ದಾಂಪತ್ಯದಲ್ಲಿ ಪರಸ್ಪರ ಗೌರವ, ಪ್ರೀತಿ, ವಿಶ್ವಾಸ ಬಹಳ ಮುಖ್ಯವಾಗುತ್ತದೆ. ಒಬ್ಬರ ನ್ಯೂನ್ಯತೆಯನ್ನು ಇನ್ನೊಬ್ಬರು ಎತ್ತಿ ಹೇಳುತ್ತಿದ್ದರೆ ಸಂಸಾರ ದಾರಿ ತಪ್ಪುತ್ತದೆ. ಜಗತ್ತಿನಲ್ಲಿ ದಂಪತಿ ಮಧ್ಯೆ ಚಿತ್ರವಿಚಿತ್ರ ಸಮಸ್ಯೆಗಳಿರುತ್ತವೆ.
ಪತಿ-ಪತ್ನಿ (Husband-Wife )ಮಧ್ಯೆ ಪ್ರೀತಿ- ಪ್ರೇಮ, ಗಲಾಟೆ-ಜಗಳ, ಸರಸ-ವಿರಸ ಸಾಮಾನ್ಯ ಸಂಗತಿ. ದಾಂಪತ್ಯದಲ್ಲಿ ಇವೆಲ್ಲವೂ ಬೆರೆತಾಗ ಮಾತ್ರ ಜೀವನ (Life) ಮಧುರವಾಗಲು ಸಾಧ್ಯ. ಆದ್ರೆ ಸಂಬಂಧದಲ್ಲಿ ಜಗಳ, ವಿರಸ ಅತಿಯಾದಾಗ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ. ಪತಿ-ಪತ್ನಿಯ ಮಧ್ಯೆ ಜಗಳ, ವಿಚ್ಛೇದನ (Divorce)ದ ಸುದ್ದಿಯನ್ನು ನಾವು ಆಗಾಗ ಕೇಳ್ತಿರುತ್ತೇವೆ. ಮದುವೆಯಾದ ಕೆಲವೇ ತಿಂಗಳಲ್ಲಿ ಬೇರೆಯಾಗುವ ದಂಪತಿಯಿದ್ದಾರೆ. ಮತ್ತೆ ಕೆಲವರು ವಿವಾಹವಾದ ನಾಲ್ಕೈದು ವರ್ಷಗಳ ನಂತ್ರ ದೂರವಾಗ್ತಾರೆ. ವಿವಾಹವಾಗಿ 12-13 ವರ್ಷಗಳ ನಂತ್ರ ಬೇರ್ಪಡುವ ಜೋಡಿಯೂ ನಮ್ಮ ಮುಂದಿದ್ದಾರೆ.
ಮದುವೆ ನಂತ್ರ ಸುಖ ಸಿಕ್ಕಿಲ್ಲ ಎಂಬ ಮಾತನ್ನು ನಾವು ಪುರುಷರ ಬಾಯಿಂದ ಕೇಳ್ತಿರುತ್ತೇವೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಜನರು ತಮ್ಮ ನೋವು,ದುಃಖವನ್ನು ಹೇಳಿಕೊಳ್ತಿರುತ್ತಾರೆ. ವ್ಯಕ್ತಿಯೊಬ್ಬ ಮದುವೆಯಾಗಿ 10 ವರ್ಷವಾದ್ರೂ ಪತ್ನಿಯಿಂದ ಸಂತೃಪ್ತಿ ಸಿಕ್ಕಿಲ್ಲವೆಂಬ ವಿಷ್ಯ ಹೇಳಿಕೊಂಡಿದ್ದಾನೆ. ಮತ್ತೊಂದು ಅವಕಾಶ ಸಿಕ್ಕಿದ್ದರೆ ಈಕೆಯನ್ನು ಮದುವೆಯಾಗ್ತಿರಲಿಲ್ಲವೆನ್ನುವ ಪತಿಯ ಸಮಸ್ಯೆ ವಿಚಿತ್ರವಾಗಿದೆ. ಶಾರೀರಿಕ ಸಂಬಂಧದ ವೇಳೆ ಈತನ ಪತ್ನಿ ನಗ್ತಾಳಂತೆ. ಇಂದು ಆ ನೊಂದ ಪತಿಯ ಸಮಸ್ಯೆ ಏನೆಂಬುದನ್ನು ನಾವು ಹೇಳ್ತೇವೆ.
