ಮನೇಲಿ ಗಂಡ-ಹೆಂಡ್ತಿ (Husband-Wife) ಮಧ್ಯೆ ಯಾವಾಗ್ಲೂ ಜಗಳಾನ ? ಜಗಳ, ಭಿನ್ನಾಭಿಪ್ರಾಯ ಹೆಚ್ಚಾಗಿ ಹೀಗೇ ಹೋದ್ರೆ ಡೈವೋರ್ಸ್ (Divorce) ಆಗೋಂದು ಖಂಡಿತ ಅಂತ ಅನಿಸಿದ್ಯಾ ? ಡೋಂಟ್ ವರಿ, ಹೀಗೆ ಮಾಡಿ ಮ್ಯಾರೀಡ್ ಲೈಫ್ (Married Life) ಫುಲ್ ಹ್ಯಾಪಿಯಾಗಿರುತ್ತೆ
ಮದುವೆ (Marriage)ಯೆಂಬುದು ಒಂದು ಸುಂದರ ಅನುಬಂಧ. ಭಾರತೀಯ ಸಂಸ್ಕೃತಿಯಲ್ಲಿ ಮದುವೆಗೆ ಮಹತ್ವದ ಸ್ಥಾನವಿದೆ. ಎರಡು ಕುಟುಂಬಗಳನ್ನು ಒಗ್ಗೂಡಿಸುವ ಮದುವೆಯನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮದುವೆಯೆಂಬ ಸಂಬಂಧವನ್ನು ಉಳಿಸಿಕೊಳ್ಳುವುದಕ್ಕಿಂತ, ಡೈವೋರ್ಸ್ (Divorce) ಕೊಟ್ಟು ಬೇರೆಯಾಗುವ ಪದ್ಧತಿ ಹೆಚ್ಚಾಗುತ್ತಿದೆ. ದಾಂಪತ್ಯವೆಂಬ ಸಂಬಂಧ ಹೆಚ್ಚು ಸಮಯ ಉಳಿಯುತ್ತಿಲ್ಲ. ಭಿನ್ನಾಭಿಪ್ರಾಯ, ಜಗಳ, ಅನೈತಿಕ ಸಂಬಂಧ ಮೊದಲಾದ ವಿಷಯಗಳಿಂದ ದಾಂಪತ್ಯದಲ್ಲಿ ಬಿರುಕು ಮೂಡುತ್ತಿದೆ.
ದಾಂಪತ್ಯದಲ್ಲಿ ಈ ರೀತಿಯ ಸಮಸ್ಯೆ (Problem) ಬಂದಾಗ ತಕ್ಷಣವೇ ಬಗೆಹರಿಸಿಕೊಳ್ಳುವುದು ಮುಖ್ಯ. ಮದುವೆಯ ಸಂಬಂಧ ಸದಾಕಾಲ ಖುಷಿಯಾಗಿರಲು ಏನು ಮಾಡಬೇಕು ? ಯಾವಾಗಲೂ ಸಂಗಾತಿಯ ಜತೆ ಆತ್ಮೀಯವಾಗಿರಲು, ಭಿನ್ನಾಭಿಪ್ರಾಯ ಮೂಡಿ ದೂರವಾಗದಿರಲು ಏನು ಮಾಡಬಹುದು ? ನಿಮ್ಮ ಸಂಗಾತಿಗೆ ಹತ್ತಿರವಾಗಲು ನೀವು ನಿಯಮಿತವಾಗಿ ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ.
Relationship Tips : ಪತ್ನಿ ಮಾಡೋ ಈ ತಪ್ಪಿಗೆ ಹಾಳಾಗುತ್ತೆ ದಾಂಪತ್ಯ!
ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ
ದಂಪತಿಗಳ ಮಧ್ಯೆ ಅಭಿಪ್ರಾಯ ವ್ಯತ್ಯಾಸದಿಂದ ಯಾವಾಗಲೂ ಭಿನ್ನಾಭಿಪ್ರಾಯ ಬರುತ್ತದೆ. ಯಾವುದೋ ಒಂದು ವಿಚಾರದ ಕುರಿತಾಗಿ ಮಾತುಕತೆ ಆರಂಭಗೊಂಡು, ಚರ್ಚೆ ನಡೆದು ಕೊನೆಗೆ ಜಗಳದಲ್ಲಿ ಕೊನೆಗೊಳ್ಳುತ್ತದೆ. ಹೀಗಾಗಿ ಯಾವತ್ತೂ ನಿಮ್ಮ ಸಂಗಾತಿಯ ದೃಷ್ಟಿಕೋನದಿಂದ ವಿಷಯಗಳನ್ನು ನೋಡಲು ಪ್ರಯತ್ನಿಸಬೇಕು. ನೀವು ವಾದಿಸುತ್ತಿದ್ದರೆ, ಅವರ ಅಭಿಪ್ರಾಯ ತಪ್ಪಾಗಿದ್ದರೆ ಅದನ್ನು ವಿವರಿಸಿ ತಿಳಿಸಲು ಪ್ರಯತ್ನಿಸಬೇಕು. ಭಿನ್ನಾಭಿಪ್ರಾಯವು ಸ್ವಾಭಾವಿಕವಾಗಿದ್ದರೂ, ಅವರು ಏನು ಹೇಳುತ್ತಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಂಡಿದ್ದೀರಿ ಎಂದು ಪ್ರದರ್ಶಿಸುವುದು ನಿಮ್ಮ ಸಂಗಾತಿಯ ಬಗ್ಗೆ ನಿಮ್ಮ ಗೌರವ ಮತ್ತು ಪ್ರೀತಿಯನ್ನು ತೋರಿಸುತ್ತದೆ.
undefined
ನಕ್ಕು ಹಗುರಾಗಿ
ಇವತ್ತಿನ ದಿನಗಳಲ್ಲಿ ಮುಖ್ಯವಾಗಿ ಕಳೆದುಹೋಗುತ್ತಿರುವುದು ಸಂಬಂಧಗಳ ವ್ಯಾಲಿಡಿಟಿ. ಯಾವ ಸಂಬಂಧವೂ ದೀರ್ಘಕಾಲ ಉಳಿಯುವುದಿಲ್ಲ. ಪ್ರೀತಿಯಲ್ಲಿ ಬ್ರೇಕಪ್ (Breakup) ಸಾಮಾನ್ಯ, ವೃದ್ಧರಾದ ಅಪ್ಪ-ಅಮ್ಮಂದಿರು ಮಕ್ಕಳಿಗೆ ಬೇಡ, ಹೀಗೆ ಎಲ್ಲಾ ಸಂಬಂಧಗಳಿಗೆ ಕಡಿಮೆ ಆಯುಷ್ಯವಿದೆ. ಮದುವೆಯಾಗಿ ಕೆಲವೇ ತಿಂಗಳಿಗೆ ಡೈವೋರ್ಸ್ ಆಗುವುದು ಸಹ ಸಾಮಾನ್ಯವಾಗಿ ಹೋಗಿದೆ.
ನೀವು ಮದುವೆಯಾಗಿ ಕೆಲವು ವರ್ಷಗಳಾಗಲಿ ಅಥವಾ ಹಲವಾರು ದಶಕಗಳಾಗಲಿ, ಆ ಸಂಬಂಧ (Relationship)ವನ್ನು ಆಸಕ್ತಿದಾಯಕವಾಗಿರಿಸಿಕೊಳ್ಳುವುದು ಮುಖ್ಯ. ಹೀಗಾಗಿ ಇಬ್ಬರ ನಡುವೆ ನಂಬಿಕೆ, ವಿಶ್ವಾಸವನ್ನು ಉಳಿಸಿಕೊಳ್ಳುವ ಮೂಲಕ ಪ್ರೀತಿ ಯಾವತ್ತೂ ಕಡಿಮೆಯಾಗದಂತೆ ನೋಡಿಕೊಳ್ಳಿ. ಚರ್ಚೆ ನಡೆದಾಗ, ಭಿನ್ನಾಭಿಪ್ರಾಯ ಉಂಟಾದಾಗ ಮಾತುಕತೆ ಬಗೆಹರಿಸಿಕೊಳ್ಳಿ. ಹಾಸ್ಯ ಮಾಡುತ್ತಾ ಪರಸ್ಪರ ಮನಸ್ಸು ಹಗುರವಾಗಿಸಿಕೊಳ್ಳಿ.
