Relationship Tips : ದಂಪತಿ ಮಧ್ಯೆ ಸ್ನೇಹ ಗಾಢವಾದಾಗ ಜೀವನ ಸುಖಮಯ

Suvarna News   | Asianet News
Published : Feb 16, 2022, 02:33 PM IST
Relationship Tips : ದಂಪತಿ ಮಧ್ಯೆ ಸ್ನೇಹ ಗಾಢವಾದಾಗ ಜೀವನ ಸುಖಮಯ

ಸಾರಾಂಶ

ಜೀವನದಲ್ಲಿ ನೂರಾರು ಸ್ನೇಹಿತರು ಸಿಗಬಹುದು. ಆದರೆ ಎಲ್ಲರ ಸ್ನೇಹವನ್ನು ಕಾಪಾಡಿಕೊಂಡು ಹೋಗುವುದು ಹೇಳಿದಷ್ಟು ಸುಲಭವಲ್ಲ. ಸ್ನೇಹಕ್ಕಿರುವ ಶಕ್ತಿ ಅಪಾರ. ಗಂಡ-ಹೆಂಡತಿ ಮಧ್ಯೆಯೂ ಗೆಳೆತನ ಗಟ್ಟಿಯಾಗಿದ್ದರೆ ಜೀವನ ಸುಮಧುರವಾಗಿರುತ್ತದೆ.   

ಒಳ್ಳೆಯ ಸ್ನೇಹಿತ (Friend)ರು ಸಂಸಾರ (Family) ನಡೆಸುವ ನಿರ್ಧಾರ ಕೈಗೊಂಡಾಗ ಸಂಬಂಧ ಗಟ್ಟಿಯಾಗಿರುತ್ತದೆ ಎಂಬ ಮಾತಿದೆ. ದಾಂಪತ್ಯಕ್ಕೆ ಕಾಲಿಡುವ ಮೊದಲೇ ಪರಸ್ಪರ ಇಬ್ಬರು ಅರ್ಥ ಮಾಡಿಕೊಂಡಿರುವ ಕಾರಣ ಸಂಸಾರ ಸುಲಭವಾಗುತ್ತದೆ. ಎಲ್ಲರಿಗೂ ಸ್ನೇಹಿತ (Friend)ರ ಕೈ ಹಿಡಿಯುವ ಅವಕಾಶ ಸಿಗುವುದಿಲ್ಲ. ಸ್ನೇಹಿತರು ಪತಿ-ಪತ್ನಿಯಾಗುವುದು ಸಾಧ್ಯವಿಲ್ಲವೆಂದಾಗ ಪತಿ-ಪತ್ನಿಯೇ ಒಳ್ಳೆ ಸ್ನೇಹಿತರಾಗಬಹುದು. ಅನೇಕ ದಂಪತಿ ಮಧ್ಯೆ ಸ್ನೇಹ ಕಷ್ಟವಾಗುತ್ತದೆ. ಇಬ್ಬರ ಮೇಲಿರುವ ಜವಾಬ್ದಾರಿ ಅವರ ಸ್ನೇಹಕ್ಕೆ ಅಡ್ಡಿಯಾಗುತ್ತದೆ. ದಂಪತಿ ಸ್ನೇಹಿತರಾದಾಗ ಅನೇಕ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು. ಕೆಲ ದಂಪತಿ, ಸ್ನೇಹಿತರಾಗಿರಲು ಪ್ರಯತ್ನಿಸಿದರೂ ಜವಾಬ್ದಾರಿಗಳು ಅವರನ್ನು ಇದ್ರಿಂದ ದೂರ ತಳ್ಳುತ್ತವೆ. ಪತಿ-ಪತ್ನಿಯರ ಸಂಬಂಧದಲ್ಲಿ ಸ್ನೇಹ ಬಹಳ ಮುಖ್ಯ. ಹಾಗಾಗಿ ಅದನ್ನು ಕಾಪಾಡಿಕೊಳ್ಳಲು ನೀವು ಕೆಲವು ಸುಲಭ ಸಲಹೆಗಳನ್ನು ಅನುಸರಿಸಬಹುದು. ಇಂದು ದಂಪತಿ ಒಳ್ಳೆ ಸ್ನೇಹಿತರಾಗುವುದು ಹೇಗೆ ಎಂಬುದನ್ನು ಹೇಳ್ತೇವೆ.

