ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ

Published : Jul 08, 2022, 03:28 PM IST
ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ

ಸಾರಾಂಶ

ಹಾಲಿವುಡ್ ನಟ ವಿಲ್ ಸ್ಮಿತ್ ಮತ್ತು ಪತ್ನಿ ಜಡಾ ಪಿಂಕೆಟ್ ಸ್ಮಿತ್ ಹಾಟ್ ಜೋಡಿಗಳಲ್ಲಿ ಒಂದು. ಉತ್ತಮ ಸೆಕ್ಸ್ ಸಂಬಂಧದ ಬಗ್ಗೆ ಈ ಜೋಡಿ ನೀಡುವ ಟಿಪ್ಸ್ ಇಲ್ಲಿದೆ...

ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತಮ್ಮ ಪತ್ನಿ ಜಡಾ ಪಿಂಕೆಟ್ ಸ್ಮಿತ್ ಅವರ ಬಗ್ಗೆ ಜೋಕ್ ಮಾಡಿದ ಸ್ಟಾಂಡಪ್ ಕಾಮೆಡಿಯನ್‌ಗೆ ವಿಲ್ ಸ್ಮಿತ್ ಕಪಾಳಮೋಕ್ಷ ಮಾಡಿದ್ದು ನಿಮಗೆ ನೆನಪಿದೆ ತಾನೆ? ಈ ಜೋಡಿಯ ಸೆಕ್ಸ್ ಲೈಫ್ ಕೂಡ ಸಾಕಷ್ಟು ಮಜವಾಗಿದೆ. ಇವರಿಬ್ಬರೂ ತಮ್ಮೊಳಗೆ ಮಾತ್ರವಲ್ಲದೇ ದಾಂಪತ್ಯದ ಆಚೆಗೂ ಸೆಕ್ಸ್ ಸಂಬಂಧ ಹೊಂದಿದ್ದಾರೆ ಎಂದರೆ ಆಶ್ಚರ್ಯ ಪಡಬೇಡಿ. ಆನಂದಮಯ ಸೆಕ್ಸ್ ಜೀವನದ ಬಗ್ಗೆ ಇವರು ಏನು ಹೇಳುತ್ತಾರೆ ಅನ್ನೋದು ಇಲ್ಲಿದೆ. ಜಡಾ ಸ್ಮಿತ್ ಹೇಳುವಂತೆ ಅವರಿಬ್ಬರೂ ಮಲಗುವ ಕೋಣೆಯಲ್ಲಿ ಸದಾ ಆಸಕ್ತಿದಾಯಕ, ಪ್ರಚೋದಿಸುವ ವಿಷಯಗಳನ್ನು ಮಾತಾಡುತ್ತಾರೆ. ಪರಸ್ಪರರ ಲೈಂಗಿಕ ಆಸೆಗಳನ್ನು ಅನ್ವೇಷಿಸುತ್ತಾರೆ. ಪ್ರಚೋದಿಸುವ ಬಟ್ಟೆಗಳನ್ನು ಧರಿಸುತ್ತಾರೆ. ಜಡಾಳ ಹೈಹೀಲ್ ಬುಟುಗಳು ವಿಲ್ ಅವರನ್ನು ಉದ್ರೇಕಿಸುತ್ತವಂತೆ. 

ಆಮೇಲೆ, ಸೆಕ್ಸ್ ಅನುಭವಕ್ಕೆ ಬೆಡ್‌ರೂಮ್ ಮಾತ್ರವಲ್ಲದೆ ಬೇರೆ ಹೊರಗಿನ ಆರಾಮದಾಯಕ ಸ್ಥಳಗಳನ್ನೂ ಆರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಕಚೇರಿಯಲ್ಲೂ ಇದು ನಡೆಯಬಹುದು. ಕೆಲವೊಮ್ಮೆ ಇಂಥ ದಿನ ತಾವು ಸೆಕ್ಸ್ ಹೊಂದಬೇಕು ಎಂದು ಡೇಟ್ ಫಿಕ್ಸ್ ಮಾಡುತ್ತಾರೆ. ಆ ದಿನಕ್ಕಾಗಿ ಕಾತರದಿಂದ ಕಾಯುತ್ತಾರೆ. 

