ನಿರಾಕರಣೆಯನ್ನೂ ಅರಗಿಸಿಕೊಳ್ಳುವುದನ್ನು ಕಲಿಯಿರಿ! ಸಾಕೆಂದವನನ್ನು ಬಿಟ್ಹಾಕಿ, ಪ್ರೀತಿ ಉಳಿಸಿ!

By Suvarna News  |  First Published Dec 17, 2024, 3:15 PM IST

ಒಂದು ಪ್ರೀತಿಯ ಅಂತ್ಯದ ನಂತರ ಉಂಟಾಗುವ ಭಾವನೆಗಳು, ನೋವು ಮತ್ತು ಮುಂದಿನ ಬದುಕಿನ ಬಗ್ಗೆ ಚಿಂತನೆ. ಪ್ರೀತಿಯ ವೈಫಲ್ಯವನ್ನು ನಿಭಾಯಿಸುವುದು ಮತ್ತು ಮುಂದುವರಿಯುವುದು ಹೇಗೆ ಎಂಬುದರ ಬಗ್ಗೆ ಒಂದು ಆಲೋಚನೆ.


‘ಇಲ್ಲ, ಈಗ ನಾನವನಿಗೆ ಬೇಕಾಗಿಲ್ಲ. ಅವನೊಬ್ಬ ಅವಕಾಶವಾದಿ. ಬೇಕಾದಾಗ ಬಳಸಿಕೊಂಡ. ನನ್ನ ಬುದ್ಧಿವಂತಿಕೆ, ನನ್ನ ಕಾಂಟ್ಯಾಕ್ಟ್​​, ಕೊನೆಗೆ ನನ್ನನ್ನು...I hate him..’- ಅವಳ ಮಾತಿಗೆ ಫುಲ್ ಸ್ಟಾಪ್ ಇಡಲು ಮನಸ್ಸು ಬಾರಲಿಲ್ಲ. Let her speak, ಒಳಗಿರುವುದನ್ನೆಲ್ಲ ಕಕ್ಕಿ ಹಗುರಾಗಲಿ, ಮನಸ್ಸೂ, ಹೊಟ್ಟೆಯೂ ಅಂತ ಸುಮ್ಮನಾದೆ. ಆದ್ರೆ ಮನಸ್ಸು ಮಾತ್ರ ಅವರಿಬ್ಬರ ಸಂಬಂಧದ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಎಷ್ಟು ವರ್ಷದ ಪ್ರೀತಿ, ಜಸ್ಟ್ ಮೂರು ವರ್ಷ. ಅಷ್ಟೇ ಆಯಸ್ಸು. ಇವತ್ತು ಸಾಯ್ತು. ಸಾಯಲಿ ಬಿಡು ಅಂದ್ಕೊಂಡರೂ ಮನಸ್ಸೊಳಗೆ ಚಿಂತನೆಯ ಅಲೆಗಳು ಎದ್ದವು.

ಒಂದು ಪ್ರೀತಿ ಸೃಷ್ಟಿಸುವ ರೋಮಾಂಚನ, ಮನಸ್ಸು, ಹೃದಯ, ಭಾವ, ಜೀವ, ಜಗತ್ತು ಎಲ್ಲವೂ ರಮ್ಯ ಚೈತ್ರಗಾನ.
ಅಲ್ಲಾ, ಪ್ರೀತಿಸ್ತಾ, ಸಂಬಂಧ ಕಟ್ಟಿಕೊಂಡಾಗ ಬದುಕೇ ಅವನು, ಸರ್ವಸ್ವವೂ ಅವನೇ. 

Tap to resize

Latest Videos

undefined

ಅವನ್ನಿಲ್ಲದ ಜೀವನವೊಂದು ಬೇಕಾ? ಅಂತೆಲ್ಲ ಉದ್ದುದ್ದ ಭಾಷಣ ಮಾಡೋ ಹೆಣ್ಮಕ್ಕಳು, ಸಂಬಂಧ ಮುರಿಯುತ್ತಿದ್ದಂತೆ ತಿರುಗಿ ಬೀಳ್ತಾರೆ. ನಿಜ ಅಂದ್ರೆ, ಸಂಬಂಧ ಉಳಿಯಬೇಕು, ಉಳಿಸಿಕೊಳ್ಳಬೇಕು ಅನ್ನೋದು ಅವಳೇ. ಮತ್ತು ಆ ಸಂಬಂಧ ಉಳಿಸಿಕೊಳ್ಳಲು ಆಕಾಶ- ಭೂಮಿ ಒಂದು ಮಾಡುವಂಥ ಪ್ರಯತ್ನ ಮಾಡ್ತಾಳೆ. ಸೋಲುತ್ತಾಳೆ, ಮಂಡಿಯೂರುತ್ತಾಳೆ, ಕಣ್ಣೀರಾಗುತ್ತಾಳೆ, ಖಿನ್ನತೆಗೆ ಜಾರುತ್ತಾಳೆ. ಅಷ್ಟೆಲ್ಲ  ಪ್ರಯತ್ನ ಮಾಡಿಯೂ ಆ ಸಂಬಂಧ ಉಳಿಯಲಿಲ್ಲ ಅಂದ್ರೆ ಕತ್ತೆ ಬಾಲ, ಕುದುರೆ ಜುಟ್ಟು ಅಂದ್ಕೊಂಡು ಹೊಸಿಲು ದಾಟಿ ಹೊರಬರ್ತಾಳೆ ಮತ್ತು ಅದಕ್ಕೆ No regreats.