ಜವಾಬ್ದಾರಿಯಿಂದ ಸಮಾಧಿ ಸೇರುವ ಸ್ನೇಹ : ಸ್ನೇಹಿತರ ಮಧ್ಯೆ ನಿರೀಕ್ಷೆಗಳಿರುವುದಿಲ್ಲ. ಪತಿ-ಪತ್ನಿ ಮಧ್ಯೆ ಜವಾಬ್ದಾರಿ ಜೊತೆ ನಿರೀಕ್ಷೆಗಳು ಹೆಚ್ಚಿರುತ್ತವೆ. ಹಾಗಾಗಿ ಅಲ್ಲೊಂದು ಶುದ್ಧ ಸ್ನೇಹ ಕಾಣುವುದು ಕಷ್ಟ. ಪತಿ-ಪತ್ನಿ ಪ್ರಯತ್ನಿಸಿದ್ರೆ ಸ್ನೇಹಿತರಾಗಬಹುದು. ಸಂಗಾತಿಯನ್ನು ಪತಿ-ಪತ್ನಿಯಂತೆ ನೋಡದೆ ಅವರನ್ನು ಸ್ನೇಹಿತರಾಗಿ ನೋಡಲು ಪ್ರಯತ್ನಿಸಿ. ಅವರ ಜೊತೆ ಶಾಂತವಾಗಿರಿ. ಹಾಗೆಂದ ಮಾತ್ರಕ್ಕೆ ಜವಾಬ್ದಾರಿ ಮರೆಯಿರಿ ಎಂದಲ್ಲ. ಮನೆ, ಸಂಸಾರದ ಜವಾಬ್ದಾರಿಗಳನ್ನು ಸ್ನೇಹದಿಂದಲೂ ನಿಭಾಯಿಸುವುದನ್ನು ಕಲಿಯಿರಿ.  

Cheating Wife: ನಿದ್ರೆಯಲ್ಲಿ ಗೆಳೆಯನ ಹೆಸರು ಕನವರಿಸಿದ ಪತ್ನಿ, ಪತಿಯದು ಅಧೋಗತಿ

ಮಾತು ಮತ್ತು ಮನಸ್ಸು : ದಂಪತಿ ಮಧ್ಯೆ ಅನೇಕ ಗುಟ್ಟುಗಳಿರುತ್ತವೆ. ಸ್ನೇಹಿತರ ಮುಂದೆ ಪಟಾಕಿ ಸಿಡಿದಂತೆ ಮಾತನಾಡುವ ಜನರು ಸಂಗಾತಿ ಮುಂದೆ ಬಂದಾಗ ಮೌನಿಯಾಗುತ್ತಾರೆ. ತಮ್ಮ ಸಮಸ್ಯೆಯಿಂದ ಹಿಡಿದು ತಮ್ಮ ಮನಸ್ಸಿನ ಭಾವನೆಗಳನ್ನು ಅನೇಕ ಪುರುಷರು ಸಂಗಾತಿ ಮುಂದೆ ಹೇಳುವುದಿಲ್ಲ. ಪತಿ ಮುಂದೆ ಸಾಕಷ್ಟು ಮಾತನಾಡುವ ಪತ್ನಿಯರು ಕೂಡ ಸ್ನೇಹಿತರ ಜೊತೆ ಹಂಚಿಕೊಂಡ ವಿಷ್ಯವನ್ನು ಗಂಡನ ಮುಂದೆ ಹೇಳಲು ಹಿಂಜರಿಯುತ್ತಾರೆ. ಆತನಿಗೆ ತನ್ನ ಮೇಲಿರುವ ಭಾವನೆ ಬದಲಾದ್ರೆ ಎಂಬ ಅಂಜಿಕೆ ಅವರಲ್ಲಿರುತ್ತದೆ. ಇವಳಿಗೆ ಹೇಳಿ ಪ್ರಯೋಜನವಿಲ್ಲ ಎಂಬ ರೀತಿಯಲ್ಲಿ ಪತ್ನಿಯನ್ನು ನೋಡುವ ಗಂಡಂದಿಡೂ ಸಾಕಷ್ಟಿದ್ದಾರೆ. ಕಾರಣ ಏನೇ ಇರಲಿ, ದಂಪತಿ ಮಧ್ಯೆ ಸ್ನೇಹ ಚಿಗುರಬೇಕೆಂದ್ರೆ ಈ ಭಯ,ಹಿಂಜರಿಕೆ ಬಿಡಬೇಕು.  ಸ್ನೇಹದ ಸಂಬಂಧದಲ್ಲಿ ಹಿಂಜರಿಕೆ ಇರುವುದಿಲ್ಲ. ಸ್ನೇಹಿತರ ಮುಂದೆ ನಿಮ್ಮ ಮನಸ್ಸಿನಲ್ಲಿರುವ ಎಲ್ಲವನ್ನೂ ಹಂಚಿಕೊಳ್ಳುತ್ತೀರಿ. ಹಾಗೆಯೇ ನಿಮ್ಮ ಮನಸ್ಸಿನ ಭಾವನೆಯನ್ನು ಸಂಗಾತಿ ಮುಂದಿಡಿ. ಯಾವುದೇ ತೊಳಲಾಟವಿದ್ದರೂ ಅವರ ಮುಂದೆ ಹೇಳಿ. ಅವರಿಂದ ನಿಮಗೆ ಕೆಲವೊಂದು ಅತ್ಯುತ್ತಮ ಸಲಹೆ ಸಿಗಬಹುದು. 