ನೊಂದ ಪತಿಯ ಕಥೆಯೇನು? : ನೊಂದ ಪತಿ ಕೆಲ ದಿನಗಳ ಹಿಂದೆ ತನ್ನ ಸಂಬಂಧಿಯೊಬ್ಬರನ್ನು ಭೇಟಿಯಾಗಿದ್ದನಂತೆ. ಆ ವ್ಯಕ್ತಿ ಜೀವನದ ಕೊನೆ ದಿನಗಳನ್ನು ಎಣಿಸುತ್ತಿದ್ದನಂತೆ. ಹಾಸಿಗೆ ಮೇಲಿದ್ದ ವ್ಯಕ್ತಿ ಈತನಿಗೆ ನಿನ್ನ ಜೀವನದಲ್ಲಿ ಏನಾದ್ರೂ ಸಮಸ್ಯೆಯಿದೆಯಾ ಎಂದು ಪ್ರಶ್ನೆ ಕೇಳಿದ್ದಾನೆ. ಅದಕ್ಕೆ ಈತ ಉತ್ತರ ನೀಡಿದ್ದಾನೆ. ಎಂದೂ, ಯಾರ ಮುಂದೂ ಹೇಳದ ವಿಷ್ಯವನ್ನು ಸಂಬಂಧಿ ಮುಂದೆ ಹೇಳಿದ್ದಾನೆ. ಪತ್ನಿಯ ಬಗ್ಗೆ ತನ್ನ ಮನಸ್ಸಿನಲ್ಲಿದ್ದ ಭಾವನೆಯನ್ನೆಲ್ಲ ಹೊರ ಹಾಕಿದ್ದಾನೆ.
ಈತ ಜೀವನದಲ್ಲಿ ಈತನ ಪತ್ನಿಯೇ ದೊಡ್ಡ ಸಮಸ್ಯೆಯಾಗಿದ್ದಾಳಂತೆ. ಅಷ್ಟಕ್ಕೂ ಪತ್ನಿ ಕೊಡುವ ಹಿಂಸೆ ಒಂದೆರಡಲ್ಲ. ಕಳೆದ 10 ವರ್ಷಗಳಿಂದ ಆಕೆ ಜೊತೆ ಜೀವನ ನಡೆಸುತ್ತಿರುವ ವ್ಯಕ್ತಿ ಒಂದು ದಿನವೂ ಸಂತೋಷ ಅನುಭವಿಸಿಲ್ಲವಂತೆ. ಸದಾ ಅತೃಪ್ತ ಜೀವನ ನಡೆಸುತ್ತಿದ್ದಾನೆ.
ಪತ್ನಿಯ ಬಾಲಿಶ ವರ್ತನೆ ಆತನ ಮೊದಲ ದೂರು. ಪತ್ನಿಗೆ ತನ್ನ ಮೇಲೆ ಕರುಣೆಯಿಲ್ಲ ಎನ್ನುತ್ತಾನೆ ಆತ. ಸಂಭೋಗ ಬೆಳೆಸುವ ವೇಳೆ ಆತನ ಪತ್ನಿ ನಗ್ತಾಳೆಂದು ತನ್ನ ನೋವು ಹೇಳಿದ್ದಾನೆ. ಸಂಭೋಗ ಸುಖವನ್ನು ಅವನು 10 ವರ್ಷದಲ್ಲಿ ಒಂದು ದಿನವೂ ಪಡೆದಿಲ್ಲವಂತೆ. ಸಂಭೋಗ ಬೆಳೆಸುವ ವೇಳೆ ಪತ್ನಿಯ ತಮಾಷೆ ಆತನ ಮತ್ತೊಂದು ದೂರು. ಸೆಕ್ಸ್ ವೇಳೆ ಪತಿಯ ಅಭಿನಯ ಮಾಡುವ ಪತ್ನಿ ಹಾಸಿಗೆಯಿಂದ ಬರುವ ಶಬ್ದಕ್ಕೆ ಮತ್ತು ಪತಿಯ ದೇಹದ ಬಗ್ಗೆ ಸದಾ ಗೇಲಿ ಮಾಡ್ತಾಳಂತೆ. ಮನಸ್ಪೂರ್ವಕವಾಗಿ ಸಂಭೋಗ ಬೆಳೆಸುವ ಬದಲು ತಮಾಷೆ ಎನ್ನುವಂತೆ ನಗ್ತಾಳಂತೆ.
