ದಾಂಪತ್ಯದಲ್ಲಿ ಸಾಮರಸ್ಯ ಬಹಳ ಮುಖ್ಯ. ಪ್ರೀತಿಯನ್ನು ತೋರಿಸೋಕೆ ನಾನಾ ವಿಧಗಳಿವೆ. ನಿಮ್ಮ ಸಂಗಾತಿಯನ್ನು ಮೆಚ್ಚಿಸಲು, ನಿಮ್ಮ ಪ್ರೀತಿ ಹೇಳಲು ಉಡುಗೊರೆಯೊಂದೇ ವಿಧಾನವಲ್ಲ. ಒಂದು ಅಪ್ಪುಗೆ ನಿಮ್ಮ ಭಾವನೆ ತೆರೆದಿಡುವ ಕೆಲಸ ಮಾಡುತ್ತದೆ.
ಒಂದು ಅಪ್ಪುಗೆ ಸಾವಿರಾರು ಮಾತುಗಳಿಗೆ ಸಮ. ದುಃಖದಲ್ಲಿರಲಿ ಇಲ್ಲ ಸಂತೋಷದಲ್ಲಿರಲಿ ಆಪ್ತರು ತಬ್ಬಿಕೊಂಡಾಗ ನೋವು ಕಡಿಮೆಯಾಗುವುದಲ್ಲದೆ ಸಂತೋಷ ಡಬಲ್ ಆಗುತ್ತದೆ. ಈ ಅಪ್ಪುಗೆ ಸಂಗಾತಿಯನ್ನು ಹತ್ತಿರಕ್ಕೆ ತರುವ ಕೆಲಸ ಮಾಡುತ್ತದೆ. ಮಕ್ಕಳು ಅತ್ತಾಗ, ನೋವಿನಲ್ಲಿರುವಾಗ ಅವರನ್ನು ಪಾಲಕರು ಅಪ್ಪಿಕೊಂಡ್ರೆ ಅಳು ನಿಲ್ಲುತ್ತದೆ. ಅವರು ಪಾಲಕರ ತೋಳಿನಲ್ಲಿ ಸುರಕ್ಷಿತವೆಂದು ಭಾವಿಸ್ತಾರೆ. ಸಂಗಾತಿ ವಿಷ್ಯದಲ್ಲೂ ಅಪ್ಪುಗೆಯನ್ನು ಸುರಕ್ಷಿತತೆಯ ಸೂಚಕ ಎನ್ನಲಾಗುತ್ತದೆ. ತಬ್ಬಿಕೊಳ್ಳುವುದು ನಿಮ್ಮಿಬ್ಬರ ಸಂಬಂಧವನ್ನು ಬಲಪಡಿಸುವುದಲ್ಲದೆ ಒತ್ತಡವನ್ನು ಕಡಿಮೆ ಮಾಡುತ್ತದೆ.
ನಿಮಗೆ ಅವಕಾಶ ಸಿಕ್ಕಾಗೆಲ್ಲ ನಿಮ್ಮ ಸಂಗಾತಿ (Spouse) ಯನ್ನು ಅಪ್ಪಿಕೊಂಡ್ರೆ ತಪ್ಪೇನಿಲ್ಲ ಎನ್ನುತ್ತಾರೆ ತಜ್ಞರು. ಅಪ್ಪುಗೆ (Hug) ಇಬ್ಬರ ಮಧ್ಯೆ ಪ್ರೀತಿ (Love), ಗೌರವವನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅಪ್ಪುಗೆಯಲ್ಲಿ ನಾನಾ ಬಗೆಗಳಿವೆ ಎಂಬುದು ನಿಮಗೆ ಗೊತ್ತು. ಸಂಗಾತಿ ನಿಮ್ಮನ್ನು ಬಿಗಿದಪ್ಪಬಹುದು ಇಲ್ಲವೆ ನಿಮ್ಮ ಹಿಂದಿನಿಂದ ಬಂದು ಅಪ್ಪಿಕೊಳ್ಳಬಹುದು. ಒಂದೇ ತೋಳಿನಿಂದ ನಿಮ್ಮನ್ನು ತಬ್ಬಿಕೊಳ್ಳಬಹುದು. ಒಂದೊಂದು ಜಾಗದಲ್ಲಿ ಅಥವಾ ಒಂದೊಂದು ಸಂಬಂಧದಲ್ಲಿ ನೀವು ಒಂದೊಂದು ರೀತಿ ಅಪ್ಪುಗೆಯನ್ನು ಕಾಣ್ತೀರಿ. ನಾವಿಂದು ಯಾವ ಅಪ್ಪುಗೆ ಯಾವ ಅರ್ಥವನ್ನು ಹೇಳುತ್ತದೆ ಎಂಬುದನ್ನು ನಿಮಗೆ ಹೇಳ್ತೇವೆ.