ನಿರಾಕರಣೆಯೊಂದೇ ಮಾತ್ರ ಮನುಷ್ಯರನ್ನು ಹೆಚ್ಚು ಬೆಳೆಸುವುದು. ಎಷ್ಟು ಪ್ರೀತಿಸಿದರೂ, ಅದೇ ಪ್ರೀತಿಗಾಗಿ ಬೇಡಿದ್ರೂ ನಿರಾಕರಣೆಯೇ ಸಿಕ್ಕಾಗ ಮನಸ್ಸು ಬೋರಲು ಬೀಳುವುದು ಸಹಜ. ಆದರೆ, ಒಮ್ಮೆ ನಿರಾಕರಣೆಯನ್ನೂ ಅರಗಿಸಿಕೊಳ್ಳುವುದು ಕಲಿತುಬಿಟ್ಟಿರೋ, ಯುದ್ಧ ಗೆದ್ದ ಖುಷಿ.

ಪ್ರೀತಿಗೆ ಜಾತಿ, ಧರ್ಮ ಯಾಕೆ ಎಂದು… ಬೇರೆ ಧರ್ಮದವರನ್ನ ಮದುವೆಯಾದ ಬಾಲಿವುಡ್ ನಟಿಯರು…

ಪ್ರೀತಿಯಲ್ಲಿ ಮೊದ, ಮೊದಲು ಎಂಥಾ ಖುಷಿ ಇರುತ್ತೆ. ಇಬ್ಬರೂ ವಿರುದ್ಧ ದಿಕ್ಕಿನ ಮನಸ್ಥಿತಿಯವರಾದರೂ, ಕಣ್ಣಿಗೆ ಕವಿದ ಪ್ರೇಮದ ಮಂಜು ಪರಸ್ಪರ ಆಕರ್ಷಿಸುವಂತೆ ಮಾಡುತ್ತದೆ. ಒಂದು ಸಾರಿ, ಇಬ್ಬರ ವೀಕ್​​ನೆಸ್ಸೋ, ಪೊಸೆಸ್ಸಿವ್​ನೆಸ್ಸೋ. ಅದೇ ಪ್ರೀತಿ ನಿಧಾನವಾಗಿ ಆವಿಯಾಗ ತೊಡಗುತ್ತದೆ. ಸಣ್ಣ ತಪ್ಪುಗಳು ಬೃಹದಾಕಾರ ಬಂಡೆಗಳಂತೆ. ಮಾತಿಗೆ ತಪ್ಪೋದು, ನೆಗ್ಲೆಟ್​​, ನನಗಾಗಿ ಒಂದು ಜೀವ ಇದೆ ಅನ್ನೊದು ಮರೆತಂತೆ ನಡವಳಿಕೆ. ಅಸಹನೆ ಶುರುವಾಗುತ್ತೆ. 

ಕಾರಣವೇ ಅಲ್ಲದ ಕಾರಣಕ್ಕೆ ಜಗಳ, ಆರೋಪಗಳು, ಪ್ರತ್ಯಾರೋಪಗಳು, ವಾದ, ತರ್ಕ. ಅಷ್ಟರಲ್ಲಿ ಇಬ್ಬರೂ ದೂರ ಆಗೋ ಲೆಕ್ಕ ಪಕ್ಕಾ ಆಗಿರುತ್ತದೆ. ಇಷ್ಟು ದಿನಗಳಲ್ಲಿ ಇದ್ದದ್ದು ನಿಜವಾದ ಪ್ರೀತಿನಾ ? ಅನ್ನೋ ಹೊಸ ಅನುಮಾನ ಶುರುವಾಗುತ್ತದೆ. ಪ್ರೀತಿ ನಿಜವಾ ಸುಳ್ಳಾ? ಫುಲ್ ಕನ್​​ಫ್ಯೂಷನ್​. ಕೊನೆಗೆ ಇದೆಲ್ಲ ಬೇಡವೇ ಬೇಡ ಅನ್ನೋ ಸೈಲೆನ್ಸ್​ ಆವರಿಸುತ್ತೆ. 

