ಬೇರೆಯವನನ್ನು ಮದುವೆಯಾದ ವಧು !
ವರದಕ್ಷಿಣೆಗಾಗಿ ವಧುವಿನ ಮನೆಯವರು ಪೊಲೀಸರಿಗೆ ಸುಳ್ಳು ದೂರು ನೀಡಿದ್ದಾರೆ ಎಂದು ವರನ ತಂದೆ ಆರೋಪಿಸಿದ್ದಾರೆ. ವಧುವಿನ ಮನೆಯವರು ತಾವು ಕೊಂಡೊಯ್ದ ಚಿನ್ನಾಭರಣ ಮತ್ತು ಉಡುಗೊರೆಗಳನ್ನು ಹಿಂತಿರುಗಿಸುತ್ತಿಲ್ಲ ಎಂದು ಆರೋಪಿಸಿದರು. ಪೊಲೀಸ್ ಠಾಣೆಯಲ್ಲಿ ಗಂಟೆಗಟ್ಟಲೆ ಚರ್ಚೆ ನಡೆಸಿದ ನಂತರ ಎರಡೂ ಕಡೆಯವರು ಒಪ್ಪಿಗೆ ಪಡೆದು ತಮ್ಮ ತಮ್ಮ ಮನೆಗೆ ತೆರಳಿದರು.
ಇತ್ತೀಚಿಗೆ ಬರೇಲಿಯಲ್ಲೂ ಇಂಥಹದ್ದೇ ಒಂದು ವಿಚಿತ್ರ ಕಾರಣಕ್ಕೆ ಮದ್ವೆ ಕ್ಯಾನ್ಸಲ್ ಆಗಿತ್ತು. ಬರೇಲಿ ಜಿಲ್ಲೆಯ ವರ ಮತ್ತು ಕನ್ನೌಜ್ ಜಿಲ್ಲೆಯ ವಧು ಮದುವೆಗೆ ಸಿದ್ಧವಾಗಿದ್ದರು. . ಇಬ್ಬರೂ ಸ್ನಾತಕೋತ್ತರ ಪದವೀಧರರು. ಶುಕ್ರವಾರ, ವಧು ಮತ್ತು ಅವರ ಕುಟುಂಬವು ವಿವಾಹ ಸಮಾರಂಭಕ್ಕಾಗಿ ಬರೇಲಿಗೆ ಆಗಮಿಸಿತು. ವರನ ಕೆಲವು ಸ್ನೇಹಿತರು ವಧುವನ್ನು ಬಲವಂತವಾಗಿ ನೃತ್ಯ ಮಾಡಲು ಎಳೆದುಕೊಂಡು ಹೋಗಿದ್ದು ಗೊಂದಲ ಸೃಷ್ಟಿಸಿತು. ವಧು ತೆರಳಿದ ನಂತರ ಮದುವೆ ಕ್ಯಾನ್ಸಲ್ ಆಯಿತು. ಇನ್ನೊಂದು ಕಡೆ ವಧುವಿನ ಕುಟುಂಬದವರು ವರನ ಫ್ಯಾಮಿಲಿ ಮೇಲೆ ವರದಕ್ಷಿಣೆ ಕೇಸ್ ಹಾಕಲು ಮುಂದಾದರು. ವರನ ಕುಟುಂಬವು 6.5 ಲಕ್ಷ ರೂ. ಪಾವತಿಸಲು ಒಪ್ಪಿದ ನಂತರ ಮಾತುಕತೆ ಮೂಲಕ ಬಗೆಹರಿಯಿತು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.