ಪ್ರೀತಿಸಿದ ಹುಡುಗಿ ಜೊತೆ ಬ್ರೇಕಪ್‌ ಆಯ್ತು, ಆದ್ರೆ ಆಕೆ ನೆನಪಿನಿಂದ ಹೊರಬರೋಕೆ ಆಗ್ತಿಲ್ಲ. ಏನ್ಮಾಡ್ಲಿ ?

By Suvarna NewsFirst Published Jul 7, 2022, 4:35 PM IST
Highlights

ಪ್ರೀತಿ (Love) ಮಾಡೋದು ಸುಲಭ. ಆದ್ರೆ ಸಂಗಾತಿ (Partner) ದೂರವಾದಾಗ ಆ ಭಾವನೆಯಿಂದ ಹೊರಬರುವುದು ಕಷ್ಟ. ಇಲ್ಲೊಬ್ಬ ವ್ಯಕ್ತಿ ಅಂಥದ್ದೇ ಸಮಸ್ಯೆಯಿಂದ ನೋವನ್ನು ಅನುಭವಿಸುತ್ತಿದ್ದಾರೆ. ಬ್ರೇಕಪ್ (Breakup) ಆದ್ರೂ ಆಕೆಯ ನೆನಪಿನಿಂದ ಹೊರಬರಲಾಗದೆ ಒದ್ದಾಡ್ತಿದ್ದಾರೆ. ಆತನ ಸಮಸ್ಯೆಗೆ ತಜ್ಞರು (Experts) ಏನ್‌ ಉತ್ತರ ಹೇಳಿದ್ದಾರೆ. ತಿಳಿಯೋಣ.

ಜೀವನ (Life)ದಲ್ಲಿ ಅತ್ಯಂತ ಕಷ್ಟವಾದ ವಿಚಾರಗಳಲ್ಲೊಂದು ಸೂಕ್ತವಾದ ಸಂಗಾತಿ (Partner)ಯನ್ನು ಆಯ್ಕೆ ಮಾಡಿಕೊಳ್ಳುವುದು. ಪ್ರತಿಯೊಬ್ಬರೂ ಜೀವನದಲ್ಲಿ ತಮಗೆ ಸೂಕ್ತವಾದ ಅತ್ಯುತ್ತಮ ಸಂಗಾತಿಯನ್ನು ಪಡೆಯಬೇಕೆಂದೇ ಬಯಸುತ್ತಾರೆ. ಆದ್ರೆ ಎಲ್ಲಾ ರೀತಿಯಲ್ಲೂ ಸರಿಹೊಂದುವ ಪಾರ್ಟ್‌ನರ್‌ನ್ನು ಹುಡುಕುವುದು ಅಷ್ಟು ಸುಲಭವಲ್ಲ. ಪ್ರತಿಯೊಬ್ಬರೂ ವಿಭಿನ್ನ ವ್ಯಕ್ತಿತ್ವ (Personality)ವನ್ನು ಹೊಂದಿರುತ್ತಾರೆ. ಹೀಗಾಗಿಯೇ ಭಿನ್ನ ವ್ಯಕ್ತಿತ್ವದವರು ಸಂಬಂಧದಲ್ಲಿರುವಾಗ ಹಲವಾರು ಬಾರಿ ಸಮಸ್ಯೆಗಳು ಅನುಭವಿಸುತ್ತಾರೆ. ಇಬ್ಬರ ಮನಸ್ಥಿತಿ ಹೊಂದಾಣಿಕೆಯಾಗದಾಗ ಕೆಲವೊಬ್ಬರು ಅಂಥಹಾ ರಿಲೇಶನ್‌ ಶಿಪ್‌ನಿಂದ ಹೊರಬರುತ್ತಾರೆ. ಆದ್ರೆ ಇನ್ನು ಕೆಲವರು ಗಾಢವಾಗಿ ಪ್ರೀತಿ (Love)ಯಲ್ಲಿರುವ ಕಾರಣ ಸಂಗಾತಿ ಅದೆಷ್ಟು ತಪ್ಪು ಮಾಡಿದರೂ ಅವರನ್ನು ಬಿಡಲಾಗದೆ ಒದ್ದಾಡುತ್ತಾರೆ. ಅಂಥಾ ಮನಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬರು ಏಷ್ಯಾನೆಸ್ ಸುವರ್ಣ ನ್ಯೂಸ್ ಜೊತೆ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಪ್ರಶ್ನೆ: ನಾನು ಕಳೆದ ಒಂದು ವರ್ಷದಿಂದ ಗಾಢವಾದ ಸಂಬಂಧದಲ್ಲಿದ್ದೆ. ಆಕೆಯನ್ನು ತುಂಬಾ ಪ್ರೀತಿಸುತ್ತಿದ್ದೆ. ಹುಡುಗಿ ನನಗೆ ದೂರದ ಸಂಬಂಧಿ ಮತ್ತು ನನ್ನ ಚಿಕ್ಕಪ್ಪನ ಮಗಳು. ನಾವು ಲಾಂಗ್‌ ಡಿಸ್ಟೆನ್ಸ್ ರಿಲಿಶೇನ್ ಶಿಪ್‌ನಲ್ಲಿದ್ದವು (ಸಂಗಾತಿಗಳಿಬ್ಬರು ದೂರ ದೂರದ ಸ್ಥಳದಲ್ಲಿರುತ್ತಾರೆ) ಕೆಲವೊಂದು ತಪ್ಪು ಅಭಿಪ್ರಾಯಗಳಿಂದ ನಾವು ಬ್ರೇಕಪ್ ಮಾಡಿಕೊಂಡೆವು. ಆದರೆ ನನಗೆ ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ. ನಾನು ಯಾವಾಗಲೂ ಅವಳ ಬಗ್ಗೆಯೇ ಯೋಚಿಸುತ್ತಿರುತ್ತೇನೆ. ಆದರೆ ನನಗೆ ಆಕೆಯ ಜೊತೆಗೆ ಸಂಬಂಧ ಇಟ್ಟುಕೊಳ್ಳಲು ಇಷ್ಟವಿಲ್ಲ. ಆದರೆ ಮನಸ್ಸಿನೊಳಗೇ ಅವಳ ಜೊತೆಗೆ ಇರಬೇಕೆಂಬ ಭಾವನೆಯೂ ಇದೆ. ನಾನು ಏನು ಮಾಡಲಿ ?  ನಾನು ಇರುವ ಭಾವನಾತ್ಮಕ ಸ್ಥಿತಿಯನ್ನು ನೋಡಿ ನನಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: ಗಂಡ ಇಷ್ಟವಾಗ್ತಿಲ್ಲ, ಹತ್ತು ವರ್ಷ ಚಿಕ್ಕವನೊಂದಿಗೆ ಸಂಬಂಧ ಇಟ್ಕೊಂಡಿದ್ದೇನೆ ತಪ್ಪಾ ?