ಎಲ್ಲವೂ ಮುಗಿದು ಚರಮ ಗೀತೆ ಹಾಡಿದ ಎಷ್ಟೋ ದಿನಗಳು, ತಿಂಗಳು, ವರ್ಷಗಳ ನಂತರ, ದೂರ ದಾರಿಯಲ್ಲಿ ಕ್ರಮಿಸಿದ ನಂತರ ಒಮ್ಮೆ ತಿರುಗಿ ನೋಡಿದಾಗ ಕಳೆದು ಕೊಂಡವರು ಬೇಕು ಅಂತಲೂ ಅನಿಸುವುದಿಲ್ಲ. ಅವನು ಮೋಸಗಾರನಾ? ವಂಚಕರನಾ ? ಏನೂ ಅನಿಸದಂಥ ಖಾಲಿ ಫೀಲಿಂಗ್ಸ್​. ಎಲ್ಲೇ ಇರಲಿ, ಚೆನ್ನಾಗಿರಲಿ ಅನ್ನೋ ಹಾರೈಕೆ. ಬದುಕು ತಹಬದಿಗೆ ಬಂದಿದೆ ಅಂತಲೇ ಅರ್ಥ. 

ಕಸಿನ್ ಜೊತೆ ಕದ್ದು ಮುಚ್ಚಿ ಪ್ರೀತಿ, ಮದುವೆಯಾದ ನಾಲ್ಕೇ ದಿನಕ್ಕೆ ಗಂಡನಿಗೆ ಗತಿ ಕಾಣಿಸಿದ ಪತ್ನಿ!

ಅಗಲಿಕೆಯ ನೋವು ಎಷ್ಟಾದರೂ, ಆ ವೈಫಲ್ಯವನ್ನು ಭರಿಸಿ ತ್ಯಾಗಗಳಿಗೆ ಸಿದ್ಧವಾಗುತ್ತೆ ಪ್ರೀತಿಯ ನಿಜವಾದ ನಿರೀಕ್ಷೆ ಒಬ್ಬರ ನೆಮ್ಮದಿಯೇ ಆಗಿರುತ್ತದೆ.ಈ ಹಂತಕ್ಕೆ ಅವನೋ, ಅವಳೋ ಬರಲೇಬೇಕು. ಈ ಹಂತ ತಲುಪಿದಾಗಲೇ ನೀವು ಪ್ರೀತಿಸಿದ್ದು ನಿಜವಾದ ಪ್ರೀತಿ ಎಂಬ ಅರಿವು ಹೃಯದವನ್ನು ಅರಳಿಸುತ್ತೆ.ಪ್ರೀತಿ ಜೀವಂತವಾಗಿರೋದೇ, ಅವರ ಪ್ರೀತಿ ನಮ್ಮೊಳಗಿನ ಭಾವನೆಗಳಲ್ಲಿ ಉಳಿಯುವ ಮೂಲಕ. ಯಾರನ್ನೋ ಪ್ರೀತಿಸಲಿಕ್ಕೆ ಅವರ ಅಸ್ವಿತ್ತ ಮುಖ್ಯವಲ್ಲ ಎಂಬ ತಿಳಿವಳಿಕೆ ಕೊಡೋದೇ ನಿಜವಾದ ಪ್ರೀತಿ. ಪ್ರೀತಿ ದ್ವೇಷವೋ, ದುಃಖವೋ ಆಗದೆ ಪ್ರೀತಿಯೇ ಆಗಿ ಉಳಿದು ಬಿಡುವುದೇ ಅದಕ್ಕಿರುವ ಶಕ್ತಿ. ಬದುಕಿಗೆ ಬ್ರೇಕ್​ ಇಲ್ಲ, ಸಿಗ್ನಲ್​ ಲೈಟ್​​ಗಳಿಲ್ಲ, ಹಾಗಾಗಿ ಎಲ್ಲೂ ನಿಲ್ಲೋದಿಲ್ಲ

ಅವನಿಗೆ ಬೇರೆ ಹುಡುಗಿ ಸಿಕ್ತಾಳೆ. ಇವಳಿಗೆ ಇನ್ನೊಬ್ಬ. ಮದುವೆ, ಸಂಸಾರ, ಮಕ್ಕಳು  ಹೊಂದಾಣಿಕೆಯೇ ಜೀವನ. ಜೀವನವೇ ಚೈತ್ರ. ಒಮ್ಮೆ ವಿಫಲ ಪ್ರೇಮದ ಗುಂಡಿಯಿಂದ ಎದ್ದು ಮೈಕೊಡವಿ Move on ಎಂದುಬಿಟ್ಟರೆ, ಜೀವನ ಮತ್ತೆ ಕೆನೆಯುವ ಕುದುರೆಯಂತೆ, ಲಗಾಮು ಹಿಡಿದು ಓಡುತ್ತಿದ್ದರೆ ಸೋಲಿಗೆಲ್ಲಿದೆ ದಾರಿ? ಇದನ್ನೆಲ್ಲ ಅವಳಿಗೆ ಹೇಳಲಾಗಲಿಲ್ಲ. ಯಾಕಂದ್ರೆ, ಸಮಯಕ್ಕೆ ಎಲ್ಲವನ್ನೂ ಬದಲಿಸುವ, ಎಲ್ಲವನ್ನೂ ಹೀಲ್ ಮಾಡುವ ಶಕ್ತಿ ಇದೆ. ಅವಳೂ ಎದ್ದು ಓಡುತ್ತಾಳೆ ಎಂಬ ನಂಬಿಕೆಯೊಂದಿಗೆ.
 

click me!