undefined
ಸುಖ ಸಂಸಾರಕ್ಕೆ 12 ಸೂತ್ರ ಯಾಕಪ್ಪ? ಇದೊಂದೇ ಸೂತ್ರ ಪಾಲಿಸಿ ನೋಡಿ, ಲೈಫ್ ಸೂಪರ್ ಎಂದ ಅಮೃತಧಾರೆ ಗೌತಮ್!
ಭಜದ ಮೇಲೆ ವಿಶ್ರಾಂತಿ ಹೊಂದುವ ರೀತಿಯ ಅಪ್ಪುಗೆ : ಅಂದ್ರೆ ನಿಮ್ಮ ಸಂಗಾತಿ ನಿಮ್ಮನ್ನು ತಬ್ಬಿಕೊಂಡಿರುತ್ತಾರೆ. ನೀವು ಅವರ ಹೆಗಲ ಮೇಲೆ ತಲೆಯಿಟ್ಟು ವಿಶ್ರಾಂತಿ ಪಡೆಯುತ್ತೀರಿ. ಈ ಅಪ್ಪುಗೆ ನಿಮ್ಮ ಸಂಬಂಧದಲ್ಲಿ ಪ್ರೀತಿ, ಹಾಟ್ನೆಸ್, ಹೊಂದಾಣಿಕೆ ಇದೆ ಎಂಬುದನ್ನು ತೋರಿಸುತ್ತದೆ. ಅವರು ನಿಮ್ಮ ಜೊತೆ ಇರೋದನ್ನು ನೀವು ಆನಂದಿಸುತ್ತೀರಿ. ಇದು ನಿಮಗೆ ಶಾಂತಿ, ಸಂತೋಷ ನೀಡುತ್ತದೆ. ಅವರ ಈ ಅಪ್ಪುಗೆ ನಿಮಗೆ ಹಿತವೆನ್ನಿಸುತ್ತದೆ.
ಬ್ಯಾಕ್ ಹಗ್ (Back Hug) : ಹಿಂದಿನಿಂದ ಬಂದು ನಿಮ್ಮನ್ನು ಸಂಗಾತಿ ತಬ್ಬಿಕೊಳ್ಳುವುದು. ಹೀಗೆ ಮಾಡಿದ್ರೆ ಸಂಗಾತಿ ತುಂಬಾ ಸಮಯದಿಂದ ನಿಮ್ಮ ನೆನಪಿನಲ್ಲಿದ್ದರು ಎಂಬುದನ್ನು ಸೂಚಿಸುತ್ತದೆ. ಆಗಾಗ ನಿಮ್ಮ ಸಂಗಾತಿ ನಿಮ್ಮನ್ನು ಹೀಗೆ ಹಗ್ ಮಾಡ್ತಿದ್ದರೆ ಯಾವಾಗ್ಲೂ ಅವರು ನಿಮ್ಮನ್ನು ಪ್ರೀತಿಸಲು, ಪ್ರೀತಿಯ ಅನುಭವ ನೀಡಲು ಬಯಸುತ್ತಾರೆ ಎಂಬ ಅರ್ಥ. ನಿಮ್ಮ ಸೊಂಟವನ್ನು ಹಿಡಿದು ನಿಮ್ಮನ್ನು ತಬ್ಬಿಕೊಂಡ್ರೆ ಅವರು ನಿಮ್ಮನ್ನು ರಕ್ಷಿಸಲು ಬಯಸ್ತಾರೆ ಎಂಬುದನ್ನು ಇದು ಸೂಚಿಸುತ್ತದೆ.