ಒಟ್ಟಿನಲ್ಲಿ ಕಾಮದ ಜ್ವಾಲೆ ಆರದಂತೆ ಜೀವಂತವಾಗಿಡಲು ಏನು ಬೇಕೋ ಅದನ್ನು ಮಾಡುತ್ತಾರೆ. ಜಾಡಾ ಈ ಹಿಂದೆ ತಾವು ಲೈಂಗಿಕ ವ್ಯಸನ ಹೊಂದಿದ್ದೆ ಎಂಬುದನ್ನು ಒಪ್ಪಿಕೊಂಡಿದ್ದಾಳೆ. ನಾನು ಚಿಕ್ಕವಳಿದ್ದಾಗ, ಒಂದು ರೀತಿಯ ಲೈಂಗಿಕ ವ್ಯಸನವನ್ನು ಹೊಂದಿದ್ದೆ. ಎಲ್ಲವನ್ನೂ ಲೈಂಗಿಕತೆಯಿಂದ ಸರಿಪಡಿಸಬಹುದು ಎಂದುಕೊಂಡಿದ್ದೆ ಎಂದಿದ್ದಳು ಒಮ್ಮೆ.

ಧ್ಯಾನದಿಂದಲೂ ಸಾಧಿಸಲಾಗದ್ದನ್ನು ಸೆಕ್ಸ್‌ನಿಂದ ಸಾಧಿಸಲು ಸಾಧ್ಯ: Sex ಬಗ್ಗೆ ಓಶೋ ರಜನೀಶ್‌ ಹೇಳಿದ್ದೇನು?

ಈ ದಂಪತಿ ಕೆಲವೊಮ್ಮೆ ದಾಂಪತ್ಯದಿಂದ ಆಚೆ ಸಂಬಂಧಕ್ಕೆ ಕೈಚಾಚುತ್ತಾರೆ ಎಂಬ ಸುದ್ದಿಗಳೂ ಇವೆ. ಈ ಬಗ್ಗೆ ಒಂದು ಟಿವಿ ಶೋದಲ್ಲಿ ಕೇಳಿದಾಗ ಇಬ್ಬರೂ ಪರಸ್ಪರ ನೋಡಿಕೊಂಡು ಮುಗುಳ್ನಕ್ಕಿದ್ದಾರೆ. 2005ರಲ್ಲಿ, "ನಮ್ಮ ಮದುವೆಯ ಪ್ರತಿಜ್ಞೆಯಲ್ಲಿ ನಾವು ಬೇರೆಲ್ಲರನ್ನೂ ತ್ಯಜಿಸುತ್ತೇವೆ ಎಂದು ಹೇಳಿಲ್ಲ'' ಎಂದು ವಿಲ್ ಸ್ಮಿತ್ ಒಂದು ಸಂದರ್ಶನದಲ್ಲಿ ಹೇಳಿದ್ದರು. ನಮ್ಮಲ್ಲಿ ಒಬ್ಬ ಸಂಗಾತಿ ಇನ್ನೊಬ್ಬರಿಗೆ ಹೀಗೆ ಹೇಳಬಹುದು- 'ನೋಡಿ, ನಾನು ಬೇರೆ ಯಾರೊಂದಿಗೋ ಲೈಂಗಿಕ ಸಂಬಂಧ ಹೊಂದಬೇಕಿದೆ. ನೀನು ಅದನ್ನು ಒಪ್ಪದಿದ್ದರೆ ನಾನು ಹೋಗುವುದಿಲ್ಲ'' ಸಾಮಾನ್ಯವಾಗಿ ನಾವು ಒಪ್ಪುತ್ತೇವೆ, ಎಂದಿದ್ದರು.

2011ರಲ್ಲಿ, ಲಾಸ್ ಏಂಜಲೀಸ್‌ನಲ್ಲಿರುವ ವಿಲ್ ಸ್ಮಿತ್ ಅವರ ಹಿಡನ್ ಹಿಲ್ಸ್ ಮ್ಯಾನ್ಷನ್‌ನಲ್ಲಿ ಜೆನ್ನಿಫರ್ ಲೋಪೆಜ್ ಅವರ ಆಗಿನ ಪತಿ ಮಾರ್ಕ್ ಆಂಥೋನಿಯೊಂದಿಗೆ ಜಡಾ ಇದ್ದದನ್ನು ವಿಲ್ ನೋಡಿದ್ದರಂತೆ. ಆದರೆ ಇದು ಅವರ ದಾಂಪತ್ಯ ಒಡೆಯಲು ಕಾರಣವಾಗಲಿಲ್ಲ. 2013ರಲ್ಲಿ, ವಿಲ್ ಸ್ಮಿತ್ ಸಹ ನಟಿ ಮಾರ್ಗೋ ರಾಬಿ ಜೊತೆ ಸಂಬಂಧ ಹೊಂದಿದ್ದರು ಎಂದೂ ವದಂತಿಯಿದೆ.
ವಿಲ್ ಮತ್ತು ಜಡಾ ಅವರ ಮಗಳು ವಿಲೋಗೆ ಇವರಿಬ್ಬರ ಲೈಂಗಿಕತೆಯ ಪರಿಚಯ ಆಕೆಯ ಹದಿಹರೆಯದಲ್ಲೇ ಆಗಿತ್ತಂತೆ. ಆಕೆಗೀಗ 18 ವರ್ಷ. ಆಕೆ ಹದಿಹರೆಯದಲ್ಲಿದ್ದಾಗ, ವಿಲ್ ಮತ್ತು ಜಡಾ ಸೆಕ್ಸ್‌ನಲ್ಲಿ ತೊಡಗಿದ್ದನ್ನು ಆಕಸ್ಮಿಕವಾಗಿ ಅವಳು ನೋಡಿದ್ದಳಂತೆ. 