ತಜ್ಞರ ಉತ್ತರ: ಪ್ರೀತಿಯಲ್ಲಿರುವುದು ತುಂಬಾ ಸುಂದರವಾದ ಭಾವನೆ ಹೌದು. ಆದರೆ ಅದೇ ಪ್ರೀತಿಯಿಂದ ದೂರವಾಗುವುದು ಅತ್ಯಂತ ನೋವು ಕೊಡುವ ವಿಚಾರ. ಪ್ರೀತಿಯಲ್ಲಿದ್ದಾಗ ಒಂದೇ ಜೀವವೆಂಬಂತೆ ಜೊತೆಗಿದ್ದು, ದಿಢೀರ್ ಎಂದು ಅವರು ಬಿಟ್ಟು ಹೋದಾಗ ಮನಸ್ಸಿಗೆ ನೋವಾಗುವುದು ಸಹಜ. ಆಕೆಯ ಜೊತೆಗೆ ಹೆಚ್ಚು ಸುಂದರ ಕ್ಷಣಗಳನ್ನು ಕಳೆದಿರುವ ಕಾರಣ ನಿಮಗೆ ಆಕೆಯನ್ನು ಮರೆಯಲಾಗುತ್ತಿಲ್ಲ. ಹಾಗೆಂದು ನೀವು ಆಕೆಯನ್ನು ಬಲವಂತವಾಗಿ ಮರೆಯಬೇಕೆಂದಿಲ್ಲ. ನೀವು ಆ ಪ್ರೀತಿಯನ್ನು ಉಳಿಸಿಕೊಳ್ಳಬಹುದು ಅಥವಾ ಹೋಗಲು ಬಿಡಬಹುದು. ಅದಕ್ಕೆ ಮುಖ್ಯವಾಗಿ ನೀವು ಬ್ರೇಕಪ್ ಮಾಡಿಕೊಂಡಿರುವುದು ಯಾಕೆಂದು ಅರ್ಥೈಸಿಕೊಳ್ಳಬೇಕು.

