Foreplay: ನಿಮ್ಮ ಮುನ್ನಲಿವು ಹೆಚ್ಚು ಕಾಲ ನಡೆಯಲು ಈ ಟಿಪ್ಸ್ ಅನುಸರಿಸಿ

By Suvarna News  |  First Published Dec 16, 2021, 3:52 PM IST

ಸೆಕ್ಸ್‌ನಲ್ಲಿ ನಿಮ್ಮ ಮುನ್ನಲಿವು ಅಥವಾ ಫೋರ್‌ಪ್ಲೇ ಚೆನ್ನಾಗಿದ್ದಷ್ಟೂ ಸಂಭೋಗ ಹೆಚ್ಚು ಹೆಚ್ಚು ಆನಂದಮಯವಾಗಿರುತ್ತದೆ. ಅದು ಹೇಗೆ? ಅದಕ್ಕೆ ಅನುಸರಿಸಬೇಕಾದ ೭ ಟಿಪ್ಸ್ ಇಲ್ಲಿವೆ.
 


ಕೆಲವರಿಗೆ ಬದುಕಿನಂತೆ ಸೆಕ್ಸ್‌ನಲ್ಲೂ (Sex) ಅವಸರ. ಆದ್ದರಿಂದ ಫೋರ್‌ಪ್ಲೇ (Foreplay) ಅಥವಾ ಮುನ್ನಲಿವಿನ ಕಡೆಗೆ ಹೆಚ್ಚು ಗಮನ ಕೊಡೊಲ್ಲ. ಕೊನೆಗೆ ಇದು ಸಂಭೋಗದ ಸಮಯದಲ್ಲಿ ನೋವಿಗೆ ಕಾರಣವಾಗುತ್ತದೆ. ಅಥವಾ ಕಡಿಮೆ ಮುನ್ನಲಿವಿನಿಂದಾಗಿ, ಸಂಭೋಗ ಸಾಕಷ್ಟು ಆನಂದಕರವಾಗಿಲ್ಲದೇ ಇರಬಹುದು. ಮುನ್ನಲಿವು ಅಥವಾ ಫೋರ್‌ಪ್ಲೇ ಎಂದರೇನು ಎಂದು ಗೊತ್ತಿಲ್ಲದವರೂ ಇರಬಹುದು. ಸಂಭೋಗಕ್ಕೆ ಮೊದಲಿನ ಅಪ್ಪುಗೆ, ಚುಂಬನ, ತಾಡನ, ಕುಚಮರ್ದನ ಮೊದಲಾದುವೆಲ್ಲಾ ಮುನ್ನಲಿವಿನ ಅಂಗಗಳೇ. ಇದರಿಂದ ಹೆಣ್ಣು ಮತ್ತು ಗಂಡು ಏಕಕಾಲದಲ್ಲಿ ಆರ್ಗ್ಯಾಸಂ (Orgasm) ಅಥವಾ ಕಾಮತೃಪ್ತಿ ಅನುಭವಿಸಲು ಸಾಧ್ಯ. ಜೀವನದಲ್ಲಿ ಖುಷಿಯಾಗಿಲು ಬಯಸುವವರು ಒಬ್ಬರಿಗೊಬ್ಬರು ಅರಿತುಕೊಂಡು ಮುಂದಿನ ಹೆಜ್ಜೆ ಇಡುವುದ ಕಲಿಯುವುದು ಅನಿವಾರ್ಯ. 

ಅದಕ್ಕೆ ಅನುಸರಿಸಬೇಕಾದ ಏಳು ಟಿಪ್ಸ್ ಇಲ್ಲಿವೆ.

Tap to resize

Latest Videos

undefined

ನಿಧಾನವಾಗಿ ಬಟ್ಟೆ ಬಿಚ್ಚಿ (Undress)
ಅವಸರಿಂದ ಬಟ್ಟೆ ಬಿಚ್ಚಿ ಹಾಕಿ ಮುಖ್ಯ ಕಾರ್ಯಕ್ರಮದತ್ತ ಥಟ್ಟನೆ ಧಾವಿಸುವ ಬದಲು, ನಿಧಾನವಾಗಿ ಪರಸ್ಪರ ವಿವಸ್ತ್ರಗೊಳಿಸಿಕೊಳ್ಳಿ. ಒಬ್ಬರಿಗೊಬ್ಬರು ದೇಹದ ಭಾಗಗಳನ್ನು ಮುದ್ದಿಸಿ. ನೀವು ಇಷ್ಟಪಟ್ಟರೆ ಕೀಟಲೆ ಮಾಡುವ ಸ್ಟ್ರಿಪ್ಪಿಂಗ್ ಪರಿಗಣಿಸಿ. ನಿಧಾನವಾಗಿ ನಿಮ್ಮ ದೇಹದ ನಗ್ನತೆಯನ್ನು ಆಸ್ವಾದಿಸುವುದು ನಿಮ್ಮ ಉದ್ರೇಕವನ್ನು ಹೆಚ್ಚಿಸುತ್ತದೆ.

ದೇಹದ ಮಸಾಜ್ (Massage) 
ಒಬ್ಬರಿಗೊಬ್ಬರು ಅಥವಾ ನಿಮ್ಮ ಸಂಗಾತಿಗೆ ಉತ್ತಮವಾದ ದೇಹದ ಮಸಾಜ್ (Body Massage) ನೀಡುವುದನ್ನು ಪರಿಗಣಿಸಿ. ಮಸಾಜ್ ಆಯಿಲ್ ಸಿಗುತ್ತದೆ. ಅಥವಾ ನಿಮ್ಮ ದೇಹಗಳನ್ನು ಪರಸ್ಪರ ಉಜ್ಜುವ ಮೂಲಕ ನೀವು ಪರಸ್ಪರ ಮಸಾಜ್ ನೀಡುವಿಕೆಯನ್ನೂ ಪರಿಗಣಿಸಬಹುದು.