Arranged Marriage: ನಿಮ್ಮ ಭಾವಿ ಪತ್ನಿಯ ಬಳಿ ಏನು ಕೇಳಬೇಕು? ಏನು ಕೇಳಬಾರದು?
ಅಪ್ಪುಗೆಯನ್ನು ನೀಡಿ
ಬರೀ ಲೈಂಗಿಕತೆಯ ಉದ್ದೇಶದಿಂದಲ್ಲ ಆಗಿಂದಾಗೆ ನಿಮ್ಮ ಸಂಗಾತಿಯನ್ನು ಅಪ್ಪಿ ಪ್ರೀತಿಯನ್ನು ವ್ಯಕ್ತಪಡಿಸಿ. ಖುಷಿಯ ಕ್ಷಣಗಳಲ್ಲಿ, ದುಃಖದ ಕ್ಷಣಗಳಲ್ಲಿ ನಾನು ಜತೆಗಿದ್ದೇನೆ ಎಂದು ತೋರಿಸಿ. ಅಪ್ಪುಗೆಗಳು ನಿಸ್ಸಂದೇಹವಾಗಿ ಹೃದಯವನ್ನು ಬೆಚ್ಚಗಾಗಿಸುತ್ತವೆ. ಪರಸ್ಪರ ಅಪ್ಪುಗೆಯನ್ನು ನೀಡುವುದು ನೀವು ಕಾಳಜಿಯುಳ್ಳ ಮತ್ತು ಚಿಂತನಶೀಲರಾಗಿರುವ ಸಂದೇಶವನ್ನು ರವಾನಿಸುತ್ತದೆ. ಅವರಿಗೆ ಸಂಬಂಧದ ಕುರಿತಾಗಿ ಸುರಕ್ಷಿತ ಭಾವನೆಯನ್ನುಯ ಮೂಡಿಸುತ್ತದೆ. ಅಪ್ಪುಗೆ ಪರಸ್ಪರ ಪ್ರೀತಿಯನ್ನು ತೋರಿಸಲು ಇದು ಉತ್ತಮ ಮಾರ್ಗವಾಗಿದೆ.
ಕೃತಜ್ಞತೆಯನ್ನು ವ್ಯಕ್ತಪಡಿಸಿ
ಸಂಗಾತಿಯ ಉತ್ತಮ ಗುಣಗಳನ್ನು ಯಾವಾಗಲೂ ಪ್ರಶಂಸಿಸಿ ಮತ್ತು ನೀವು ಅವರನ್ನು ಹೊಂದಲು ಎಷ್ಟು ಅದೃಷ್ಟವಂತರಾಗಿದ್ದೀರಿ ಎಂಬುದನ್ನು ಹೇಳಿ. ಇದು ಇಬ್ಬರ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ. ಕಾಳಜಿ ವಹಿಸುವಾಗ, ಖುಷಿ ಪಡಿಸಿದಾಗ ಕೃತಜ್ಞತೆಯನ್ನು ಹೇಳಿ. ಈ ರೀತಿ ಕೃತಜ್ಞತೆ ತೋರಿಸಲು ದೊಡ್ಡದಾಗಿ ತಯಾರಿ ಮಾಡಬೇಕಿಲ್ಲ. ಇಷ್ಟವಾದ ಸಣ್ಣಪುಟ್ಟ ಉಡುಗೊರೆಗಳನ್ನು ಕೊಡಿಸಿ. ಮನೆಯ ಕೆಲಸದಲ್ಲಿ ಸಹಾಯ ಮಾಡಿ ಇದು ನಿಮ್ಮ ಸಂಗಾತಿಯನ್ನು ಖುಷಿಪಡಿಸುತ್ತದೆ.
ಪ್ರತಿದಿನ ಮೇಲೆ ಹೇಳಿದ ಕೆಲವೊಂದು ವಿಷಯಗಳನ್ನು ಮಾಡಲು ನೀವು ಸಿದ್ಧವಾಗಿದ್ದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡುವುದಿಲ್ಲ. ದಾಂಪತ್ಯದಲ್ಲಿ ಪ್ರೀತಿ ಹೆಚ್ಚಾಗುತ್ತದೆ, ಯಾವುದೇ ಅಡೆತಡೆಯಿಲ್ಲದೆ ಮದುವೆಯೆಂಬ ಬಂಧ ಸುಗಮವಾಗಿ ಸಾಗುತ್ತದೆ.