ಸಣ್ಣಪುಟ್ಟ ಕಾರಣಕ್ಕೆ ಬ್ರೇಕಪ್ ಮಾಡಿಕೊಂಡಿದ್ದರೆ ಸರಿಮಾಡಿಕೊಳ್ಳಿ: ಪ್ರೀತಿಯಲ್ಲಿ ದೂರವಾಗಲು ಹಲವಾರು ಕಾರಣಗಳಿರುತ್ತವೆ. ಕೆಲವೊಮ್ಮೆ ಇದು ಕ್ಷುಲ್ಲಕ ಕಾರಣವಾಗಿದ್ದರೆ, ಇನ್ನು ಕೆಲವೊಮ್ಮೆ ಗಂಭೀರ ಸಮಸ್ಯೆಯೂ ಆಗಿರಬಹುದು. ಕೆಲವೊಬ್ಬರು ಮೆಸೇಜ್ ಮಾಡಿಲ್ಲ, ಮೀಟ್ ಆಗಿಲ್ಲ ಅನ್ನೋ ಕಾರಣವನ್ನು ಮುಂದಿಟ್ಟು ಜಗಳವಾಡಿ ದೂರವಾಗಿ ಬಿಡುತ್ತಾರೆ. ಇಂಥಾ ಮಿಸ್ಟೇಕ್‌ ಆದಾಗ ಮಾತನಾಡಿ ಸರಿಪಡಿಸಿಕೊಳ್ಳಬಹುದು. ಇನ್ನು ಕೆಲವೊಬ್ಬರು ಬಾಯ್‌ಫ್ರೆಂಡ್ ಇದ್ದರೂ ಇನ್ನೊಬ್ಬನ ಜೊತೆ ಸುತ್ತಾಡ್ಕೊಂಡು ದ್ರೋಹ ಮಾಡುತ್ತಾರೆ. ಇದು ಕ್ಷಮೆಗೆ ಅರ್ಹವಾಗುವ ತಪ್ಪಲ್ಲ. ಹೀಗಾಗಿ ನೀವು ನಿಮ್ಮ ಸಂಬಂಧದಲ್ಲಿ ಬ್ರೇಕಪ್‌ಗೆ ಯಾವುದು ಕಾರಣವಾಗಿದೆ ಅನ್ನೋದನ್ನು ಪರಿಶೀಲಿಸಿ. ಆಕೆ ನಿಮ್ಮ ಜೀವನದಲ್ಲಿ ಇರಬೇಕೇ ಬೇಡವೇ ಎಂಬುದನ್ನು ನಿರ್ಧರಿಸಿ. 

ಇದನ್ನೂ ಓದಿ: Wife Affair: ಖಿನ್ನತೆ ಚಿಕಿತ್ಸೆ ಪಡೆಯುತ್ತಿದ್ದ ವೈದ್ಯನ ಜೊತೆಯೇ ಪತ್ನಿ ಸೆಕ್ಸ್…ಏನ್ಸಾಡ್ಲಿ?