Pregnancy Myth-Busting: ಸೆಕ್ಸ್ ನಂತರ ಮೂತ್ರ ಮಾಡಿದರೆ ಗರ್ಭಧಾರಣೆ ತಡೆಯಬಹುದಾ?

ಬಿಚ್ಚಿ ಹೇಳಿ (Open talk)
ಮೌನವಾಗಿದ್ದುಕೊಂಡು ಕ್ರಿಯೆಯ ಮೂಲಕ ನಿಮ್ಮ ಸೆಕ್ಸ್ ಆಸಕ್ತಿಯನ್ನು ವ್ಯಕ್ತಡಿಸುವುದು ಓಕೆ. ಆದರೆ ಕೆಲವೊಮ್ಮೆ ಅದಕ್ಕಿಂತಲೂ ಪರಿಣಾಮಕಾರಿ ಬಿಚ್ಚಿ ಹೇಳುವುದು. ನೀವು ಹೊಂದಿರುವ ಭಾವನೆಗಳನ್ನು ವ್ಯಕ್ತಪಡಿಸಿ. ನಿಮ್ಮ ಪ್ರತಿಕ್ರಿಯೆಯು ನಿಮ್ಮ ಸಂಗಾತಿಗೆ ಉತ್ತೇಜನವನ್ನು ನೀಡುತ್ತದೆ. ಇದು ಲೈಂಗಿಕತೆಯನ್ನು ಸರಳವಾಗಿ ತೀವ್ರಗೊಳಿಸುತ್ತದೆ. ಆ ದಿವಸ ನೀವು ಏನು ಮಾಡಲು ಬಯಸಿದ್ದೀರಿ ಎಂಬುದನ್ನು ವರ್ಣಿಸಿ ಹೇಳುವುದು ಇನ್ನಷ್ಟು ಪರಿಣಾಮಕಾರಿ.

ಪೋಲಿ ಮಾತು (Dirty talk)
ಬೇರೆ ಸಂದರ್ಭದಲ್ಲಿ ಪೋಲಿ ಎನಿಸಿಕೊಳ್ಳುವ ಮಾತುಗಳು, ಆ ಸಂದರ್ಭದಲ್ಲಿ ಕಾಮಾಸಕ್ತಿಯನ್ನು ಉದ್ದೀಪಿಸುತ್ತವೆ. ಅವನು ಅಥವಾ ಅವಳ ಮೈ ವಾಸನೆ ಚೆನ್ನಾಗಿದ್ದರೆ ಅದನ್ನು ಹೇಳಿ. ನಿಮ್ಮಿಬ್ಬರ ನಡುವೆ ನೀವು ಬಳಸುವ ಮುದ್ದಾದ ಹೆಸರುಗಳಿದ್ದರೆ ಅವುಗಳ ಮೂಲಕ ಕರೆಯಿರಿ. ಪೋಲಿ ಮಾತುಗಳನ್ನು ನೀವು ಇಷ್ಟಪಟ್ಟರೆ ಮತ್ತು ಅದು ನಿಮ್ಮ ಮೂಡ್ ಸೆಟ್ ಮಾಡಿದರೆ ಅದನ್ನು ಏಕೆ ತಪ್ಪಿಸಬೇಕು?

Feelfree: ಅವಳ ಹಿಂಭಾಗ ನೋಡಿದರೆ ಕಾಮೋದ್ರೇಕ! ಇದು ತಪ್ಪಾ?

ನೇತ್ರ ಸಂಪರ್ಕ (Eye contact) 
ಪರಸ್ಪರ ನಿಮ್ಮ ಕಣ್ಣುಗಳ ನೋಟವನ್ನು ಕಾಪಾಡಿಕೊಳ್ಳಿ. ಅಂದರೆ ನೀವು ಸಂಗಾತಿಯಲ್ಲಿ ಏನನ್ನಾದರೂ ಇಷ್ಟಪಡುತ್ತೀರಿ ಎಂದಾದಾಗ, ಅದನ್ನು ನೀವು ಅವನಿಗೆ ಅಥವಾ ಅವಳಿಗೆ ಹೇಳುವಾಗ, ಅವರ ಕಣ್ಣಲ್ಲಿ ಕಣ್ಣಿಟ್ಟು ಹೇಳಿ. ಅದು ಅವರ ಕಾಮೋತ್ಸಾಹವನ್ನು ಹೆಚ್ಚಿಸುತ್ತದೆ.

ಸೆಕ್ಸ್ ಆಟಿಕೆಗಳು (Sex toys)
ಇಂದು ಸೆಕ್ಸ್ ಆಟಿಕೆಗಳು(Sex Toys) ಭಾರತದಲ್ಲಿ (India) ಕಾನೂನುಬದ್ಧವಾಗಿವೆ. ಲೈಂಗಿಕ ಕ್ರಿಯೆಯಲ್ಲಿ (Sexual Intercourse) ಸಂತೋಷವನ್ನು ಹೆಚ್ಚಿಸಲು ಲೈಂಗಿಕ ಆಟಿಕೆಗಳನ್ನು ಬಳಸಬಹುದು. ವೈಯಕ್ತಿಕವಾಗಿಯೂ ಇವನ್ನು ಬಳಸಬಹುದು ಹಾಗೂ ಪರಸ್ಪರರೂ ಬಳಸಬಹುದು. ಇದರಿಂದ ನಿಮ್ಮ ಸಂಬಂಧವನ್ನು ಇನ್ನೊಂದು ಲೆವೆಲ್‌ಗೆ ಕೊಂಡೊಯ್ದಂತೆ ಆಗುತ್ತದೆ.

 

click me!