ಗ್ರೇಸ್ ಆನ್ ವೆಸ್ಟ್ ಹಗ್ (Grace Un West Hug): ನೀವು ಹಾಗೂ ನಿಮ್ಮ ಸಂಗಾತಿ ಮಧ್ಯೆ ಹೆಚ್ಚಿನ ಆಪ್ತತೆಯಿದೆ ಎಂಬುದನ್ನು ಇದು ಹೇಳುತ್ತದೆ. ಪ್ರೀತಿ, ವಿಶ್ವಾಸ, ಪ್ರಣಯ ನಿಮ್ಮಲ್ಲಿ ಹೆಚ್ಚಿದೆ ಎಂಬ ಅರ್ಥವನ್ನು ಇದು ನೀಡುತ್ತದೆ. ನಿಮ್ಮ ಸಂಬಂಧವನ್ನು ಇನ್ನಷ್ಟು ರುಚಿಗೊಳಿಸಲು, ನಿಮ್ಮ ಸಂಗಾತಿ ನಿಮ್ಮೊಂದಿಗೆ ಎಷ್ಟು ಆಳ ಸಂಬಂಧ ಹೊಂದಿದ್ದಾರೆ ಎಂಬುದನ್ನು ಇದು ತೋರಿಸುತ್ತದೆ.
ಡೆಡ್‌ಲಾಕ್ ಹಗ್ (Deadlock Hug) : ಒಬ್ಬರನ್ನೊಬ್ಬರು ಬಿಗಿಯಾಗಿ ಅಪ್ಪಿಕೊಳ್ಳುವುದಾಗಿದೆ. ಎರಡೂ ತೋಳುಗಳಿಂದ ಸಂಗಾತಿ ನಿಮ್ಮನ್ನು ತಬ್ಬಿಕೊಂಡಿರುತ್ತಾರೆ. ಇದನ್ನು ನೆವರ್ ಲೆಟ್ ಯು ಹಗ್ ಎಂದೂ ಕರೆಯುತ್ತಾರೆ. ಅಂದ್ರೆ ಪರಸ್ಪರ ಬೇರೆಯಾಗಲು ಇವರು ಬಯಸುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಬದ್ಧತೆ, ನಂಬಿಕೆ ಮತ್ತು ಏಕತೆಯ ಸಂಕೇತವಾಗಿದೆ.
ಬ್ರೆಡ್ ಕ್ರಂಬಿಂಗ್…. ಸಂಗಾತಿ ಬೇಕು, ಸೆಕ್ಸ್ ಬೇಕು… ಆದರೆ ಪ್ರೀತಿ , ಕಮಿಟ್ಮೆಂಟ್ ಬೇಡ
ಒಂದು ತೋಳಿನಲ್ಲಿ ಅಪ್ಪುಗೆ : ನಿಮ್ಮ ಸಂಗಾತಿ ನಿಮ್ಮನ್ನು ಒಂದು ತೋಳಿನಿಂದ ಅಪ್ಪಿಕೊಂಡಲ್ಲಿ ಇದಕ್ಕೆ ಎರಡು ಅರ್ಥವಿದೆ. ಸಾಮಾನ್ಯವಾಗಿ ಸ್ನೇಹಿತರ ಮಧ್ಯೆ ಈ ಅಪ್ಪುಗೆಯನ್ನು ನೀವು ನೋಡ್ತೀರಿ. ಅಂದ್ರೆ ನಿಮ್ಮಿಬ್ಬರ ಮಧ್ಯೆ ಸ್ನೇಹ ಸಂಬಂಧ ಬಲವಾಗಿದೆ ಎನ್ನುವುದು ಒಂದಾದ್ರೆ ಇನ್ನೊಂದು ನಿಮ್ಮ ಸಂಗಾತಿ ಸಾರ್ವಜನಿಕ ಪ್ರದೇಶದಲ್ಲಿ ನಿಮ್ಮ ಸಂಬಂಧವನ್ನು ತೋರಿಸಲು ಬಯಸುವುದಿಲ್ಲ ಎಂಬುದನ್ನು ಇದು ಸೂಚಿಸುತ್ತದೆ.