relationship
ಮಕ್ಕಳ ಮಧ್ಯೆ ಜಗಳ ಆಗ್ಬಾರ್ದು ಅಂದ್ರೆ ಮುಖ್ಯವಾಗಿ ಒಬ್ಬರ ಪರ ವಹಿಸುವ ತಪ್ಪನ್ನು ಮಾಡಲೇಬಾರದು. ಇದರಿಂದ ಇಬ್ಬರ ನಡುವಿನ ಜಗಳ ಮತ್ತಷ್ಟು ಹೆಚ್ಚಿಸುವ ಸಾಧ್ಯತೆಯೇ ಹೆಚ್ಚು.
ಪ್ರತಿ ಮಕ್ಕಳ ಬಗ್ಗೆ ಪ್ರತ್ಯೇಕವಾಗಿ ಕಾಳಜಿ ವಹಿಸೋ ಅಭ್ಯಾಸ ಒಳ್ಳೆಯದು. ಮಗುವಿನ ಶಕ್ತಿ ಹಾಗೂ ಬಲಹೀನತೆಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಇಬ್ಬರ ಬಗ್ಗೆಯೂ ಗಮನ ಹರಿಸಬೇಕು.
ಮಕ್ಕಳಲ್ಲಿ ಬೇಧಭಾವ ಮಾಡಬೇಡಿ. ಮಕ್ಕಳಿಬ್ಬರಿಗೂ ಒಂದೇ ರೂಲ್ಸ್ ಇರಲಿ. ತಪ್ಪು ಮಾಡಿದರೆ ಒಬ್ಬರನ್ನು ಶಿಕ್ಷಿಸುವುದು, ಇನ್ನೊಬ್ಬರನ್ನು ಶಿಕ್ಷಿಸದಿರುವುದು ಮಾಡದಿರಿ.
ಚಿಕ್ಕಂದಿನಲ್ಲೇ ಮಕ್ಕಳಿಗೆ ಪರಸ್ಪರ ಗೌರವ ನೀಡುವುದನ್ನು ಕಲಿಸುವುದು ಮುಖ್ಯ. ಇಲ್ಲದಿದ್ದರೆ ಮಕ್ಕಳಲ್ಲಿ ಜಗಳಾಡುವ ಸ್ವಭಾವ ಹೆಚ್ಚುತ್ತಾ ಹೋಗುತ್ತದೆ.
ಮಕ್ಕಳೆದುರು ಅಪ್ಪಿತಪ್ಪಿಯೂ ಕೋಪ ಪ್ರದರ್ಶಿಸಲು ಹೋಗಬೇಡಿ. ಇದು ಮಕ್ಕಳ ಸ್ವಭಾವವನ್ನು ಸಹ ಕೆರಳಿಸಬಹುದು.
ಮಕ್ಕಳ ಮಧ್ಯೆ ಪರಸ್ಪರ ಸಾಮರಸ್ಯ ಮೂಡಿಸಲು ಪ್ರಯತ್ನಿಸಿ. ಇಬ್ಬರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುವ ಚಟುವಟಿಕೆಗಳನ್ನು ನೀಡಿ.
ಆನ್‌ಲೈನ್‌ನಲ್ಲಿ ಸೂಕ್ತ ಸಂಗಾತಿಯನ್ನು ಹುಡುಕೋದು ಹೇಗೆ?
ಔರಂಗಜೇಬನ ಮಗಳು ಕೃಷ್ಣನ ಪರಮ ಭಕ್ತೆಯಾಗಿದ್ದು ಹೇಗೆ?
ಮದುವೆಯ ನಂತರ ಮಹಿಳೆಯರ ಸ್ವಭಾವ ಯಾಕೆ ಬದಲಾಗುತ್ತದೆ?
ಲವ್ ಮ್ಯಾರೇಜ್ ಆದ್ಮೇಲೆ ತಪ್ಪು ಮಾಡ್ಬಿಟ್ಟೆ ಅಂತನಿಸೋದು ಯಾಕೆ?