ನಮ್ಮಿಬ್ಬರಿಗೆ ಮಕ್ಕಳಿಲ್ಲ. ಅದಕ್ಕೆ ಕಾರಣ ತನ್ನ ಪತ್ನಿ. ಆಕೆ ಬಹಳ ಆಲಸಿ. ಮನೆಯ ಕೆಲಸವನ್ನೂ ಸರಿಯಾಗಿ ಮಾಡುವುದಿಲ್ಲ. ಮನೆ ಸ್ವಚ್ಛಗೊಳಿಸುವ ಕೆಲಸವನ್ನೂ ನಾನೇ ಮಾಡ್ಬೇಕು. ಆರ್ಥಿಕ ಹೊಣೆ ಕೂಡ ನನ್ನ ಮೇಲಿದೆ. ಮನೆಯ ಯಾವುದೇ ಬಿಲ್ ಅವಳು ಪಾವತಿಸುವುದಿಲ್ಲ ಎಂದು ಪತಿ ಹೇಳಿದ್ದಾನೆ.
Parenting Tips: ಮಕ್ಕಳ ಪ್ರಶ್ನೆಗೆ ‘ಬಹುಶಃ’ ಎಂಬ ಉತ್ತರ ಕೊಡ್ಬೇಬೇಡಿ !
ಆಕೆಯ ಸ್ವಭಾವದ ಕಾರಣ ಆಕೆ ಮನೆಯವರು ವರ್ಷಾನುಗಟ್ಟಲೆ ಆಕೆ ಜೊತೆ ಮಾತನಾಡಿರಲಿಲ್ಲವಂತೆ. 2012ರಲ್ಲಿ ನಮ್ಮಿಬ್ಬರ ಮದುವೆ ನಡೆದಿದೆ. ಅಲ್ಲಿಂದ ಇಲ್ಲಿಯವರೆಗೂ ನಾನು ಖುಷಿಯಾಗಿಲ್ಲ. ನಾವಿಬ್ಬರೂ ಪ್ರೇಮಿಗಳಾಗಿದ್ದೆವು. ನಾನು ಮದುವೆ ಪ್ರಪೋಸ್ ಮಾಡಿರಲಿಲ್ಲ. ಎಲ್ಲವೂ ಸದ್ದಿಲ್ಲದೆ ನಡೆದುಹೋಯ್ತು. ಪ್ರೇಮಿಗಳಾಗಿದ್ದ ನಾವು ಪತಿ-ಪತ್ನಿಯಾದೆವು. ಆದ್ರೆ ಅದಕ್ಕೆ ಈಗ್ಲೂ ಪಶ್ಚಾತಾಪ ಪಡ್ತಿದ್ದೇನೆ ಎಂದು ನೋವು ತೋಡಿಕೊಂಡಿದ್ದಾನೆ. ಇದನ್ನು ಕೇಳಿದ ಸಂಬಂಧಿ, ಸಮಾಧಾನ ಮಾಡಿದ್ದಾನಂತೆ. ಧೈರ್ಯ ಹೇಳಿದ್ದಾನಂತೆ. ಆದ್ರೆ ಅದ್ಯಾವುದೂ ನನ್ನ ದುಃಖ ಕಡಿಮೆ ಮಾಡುವುದಿಲ್ಲವೆನ್ನುತ್ತಾನೆ ಈತ.