ನೀವು ಇಷ್ಟಪಟ್ಟಂತೆ ಹುಡುಗಿಯೂ ನಿಮ್ಮನ್ನು ಇಷ್ಟಪಡುತ್ತಿದ್ದಾರಾ: ನೀವು ಆಕೆಯನ್ನು ಅತಿಯಾಗಿ ಪ್ರೀತಿಸುತ್ತಿದ್ದೀರಿ, ಆಕೆ ಬಿಟ್ಟು ಹೋದ ಮೇಲೂ ಆಕೆಯನ್ನೇ ನೆನಪಿಸಿಕೊಳ್ಳುತ್ತಿದ್ದೀರಿ ಎಂದು ಹೇಳಿಕೊಂಡಿದ್ದೀರಿ. ಇಲ್ಲಿ ತಿಳಿದುಕೊಳ್ಳಬೇಕಾದ ವಿಷ್ಯ, ಆಕೆಯೂ ನಿಮ್ಮಂತೆ ದುಃಖದಲ್ಲಿದ್ದಾರಾ ಅಥವಾ ಈಗಾಗಲೇ ಮೂವ್ ಆನ್ ಆಗಿದ್ದಾರಾ ? ಭಾವನೆಗಳು ಎಲ್ಲರಿಗೂ ಒಂದೇ ರೀತಿ ಇರಬೇಕೆಂದಿಲ್ಲವಲ್ಲ. ಆಕೆಯೂ ನಿಮ್ಮಂತೆ ಪ್ರೀತಿ ಕಳೆದುಕೊಂಡಿದ್ದೇನೆಂದು ನಿರುತ್ಸಾಹದಲ್ಲಿ ಇರಬೇಕೆಂದಿಲ್ಲ. ಹೀಗಾಗಿ ಮೊದಲು ನಿಮ್ಮ ಹುಡುಗಿ ಏನು ಮಾಡುತ್ತಿದ್ದಾರೆ ಎಂಬುದುನ್ನು ಪರಿಶೀಲಿಸಿ. ಆಕೆಯೂ ನಿಮ್ಮನ್ನು ಪ್ರೀತಿಸಿದ್ದು ನಿಜವೇ ಆಗಿದ್ದರೆ, ಆಕೆಯೂ ನಿಮ್ಮಂತೆ ಕೊರಗುತ್ತಿರಬಹುದು. ಇಲ್ಲವಾದಲ್ಲಿ ಆಕೆ ನಿಮ್ಮನ್ನು ಪ್ರೀತಿಸಿರಲೇ ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಿ. ಆಕೆ ಈಗಾಗಲೇ ಲೈಫ್‌ನಲ್ಲಿ ಬೇರೆ ಬಾಯ್‌ಫ್ರೆಂಡ್‌ನ್ನು ಹುಡುಕಿಕೊಂಡಿದ್ರೆ ಆಕೆ ಮೂವ್ ಆನ್‌ ಆಗಿದ್ದಾಳೆ. ಆಕೆಯನ್ನು ಮತ್ತೆ ಡಿಸ್ಚರ್ಬ್‌ ಮಾಡೋದ್ರಲ್ಲಿ ಅರ್ಥವಿಲ್ಲ.

ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ:  ಬ್ರೇಕಪ್‌ ಆದರೆ ಲೈಫ್ ಮುಗಿಯಿತೆಂದು ಅರ್ಥವಲ್ಲ. ಜೀವನದಲ್ಲಿ ಇನ್ನೂ ಹಲವಾರು ಖುಷಿಯ ವಿಚಾರಗಳಿವೆ. ಆಕೆ ನಿಮ್ಮ ಬಳಿಗೆ ಮತ್ತೆ ಮರಳಿ ಬರುವುದಿಲ್ಲವಾದರೆ ಶಿ ಈಸ್ ನಾಟ್‌ ಡಿಸರ್ವಿಂಗ್‌ ಮಿ ಎಂಬುದನ್ನು ಅರ್ಥ ಮಾಡಿಕೊಳ್ಳಿ. ನೀವು ನಿಮ್ಮನ್ನು ನಿಮ್ಮಂತೆಯೇ ಪ್ರೀತಿಸುವ ಸಂಗಾತಿಯನ್ನು ಪೆಡೆಯುವಿರಿ. ಹೀಗಾಗಿ ಎಲ್ಲವನ್ನೂ ಮರೆಯಲು ಪ್ರಯತ್ನಿಸಿ. ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಪುಸ್ತಕ ಓದಿ, ಸಂಗೀತ ಆಲಿಸಿ. ಟ್ರಾವೆಲಿಂಗ್ ಮಾಡಿ. ಇದು ನಿಮ್ಮಲ್ಲಿ ಹೊಸ ನಗುವನ್ನು ತರುತ್ತದೆ. 

ಸೂಚನೆ: ನೀವು ಎಲ್ಲರೊಂದಿಗೆ ಹಂಚಿಕೊಳ್ಳಲು ಬಯಸುವ ಯಾವುದೇ ಸಂಬಂಧ ಸಂಬಂಧಿತ ಕಥೆಯನ್ನು ಹೊಂದಿದ್ದರೆ, ನೀವು ಅದನ್ನು digitalblr@suvarnanews.inಗೆ ಕಳುಹಿಸಬಹುದು. ನಿಮ್ಮ ಹೆಸರನ್ನು ಗೌಪ್ಯವಾಗಿ ಇಡಲಾಗುವುದು.

click me!