ಬಲವಾದ ಸ್ನೇಹವು ಜಗಳಗಳನ್ನು ಕಡಿಮೆ ಮಾಡುತ್ತದೆ : ದಂಪತಿ  ನಡುವೆ ಜಗಳ ಸಾಮಾನ್ಯ. ಆದರೆ ಅದು ಮಿತಿಗಿಂತ ಹೆಚ್ಚಾದಾಗ ನಿಮ್ಮ ಸಂಬಂಧವು ಹಳಸಲು ಶುರುವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಸ್ನೇಹವಿದ್ದರೆ ಬಹುಶಃ ಸಮಯಕ್ಕೆ ಮುಂಚಿತವಾಗಿ ಪರಸ್ಪರರ ವಿಷಯವನ್ನು ಅರ್ಥಮಾಡಿಕೊಳ್ಳಬಹುದು. ಸ್ನೇಹಿತರ ನಡುವೆ ಅನೇಕ ವಿಷ್ಯಗಳಿಗೆ ಜಗಳ ನಡೆಯುತ್ತದೆ. ಸ್ನೇಹಿತರು ಮುನಿಸಿಕೊಳ್ಳುವುದಿದೆ. ಆದ್ರೆ ಕೆಲವೇ ಕ್ಷಣಗಳಲ್ಲಿ ಇಬ್ಬರೂ ಸಹಜ ಸ್ಥಿತಿಗೆ ಮರಳುತ್ತಾರೆ. ಮತ್ತೆ ನಗು,ಹಾಸ್ಯವನ್ನು ಅಲ್ಲಿ ಕಾಣಬಹುದು. ಸಂಗಾತಿ ಮಧ್ಯೆಯೂ ಸ್ನೇಹವಿದ್ದರೆ ಮುನಿಸು ಕ್ಷಣ ಮಾತ್ರದಲ್ಲಿ ದೂರವಾಗಿ ಸಂತೋಷ ಮನೆ ಮಾಡುತ್ತದೆ. ಹಾಗಾಗಿ ದಂಪತಿ ಮಧ್ಯೆ ಬೆಳೆಯುವ ಸ್ನೇಹ ಕೋಪ,ಜಗಳವನ್ನು ಕಡಿಮೆ ಮಾಡುತ್ತದೆ.

Gender Signifier Colour: ಹುಡುಗಿಯರಿಗೆ ಪಿಂಕ್, ಹುಡುಗರಿಗೆ ನೀಲಿ ಬಣ್ಣ ಬಳಸುವುದು ಯಾಕೆ ?

ಅಧಿಕಾರದ ಹಂಚಿಕೆ : ಪತಿ-ಪತ್ನಿ ಮಧ್ಯೆ ಅಧಿಕಾರದ ವಿಷ್ಯ ಬಂದಾಗ ಗಲಾಟೆಯಾಗುತ್ತದೆ. ಒಬ್ಬರ ಮೇಲೆ ಒಬ್ಬರು ಅಧಿಕಾರ ಚಲಾಯಿಸಲು ಶುರು ಮಾಡಿದಾಗ ಇನ್ನೊಬ್ಬರು ದುರ್ಬಲರಾಗ್ತಾರೆ. ಇದ್ರಿಂದ ಪ್ರೀತಿ,ವಿಶ್ವಾಸ ಕಡಿಮೆಯಾಗುತ್ತದೆ. ಅಧಿಕಾರ ಹಂಚಿಕೆಯಾದಲ್ಲಿ ಪರಸ್ಪರ ಗೌರವ ಸಿಗುತ್ತದೆ. ಸ್ವತಂತ್ರ್ಯ ಸಿಗುತ್ತದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮಗು ಮಾಡಿಕೊಳ್ಳಲು ನೆರೆಯವನೊಂದಿಗೆ ಲೈಂಗಿಕ ಸಂಪರ್ಕ.. ಮೆಡಿಕಲ್ ರಿಪೋರ್ಟ್ ನೋಡಿ ಗಂಡ ಶಾಕ್!
ಮದುವೆಗೂ ಮುನ್ನ ಮಾಜಿ ಪ್ರಿಯಕರನ ಭೇಟಿಯಾದ ವಧು, ಹೀಗೆ ಮಾಡೋದು ಸರೀನಾ? ವೈರಲ್ ವಿಡಿಯೋ ಬಗ್ಗೆ ಚರ್ಚೆ