44 ವರ್ಷದ ಡಿವೋರ್ಸ್, ಪರಿಹಾರಕ್ಕೆ ಇದ್ದ ಬದ್ದ ಜಮೀನು ಮಾರಿದ ವೃದ್ಧ

Published : Dec 17, 2024, 03:55 PM ISTUpdated : Dec 17, 2024, 03:59 PM IST
44 ವರ್ಷದ ಡಿವೋರ್ಸ್, ಪರಿಹಾರಕ್ಕೆ ಇದ್ದ ಬದ್ದ ಜಮೀನು ಮಾರಿದ ವೃದ್ಧ

ಸಾರಾಂಶ

44 ವರ್ಷಗಳ ದಾಂಪತ್ಯದ ಬಳಿಕ ಕರ್ನಾಲ್‌ನ ದಂಪತಿ ವಿಚ್ಛೇದನ ಪಡೆದಿದ್ದಾರೆ. 18 ವರ್ಷಗಳ ಕಾನೂನು ಹೋರಾಟದ ನಂತರ ಪತಿ ಪತ್ನಿಗೆ 3.07 ಕೋಟಿ ಪರಿಹಾರ ನೀಡಿದ್ದಾರೆ. ಇದಕ್ಕಾಗಿ ತಮ್ಮ ಜಮೀನು ಮಾರಾಟ ಮಾಡಿ, ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹಣ ನೀಡಿದ್ದಾರೆ. ಚಿನ್ನಾಭರಣವನ್ನೂ ನೀಡಿದ್ದಾರೆ.

ಮದುವೆ (Marriage)ಯಾಗಿ ವರ್ಷಗಳು ಉರುಳುತ್ತಿದ್ದಂತೆ ಇಬ್ಬರ ಮಧ್ಯೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗುತ್ತದೆ, ಇಬ್ಬರು ಪರಸ್ಪರ ಅರಿತು ಬಾಳ್ತಾರೆ ಎನ್ನುವ ಮಾತಿದೆ. ಆದರೆ ಅನೇಕ ಬಾರಿ ಈ ನಂಬಿಕೆ ಸುಳ್ಳಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವಿಚ್ಛೇದನ (divorce) ಪ್ರಕರಣ ಹೆಚ್ಚಾಗಿದೆ. ಯುವ ದಂಪತಿ ಮಾತ್ರವಲ್ಲ ವಯಸ್ಸಾದ ದಂಪತಿ ಕೂಡ ಬೇರೆಯಾಗಿ ವಾಸಿಸುವ ನಿರ್ಧಾರಕ್ಕೆ ಬರ್ತಿದ್ದಾರೆ. ಅತ್ಯಂತ ಸುಂದರವಾದ ಸಂಬಂಧಗಳಲ್ಲಿ ದಾಂಪತ್ಯ ಕೂಡ ಒಂದು. ಆದ್ರೆ ದಾಂಪತ್ಯ ಉಸಿರುಗಟ್ಟಲು ಶುರುವಾದಾಗ ಅದ್ರಲ್ಲಿ ಮುಂದುವರೆಯೋದು ಕಷ್ಟ. ವಯಸ್ಸು ಎಷ್ಟೇ ಆಗಿರಲಿ, ಮನುಷ್ಯ ನೆಮ್ಮದಿ ಬದುಕು ಬಯಸ್ತಾನೆ. ಅದಕ್ಕಾಗಿ ಎಷ್ಟೇ ಕಷ್ಟವಾದ್ರೂ ಸರಿ, ವಿಚ್ಛೇದನ ನೀಡಲು ಮುಂದಾಗ್ತಾನೆ. ಇದಕ್ಕೆ ಕರ್ನಾಲ್ (Karnal) ನಲ್ಲಿ ನಡೆದ ಪ್ರಕರಣ ಉತ್ತಮ ನಿದರ್ಶನ. ಮದುವೆಯಾಗಿ 44 ವರ್ಷಗಳ ನಂತ್ರ, 18 ವರ್ಷಗಳ ಕಾಲ ಕೋರ್ಟ್ನಲ್ಲಿ ಫೈಟ್ ಮಾಡಿ ಕೊನೆಗೂ ದಂಪತಿ ವಿಚ್ಛೇದನ ಪಡೆದಿದ್ದಾರೆ. ಪತ್ನಿಗೆ 73 ವರ್ಷ ವಯಸ್ಸಾದ್ರೆ ಪತಿಗೆ 70 ವರ್ಷ. ಪತ್ನಿಯಿಂದ ಬೇರೆಯಾದ ಪತಿ, ಪರಿಹಾರ ಮೊತ್ತ ನೀಡಲು ತನ್ನ ಜಮೀನು ಮಾರಾಟ ಮಾಡಿದ್ದಾನೆ. ಈ ಪ್ರಕರಣದ ಸಂಪೂರ್ಣ ವಿವರ ಇಲ್ಲಿದೆ. 