Feelfree: ಬಾಯ್‌ಫ್ರೆಂಡ್‌ನ ವಿಚಿತ್ರ ಲೈಂಗಿಕ ಆಸಕ್ತಿ, ಸರಿಪಡಿಸೋಕೆ ಸಾಧ್ಯವಾ?

'ನಾನು ಜ್ಯೂಸ್ ತೆಗೆದುಕೊಳ್ಳಲು ಬೇಸ್‌ಮೆಂಟ್‌ಗೆ ಹೋಗುತ್ತಿದ್ದೆ. ಅಲ್ಲಿ ವಿಲ್- ಜಡಾ ಅದರಲ್ಲಿ ತೊಡಗಿದ್ದನ್ನು ನೋಡಿದೆ. ಸ್ವಲ್ಪ ಕ್ಷಣ ನೋಡಿದೆ ಮತ್ತು ಅಲ್ಲಿಂದ ಓಡಿಹೋದೆ'' ಎಂದು ವಿಲೋ ನಂತರ ಹೇಳಿಕೊಂಡಿದ್ದಾಳೆ.  ಜಡಾ ಮತ್ತು ವಿಲ್ ಸ್ಮಿತ್, "ಗ್ರೇಟ್ ಸೆಕ್ಸ್, ಉತ್ತಮ ದಾಂಪತ್ಯ ಸಂಬಂಧದ ಅತ್ಯಗತ್ಯ ಭಾಗ'' ಎಂದು ನಂಬುತ್ತಾರೆ. 
ಇಬ್ಬರೂ ನೀಡುವ ಟಿಪ್ಸ್ ಹೀಗಿದೆ: 
- ಇಬ್ಬರೂ ಲೈಂಗಿಕ ಆಸೆಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿ.
- ಬೆಡ್‌ರೂಮಿನಲ್ಲಿ ಯಾವ ಭಯವೂ ಇಲ್ಲದೆ ನಿಮ್ಮ ಆಸಕ್ತಿಗಳನ್ನು ಅನ್ವೇಷಿಸಿ.
- ಸೆಕ್ಸ್ ಬೆಡ್‌ರೂಮ್ ಬಿಟ್ಟು ಆಚೆಗೂ ಬರಲಿ. ಹೊಸ ಜಾಗಗಳನ್ನು ಅನ್ವೇಷಿಸಿ.
- ಹೊಸ ಭಂಗಿಗಳನ್ನು ಪ್ರಯತ್ನಿಸಿ. ನಿಮ್ಮ ಸಂಗಾತಿಗೆ ಬೇರೆ ವ್ಯಕ್ತಿಯ ದೇಹದ ಬಗ್ಗೆ ಆಕರ್ಷಣೆ ಇರಬಹುದು ಎಂಬುದು ಅರಿವಿರಲಿ. ಅದು ತಪ್ಪಲ್ಲ.
- ನಿಮ್ಮ ಲೈಂಗಿಕ ಕಾಮನೆ ತಣಿಸಿಕೊಳ್ಳಲು ಎಂದೂ ಹಿಂಜರಿಯಬೇಡಿ. 'ನನಗಿದು ಬೇಕಾಗಿದೆ' ಎಂದು ಸ್ಪಷ್ಟವಾಗಿ ಹೇಳಿ. 

Feelfree: ಗಂಡನ ಜೊತೆ ಸೆಕ್ಸ್ ಓಕೆ, ಕಣ್‌ಮುಂದೆ ಬೆತ್ತಲಾಗೋಲ್ಲ ಅಂತಾಳಲ್ಲ ಯಾಕೆ?

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!