44 ವರ್ಷಗಳ ನಂತ್ರ ವಿಚ್ಛೇದನ ! : ಘಟನೆ ನಡೆದಿರೋದು ಕರ್ನಾಲ್ ನಲ್ಲಿ. ಆಗಸ್ಟ್ 1980 ರಲ್ಲಿ ಇವರಿಬ್ಬರ ವಿವಾಹ ನಡೆದಿತ್ತು. ಮದುವೆಯಾದ್ಮೇಲೆ ಸುಂದರ ಸಂಸಾರ ನಡೆಸಿದ್ದ ದಂಪತಿಗೆ ಮಕ್ಕಳಿವೆ.  ಮೂವರು ಮಕ್ಕಳ ಪೈಕಿ ಇಬ್ಬರು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ.  ಮೇ 8, 2006ರಲ್ಲಿ ಇಬ್ಬರ ಮಧ್ಯೆ ಬಿರುಕು ಕಾಣಿಸಿಕೊಂಡಿತ್ತು. ಪತಿ ಹಾಗೂ ಪತ್ನಿ ಬೇರೆ ವಾಸ ಶುರು ಮಾಡಿದ್ದರು. ಪತ್ನಿಯಿಂದ ದೂರವಾಗಲು ಬಯಸಿದ್ದ ಪತಿಗೆ 18 ವರ್ಷಗಳ ಸುದೀರ್ಘ ಹೋರಾಟದ ನಂತ್ರ ಬಿಡುಗಡೆ ಸಿಕ್ಕಿದೆ. ಆತ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾನೆ.

2ನೇ ಮದ್ವೆಯಾದ ಶೋಭಿತಾಗೆ ಪ್ರೀತಿಯ ಮಳೆಗೆರೆಯೋ ನಾಗಚೈತನ್ಯ, ಆಡೋ ಭಾಷೆ

2013ರಲ್ಲಿ ಅರ್ಜಿ ವಜಾ : ಪತಿ ಮೊದಲು ವಿಚ್ಛೇದನ ನಿರ್ಧಾರ ತೆಗೆದುಕೊಂಡಿದ್ದ. 2013ರಲ್ಲಿ ಕರ್ನಾಲ್ ಕೌಟುಂಬಿಕ ನ್ಯಾಯಾಲಯ (Family Court) ದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ 2013ರಲ್ಲಿ ಅವನ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಪತಿ, ಹೈಕೋರ್ಟ್ ಮೆಟ್ಟಿಲೇರಿದ್ದ. ಸುಮಾರು 11 ವರ್ಷಗಳ ಕಾಲ ಹೈಕೋರ್ಟ್ನಲ್ಲಿದ್ದ ಪ್ರಕರಣ ಈಗ ಅಂತ್ಯಕಂಡಿದೆ. ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸಂಧಾನ ಕೇಂದ್ರದಲ್ಲಿ ಮಾತುಕತೆ ನಡೆಸುವಂತೆ ಸೂಚನೆ ನೀಡಿತ್ತು. ಅಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ.

ನಿರಾಕರಣೆಯನ್ನೂ ಅರಗಿಸಿಕೊಳ್ಳುವುದನ್ನು ಕಲಿಯಿರಿ! ಸಾಕೆಂದವನನ್ನು ಬಿಟ್ಹಾಕಿ, ಪ್ರೀತಿ ಉಳಿಸಿ!

ಪರಿಹಾರಕ್ಕಾಗಿ ಜಮೀನನ್ನೇ ಮಾರಿದ ರೈತ : ಕೋರ್ಟ್ ನಲ್ಲಿ 18 ವರ್ಷ ಡಿವೋರ್ಸ್ ಗಾಗಿ ಹೋರಾಟ ನಡೆಸಿದ್ದ ವ್ಯಕ್ತಿ ಮೂಲತಃ ರೈತ. ಸಂಧಾನದ ವೇಳೆ ಪತಿಯಿಂದ ದೊಡ್ಡ ಮೊತ್ತವನ್ನು ಪತ್ನಿ ಪರಿಹಾರವಾಗಿ ಕೇಳಿದ್ದಾಳೆ. ಅದಕ್ಕೆ ಪತಿ ಒಪ್ಪಿದ್ದಾನೆ. ಪತ್ನಿ ಹಾಗೂ ಮಕ್ಕಳಿಗಾಗಿ ರೈತ 3.07 ಕೋಟಿ ರೂಪಾಯಿ ನೀಡಲು ಸಿದ್ಧನಾಗಿದ್ದಾನೆ. ಈ ಹಣ ಹೊಂದಿಸಲು ವ್ಯಕ್ತಿ ತನ್ನ ಜಮೀನು (Land) ಮಾರಾಟ ಮಾಡಿದ್ದಾನೆ. ಇದ್ರಿಂದ ಬಂದ 2 ಕೋಟಿ 50 ಲಕ್ಷ  ಹಣವನ್ನು ಡಿಮ್ಯಾಂಡ್ ಡ್ರಾಫ್ಟ್ (Demand Draft) ಮೂಲಕ ಪತ್ನಿಗೆ ನೀಡಿದ್ದಾನೆ. ಬೆಳೆ ಮಾರಾಟ ಮಾಡಿದ ಹಣವನ್ನು ಕೂಡ ಪತ್ನಿಗೆ ನೀಡಿದ್ದಾನೆ. ಇದಲ್ಲದೆ 40 ಲಕ್ಷ ಮೌಲ್ಯದ ಚಿನ್ನಾಭರಣವನ್ನು ಆತ ಪತ್ನಿಗೆ ಪರಿಹಾರವಾಗಿ ನೀಡಿದ್ದಾನೆ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಹೊಸ ವರ್ಷಕ್ಕೆ ಈ ರಾಶಿಗೆ ಹೊಸ ಪ್ರೀತಿ, ಸಂಗಾತಿ ಭಾಗ್ಯ